suddiduniya.com

Current Connection :ಕರೆಂಟ್ ಕನೆಕ್ಷನ್ ಕೊಡುವುದಾಗಿ ಲಕ್ಷಾಂತರ ಹಣ ಗುಳಂ..!

ರೈತ ಸಂಘ ಹೋರಾಟ :

ಲಿಂಗಸುಗೂರು : ತಾಲೂಕಿನ ವಿವಿಧ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ (Current Connection )ಕಲ್ಪಿಸಿಕೊಡಲು 2020 ರಲ್ಲಿ ಮಂಜೂರಾದ ಸರ್ಕಾರದ ಲಕ್ಷಾಂತರ ರೂಪಾಯಿಗಳನ್ನು ವಿದ್ಯುತ್ ಗುತ್ತಿಗೆದಾರ ರಾಜು ಹಾಗೂ ಜೆಸ್ಕಾ ಅಧಿಕಾರಿಗಳು ದರ್ಬಳಕೆ ಮಾಡಿಕೊಂಡಿದ್ದು ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಪಟ್ಟಣದ ಜೆಸ್ಕಾ ಕಚೇರಿ ಎದುರು ಸತ್ಯಾಗ್ರಹ ನಡೆಸಿದರು.

Current Connection

ತಾಲೂಕಿನ ಪೂಲಭಾವಿ ಬಳಿ ಕಟಿಗೇನ ಹೊಲದೊಡ್ಡಿ, ಬಡಹೊಲದೊಡ್ಡಿ, ಶಿಕಾರಿದೊಡ್ಡಿಗಳಲ್ಲಿ ವಾಸ ಮಾಡುತ್ತಿರುವ ವಿದ್ಯುತ್ ಸಂಪರ್ಕ (Current Connection )ಒದಗಿಸುವಂತೆ 2020 ಮಾರ್ಚ 15ರಂದು ಸರ್ಕಾರ ಅನುದಾನ ಮಂಜೂರೂ ಮಾಡಿದೆ. ಆದರೆ ವಿದ್ಯುತ್ ಗುತ್ತಿಗೆದಾರ ರಾಜು ಹಾಗೂ ಜೆಸ್ಕಾಂ ಎಇಇ ಈ ಅನುದಾನದಲ್ಲಿ ಕಾಮಗಾರಿ ಮಾಡದೇ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದಲ್ಲದೆ ದೊಡ್ಡಿಗಳ ವಾಸ ಮಾಡುವ ಪ್ರತಿ ಕುಟಂಬದಿAದ 3600 ರೂಪಾಯಿ ಪಡೆದುಕೊಂಡು ನಾಲ್ಕು ವರ್ಷ ಕಳೆದರೂ ಇಲ್ಲಿವರಿಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡದೇ ನಿವಾಸಿಗಳಿಗೆ ವಂಚನೆ ಮಾಡಿದ್ದಾರೆ.

ವಿದ್ಯುತ್ ಸಂಪರ್ಕ ಒದಗಿಸಿ :

ಜೆಸ್ಕಾಂ ಇದೇ ರೀತಿ ಇನ್ನೂ ಅನೇಕ ದೊಡ್ಡಿಗಳಿಗೆ, ಕ್ಯಾಂಪ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ( Current Connection )ಬಿಡುಗಡೆಯಾದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಶಂಕತೆ ವ್ಯಕ್ತವಾಗುತ್ತಿದೆ. ಈ ಕೂಡಲೇ ಈ ಬಗ್ಗೆ ಸೂಕ್ತ ತಂಡ ರಚಿಸಿ ಸಮಗ್ರ ತನಿಖೆ ಕೈಗೊಂಡು ತಪ್ಪಿಸüತರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಿ ಫಲಾನುಭವಿಗಳಿಗೆ ನ್ಯಾಯ ಒದಗಿಸಿಕೊಡಬೇಕು. ರೈತರ ಪಂಪ್‌ಸೆಟ್‌ನ ಟಿಸಿ ಸುಟ್ಟರೆ ರೈತರಿಂದ ೨೦ ಸಾವಿರ ರಊ ಹಣ ಪಡೆದುಕೊಂಡು ತಿಂಗಾಳುಗಟ್ಟಲೆ ಅಲೆದಾಡಿಸುತ್ತಿದ್ದಾರೆ. ಗಂಗಾಕಲ್ಯಾಣ ಯೋಜನೆಯಿಂದ ಹಲವರು ನಿಗಮದಿಂದ ಆಯ್ಕೆಗೊಂಡು ಫಲಾನುಭವಿಗಳ ಪೈಕಿ ಕೆಲವರನ್ನು ಹೊರತುಪಡಿಸಿ ಬಹುತೇಕ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಹಾಗೂ ವಿದ್ಯುತ್ ಪರಿವರ್ತಕ ವಿತರಿಸಿಲ್ಲಾ ಎಂಬ ಅನುಮಾನವಾಗಿದೆ ಈ ಬಗ್ಗೆ ಪರಿಶೀಲನೆ ನಡೆಸಬೇಕು.

ಹಳೆ ಕಂಬ ತೆರವುಗೊಳಿಸಿ :

ಅಲ್ಲದೆ ಅನೇಕ ಗ್ರಾಮಗಳಲ್ಲಿ ಹಳೆಯ ಕಂಬಗಳೇ ರಾರಾಜಿಸುತ್ತಿವೆ. ತಂತಿಗಳು ಕೈಗೆ ನಿಲುಕವಷ್ಟ ಅಲ್ಲಿಲ್ಲಿ ಜೋತುಬಿದ್ದಿವೆ. ಟಿಸಿಗಳು ಚಿಕ್ಕಮಕ್ಕಳಿಗೆ ಹಾಗೂ ಜಾನುವಾರುಗಳಿಗೆ ನಿಲುಕುವಷ್ಟ ನೆಲಕ್ಕೆ ಹತ್ತಿರವಾಗಿವೆ.ರೈತರ ಪಂಪಸೆಟ್‌ಗಳಿಗೆ ಆಧಾರ್‌ಲಿಂಕ್ ಮಾಡಿ ಮುಂದಿನ ದಿನಮಾನಗಳಲ್ಲಿ ಮೀಟರ್ ಕೂಡಿಸುವ ಗುಮಾನಿ ಇದೆ ಆದ ಕಾರಣ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ನೀತಿಯಾಗಲಿ ಅಥವಾ ಸ್ವಾಮಿನಾಥನ್ ವರದಿ ಜಾರಿಗೊಳಿಸುವವರಿಗೆ ಆಧಾರ್ ಲಿಂಕ್ ಮಾಡಬಾರದು ಎಂದು ಆಗ್ರಹಿಸಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಜಿಲ್ಲಾ ಉಪಾಧ್ಯಕ್ಷ ರಾಮಯ್ಯ ಜವಳಗೇರಾ, ತಾಲೂಕಾಧ್ಯಕ್ಷ ವೆಂಕಟೇಶ ಕೋಠಾ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ತಿಮ್ಮಣ್ಣ ಭೋವಿ, ನಾಗಪ್ಪ ಪಾಟೀಲ್, ವೆಂಕಟೇಶ ಹಟ್ಟಿ, ಶಿವರಾಜ ಆಲದಾಳ, ಲಾಲ್‌ಸಾಬ ನಾಡಗೌಡ, ಸೇರಿದಂತೆ ಅನೇಕ ರೈತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!