ವಿಚಾರಣೆ ಸೆ.24ಕ್ಕೆ ಮುಂದೂಡಿಕೆ, ಆಕಾಂಕ್ಷಿಗಳಲ್ಲಿ ತಳಮಳ :
ಲಿಂಗಸುಗೂರು : ರಾಜಕೀಯ ವಲಯಕ್ಕೆ ಕಾರಣವಾಗಿರುವ ಸ್ಥಳೀಯ (election of municipal )ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯ ತಡೆಯಾಜ್ಞೆ ವಿಚಾರಣೆಯನ್ನು ಕಲುಬುರಗಿ ಹೈಕೋರ್ಟ ಪೀಠ ಮತ್ತೆ ಸೆ.24ಕ್ಕೆ ವಿಚಾರಣೆ ಮುಂದೂಡಿದ್ದರಿ0ದ ಅಧ್ಯಕ್ಷ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದ ಫಾತೀಮಾ ಮೌಲಾಸಾಬ, ಪ್ರಮೋಧ ಕುಮಾರ್, ಮೌಲಾಸಾಬಾ ಛೋಟುಸಾಬ್, ಶರಣಪ್ಪ ಬಸಪ್ಪ ಈ ನಾಲ್ಕು ಜನರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡದೇ ಕೆಆರ್ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ0ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷಾಂತರ ಕಾಯ್ದೆಯಡಿಯಲ್ಲಿ ಈ ನಾಲ್ಕ ಜನ ಸದಸ್ಯರ ಸದಸ್ಯತ್ವ ಅನರ್ಹಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ದೂರುಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಈ ನಾಲ್ಕ ಜನ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಈ ನಾಲ್ಕು ಜನ ಸದಸ್ಯರು ಹೈಕೋರ್ಟ್ಗೆ ಮೊರೆ ಹೋಗಿದ್ದರಿಂದ ಕಲುಬುರಗಿ ಹೈಕೋರ್ಟ್ ಪೀಠ ಸೆ.13ರಂದು election of municipal ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ತಡೆಯಾಜ್ಞೆ ನೀಡಿತ್ತು. ಇದರ ವಿಚಾರಣೆಯನ್ನು ಸೆ.19ರಂದು ನಿಗದಿಯಾಗಿತ್ತು. ಇದನ್ನು ಈಗ ಮತ್ತೆ ಸೆ.24ಕ್ಕೆ ಮುಂದೂಡಲಾಗಿದೆ.
ಸೆ.13ರಂದು ಚುನಾವಣೆಗೆ ತಡೆಯಾಜ್ಞೆ ನೀಡಿದ್ದರಿಂದ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್ನ ಕೆಲ ಸದಸ್ಯರು ವಾಪಸ್ಸಾಗಿದ್ದರು, ಬದಲಾದ ರಾಜಕೀಯ ಚಿತ್ರಣದಿಂದಾಗಿ ಕಾಂಗ್ರೆಸ್ ಸದಸ್ಯರಿಗೆ ಮತ್ತೆ ಪ್ರವಾಸ ಭಾಗ್ಯ ಒದಗಿ ಬಂದಿದೆ.
ಬಣಗಳ ಅರ್ಭಟ :
2023ರ ವಿಧಾನಸಭಾ ಚುನಾವಣೆಯ ಪೂರ್ವದಿಂದಲೂ ಶುರುವಾದ ಕಾಂಗ್ರೆಸ್ ಬಣಗಳ ರಾಜಕೀಯ ಈಗ election of municipal ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮುಂದುವರಿದಿದೆ. ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಉಭಯ ನಾಯಕರು ತಮ್ಮ ಬಣದ ಬೆಂಬಲಿಗ ಸದಸ್ಯರಿಗೆ ಪುರಸಭೆ ಅಧಿಕಾರ ದೊರಕಿಸಿಕೊಡಬೇಕೆಂದು ತಂತ್ರಕ್ಕೆ ಪ್ರತಿತಂತ್ರ ಎಣಿಯುತ್ತಿದ್ದಾರೆ. ಸದಸ್ಯರನ್ನು ಯಾರೂ ಸೆಳೆಯದಂತೆ ಎರಡು ಬಣಗಳ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಲಾಗಿದೆ. ಬಯ್ಯಾಪುರ ಬಣದಲ್ಲಿ ಸೋಮನಗೌಡ ಕರಡಕಲ್ ಹಾಗೂ ಹೂಲಗೇರಿ ಬಣದಲ್ಲಿ ಬಾಬುರೆಡ್ಡಿ ಮುನ್ನೂರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಸೆ.24ರ ಮೇಲೆ ಎಲ್ಲರ ಕಣ್ಣು :
ಸೆ.24ರಂದು ನಡೆಯುವ ವಿಚಾರಣೆ ನಂತರ ಬರುವ ತೀರ್ಪು ಯಾರ ಪರ ಅಥವಾ ಯಾರ ವಿರುದ್ಧ ಬರಲಿದೆ, ನಾಲ್ಕು ಜನ ಸದಸ್ಯರು ಅರ್ಹರಾ..? ಅಥವಾ ಅನರ್ಹರಾಗುತ್ತಾರಾ..? ಅನರ್ಹರಾದರೆ ಹೂಲಗೇರಿ ಬಣದವರು ಅಧ್ಯಕ್ಷರಾಗುತ್ತಾರೋ ಇಲ್ಲವೋ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.election of municipal
ವಕೀಲರ ಬದಲಾವಣೆ..!
ಈ ನಡುವೆ ಪಕ್ಷಾಂತರ ನಿಷೇದ ಕಾಯ್ದೆ ಕುರಿತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪರವಾಗಿ ವಕಾಲತ್ ಮಾಡುತ್ತಿದ್ದ ವಕೀಲರನ್ನು ಬದಲಾವಣೆ ಮಾಡಿ ಮತ್ತೋರ್ವ ಹಿರಿಯ ವಕೀಲರಿಗೆ ವಕಾಲತ್ ವಹಿಸಲಾಗಿದೆ ಎಂದು ಹೇಳಲಾಗಿದೆ.
ಸೋಮನಗೌಡ ಅಧ್ಯಕ್ಷ..?:
ಬಯ್ಯಾಪುರ ಬಣದ ಕಾಂಗ್ರೆಸ್ನ ಸದಸ್ಯ ಸೋಮನಗೌಡ ಕರಡಕಲ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇವರನ್ನೇ ಅಧ್ಯಕ್ಷರನ್ನಾಗಿ ಮಾಡಲು ಬಯ್ಯಾಪುರ ಬಣದ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಹೂಲಗೇರಿ ಓಟಕ್ಕೆ ಬ್ರೇಕ್ ಹಾಕುವ ಕೆಲಸ ನಡೆದಿದೆ.ಒಂದು ವೇಳೆ ನಾಲ್ಕು ಸದಸ್ಯರು ಅರ್ಹರೆಂದು ಕೋರ್ಟ್ ತೀರ್ಪು ನೀಡಿದರೆ ಬಯ್ಯಾಪುರ ಬಣಕ್ಕೆ ಮತ್ತಷ್ಟು ಬಲಬಂದ0ತಾಗುತ್ತಿದೆ. ಹೂಲಗೇರಿ ಬಣದಲ್ಲಿನ ಕೆಲವು ಸದಸ್ಯರು ಬಯ್ಯಾಪುರ ಬಣದ ಪರವಾಗಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾರೇ ಅಧ್ಯಕ್ಷರಾದರೂ ಬಿಜೆಪಿ ಬೆಂಬಲ ಪಡೆಯಬೇಕಾಗಿದೆ. ಆದರೆ ಇದಕ್ಕೆಲ್ಲಾ ಸೆ.24ರಂದು ಹೊರಬರುವ ತೀರ್ಪೇ ಉತ್ತರ ನೀಡಲಿದೆ.