suddiduniya.com

Drama program :ಮುದಗಲ್‍ನಲ್ಲಿ ಮೂರು ದಿನ ನಾಟಕೋತ್ಸವ

Drama program

ಲಿಂಗಸುಗೂರು : ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಮೂರು ದಿನಗಳ ನಾಟಕೋತ್ಸವ ( Drama program )ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಗೌಡರ್ ಹೇಳಿದರು.

Drama program

ತಾಲೂಕಿನ ಮುದಗಲ್ ಪಟ್ಟಣದ ಎಸ್‍ವಿಎಂ ಪ್ರೌಢಶಾಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಅಂಗವಾಗಿ ಮುದಗಲ್ ಪಟ್ಟಣದಲ್ಲಿ ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಭಾರಿ 69ನೇ ರಾಜ್ಯೋತ್ಸವ ಅಂಗವಾಗಿ ಅಶೋಕಗೌಡ ಪಾಟೀಲ್ ಹಾಗೂ ಸುರೇಂದ್ರಗೌಡ ಪಾಟೀಲ್‌ , ತಾಲೂಕು ಕರ್ನಾಟಕ ಜಾನಪದ ಪರಿಷತ್ತು, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮುದಗಲ್ ಹೋಬಳಿ ಘಟಕ ಸಹಯೋಗದಲ್ಲಿ ಮುದಗಲ್ ಪಟ್ಟಣದ ರಾಮಲಿಂಗೇಶ್ವರ ಕಾಲೋನಿಯಲ್ಲಿರುವ ಅನ್ನದಾನಗೌಡ ಪದವಿ ಪೂರ್ವ ಕಾಲೇಜ್ ನಲ್ಲಿ ನೆವಂಬರ್ 28ರಿಂದ 30ವರಿಗೆ ಮೂರು ದಿನಗಳ ನಾಟಕೋತ್ಸವ (Drama program ) ಹಮ್ಮಿಕೊಳ್ಳಲಾಗಿದೆ ಎಂದರು.

ನವೆಂಬರ್ 28ರಂದು ಸಂಜೆ 6.30ಕ್ಕೆ ನಾಟಕೋತ್ಸವಕ್ಕೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಚಾಲನೆ ನೀಡಲಿದ್ದಾರೆ. ಜಾನಪದ ಪರಿಷತ್ ತಾಲೂಕಾಧ್ಯಕ್ಷ ಅಶೋಕಗೌಡ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ, ಕಸಪಾ ಮುದಗಲ್ ಹೋಬಳಿ ಘಟಕದ ಅಧ್ಯಕ್ಷ ಹಾಜಿಮಲಂಗಬಾಬಾ ಭಾಗವಹಿಸಲಿದ್ದಾರೆ.

Drama program

ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದಿಂದ ಮೂರು ದಿನಗಳ ಕಾಲ ನಾಟಕ ಪ್ರದರ್ಶನ ನಡೆಯಲಿದೆ, ನವೆಂಬರ್ 28ರಂದು ತುಲಾಭಾರ, ನವೆಂಬರ್ 29ರಂದು ಬಂಗಾರದ ಮನುಷ್ಯ ಹಾಗೂ ನವೆಂಬರ್ 30ರಂದು ಕೋಳೂರು ಕೊಡಗೂಸು ನಾಟಕ ಪ್ರದರ್ಶನ ನಡೆಯಲಿದ್ದು, ರಂಗಭೂಮಿ ಬಗ್ಗೆ ಈ ಭಾಗದ ಯುವಕರಿಗೆ ಹಾಗೂ ರಂಗಾಸಕ್ತರಿಗೆ ಆಸಕ್ತಿ ಮೂಡಿಸುವ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ನಡೆಯುವ ನಾಟಕ ಪ್ರದರ್ಶನ ಸಂಪೂರ್ಣ ಉಚಿತ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ನಾಟಕೋತ್ಸವದಲ್ಲಿ ಮುದಗಲ್ ಪಟ್ಟಣ ಸೇರಿದಂತೆ ತಾಲೂಕಿನಿಂದ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಈ ವೇಳೆ ಜಾನಪದ ಪರಿಷತ್ ತಾಲೂಕಾಧ್ಯಕ್ಷ ಅಶೋಕಗೌಡ ಪಾಟೀಲ್, ಕಸಾಪ ಮುದಗಲ್ ಹೋಬಳಿ ಅಧ್ಯಕ್ಷ ಹಾಜಿಮಲಂಗಬಾಬಾ ಉಪಸ್ಥಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!