ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
ಲಿಂಗಸುಗೂರು : ಡಾ.ಬಿ.ಆರ್.ಅಂಬೇಡ್ಕರ್ರವರ ಪ್ರಜಾಪ್ರಭುತ್ವದ ಅಡಿಯಲ್ಲಿ ದೇಶ ಮುನ್ನೆಡೆಯುತ್ತಿದೆ, ಅಖಂಡ ದೇಶದ ಪ್ರಗತಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ಸಹಕಾರ ನೀಡಬೇಕಾಗಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಕರೆ ನೀಡಿದರು.
ಪಟ್ಟಣದ ಬಸವಸಾಗರ ವೃತ್ತದ ಬಳಿ ಅಂತಾರಾಷ್ಟ್ರೀಯ Democracy Day ಪ್ರಜಾಪ್ರಭುತ್ವ ದಿನದ Democracy Day ಅಂಗವಾಗಿ ನಿರ್ಮಿಸಿದ ಮಾನವ ಸರಪಳಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿಯೇ ಬಹುದೊಡ್ಡ ಪ್ರಜಾಪ್ರಭುತ್ವದ ರಾಷ್ಟ ನಮ್ಮದಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಡಿಯಲ್ಲಿ ಎಲ್ಲರಿಗೂ ಸಮಾನಾದ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ. ನಾವೆಲ್ಲರೂ ಹೇಗೆ ಹಕ್ಕು ಪಡಿತ್ತೇವೆ ಅದರಂತೆ ನಮ್ಮದೇ ಆದ ಕರ್ತವ್ಯಗಳು ಪ್ರಮಾಣಿಕವಾಗಿ ಮಾಡಬೇಕಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸಿದೆ. ಈಗಾಗಿ ದೇಶದ ಪ್ರಗತಿಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು ಒಗ್ಗಟ್ಟಿನಿಂದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ತಹಶೀಲ್ದಾರ ಮಾತಿಗೆ ಆಕ್ಷೇಪ :
ಸಿಂಧನೂರು ತಹಶೀಲ್ದಾರ ಅರುಣ್ ದೇಸಾಯಿ ಮಾತನಾಡುವಾಗ, ತಿಂಥಣಿ ಬ್ರಿಜ್‌ನಿಂದ ಹಿರೇಜಾವೂರು ೧೦೯ ಕಿ.ಮೀ ಆಗುತ್ತೆ ಎಂದು ಹೇಳಿದ್ದರಿಂದ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು, ತಿಂಥಣಿ ಬ್ರಿಜ್‌ನಿಂದ ಹಿರೇಜಾವೂರು ೧೦೯ ಕಿ.ಮೀ ಇಲ್ಲ ಅದು ೬೦ ಕಿ.ಮೀ ಆಗುತ್ತೆ ಆದರೆ ನೀವು ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡಬೇಡಿ, ಇದೇ ರೀತಿ ತಪ್ಪು ಮಾಹಿತಿ ನೀಡಿ ಇಲ್ಲಿ ಇರುವ ಸರ್ಕಾರಿ ಕಚೇರಿಗಳನ್ನು ಸಿಂಧನೂರಿಗೆ ಎತ್ತಂಗಡಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ವೇಳೆ ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ, ಸಿಂಧನೂರು ಡಿವೈಎಸ್ಪಿ ಬಾಳಪ್ಪ ತಳವಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.