suddiduniya.com

ನೈತಿಕ ಮೌಲ್ಯಗಳು ಕುಸಿತದಿಂದ ಸಮಾಜಕ್ಕೆ ದುಷ್ಪರಿಣಾಮ

ನೈತಿಕ ಮೌಲ್ಯಗಳು

ನೈತಿಕತೆಯೇ ಸ್ವಾತಂತ್ರ್ಯ ಅಭಿಯಾನ

ಲಿಂಗಸುಗೂರು : ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿದಿದ್ದರಿಂದ ಮಹಿಳೆಯರ ಮೇಲಿನ ದೌರ್ಜನ್ಯಗಳು, ಅತ್ಯಾಚಾರಗಳು ಮತ್ತು ನಿಂದನೆಗಳು ಹೆಚ್ಚಾಗುತ್ತಿವೆ, ಮಾನವೀಯ ಮೌಲ್ಯಗಳು ಒಳಗೊಂಡ ಉತ್ತಮ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಆಯೀಶಾ ಕರೆ ನೀಡಿದರು.

ನೈತಿಕ ಮೌಲ್ಯಗಳು ಕುಸಿತದಿಂದ ಸಮಾಜಕ್ಕೆ ದುಷ್ಪರಿಣಾಮ

ಪಟ್ಟಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ ಹಮ್ಮಿಕೊಂಡಿದ್ದ ನೈತಿಕ ಮೌಲ್ಯಗಳು ನೈತಿಕತೆಯೇ ಸ್ವಾತಂತ್ರ್ಯ ಅಭಿಯಾನದ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣ ವೃತ್ತದಿಂದ ಗಡಿಯಾರ ವೃತ್ತದಲ್ಲಿ ನಡೆದ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಅವರು, ಮಾನವರು ತಮ್ಮ ಸ್ವಾತಂತ್ರ‍್ಯವನ್ನು ನೈತಿಕ ಮೌಲ್ಯಗಳಿಗೆ ಅನುಗುಣವಾಗಿ ನಡೆದರೆ ಸಮಾಜವು ಶಾಂತಿ ಮತ್ತು ಸಮೃದ್ಧಿಯತ್ತ ಸಾಗತ್ತದೆ. ಅನ್ಯಥಾ ಸಮಾಜದಲ್ಲಿ ಅರಾಜಕತೆ, ಭ್ರಷ್ಟಾಚಾರ ಮತ್ತು ಅಸಮತೋಲನವು ತಾಂಡವವಾಡುತ್ತಿದೆ. ಈಗಾಗಿ ನೈತಿಕ ಮೌಲ್ಯಗಳು ಕುಸಿತದಿಂದ ಸಮಾಜಕ್ಕೆ ದುಷ್ಪರಿಣಾಮ ಉಂಟಾಗುತ್ತಿದೆ.

ನೈತಿಕ ಮೌಲ್ಯಗಳು

ಪ್ರತಿಯೊಬ್ಬರು ತಮ್ಮ ಅಧಿಕಾರವನ್ನು ಚಲಾಯಿಸುವಾಗ ನೈತಿಕ ಮೌಲ್ಯಗಳಿಗೆ ಬದ್ಧರಾಗಿದ್ದರೆ ಮಾತ್ರ ಸಮಾಜವು ಶಾಂತಿ ಮತ್ತು ಸಮತೋಲಿತ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಯಾವಾಗಲೆಲ್ಲಾ ಮಾನವರು ಈ ಮೌಲ್ಯಗಳಿಂದ ಮುಕ್ತರಾಗಿ, ಕಡಿವಾಣವಿಲ್ಲದೆ ತಮ್ಮ ಸ್ವಾತಂತ್ರದ ದುರ್ಬಳಕೆ ಮಾಡಿದರೋ ಆಗ ಅವರು ಸಮಾಜಿಕ ವ್ಯವಸ್ಥೆಗೆ ಹಾನಿಯುಂಟು ಮಾಡಿದರಲ್ಲದೆ ಅದರ ದುಷ್ಪರಿಣಾಮಗಳನ್ನು ಸ್ವತಃ ಎದುರಿಸುವಂತಾಗಿದೆ ಎಂದರು.

ನೈತಿಕ ಮೌಲ್ಯಗಳು

ಮಾನವ ಹಕ್ಕುಗಳ ಘೋಷಣೆಯಲ್ಲಿ ಸ್ವಾತಂತ್ರ‍್ಯ ಪದವನ್ನು ವ್ಯಾಖ್ಯಾನಿಸುವಾಗ ಸ್ವಾತಂತ್ರ‍್ಯವು ಇತರರಿಗೆ ಹಾನಿಯನಂಟು ಮಾಡುವಂತಾಗಬಾರದು ಎಂದು ಉಲ್ಲೇಕಿಸಲಾಗಿದೆ. ಪ್ರಸ್ತುತವಾಗಿ ಮಾನವ ಸಮಾಜವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದಕ್ಕೆ ಬಡತನ, ಅನಕ್ಷರತೆ, ಸಂಪನ್ಮೂಲಗಳ ಕೊರತೆಗಳು ಕಾರಣ ಎಂದು ಭಾವಿಸಲಾಗುತ್ತದೆಯಾದರೂ, ಅನಿಯಂತ್ರಿತ ಸ್ವಾತಂತ್ರ‍್ಯವನ್ನು ಅರಸುತ್ತಾ ದೈವಿಕ ಮಾರ್ಗದರ್ಶನವನ್ನು ನಿರ್ಲಕ್ಷಿಸುತ್ತಿರುವುದೇ ಅದರ ಮುಖ್ಯ ಕಾರಣ ಎಂಬುದನ್ನು ಮನಗಾಣಬೇಕಾಗಿದೆ. ಸದಾಚಾರ, ಪರಿಶುದ್ಧತೆ ಮತ್ತು ಸಭ್ಯತೆಯ ವಿಷಯದಲ್ಲಿ ಯಾವುದೇ ಸಂಧಾನ ಮಾಡಿಕೊಳ್ಳಬಾರದು.ನೈತಿಕ ಆರಾಜಕತೆಯ ಈ ವಾತಾವರಣದಲ್ಲಿ ಮಕ್ಕಳು ಹಾಳಾಗದಂತೆ ಮಕ್ಕಳಲ್ಲಿರುವ ಸ್ವಾಭಾವಿಕವಾದ ಸದಾಚಾರದ ಪ್ರಜ್ಞೆ ಮೂಡಿಸಬೇಕಾಗಿದೆ ಎಂದರು.

ಮೆರವಣಿಗೆ :

ನೈತಿಕತಯೇ ಸ್ವಾತಂತ್ರ್ಯ ಅಭಿಯಾನದ ಅಂಗವಾಗಿ ಜಮಾಅತ್ ಇಸ್ಲಾಮಿ ಹಿಂದ್ ಮಹಿಳಾ ಘಟಕದ ಸದಸ್ಯರು  ಪಟ್ಟಣದ ಬಸ್ ನಿಲ್ದಾಣ ವೃತ್ತದಿಂದ ಗಡಿಯಾರ ವೃತ್ತದ ಮೂಲಕ ವಿವಿಧಡೆ ಮೆರವಣಿಗೆ ನಡೆಸಿದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!