suddiduniya.com

Culture festival :ಜನೆವರಿ 28ರಿಂದ ಫೆ.6ವರಿಗೆ ಭಾರತೀಯ ಸಂಸ್ಕೃತಿ ಉತ್ಸವ

Culture festival

ಲಿಂಗಸುಗೂರು : ಜನೆವರಿ 28ರಿಂದ ಫೆ.6ರವರಿಗೆ ಕಲಬುರಗಿಯಲ್ಲಿ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವ (Culture festival ) ಯಶಸ್ವಿಗೆ ಸಹಕಾರ ನೀಡಬೇಕೆಂದು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಸ್ಥಾಪಕ ಹಾಗೂ ವಿಕಾಸ ಅಕಾಡೆಮಿ ಕಲಬುರಗಿ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಕರೆ ನೀಡಿದ್ದಾರೆ.

ಪಟ್ಟಣದ ವಿವಿ ಸಂಘದ ಬಸವ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾರತ ವಿಕಾಸ ಸಂಗಮವು ಕೆ.ಎನ್.ಗೋವಿಂದಾಚಾರ್ಯರ ಕನಸಿನ ಕೂಸಾಗಿದೆ. ತನ್ಮೂಲಕ ಪ್ರತಿ ಮೂರು ವರ್ಷಕ್ಕೊಮ್ಮೆ ದೇಶದ ಯಾವದಾದರೊಂದು ಭಾಗದಲ್ಲಿ ಭಾರತೀಯ ಸಂಸ್ಕೃತಿ ಉತ್ಸವದ ಆಯೋಜಿಸುವ ಮೂಲಕ ಸಮಾಜದ ದೀರ್ಘಕಾಲಿಕ ಪರಿವರ್ತನೆಗೆ ನಾಂದಿ ಹಾಡಿದ್ದಾರೆ.ಈಗಾಗಲೇ 6 ಸಾಂಸ್ಕೃತಿಕ ಉತ್ಸವ ನಡೆಸಲಾಗಿದೆ.  ಇದು  ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಹಿನ್ನಲೆಯಲ್ಲಿ ಭಾರತ ವಿಕಾಸ ಸಂಗಮ ಅಕಾಡೆಮಿ ಸಹಯೋಗದಲ್ಲಿ ಕಲಬುರಗಿಯಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

Culture festival

ಬೀರನಹಳ್ಳೀ ಕ್ರಾಸ್ ಸೇಡಂ-ಕಲಬುರಗಿ ರಸ್ತೆಯ 240 ಎಕರೆ ಪ್ರದೇಶದಲ್ಲಿ 9 ದಿನಗಳ ಕಾಲ ಜರಗುವ ಏಳನೇಯ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ವಿವಿಧ ವಿಷಯಗಳ ಅಡಿಯಲ್ಲಿ ವೈವಿದ್ಯಪೂರ್ಣ ಕಾರ್ಯಕ್ರಮಗಳನ್ನು ಸಮಾಜದ ಎಲ್ಲಾ ವರ್ಗದ ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ಯೋಜಿಸಲಾಗುತ್ತಿದೆ. ಈ ಸಮಾವೇಶದಲ್ಲಿ ಸುಮಾರು 30 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದರು.

ಪ್ರಕೃತಿಯಿಂದ ಸಂಸ್ಕೃತಿಯಡೆಗೆ ಎಂಬ ಮುಖ್ಯ ವಿಷಯದಡಿಯಲ್ಲಿ 9 ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ಉಪನ್ಯಾಸ ನಡೆಯಲಿದೆ. ದಿಶಾ ನಿರ್ದಶನ ಹಾಗೂ 51 ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಮಾತೃ ಸಮಾವೇಶ, ಶೈಕ್ಷಣಿಕ ಸಮಾವೇಶ, ಯುವ ಸಮಾವೇಶ, ಗ್ರಾಮ-ಕೃಷಿ ಸಮಾವೇಶ,ಆಹಾರ ಆರೋಗ್ಯ ಸಮಾವೇಶ, ಸ್ವಯಂ ಉದ್ಯೋಗ, ಪ್ರಕೃತಿ ಮತ್ತು ನಾವು, ಸೇವಾಶಕ್ತಿ ಸಮಾವೇಶ, ದೇಶ-ಧರ್ಮ ಸಂಸ್ಕೃತಿ ಸಮಾವೇಶ ನಡೆಯಲಿದೆ ಎಂದರು.

Culture festival

 ಅಂದು ಬೆಳಿಗ್ಗೆ 9ಗಂಟೆಗೆ ಕಲಬುರಗಿ ಮತ್ತು ಸೇಡಂನಲ್ಲಿ ಭವ್ಯ ಶೋಭಾಯಾತ್ರೆ ನಡೆಯಲಿದೆ. 29ರಂದು ಮಾತೃ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ, ಇನ್ಫೂಸಿಸ್ ಫೌಂಡಶೇನ್ ಅಧ್ಯಕ್ಷೆ ಸುಧಾಮೂರ್ತಿ ಆದಮ್ಯಚೇತನ ಫೌಂಡೇಶನ್ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ, ಬಾರತ ವಿಕಾಸ ಸಂಗದ ಸಂಸ್ಥಾಪಕರು ಕೆ.ಎನ್.ಗೋವಿಂದಾಚಾರ್ಯರು ಭಾಗವಹಿಸಲಿದ್ದಾರೆ. ಪ್ರತಿದಿನ ನಡೆಯುವ ಸಮಾವೇಶದಲ್ಲಿ ಹಿರಿಯ ಚಿಂತಕರು, ಅನುಭಾವಿಗಳು, ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಸಚಿವರು, ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದರು.

ಈ ವೇಳೆ ಗವಿಸಿದ್ದಪ್ಪ ಸಾಹುಕಾರ, ನಾಗರಾಜ ಗಸ್ತಿ, ಸಾಹಿತಿಗಳು, ಶಿಕ್ಷಕರು ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!