suddiduniya.com

Digitization of land records : ಭೂ ಸುರಕ್ಷಾ ಯೋಜನೆಗೆ ಶಾಸಕ ವಜ್ಜಲ್ ಚಾಲನೆ

Digitization of land records

ಲಿಂಗಸುಗೂರು : ಭೂ ದಾಖಲೆಗಳ ಡಿಜಿಟಲೀಕರಣಗೊಳಿಸುವ ಭೂ ಸುರಕ್ಷಾ ಯೋಜನೆಗೆ (Digitization of land records )ಶಾಸಕ ಮಾನಪ್ಪ ವಜ್ಜಲ್‍ ಚಾಲನೆ ನೀಡಿದರು.

ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಬಳಿಯ ಹಳೆಯ ತಹಶೀಲ್ದಾರ್ ಕಚೇರಿ ಕೊಠಡಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಕೊಠಡಿ ಉದ್ಘಾಟಿಸುವ ಮೂಲಕ ಶಾಸಕ ಮಾನಪ್ಪ ವಜ್ಜಲ್ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ ನೀಡಿದರು.

Digitization of land records

ನಂತರ ಮಾತನಾಡಿದ ಅವರು, ಜಮೀನಿನ ದಾಖಲೆಗಳಿಗೆ ಭೂ ದಾಖಲೆಗಳ ಕಚೇರಿಗೆ ಅಲೆದಾಡಿ ಕಚೇರಿಯಲ್ಲಿ ದಾಖಲೆ ಇಲ್ಲ, ಕಳೆದಿದೆ, ಸುಟ್ಟಿದೆ ಎಂದು ನಾನಾ ಕಾರಣಗಳಿಂದಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಮಹತ್ವದ ಉದ್ದೇಶದಿಂದ ಭೂ ಸುರಕ್ಷಾ ಯೋಜನೆ ಜಾರಿಗೊಳಿಸಲಾಗಿದೆ. ಇದನ್ನು ಅಧಿಕಾರಿಗಳು ಯಾವುದೇ ಕಾರಣಕ್ಕೂ ಒಂದೂ ದಾಖಲೆ ತಪ್ಪಿಹೋಗದಂತೆ ಎಲ್ಲಾ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಬೇಕು. ಡಿಜಿಟಲೀಕರಣ ಕಾರ್ಯ ಮಾಡುವ ಸಂದರ್ಭದಲ್ಲಿ ದಾಖಲೆಗಳಲ್ಲಿ  ವ್ಯತ್ಯಾಸವಾಗದಂತೆ ಜಾಗೃತಿವಹಿಸಬೇಕು. ದಾಖಲೆಗಳು ಡಿಜಿಟಲೀಕರಣಗೊಳಿಸುವುದರಿಂದ ದಾಖಲೆಗಳಿಗಾಗಿ ಅಲೆದಾಡುವುದು ತಪ್ಪುತ್ತದೆ ಮೇಲಾಗಿ ದಾಖಲೆಗಳನ್ನು ತಿದ್ದುವ, ಕಳೆಯುವ ಭೀತಿ ಇಲ್ಲದೆ ದಾಖಲೆಗಳ ಸುರಕ್ಷೆಯಿಂದ ಇರುತ್ತವೆ ಇದೊಂದು ಉತ್ತಮ ಯೋಜನೆಯಾಗಿದೆ ಎಂದರು.

Digitization of land records

ತಹಶೀಲ್ದಾರ ಶಂಶಾಲಂ ಮಾತನಾಡಿ, ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. ನಕಲಿ ದಾಖಲೆ ಸೃಷ್ಠಿಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ಆಸ್ಪದ ನೀಡದೇ ಹಾಗೂ ದಾಖಲೆಗಳನ್ನು ಪಡೆಯಲು ವಿಳಂಭ ನೀತಿಗೆ ತಡೆ ನೀಡಿ ತ್ವರಿತವಾಗಿ ಹಾಗೂ ಸುಲಭವಾಗಿ ದಾಖಲೆಗಳನ್ನು ಪಡೆಯುವ ಉದ್ದೇಶದಿಂದ ಸರಕಾರ ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದೆ. ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದರಿಂದ ಭೂ ದಾಖಲೆಗಳಿಗಾಗಿ ಕಚೇರಿಗೆ ಅಲೆದಾಡಬೇಕಾಗಿಲ್ಲ ಭೂಮಿ ವೆಬ್ ಸೈಟ್‍ನಿಂದ ನೇರವಾಗಿ ಡೌನ್ ಲೋಡ್ ಮಾಡಿಕೊಳ್ಳುವ ಸೌಲಭ್ಯ ಇದಾಗಿದೆ. ಪ್ರತಿದಿನ 500 ದಾಖಲೆಗಳು ಹಾಗೂ ತಿಂಗಳಿಗೆ 15000 ದಾಖಲೆಗಳನ್ನು ಡಿಜಿಟಲೀಕರಣ ಕಾರ್ಯ ಮಾಡುವ ಗುರಿ ಹೊಂದಲಾಗಿದೆ ಎಂದರು.

Digitization of land records

ಈ ವೇಳೆ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ, ಗ್ರೇಡ್-2 ತಹಶೀಲ್ದಾರ ಬಸವರಾಜ ಝಳಕಿಮಠ, ಬಿಜೆಪಿ ಮುಖಂಡರಾದ ನಾಗಭೂಷಣ, ಶರಣಬಸವ ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!