ಮಾಜಿ ಸಂಸದ ಅಮರೇಶ್ವರ ನಾಯಕ ಆರೋಪ :
ಲಿಂಗಸುಗೂರು : ಗೋವಾ-ಹೈದರಬಾದ್ ಎಕಾನಾಮಿಕ್ ಕಾರಿಡಾರ್ (Economic Corridor) ರಾಷ್ಟ್ರೀಯ ಹೆದ್ದಾರಿಗಾಗಿ ರೈತರು ಭೂಮಿ ನೀಡಲು ಮುಂದಾಗಿದ್ದರೆ ಆದರೆ ಲ್ಯಾಂಡ್ ಮಾಫಿಯಾಗಳಿಂದ ಹೆದ್ದಾರಿ ಭೂಸ್ವಾಧೀನ ವಿಳಂಭದಿ0ದ ಸಾಗುತ್ತಿದೆ ಎಂದು ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಆರೋಪಿಸಿದ್ದಾರೆ.
ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿದ ಅವರು, ಸಂಸದನಾಗಿದ್ದ ವೇಳೆಯಲ್ಲಿ ನಾನು ರಾಯಚೂರು-ಯಾದಗಿರಿ ಜಿಲ್ಲೆಗಳಿಗೆ ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇ ಆದರೆ ಅವುಗಳು ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಎರಡು ಜಿಲ್ಲೆಗಳಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಗೋವಾ-ಹೈದರಬಾದ್ ರಾಷ್ಟ್ರೀಯ ಹೆದ್ದಾರಿಗೆ ರಾಜ್ಯ ಸರ್ಕಾರ ಭೂಸ್ವಾದೀನ ಮಾಡಿಕೊಡಬೇಕು, ಆದರೆ ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳಿಗೆ ಸಹಕಾರ ನೀಡುತ್ತಿಲ್ಲ, ಗೋವಾ-ಹೈದರಬಾದ್ ಹೆದ್ದಾರಿಗೆ ಬೇಕಾಗುವ ಭೂಮಿಗಳನ್ನು ರೈತರಿಂದ ಲ್ಯಾಂಡ್ ಮಾಫಿಯಾಗಳು ಖರೀದಿಸಿ ರೈತರಿಗೆ ಸಿಗಬೇಕಾದ ಸರ್ಕಾರ ಸೌಲಭ್ಯ ತಾವು ಪಡೆಯುವ ಮೂಲಕ ರೈತರನ್ನು ವಂಚಿಸುವ ಕೆಲಸ ಲ್ಯಾಂಡ್ ಮಾಫಿಯಾ ಮಾಡುತ್ತಿವೆ. ಈ ಲ್ಯಾಂಡ್ ಮಾಫಿಯಾ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ ಮೇಲೆ ಕೇಂದ್ರದ ಅಧಿಕಾರಿಗಳ ತಂಡವನ್ನು ಕಳಿಸಿ ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದೆ. ಅದೇ ಚನೈ-ಸೂರತ್ ಎಕ್ಸಪ್ರೆಸ್ 6 ಲೈನ್ ಕಾಮಗಾರಿ ಕಳಪೆಯಾಗಿತ್ತು, ಆದರೆ ನಾನು ದೂರು ನೀಡಿದ್ದೇನೆ. ಈಗಾಗಿ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳು ವೇಗದಲ್ಲಿ ನಡೆಯಬೇಕು. ಜೇವರ್ಗಿಯಿಂದ ತಿಂಥಣಿ ಬ್ರಿಜ್‌ವರಿಗೆ ಹೆದ್ದಾರಿಗೆ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಅನುಮೂಧನೆ ಪಡೆದಿದ್ದೇ ಆದರೆ ಶೀಘ್ರವೇ ಟೆಂಡರ್ ಕರೆಯಬೇಕಾಗಿದೆ ಎಂದರು.
ರೈಲು ಯೋಜನೆಗಳೂ ಕೂಡಾ ಮಂದಗತಿ:
ಗದಗ-ವಾಡಿ ರೈಲ್ವೆ ಯೋಜನೆಗಾಗಿ ತಾಲೂಕಿನ ಗೊಲ್ಲಪಲ್ಲಿ ಅರಣ್ಯ ಪ್ರದೇಶ ಸ್ವಾಧೀನ ಪಡಿಸುವ ಕೊಳ್ಳುವ ಬಗ್ಗೆ ಕೇಂದ್ರ ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ. ಈಗಾಗಿ ಅಧಿಕಾರಿಗಳು ಕಾಮಗಾರಿಗೆ ವೇಗ ನೀಡಬೇಕು. ಇದಲ್ಲದೆ ಬಳ್ಳಾರಿ-ರಾಯಚೂರು, ಗದಗ-ಹಟ್ಟಿ-ಗಬ್ಬೂರು-ರಾಯಚೂರು ಮಾರ್ಗಕ್ಕೆ ಹೊಸ ರೈಲ್ವೇ ಯೋಜನೆಗೆ ನನ್ನ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಈ ಭಾಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರಗಳು ಜಾರಿಗೆ ಮಾಡಿರುವ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆಗೊಳಿಸಬೇಕು. ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜಿಗಾಗಿ ಯಡಿಯೂರಪ್ಪನವರ ಅವಧಿಯಲ್ಲಿ ಶೇ.40 ರಷ್ಟು ಅನುದಾನ ಬಿಡುಗಡೆಗೊಳಿಸಿದ್ದರಿಂದಲೇ ಮೆಡಿಕಲ್ ಕಾಲೇಜು ಬೇಗ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದರು.
ಹತ್ತಿ ಖರೀದಿ ಕೇಂದ್ರ ತೆರೆಯಿರಿ :
ರಾಯಚೂರು ಹಾಗೂ ಯಾದಗಿರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯಲಾಗಿದ್ದು, ಆದರೆ ಹತ್ತಿಗೆ ಬೆಲೆ ಇಲ್ಲದೇ ರೈತರು ಪರದಾಡುವಂತಾಗಿದೆ. ಬೆಂಬಲ ಬೆಲೆ ನೀಡಿ ರೈತರ ಹತ್ತಿ ಖರೀದಿಗಾಗಿ ಎರಡು ಜಿಲ್ಲೆಗಳಲ್ಲಿ ಹತ್ತಿ ಖರೀದಿ ಕೇಂದ್ರ ತೆರೆಯುವಂತೆ ಕೇಂದ್ರ ಸಚಿವರಿಗೆ ಹಾಗೂ ಸಿಸಿಎ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಹಾಗೂ ಶೀಘ್ರವೇ ಪತ್ರ ಬರೆಯುತ್ತೇನೆ. ಸಿಸಿಎ ವತಿಯಿಂದ ಹತ್ತಿ ಕ್ವಿಂಟಲ್‌ಗೆ ರೂಪಾಯಿ 7520-8000 ಗೆ ಖರೀದಿಸುಲಾಗುತ್ತಿದೆ ಆದರೆ ಖರೀದಿ ಕೇಂದ್ರಗಳು ಸ್ಥಾಪನೆ ಮಾಡಿಲ್ಲ ಕೂಡಲೇ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು.
ಆಧಾರ್ ಕೇಂದ್ರ ಸ್ಥಾಪಿಸಿ :
ಯಾವುದೇ ಯೋಜನೆಗೆ ಆಧಾರ್ ಕಾರ್ಡ್ ಅವಶ್ಯಕವಾಗಿದೆ ಆದರೆ ತಾಲೂಕು ಕೇಂದ್ರಗಳಲ್ಲಿ ಆಧಾರ್ ಕೇಂದ್ರಗಳು ಇಲ್ಲದಾಗಿದೆ. ತಾಲೂಕು ಕೇಂದ್ರಗಳಲ್ಲಿ ಒಂದೇ ಕೇಂದ್ರ ಇದ್ದರೆ ಇಡೀ ತಾಲೂಕಿನ ಜನತೆಗೆ ಸೇವೆ ಹೇಗೆ ಕೊಡಲು ಸಾಧ್ಯ, ಇವತ್ತು ಬೆಳಿಗ್ಗೆ ಪಾಮನಕೆಲ್ಲೂರು ಆಧಾರ್ ಕೇಂದ್ರಕ್ಕೆ ಭೇಟಿ ನೀಡಿದ್ದೇ, ಕೇಂದ್ರದಲ್ಲಿ ಸಮರ್ಪಕ ವಿದ್ಯುತ್ ಕೊರತೆಯಿಂದಾಗಿ ಸುತ್ತಮುತ್ತ ಗ್ರಾಮಗಳ ಜನರು ಕೇಂದ್ರದ ಮುಂದೆ ಜಮಾವಣೆಗೊಳ್ಳುವಂತಾಗಿದೆ. ಇದು ಸಾಮಾನ್ಯ ಜನರ ಸಮಸ್ಯೆಯಾಗಿರುವುದರಿಂದ ಅದನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಕನಿಷ್ಠ ಹೋಬಳಿ ಕೇಂದ್ರದಲ್ಲಾದರೂ ಆಧಾರ್ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯ ಮಾಡಿದ್ದೇನೆ.
ಈ ವೇಳೆ ಶ್ರೀಶೈಲ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶರಣಪ್ಪ ಮೇಟಿ, ಬಿಜೆಪಿ ಮುಖಂಡರಾದ ಗಜೇಂದ್ರ ನಾಯಕ, ಶರಣಯ್ಯ ಗೊರೇಬಾಳ ಹಾಗೂ ಇನ್ನಿತರಿದ್ದರು.