suddiduniya.com

CPI(M)ಬಂಡವಾಳ ಶಾಹಿಗಳ ಅನುಕೂಲಕ್ಕೆ ಯೋಜನೆ ಜಾರಿ

CPI(M)

ಹಟ್ಟಿಯಲ್ಲಿ ಸಿಪಿಐ(ಎಂ) ಸಮ್ಮೇಳನ

ಲಿಂಗಸುಗೂರು : ಕೇಂದ್ರದ ಬಿಜೆಪಿ ಸರ್ಕಾರ ಬಡವರ, ಶ್ರಮಿಕರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿ ಮಾಡದೇ ಬಂಡವಾಳ ಶಾಹಿಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿ ಮಾಡುತ್ತಿದೆ ಎಂದು ಸಿಪಿಐ(ಎಂ) (CPI(M)) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಶಬ್ಬೀರ್ ಕಳವಳ ವ್ಯಕ್ತಪಡಿಸಿದರು.

CPI(M)

ತಾಲೂಕಿನ ಹಟ್ಟಿ ಪಟ್ಟಣದ ಪೈ ಭವನದಲ್ಲಿ (CPI(M) ) ಸಿಪಿಐ (ಎಂ) ಪಕ್ಷದಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಚುನಾವಣೆ ಪ್ರಚಾರ ಸಂದರ್ಭದಲ್ಲಿ ಅಚ್ಚೇ ದಿನಗಳನ್ನು ಜಪಿಸಿ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ನಂತರ ದಿನಗಳಲ್ಲಿ ಅವರ ಒಡನಾಡಿ ಅದಾನಿ, ಅಂಬಾನಿಯರಿಗೆ ಅಚ್ಚೇ ದಿನಗಳು ಬಂದಿವೆ. ವಿನಃ ದೇಶದ ಶ್ರಮಿಕ, ಬಡ ಕೂಲಿ-ಕಾರ್ಮಿಕರಿಗೆ, ಯುವಜನರಿಗೆ ಒಳ್ಳೆಯ ದಿನಗಳು ಬಂದಿಲ್ಲ. ಕಾರ್ಮಿಕರು ಅನುಭವಿಸುತ್ತಿರುವ ಕಷ್ಟಗಳನ್ನು ಗಮನಿಸುತ್ತಿಲ್ಲ. ದೇಶ, ದೇಶಗಳ ಸುತ್ತಾಟ ನಡೆಸಿ ಬಂಡವಾಳ ಶಾಹಿಗಳ ಪರವಾದ ಯೋಜನೆಗಳನ್ನು ಜಾರಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ವಿರೋಧಿ ಫ್ಯಾಸಿಸ್ಟ್ ವಿರುದ್ಧ ಹೋರಾಟ :

ಸಿಪಿಐ(ಎಂ) ( CPI(M) )ಮತ್ತು ಎಡಪಕ್ಷಗಳು ಮಾತ್ರವೇ ಈ ಮತೀಯವಾದಿ, ಬಂಡವಾಳವಾದಿ ಮೈತ್ರಿಯ ಆಳ ಅಗಲವನ್ನು ಸರಿಯಾಗಿ ಅರ್ಥೈಸಿ ಸರಿಯಾದ ಪ್ರತೀ ಹೋರಾಟವನ್ನು ರೂಪಿಸುತ್ತಿರುವ ಶಕ್ತಿಗಳಾಗಿವೆ. ದೇಶದ ಎಲ್ಲಾ ಪ್ರಜಾಸತ್ತಾತ್ಮಕ ರಾಜಕೀಯ, ಸಾಮಾಜಿಕ ಪಕ್ಷ, ಸಂಘಟನೆಗಳು ಒಂದಾಗಿಸಿ ಪ್ರತಿ ಹೋರಾಟಕ್ಕೆ ವೇದಿಕೆಯನ್ನು ಸಜ್ಜುಗೊಳಿಸುತ್ತಿವೆ. ಮುಸ್ಲಿಮರು, ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿಸುವ ಹುನ್ನಾರಗಳನ್ನು, ಎನ್‍ ಆರ್‍ ಸಿ ಯಂತಹ ವಿಭಜನಕಾರಿ ಕಾಯ್ದೆಗಳನ್ನು ಹಿಮ್ಮೆಟ್ಟಿಸಲು, ಸಿಪಿಐ(ಎಂ) ನಡೆಸಿದ ಹೋರಾಟ ಮಹತ್ವ ಪೂರ್ಣವಾದದ್ದು, ಕಾರ್ಮಿಕರು, ಕೃಷಿಕೂಲಿಕಾರರು, ದಲಿತರು, ಅರಣ್ಯವಾಸಿ ಆದಿವಾಸಿಗಳ ಹಕ್ಕುಗಳನ್ನು ಉಳಿಸಲು ಹಾಗೂ ಆರೋಗ್ಯ, ಶಿಕ್ಷಣ ವ್ಯಾಪಾರದ ಸರಕಾಗಿಸುವ ನೀತಿಗಳ ವಿರುದ್ಧ ಈ ಅವಧಿಯಲ್ಲಿ ನಡೆಸಿದ ಹೋರಾಟ ಆಗಣಿತವಾದದ್ದು. ಈ ಎಲ್ಲಾ ಹೋರಾಟಗಳು ಸಂವಿಧಾನ ವಿರೋಧಿ ಫ್ಯಾಸಿಸ್ಟ್ ಶಕ್ತಿಗಳನ್ನು ಕಳೆದ ಚುನಾವಣೆಯಲ್ಲಿ ದುರ್ಬಲಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ ಎಂದರು.

ಜಿಲ್ಲಾ ಕಾರ್ಯದರ್ಶಿ ಕೆ.ಜಿ ವೀರೇಶ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿಸಿ ಬಡವರ ಬದುಕನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಿ ವಿದ್ಯಾವಂತ ಯುವಜನರಿಗೆ ಉದ್ಯೋಗದಂತೆ ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಸಾಲಕ್ಕೆ ತುತ್ತಾಗಿ ಜಮೀನು ಮಾರಿ ಮಹಾನಗರಗಳಿಗೆ ಗುಳೆ ಹೊರಟಿದ್ದಾರೆ ಎಂದರು.

ಕಾರ್ಯದರ್ಶಿ ಮಂಡಳಿ ಸದಸ್ಯ ನರಸಣ್ಣ ನಾಯಕ ಮಾತನಾಡಿದರು. ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕು ಸಮಿತಿ ಸದಸ್ಯರಾದ ಸಂಗಪ್ಪ ಸಗರದ್, ಆಂಜನೇಯ ನಾಗಲಾಪೂರು, ಪರಶುರಾಮ ಹಲ್ಕಾವಟಗಿ,  ಪಕ್ಷದ ಸದಸ್ಯರಾದ ನಿಂಗಪ್ಪ ಎಂ, ಅಲ್ಲಾಭಕ್ಷ, ಹನೀಫ್, ದಾವೂದ್, ನಜೀರ್ ಮಾಚನೂರು, ಅಮರೇಶ ಗುರಿಕಾರ್, ಮಹ್ಮದ್ ಅಲಿ, ಸರಸ್ವತಿ ಈಚನಾಳ, ಅಕ್ಬರ್, ಮಹಾಂತೇಶ ಮುದಗಲ್, ನಾಗರಾಜ್, ಚೆನ್ನಬಸವ ವಂದ್ಲಿ ಹೊಸೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪಿಐಎಂ ತಾಲೂಕು ಸಮ್ಮೇಳನದ ಪ್ರತಿನಿಧಿ ಅಧಿವೇಶನ  :

ಸಿಪಿಐಎಂ ತಾಲೂಕು ಸಮ್ಮೇಳನದಲ್ಲಿ ಪ್ರತಿನಿಧಿ ಅಧಿವೇಶನ ನಡೆಯಿತು. ಸಿಪಿಐ(ಎಂ) ( CPI(M) ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಕರಡು ವರದಿ ಮಂಡಿಸಿದರು. ನಂತರ ತಾಲೂಕಿನ ವಿವಿಧ ಶಾಖೆಗಳಿಂದ ಆಗಮಿಸಿ ಪ್ರತಿನಿಧಿಗಳು ಗುಂಪು ಚರ್ಚೆ ಮಾಡಿ ಕರಡನ್ನು ವಿಮರ್ಶೆ ಮಾಡಿದರು.

ಅಧಿವೇಶನದ ನಿರ್ಣಯ :

ಹಟ್ಟಿ, ಮುದಗಲ್, ಲಿಂಗಸುಗೂರು ಸೇರಿದಂತೆ ತಾಲೂಕಿನಾದ್ಯಾಂತ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲು, ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲು, ಹಟ್ಟಿ ಹೋಬಳಿ ಕೇಂದ್ರ ಘೋಷಣೆ ಮಾಡಲು, ಲಿಂಗಸುಗೂರು ತಾಲ್ಲೂಕಿನ ಬಗರ್ ಹುಕುಂ ಭೂಮಿ ಸಾಗುವಳಿದಾರರಿಗೆ ಪಟ್ಟಾ ನೀಡಲು ಆಗ್ರಹಿಸಿ, ನೀರಾವರಿ ವಂಚಿತ ಪ್ರದೇಶಕ್ಕೆ ನೀರಾವರಿ ವಿಸ್ತರಣೆ ಆಗ್ರಹಿಸಿ,  ಹಟ್ಟಿ ಪಟ್ಟಣದಲ್ಲಿ ನಡೆಯುತ್ತಿರುವ ಮಟಕಾ, ಇಸ್ಪೀಟ್, ಕ್ರಿಕೇಟ್ ಬೆಟ್ಟಿಂಗ್ ದಂಧೆಗಳಿಗೆ ಕಡಿವಾಣ ಹಾಕಲು ಆಗ್ರಹಿಸಿ ,ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಗೆ ಮೆಡಿಕಲ್ ಅನ್ ಫಿಟ್ ಜಾರಿ ಮತ್ತು ವಿದ್ಯಾರ್ಹತೆಗೆ ತಕ್ಕಂತೆ ಗ್ರೇಡ್ ನೀಡಲು ಆಗ್ರಹಿಸಿ ಹೋರಾಟ ರೂಪಿಸಲು ಸರ್ವಾನುಮತದಿಂದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು‌.

ನೂತನ ತಾಲೂಕು ಸಮಿತಿ ರಚನೆ

( CPI(M) ತಾಲೂಕು ಕಾರ್ಯದರ್ಶಿ ಯಾಗಿ ರಮೇಶ ವೀರಾಪೂರು ಮರು ಆಯ್ಕೆಯಾದರು. ಪದಾಧಿಕಾರಿಗಳಾಗಿ ಆಂಜನೇಯ ನಾಗಲಾಪೂರು, ಸಂಗಪ್ಪ ಸಗರದ್, ಪರಶುರಾಮ ಹಲ್ಕಾವಟಿಗಿ, ಯಲ್ಲಪ್ಪ, ಮುತ್ತಮ್ಮ, ಶಿವಪ್ಪ ವ್ಯಾಕರನಾಳ ಆಯ್ಕೆಯಾದರು‌.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!