ಎಸಿಗೆ ಮನವಿ :
ಲಿಂಗಸುಗೂರು : ದಲಿತ ಸೇನೆ (Dalit Sene )ದಲಿತ ಸೇನೆ ರಾಜ್ಯಾಧ್ಯಕ್ಷರ ಮೇಲೆ ಸುಳ್ಳು ಪ್ರಕರಣ : ಕ್ರಮಕ್ಕೆ ಆಗ್ರಹರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅಟ್ಟಹಾಸ ಮೆರೆಯುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ದಲಿತ ಸೇನೆ (Dalit Sene ) ತಾಲೂಕು ಸಮಿತಿ ಪದಾಧಿಕಾರಿಗಳು ಸಹಾಯಕ ಆಯುಕ್ತರ ಮುಖಾಂತರ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.
ರಾಮ್ ವಿಲಾಸ್ ಕಟ್ಟಿದ ಸೇನೆ :
ರಾಮವಿಲಾಸ್ ಪಾಸ್ವಾನ್ ಕಟ್ಟಿಬೆಳಿಸಿದ ದಲಿತ ಸೇನೆ ರಾಷ್ಟಿಯ ಸಂಘಟನೆಯಾಗಿದೆ. ಪುಲೆ,ಶಾಹು, ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಯಲ್ಲಿ ಸಾಮಾಜಿಕ ಚಿಂತನೆಗಳನ್ನು ಇಟ್ಟುಕೊಂಡು ದಲಿತ ಸೇನೆ ಮುನ್ನೆಡೆಸುತ್ತಿರುವ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ವಿರುದ್ಧ ಕಲಬುರಗಿ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಸುಳ್ಳು ಕೇಸು ದಾಖಲಿಸಿರುವುದು ಆತಂಕಕ್ಕೀಡು ಮಾಡಿದೆ. ಸುಳ್ಳು ಪ್ರಕರಣದ ರುವಾರಿ ರಾಜು ಕಪನೂರು ಮತ್ತು ಆತನ ಗ್ಯಾಂಗ್ ಉದ್ದೇಶ ಪೂರ್ವಕವಾಗಿ ಹನುಮಂತ ಯಳಸಂಗಿರವರ ತೇಜೋವದೆ ಮಾಡಲು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಸಮಾಜಘಾತಕ ಶಕ್ತಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ದಲಿತ ಸೇನೆ ತಾಲೂಕಾಧ್ಯಕ್ಷ ಬಸವರಾಜ ಗೋಸ್ಲೆ, ಮುಖಂಡರಾದ ಲಿಂಗರಾಜ ದೊಡ್ಡಮನಿ, ಜಯಪ್ಪ, ನಾಗರಾಜ ಐದನಾಳ, ಶಿವರಾಜ ಸಂತೆಕೆಲ್ಲೂರು, ರಮೇಶ ಮರಗಂಟನಾಳ, ಶಿವರಾಜ ಯರಡೋಣಾ, ಮಂಜು, ನಾಗರಾಜ ಹುಲಿಗುಡ್ಡ, ಚಿದಾನಂದ ಕಡದರಗಡ್ಡಿ, ಹುಲಗಪ್ಪ ಯರದಾಳ, ನಿರುಪಾದಿ, ಆನಂದ ಸೇರಿದಂತೆ ಇನ್ನಿತರಿದ್ದರು.