ಎಸಿ ಕಚೇರಿ ಎದುರು ದಸಂಸ ಸತ್ಯಾಗ್ರಹ
ಲಿಂಗಸುಗೂರು : ಮಸ್ಕಿ ತಾಲೂಕಿನಲ್ಲಿ ಅಕ್ರಮ ಹಾಗೂ ವಿಷಪೂರಿತ ಮಧ್ಯ ಮಾರಾಟ ತಡೆಯಲು ಹೋದ ಮುದಬಾಳ ಗ್ರಾಮದ ದಲಿತ ಯುವಕ ಮರಿಸ್ವಾಮಿ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ( DSS Protest )ಕರ್ನಾಟಕ ದಲಿತ ಸಂಘರ್ಷ ಸಮೀತಿ ( ಡಾ. ಎನ್ ಮೂರ್ತಿ ಸ್ಥಾಪಿತ ) ಮಸ್ಕಿ ತಾಲೂಕ ಘಟಕ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮಸ್ಕಿ ತಾಲೂಕ ಘಟಕದ ಪದಾಧಿಕಾರಿಗಳು ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಎದುರು ಧರಣಿ ಸತ್ಯಾಗ್ರಹ ( DSS Protest ) ನಡೆಸಿದರು.
ಮಸ್ಕಿ ತಾಲೂಕಿನ ಮುದಬಾಳ ಗ್ರಾಮದ ದಲಿತ ಯುವಕ ಮರಿಸ್ವಾಮಿ ಹಾಗೂ ದಸಂಸ ಇತರೆ ಪದಾಧಿಕಾರಿಗಳು ಸೇರಿ ಮಸ್ಕಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮ ಕಲಬರಿಕೆ ವಿಷಪೂರಿತ ಮದ್ಯ ಮಾರಾಟ ಮಾಡುವುದನ್ನು ವಿರೂಧಿಸಿ (DSS Protest )ಹೋರಾಟ ಮಾಡಿದ್ದಾರೆ. ಪಡಿತರ ಕಾಳಸಂತೆಯಲ್ಲಿ ಮಾರಾಟ, ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದರಿಂದ ಕೆಲವು ಸವರ್ಣಿಯರ ಗುಂಪು 2024 ನವೆಂಬರ್ 17ರಂದು ಹೋರಾಟಗಾರ ಮರಿಸ್ವಾಮಿಯನ್ನು ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ತೀವ್ರ ಗಾಯಗೊಳಿಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪ್ರಕರಣ ದಾಖಲಿಸಿದೇ ಘಟನೆ ನಡೆದು ವಾರದ ನಂತರ ಪ್ರಕರಣ ದಾಖಲಿಸಿರುವುದು ಖಂಡನೀಯ.
ವಿವಿಧಡೆ ದಲಿತರ ಮೇಲೆ ದೌರ್ಜನ್ಯ :
ಹಿರೇಕಡಬೂರು ಗ್ರಾಮದ ದಲಿತ ಮುಖಂಡ ದೇವಪ್ಪ ಹಿರೇದುರುಗಮ್ಮ, ತೋರಣದಿನ್ನಿ ಗ್ರಾಮದ ದಲಿತ ಯುವಕ ಮಾವತ್ಸೆತುಂಗ, ಲೇನಿನ್ ಕುಮಾರ ರಾಮಚಂದ್ರಪ್ಪ ಇವರಿಗೆ ಸವರ್ಣಿಯರು ಹಲ್ಲೆ ನಡೆಸಿ ದೌರ್ಜನ್ಯ ವೆಸಗಿದ್ದಾರೆ ಇದರಿಂದ ಹಲ್ಲೆಗೊಳಗಾದ ದಲಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಿ :
ಸಹಾಯಕ ಆಯುಕ್ತರ ವ್ಯಾಪ್ತಿಯಲ್ಲಿ ಬರುವ ಸಿಂಧನೂರು ಮಸ್ಸಿ.ಲಿಂಗಸಗೂರು ತಾಲೂಕಿನ ಗ್ರಾಮಗಳಲ್ಲಿನ ಕಿರಾಣಿ ಅಂಗಡಿ,ಪಾನ್ ಶ್ಯಾಪ, ಹೋಟೆಲ್ ಗಳಲ್ಲಿ ಮಿನಿ ಡಾಬಗಳಲ್ಲಿ ಮನೆಗಳಲ್ಲಿ. ಆಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದೆ.ಇದರಿಂದ ಬಡ ಕುಟುಂಬದವರು ಹಾಗೂ ಕೂಲಿ ಕಾರ್ಮಿಕರು, ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರಿಂದ ಕುಟುಂಬಗಳು ಬೀದಿ ಪಾಲಾಗಿರುತ್ತವೆ. ಪೋಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ,ಕಂದಾಯ ಇಲಾಖೆ. ಹಾಗೂ ಜಿಲ್ಲಾ ಪಂಚಾಯತ್ ಇಲಾಖೆಯ ಅಧಿಕಾರಿಗಳು ಇದನ್ನು ತಡೆಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ದಲ್ಲಾಳಿಕೋರರು ನಕಲಿ ಮದ್ಯವನ್ನು ತಯಾರು ಮಾಡುತ್ತಿದ್ದು ನಕಲಿ ಮದ್ಯ ತಯಾರಿ ಮಾಡುವ ದಲ್ಲಾಳಿಗಳ ಮೇಲೆ ವಿಶೇಷ ತಂಡವನ್ನು ರಚಿಸಿ ನಕಲಿ ಮದ್ಯಪಾನವನ್ನು ತಯಾರು ಮಾಡುವವರ ಮೇಲೆ ಪ್ರಕರಣ ನಕಲಿ ಮದ್ಯಪಾನವನ್ನು ತಯಾರು ಮಡು ವಿಷನರಿಯನ್ನು ಜಪ್ತಿ ಮಾಡಿ ಕೇಸ್ ದಾಖಲಿಸ ಬೇಕು.
ಜಂಟಿ ಸಭೆ ಕರೆಯಲು ಆಗ್ರಹ :
ದಲಿತರ ಮೇಲೆ ದಿನದಿಂದ ದಿನಕ್ಕೆ ದೌರ್ಜನ್ಯ, ದಬ್ಬಾಳಿಕೆ, ಮಾರಣಾಂತಿಕ, ಹಲ್ಲೆ ಕೊಲೆ,ಅತ್ಯಾಚಾರ, ಪ್ರಕರಣಗಳು ನಡೆಯುತ್ತಿದ್ದ, ಕೆಲವಡೆ ಅಸ್ಪೃಶ್ಯತೆ ಆಚರಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಕಂದಾಯ, ಪೋಲೀಸ್, ಸಮಾಜ ಕಲ್ಯಾಣ, ಪಿಡಿಓ, ದಲಿತ ಮುಖಂಡರಗಳನ್ನು ಒಳಗೊಂಡು ಸಹಾಯಕ ಆಯುಕ್ತರು ವಿಶೇಷ ಸಭೆ ಕರೆದು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಮರಿಸ್ವಾಮಿ ಮೇಲೆ ದೌರ್ಜನ್ಯ ನಡೆಸಿದ ಆರೊಪಿಗಳನ್ನು ಗುಂಡಾ ಕಾಯ್ದೆಯಲ್ಲಿ ಬಂಧಿಸಬೇಕು. ದಲಿತ ಯುವಕ ಮರಿಸ್ವಾಮಿ ಹಾಗೂ ದೇವಪ್ಪ ಕಡಬೂರ ಇವರ ಮೇಲೆ ಸುಳ್ಳು ಪ್ರತಿದೂರು ಕೇಸ್ ಮಾಡಿದ್ದನ್ನು ಜಿಲ್ಲಾ ಮಟ್ಟದ ಪೋಲೀಸ್ ಉನ್ನತ ಅಧಿಕಾರಿಗಳಿಂದ ತನಿಖೆ ಮಾಡಿ ಸುಳ್ಳು ಕೌಂಟರ್ ಕೇಸಗಳನ್ನು ರದ್ದುಪಡಿಸಬೇಕು, ಪೋಲೀಸ್ ಠಾಣೆಗಳಲ್ಲಿ ಕೇಸ್ ದಾಖಲಿಸದೇ ವಿಳಂಬ ಮಾಡಿ ಕೇಸನ್ನು ರಾಜಿಮಾಡಲು ಒತ್ತಾಯ ಪಡಿಸುವುದು. ಹಾಗೂ ದೌರ್ಜನ್ಯ ಒಳಗಾದವರ ಮೇಲೆ ಸುಳ್ಳು ಕೌಂಟರ್ ಕೇಸ್ ದಾಖಲೆ ಮಾಡಿ ಮಾಡುತ್ತಿರುವ ಪಿ.ಎಸ್.ಐ,ಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ದೌರ್ಜನ್ಯಗೆ ಒಳಗಾದ ದಲಿತ ಕುಟುಂಬದವರಿಗೆ ಸೂಕ್ತ ರಕ್ಷಣೆ ನೀಡಬೇಕು. ದಲಿತ ವಿರೋಧಿ ಕವಿತಾಳ ಪೋಲೀಸ್ ಠಾಣೆ ಪಿ.ಎಸ್.ಐ ವೆಂಕಟೇಶ ನಾಯಕ ಇವರನ್ನು ಅಮಾನತ್ತು ಮಾಡಬೇಕು. ದಲಿತ ಮೇಲೆ ದೌರ್ಜನ್ಯಗೆ ಒಳಗಾದ ಕುಟುಂಬಗಳಿಗೆ 5 ಲಕ್ಷ ಪರಿಹಾರ ಮತ್ತು 5 ಎಕರೆ ಜಮೀನು ಕೊಡಬೇಕು. ಪ್ರತಿ ಹಳ್ಳಿಗಳಿಗೆ ಪರಿಶಿಷ್ಟ ಜಾತಿ ಕಾಲೋನಿಗಳಳಿಗೆ ಸಿ.ಸಿ ಕ್ಯಾಮರ ಅಳವಡಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ದಸಂಸ ವಿಭಾಗೀಯ ಅಧ್ಯಕ್ಷ ಬಸವರಾಜ ಸಾಸಲಮರಿ, ಜಿಲ್ಲಾಧ್ಯಕ್ಷ ಅಶೋಕ ನಂಜಲದಿನ್ನಿ, ಆರ್ ಪಿಐ ಜಿಲ್ಲಾಧ್ಯಕ್ಷ ಹುಲಗಪ್ಪ ಸೈದಾಪುರ, ತಾಲೂಕಾಧ್ಯಕ್ಷ ಈರಪ್ಪ ಕುಣಿಕೆಲ್ಲೂರು, ಜಮದಗ್ನಿ ಗೋನಾಳ, ಗಂಗಮ್ಮ ಅಂಕಶುದೊಡ್ಡಿ, ಬಸವರಾಜ ಕುಣಿಕೆಲ್ಲೂರು, ಚಂದ್ರಪ್ಪ ಕವಿತಾಳ, ದೇವಣ್ಣ ನಾಯಕ, ಮಾರೆಪ್ಪ ಮಳ್ಳಿ, ಮಲ್ಲಪ್ಪ ಗೋನಾಳ ಸೇರಿದಂತೆ ಇನ್ನಿತರಿದ್ದರು.