suddiduniya.com

ವಿದ್ಯುತ್ ಖಾಸಗಿಕರಣ ಕೈಬಿಡದಿದ್ದರೆ ಉಗ್ರ ಹೋರಾಟ

ವಿದ್ಯುತ್ ಖಾಸಗಿಕರಣ ಕೈಬಿಡದಿದ್ದರೆ ಉಗ್ರ ಹೋರಾಟ

ಲಿಂಗಸುಗೂರು : ಸೋಲಾರ್ ವಿದ್ಯುತ್‌ಗೆ ವರ್ಗಾವಂತೆ ರೈತರಿಗೆ ಹೇಳುವ ಮೂಲಕ ರಾಜ್ಯ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ತರಾತುರಿಯಲ್ಲಿ ಖಾಸಗಿಕರಣ ಮಾಡಲು ಹೊರಟಿದೆ, ಸರ್ಕಾರ ವಿದ್ಯುತ್ ಖಾಸಗಿಕರಣ ಕೈಬಿಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.

ವಿದ್ಯುತ್ ಖಾಸಗಿಕರಣ ಕೈಬಿಡದಿದ್ದರೆ ಉಗ್ರ ಹೋರಾಟ

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಜೋಡಣೆ ಮಾಡಿ, ಕೆಇಬಿ ಬದಲಾಗಿ ಐದು ವಿಭಾಗಗಳಾಗಿ ಮಾಡಿ ವಿದ್ಯುತ್ ಕಂಪನಿಗಳನ್ನಾಗಿ ಮಾಡಿ ಖಾಸಗಿ ಮಾಲಿಕತ್ವಕ್ಕೆ ನೀಡಿ ಖಾಸಗೀಕರಣಗೊಳಿಸುವ ಯತ್ನವನ್ನು ಹಿಂದೆ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಮಾಡಿತ್ತು. ಆದರೆ ರೈತರ ಹೋರಾಟದಿಂದಾಗಿ ಖಾಸಗಿಕರಣ ಕೈಬಿಟ್ಟು ನಂತರ ಸರ್ಕಾರಿ ಅಧೀನದಲ್ಲಿ ವಿದ್ಯುತ್ ನಿಯಮಿತಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ ಎಂದರು. ವಿದ್ಯುತ್ ಖಾಸಗಿಕರಣ ಕೈಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಖಾಸಗಿಕರಣ ಮಾಡಲು ನಿಮ್ಮನೆ ಆಸ್ತಿಯಲ್ಲ :

ಸಿದ್ಧರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ರೈತರಿಗೆ ಈಗಿನ ವಿದ್ಯುತ್ ಸಂಪರ್ಕದಿ0ದ ಸೋಲಾರ್ ವಿದ್ಯುತ್ ಪರಿವರ್ತನೆಗೊಳಿಸುವಂತೆ ರೈತರಿಗೆ ಹೇಳುತ್ತಿರುವುದು ಗಮನಿಸಿದರೆ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣ ಮಾಡಲು ಹುನ್ನಾರ ನಡೆಸಿದೆ. ಕೃಷಿಗೆ ಸೋಲಾರ್ ಆಧರಿತ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಪ್ರಚೋದಿಸಲಾಗುತ್ತಿದೆ. ಇದು ಕೂಡಾ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯ ಭಾಗವಾಗಿದೆ. ರಾಜ್ಯದಲ್ಲಿ 34 ಲಕ್ಷ ಪಂಪ್‌ಸೆಟ್ ಹೊಂದಿದ ರೈತರನ್ನು ಪಕ್ಕಕ್ಕೆ ಸರಿಸುವ ದುಸ್ಸಾಹಸ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಥರ್ಮಲ್, ಜಲವಿದ್ಯುತ್ ಸೇರಿ ವಿವಿಧ ರೀತಿಯ ವಿದ್ಯುತ್ ಉತ್ಪಾದನೆ ಘಟಕಗಳನ್ನು ಸ್ಥಾಪಿಸಿರುವುದು ಸಾರ್ವಜನಿಕರ ಹಣ ಹಾಗೂ ನಾಡಿನ ಸಂಪತ್ತಿನಿ0ದ ಇದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ಖಾಸಗಿಕರಣ ಮಾಡಲು ಅದು ನಿಮ್ಮ ಮನೆಯ ಆಸ್ತಿಯಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದರು.

ದೊಡ್ಡ ಕಂಪನಿಗೆ ಸೋಲಾರ್ ವಿದ್ಯುತ್ ಉತ್ಪಾದನೆ..?

ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕ ಅಳವಡಿಸಬೇಕಾದರೆ ಕೃಷಿಗೆ ಯೋಗ್ಯವಲ್ಲದ ಸಿ ಮತ್ತು ಡಿ ವರ್ಗದ ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕ ಅಳವಡಿಸಬೇಕು. ರೈತರು ಸೋಲಾರ್ ವಿದ್ಯುತ್‌ಗೆ ವಿರೋಧ ಮಾಡುತ್ತಿಲ್ಲ, ಆದರೆ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕಗಳನ್ನು ಅಳವಡಿಸಲು ಅದಾನಿ, ಲಕ್ಷ್ಮೀ ಮಿತ್ತಲ್ ನಂತರ ದೊಡ್ಡ ದೊಡ್ಡ ಕಂಪನಿಗಳೊAದಿಗೆ ಒಪ್ಪಂದ ಮಾಡಿಕೊಂಡ ರೇಟ್‌ನಂತೆ ರೈತರಿಗೂ ನೀಡಿ ರೈತರೇ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲಿ ಇದರಿಂದಾಗಿ ಹಳ್ಳಿಗಳಲ್ಲಿ ಆರ್ಥಿಕ ಸ್ಥಿತಿ ಸುದಾರಣೆಯಾಗುತ್ತೆ, ಸರ್ಕಾರದ ಪ್ರತಿನಿಧಿಗಳು ತಮಗೆ ವೈಯಿಕ್ತಕ ಲಾಭಕ್ಕಾಗಿ ಸೇವಾ ಮನೋಭಾವ ಬಿಟ್ಟು ರೈತರ ಹಿತಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ರೈತ ವಿರೋಧಿ ಕ್ರಮಗಳನ್ನು ಕೈಬಿಡಬೇಕು :

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ಜೊತೆಗೆ ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿತ್ತು. ರೈತರ ಪ್ರತಿರೋಧದಿಂದಾಗಿ ಕಾಯ್ದೆಗಳ ವಾಪಸ್ ಜೊತೆಗೆ ಖಾಸಗೀಕರಣವನ್ನು ಕೈಬಿಟ್ಟರು. ಈಗ ರಾಜ್ಯ ಸರ್ಕಾರ ಖಾಸಗೀಕರಣಕ್ಕೆ ಯತ್ನಿಸುತ್ತಿದೆ. ಇದರ ಭಾಗವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ, ಮೀಟರ್ ಅಳವಡಿಕೆಯಂತಹ ಕ್ರಮ ಕೈಗೊಂಡಿದೆ. ಸರ್ಕಾರವು ಇಂತಹ ರೈತ ವಿರೋಧಿ ಕ್ರಮಗಳನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮುಖ್ಯ ಲೈನ್‌ಗಳಿಂದಲೇ ವಿದ್ಯುತ್ ಸಂಪರ್ಕ ಪಡೆದು, ಕೃಷಿ ಉದ್ದೇಶಕ್ಕೆ ಬಳಸಲು ರೈತರಿಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ರೈತರೇ ಜಾಗೃರಾಗಿ :

ಸರ್ಕಾರದ ಸುಲಭದ ಆಸೆಗೆ ಜೋತುಬಿದ್ದು ತಮ್ಮ ಭೂಮಿಯನ್ನು ಸೋಲಾರ್ ವಿದ್ಯುತ್ ಉತ್ಪಾದನೆ ಘಟಕ ನಿರ್ಮಾಣಕ್ಕೆ ನೀಡಬಾರದು, ಸೋಲಾರ್ ಆಧಾರಿತ ಪಂಪ್‌ಸೆಟ್ ಅಳವಡಿಸಿಕೊಳ್ಳಬಾರದು ರೈತರು ಜಾಗೃತರಾಗಬೇಕು ಎಂದರು.

ಅರಣ್ಯ ಇಲಾಖೆ ವಿರುದ್ಧ ಪ್ರತಿಕ್ರಮ ::

ಲಿಂಗಸುಗೂರು ತಾಲೂಕಿನಲ್ಲಿ ರೈತರ ಭೂಮಿಯನ್ನು ಅರಣ್ಯ ಇಲಾಖೆಯವರು ಅತಿಕ್ರಮ ಮಾಡಿ ಜಮೀನಿನಲ್ಲಿದ್ದ ಬೆಳೆ ನಾಶ ಮಾಡಿ ಗಿಡ ನಡೆಸಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಇಲ್ಲಿನ ಶಾಸಕರು, ಚುನಾಯಿತ ಪ್ರತಿನಿಧಿಗಳು ಏನು ಮಾಡುತ್ತಾ ಇದ್ದಾರೆ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ವಾ..ಇದೇ ನಿಮ್ಮ ಜನ ಸೇವೆ ಎಂದು ಪ್ರಶ್ನಿಸಿದರು. ರೈತರ ಹೆಸರಿನಲ್ಲಿ ಪಹಣಿ ಇದ್ದರೂ ರೈತರನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಧಿಕಾರ ಕೊಟ್ಟರು..?, ಒಂದು ವೇಳೆ ಅರಣ್ಯಭೂಮಿಯಾಗಿದ್ದರೂ ಕೂಡಾ ಈ ಬಗ್ಗೆ ತಹಶೀಲ್ದಾರ ಗಮನಕ್ಕೆ ತಂದು ಸರ್ವೆ ಮಾಡಿಸಿ ಭೂಮಿ ಬಿಡಿಸಲಿ ಆದರೆ ಅರಣ್ಯ ಅಧಿಕಾರಿಗಳು ದುಂಡಾವರ್ತನೆ ಮಾಡಿದರೆ ಹೇಗೆ, ರೈತರನ್ನು ಒಕ್ಕಲೆಬ್ಬಿಸಬಾರದು ಎಂಬುದು ನ್ಯಾಯಲಯದ ಆದೇಶವಿದ್ದರೂ ಸಹ ಅರಣ್ಯಾಧಿಕಾರಿಗಳೂ ತಮ್ಮ ಮನಬಂದAತೆ ವರ್ತಿಸಿದರೆ ಅರಣ್ಯ ಅಧಿಕಾರಿಗಳ ವಿರುದ್ಧವೇ ಪ್ರತಿಕ್ರಮ ಜರಗಿಸಲು ರೈತರು ಹಿಂಜರಿಯಲ್ಲ ಇದನ್ನು ಅರ್ಥ ಮಾಡಿಕೊಳ್ಳಬೇಕು.

ಬಲ್ಯಾಡ್‌ರು ಸರ್ಕಾರಿ ಭೂಮಿ ಒತ್ತುವರಿ ಮಾಡಿದರೂ ಅವರ ಬಗ್ಗೆ ಏನೂ ಕ್ರಮ ಜರಗಿಸೋಲ್ಲ ಅದು ಬಿಟ್ಟು ಮುಗ್ಧ ರೈತರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ, ಚಿಕ್ಕಮಗಳೂರು ಜಿಲ್ಲೆಯ ಕಾಡುಮನೆ ಎಸ್ಟೇಟ್‌ನಲ್ಲಿ ನಾಲ್ಕು ಸಾವಿರ ಎಕರೆ ಪಹಣಿ ಇದೆ ಆದರೆ 12 ಸಾವಿರ ಎಕರೆ ಭೂಮಿ ಕಬ್ಜಾ ಮಾಡಿಕೊಂಡಿದ್ದಾರೆ. ಈ ತಾಲೂಕಿನಲ್ಲಿ ಕೇವಲ ನಾಲ್ಕು ಎಕರೆಯಲ್ಲಿ ಸಾಗುವಳಿ ಮಾಡಿದರೆ ಅರಣ್ಯ ಇಲಾಖೆಯವರು ದುಂಡಾವರ್ತನೆ ಮಾಡುತ್ತಿದ್ದಾರೆ ಅಲ್ಲಿಗೊಂದು ಕಾನೂನು ಇಲ್ಲಿಗೊಂದು ಕಾನೂನಾ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ರೈತರ ವಿರೋಧಿ ಎಪಿಎಂಸಿ ಕಾಯ್ದೆಯನ್ನು ಅಧಿಕಾರ ವಹಿಸಿಕೊಂಡ 24ಗಂಟೆಯಲ್ಲಿ ಹಿಂಪಡೆಯುವುದಾಗಿ ಸಿಎಂ ಸಿದ್ಧರಾಮಯ್ಯನವರು ಹೇಳಿದ್ದರು ಆದರೆ ಒಂದೂವರೆ ವರ್ಷ ಕಳೆದರೂ ಕಾಯ್ದೆ ವಾಪಸ್ಸು ಪಡೆಯಲು ಸಿದ್ಧರಾಮಯ್ಯನವರಿಗೆ ಆಗುತ್ತಿಲ್ಲ, ನಿಜಕ್ಕೂ ಅವರು ರೈತನ ಮಕ್ಕಳ ಅನ್ನೋದು ನಾಚಿಕೆಯಾಗುತ್ತದೆ ನಿಜವಾದ ರೈತನ ಮಗನಾಗಿದ್ದರೆ ರೈತರ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಎಂದರು.

ವೇಳೆ ರೈತ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ವೀರಭದ್ರಯ್ಯಸ್ವಾಮಿ, ರಾಜ್ಯ ಖಜಾಂಚಿ ಭಕ್ತರಹಳ್ಳಿ ಬೈರೇಗೌಡ, ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚಿ, ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ತಾಲೂಕಾಧ್ಯಕ್ಷ ಪ್ರಸಾದರೆಡ್ಡಿ, ಕಾನೂನು ಸಲಹೆಗಾರ ಕುಪ್ಪಣ್ಣ ಮಾಣಿಕ್ ಸೇರಿದಂತೆ ಅನೇಕರಿದ್ದರು.

Suddiduniya.com

2 thoughts on “ವಿದ್ಯುತ್ ಖಾಸಗಿಕರಣ ಕೈಬಿಡದಿದ್ದರೆ ಉಗ್ರ ಹೋರಾಟ

  1. ನವರಾತ್ರಿ ಪ್ರಯುಕ್ತ ಗೌತಮ ವಾರ್ಡ್‍ನ್ ಅಂಭಾ ಭವಾನಿ ದೇವಸ್ಥಾನದಲ್ಲಿ ಕುಂಕುಮಾರ್ಚೆನೆ: ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ದೇವದುರ್ಗ: ಪಟ್ಟಣದ ಗೌತಮ ವಾರ್ಡ್‍ನಲ್ಲಿರುವ ಅಂಭಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ರವಿವಾರ ಮಹಿಳೆಯರಿಂದ ಕುಂಕುಮಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿವರ್ಷದಂತೆ ಈವರ್ಷವೊ ವಿವಿಧ ಪೂಜೆ ಕಾರ್ಯಕ್ರಮಗಳ ಜತೆ ಅನ್ನದಾಸೋಹ ಏರ್ಪಡಿಸಲಾಯಿತು. ರಾಜುಗುರುಗಳು ತಿರುಮಲಾಚಾರ್ಯ ಜ್ಯೋಶಿ ಅವರಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳು ಜರುಗಿದವು. ನವರಾತ್ರಿ ಹಿನ್ನೆಲೆ ಬೆಳ್ಳಂಬೆಳಿಗ್ಗೆ ಹಲವು ವಾರ್ಡ್‍ನಿಂದ ಮಹಿಳೆಯರು ಇಲ್ಲಿನ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಲಾಗುತ್ತಿದೆ. ದಸರಾ ಹಿನ್ನೆಲೆಯಲ್ಲಿ ನವರಾತ್ರಿ ಪ್ರಯುಕ್ತ ಒಂಬ್ಬತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ದೇವಸ್ಥಾನ ಆವರಣದಲ್ಲಿ ಮಹಿಳೆಯರು ರಂಗೋಲಿ ಹಾಕಲಾಗುತ್ತದೆ. ದೇವಸ್ಥಾನಕ್ಕೆ ಹೋಗುವ ಮಾರ್ಗದಿಂದಲೇ ದೀಪದ ಅಲಂಕ ಮಾಡಲಾಗಿದೆ. ಇನ್ನು ದೇವಸ್ಥಾನ ಒಳಗೆ ವಿವಿಧ ರೀತಿಯಲ್ಲಿ ಅಲಂಕ ಮಾಡಲಾಗಿದ್ದು, ಭಕ್ತರ ಗಮನಸೆಳೆದಿದೆ. ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುಮಂಗಲಿಯರಿಗೆ ಭಕ್ತರಾದ ಅಮರೇಶ ಚವ್ಹಾಣ ಬಾದಾಮಿ ಹಾಲಿನ ಸೇವೆಯನ್ನು ಮಾಡಿದರು. ಸೋಮವಂಶ ಆರ್ಯ ಕ್ಷೇತ್ರೀಯ ಸಮಾಜದ ಮುಖಂಡರು ಪಾಲ್ಗೊಂಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!