ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ಲಿಂಗಸುಗೂರು : ತಾಲೂಕಿನ ಸುಣಕಲ್ ಹಾಗೂ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಸರ್ಕಾರಿ ಭೂಮಿ ಕಬಳಕೆ ( Use of government land) ಮಾಡಿದ ಆರ್.ಬಿ.ಶುಗರ್ಸ್( RB Sugars) ವಿರುದ್ಧ ಕ್ರಿಮಿನಲ್ ಪ್ರಕರಣ( criminal case) ದಾಖಲಿಸಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘದ ನೇತ್ರತ್ವದಲ್ಲಿ ನೂರಾರು ರೈತರು ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ತಾಲೂಕಿನಲ್ಲಿರುವ ಸರಕಾರಿ ಗಾಯರಾಣ, ಪರಂಪೋಕ, ಅರಣ್ಯ, ಕಂದಾಯ ಖಾರೇಜಖಾತಾ ಭೂಮಿ ಸಾಗುವಳಿ ಮಾಡುತ್ತಿರುವ ಭೂರಹಿತ ಸಾಗುವಳಿದಾರರ ಸಾಗುವಳಿಯನ್ನು ರಕ್ಷಿಸಿ, ಇವರುಗಳಿಗೆ ಪಟ್ಟಾ ನೀಡಬೇಕು, ಸರಕಾರದ ಅರಣ್ಯ, ಕಂದಾಯ, ಕೆರೆ ಅಂಗಳ, ಮುಂತಾದ ಭೂಮಿಗಳನ್ನು ಕಳ್ಳದಾರಿಯಲ್ಲಿ ಅಕ್ರಮ ದಾಖಲೆಗಳ ಮೂಲಕ ಕಬಳಿಕೆ ಮಾಡಿ ಭೂ ವ್ಯವಹಾರ ಮಾಡುತ್ತಿರುವ ನೆಲಗಳ್ಳರ ವಿರುದ್ಧ ಪ್ರಕರಣ ದಾಖಲಿಸಿ, ಕಬಳಿಕೆಯಿಂದ ತೆರವುಗೊಳಿಸಬೇಕಾದದ್ದು. ಈ ಎರಡು ಕರ್ತವ್ಯಗಳನ್ನು ಲಿಂಗಸೂಗೂರು ತಾಲೂಕು ಆಡಳಿತ ಹಾಗೂ ರಾಯಚೂರು ಜಿಲ್ಲಾಡಾಳಿತಗಳು ಸಂಪೂರ್ಣವಾಗಿ ಮರೆತುಬಿಟ್ಟಿವೆ. ಈ ಕಾರಣದಿಂದಾಗಿಯೇ ಭೂರಹಿತ ಬಡ ಸಾಗುವಳಿದಾರರ ಮೇಲೆ ಕಂದಾಯ ಹಾಗೂ ಅರಣ್ಯ ಇಲಾಖೆಯ ದೌರ್ಜನ್ಯಗಳು ಮುಂದುವರೆದಿವೆ. ಹಾಗೆಯೇ, ಲಿಂಗಸೂಗೂರು ಸುಣಕಲ್ಲ, ಜಲದುರ್ಗ ಸೇರಿದಂತೆ ತಾಲೂಕು ಹಾಗೂ ಜಿಲ್ಲೆಯಾದ್ಯಂತ ನೂರಾರು ಎಕರೆ ಸರಕಾರಿ ಕಂದಾಯ, ಅರಣ್ಯ, ಖಾರೇಜಖಾತಾ ಭೂಮಿಯ ಕಬಳಿಕೆಯು ರಾಜಾರೋಷವಾಗಿ ಮುಂದುವರೆದಿದೆ.
ವಿಶೇಷ ತನಿಖಾಧಿಕಾರಿ ನೇಮಿಸಿ :
ಸುಣಕಲ್ಲ ಗ್ರಾಮದಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಮಾಲಿಕತ್ವದ RB Sugar ಆರ್.ಬಿ.ಶುಗರ್ಸ್ ಲಿಮಿಟೆಡ್ 2018 ರಲ್ಲಿ ಸ್ವಯಂ ಬಳಕೆ ಹಾಗೂ ಮಾರಾಟ ಉದ್ಧೇಶಿತ ವಿದ್ಯುತ್ ತಯಾರಿಸುವ ಕಂಪನಿಗಾಗಿ ಸರಕಾರದಿಂದ ವರವಾನಿಗೆ ಪಡೆದಿದ್ದಾರೆ. ಅಲ್ಲದೆ, ಸುಣಕಲ್ಲ ಗ್ರಾಮದ ರೈತರಿಂದ ಎಕರೆಗೆ 1.5 ಲಕ್ಷ ಹಾಗೂ 2 ಲಕ್ಷ ರೂ.ಗೆ ಖರೀದಿ ಮಾಡಿರುತ್ತಾರೆ. ಇವರು ಖರೀದಿ ಮಾಡಿದ ಭೂಮಿಯ ನಟ್ಟನಡುವೆ 62 ಎಕರೆಗೂ ಹೆಚ್ಚು ಸರಕಾರದ ಭೂಮಿ ಇದೆ. ಕಳೆದ ಆರು ವರ್ಷಗಳಿಂದ ಸರಕಾರದ ಭೂಮಿ ಕಬಳಿಕೆ ನಡೆದಿದೆ. ಸ.ನಂ. 62 ಹಾಗೂ 68 ರಲ್ಲಿ ಕಬಳಿಕೆ ಮಾಡಿ ಮಣ್ಣು- ಕಲ್ಲುಗಳ ರಾಶಿ ಹಾಕಲಾಗಿದೆ. ಕಳೆದ 60 ವರ್ಷಗಳಿಂದ ಸರಕಾರದ ಭೂಮಿ ಸಾಗುವಳಿ ಮಾಡಿದ ಭೂರಹಿತ ಕುರುಬರು, ಹಗಲು ವೇಷಗಾರ ಸಾಗುವಳಿದಾರರನ್ನು ಹೆದರಿಸಿ-ಬೆದರಿಸಿ ಅಲ್ಲಿಂದ ಓಡಿಸಿರುತ್ತಾರೆ.
ಇದು ಅಬಕಾರಿ ಸಚಿವರು RB Sugar ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಸರಕಾರದ ಭೂಮಿಯನ್ನು ಕಬಳಿಕೆ ಮಾಡಿರುತ್ತಾರೆ. ಈ ಬಗ್ಗೆ ಸೆ.13ರಂದು ಕರ್ನಾಟಕ ರೈತ ಸಂಘ ತಹಶೀಲ್ದಾರರಿಗೆ ದೂರು ನೀಡಿದ 10 ದಿನಗಳ ನಂತರ ತಹಶಿಲ್ದಾರರು ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಅಲ್ಲದೇ, ಒಂದೇ ಗಂಟೆಯಲ್ಲಿ ಭೂಮಿ ಸರ್ವೆ ಮಾಡದಿದ್ದಲ್ಲದೆ ಇಲ್ಲಿ ಯಾವುದೇ ಸರಕಾರದ ಭೂಮಿ ಕಬಳಿಕೆಯೇ ಆಗಿಲ್ಲ ಹೇಳಿಕೆ ನೀಡುವ ಮೂಲಕ ಭೂಕಬಳಿಕೆದಾರರ ಬೆಂಬಲಕ್ಕೆ ನಿಂತಿದ್ದಾರೆ. (RB Sugar )ಈ ಪ್ರಕರಣದ ತನಿಖೆಗಾಗಿ ವಿಶೇಷ ಅಧಿಕಾರಿಗಳನ್ನು ನೇಮಿಸಿ ದೂರುದಾರರ ಸಮಕ್ಷಮ ಸರ್ವೆ ನಡೆಯಿಸಿ, ತಪ್ಪಿತಸ್ಥ ಕಂಪನಿಯ ವಿರುದ ಸಾರ್ವಜನಿಕ ಭೂ ಕಬಳಿಕೆ ಪ್ರತಿಬಂಧಕ ಕಾಯ್ದೆ-2011ರ ಅಡಿ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಹೆಚ್ಚುವರಿ ಭೂಮಿ ಹಂಚಿಕೆ ಮಾಡಿ :
ಹಾಗೆಯೇ ಲಿಂಗಸೂಗೂರು ತಾಲೂಕಿನ ಚಿಕ್ಕಹೆಸರೂರ, ದೇವರಭೂಪುರ, ತೊರ್ಲಬೆಂಚಿ, ಬಂಡಬಾವಿ, ಸುಣಕಲ್ಲ ಮುಂತಾದ ಗ್ರಾಮಗಳಲ್ಲಿ ಕಳೆದ 50-60 ವರ್ಷಗಳಿಂದ ಭೂಮಿ ಸಾಗುವಳಿ ಮಾಡುತ್ತಿರುವ ಭೂರಹಿತ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು, ಅಲ್ಲದೆ ಈ ಸಾಗುವಳಿದಾರರು ಸಲ್ಲಿಸಿದ ಫಾರಂ-53,57 ರ ಆಧಾರದ ಮೇಲೆ ಇವರ ಸಾಗುವಳಿಯನ್ನು ಸಕ್ರಮಗೊಳಿಸಬೇಕು. ಜತೆಗೆ ತಾಲೂಕಿನ ಯರಡೋಣ, ದೇವರ ಭೂಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಳೆದ 70-100 ವರ್ಷಗಳಿಂದ ತುಂಡು ಅರಣ್ಯ ಭೂಮಿ ಸಾಗುವಳಿ ಮಾಡಿದ ರೈತರಿಗೆ ಪಟ್ಟಾ ನೀಡಲು ಮುಂದಾಗಬೇಕು. ಹಾಗೆಯೇ ತಾಲೂಕಿನಲ್ಲಿ ಲಭ್ಯವಿರುವ ಹೆಚ್ಚುವರಿ ಭೂಮಿಯನ್ನು ಕೂಡಲೇ ಭೂರಹಿತರಿಗೆ ವಿತರಿಸಬೇಕು.
ಈ ನಮ್ಮ ಒತ್ತಾಯವನ್ನು ತಾವು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಜರುಗಿಸಿ ಕಾನೂನು ಹಾಗೂ ಸಾಗುವಳಿದಾರ ರೈತರನ್ನು ಕಾಪಾಡಬೇಕೆಂದು ಈ ಮೂಲಕ ಒತ್ತಾಯಿಸಲಾಗಿದೆ. ತಮ್ಮಿಂದ ಕ್ರಮ ಜರುಗಿಸುವುದು ವಿಳಂಬವಾದಲ್ಲಿ ಅಕ್ಟೋಬರ್ 2ನೇ ವಾರದಲ್ಲಿ ಲಿಂಗಸೂಗೂರು ಪಟ್ಟಣ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರಕರಣವನ್ನು
ಸಚಿವರ ಪ್ರಭಾವ :
ಆರ್,ಬಿ,ಶುಗರ್ಸ್ ಲಿಮೆಟೆಡ್‍್ ಸರಕಾರಿ ಗಾಯರಾಣ ಸ.ನಂ. 62ರಲ್ಲಿ ಸರಾಸರಿ 25 ಎಕರೆಯಷ್ಟು ಭೂಮಿಯಲ್ಲಿ ಕಬ್ಬಾ ಹೊಂದಿದ್ದಾರೆ. ಕಲ್ಲು ಮಣ್ಣುಗಳ ರಾಶಿ ಹಾಕಿ ಸದರಿ ಭೂಮಿಯನ್ನು ಕಬಳಿಸಿರುತ್ತಾರೆ. ದೇವಸ್ಥಾನಕ್ಕೆ ಎಂಬ ಕಟ್ಟು ಕಥೆ ಕಟ್ಟಿರುತ್ತಾರೆ. ಇದು ಸರಕಾರಿ ಭೂಮಿಯ ಬಹಿರಂಗ ಕಬಳಿಕೆಯಾಗಿದೆ. ಅಬಕಾರಿ ಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸದರಿ ಭೂಮಿಯನ್ನು ಕಬಳಿಸಿ ಅಪರಾಧವೆಸಗಿರುತ್ತಾರೆ.
ಕ್ರಿಮಿನಲ್ ಪ್ರಕರಣ ದಾಖಲಿಸಿ :
ಕಬಳಿಕೆಯಾದ ಭೂಮಿಯಲ್ಲಿರುವ ಕಂಪನಿಯ ಕಚ್ಚಾವಸ್ತು ಕಲ್ಲು ಮಣ್ಣುಗಳನ್ನು ತೆರವುಗೊಳಿಸಬೇಕು. ಇವರ ಕಬಳಿಕೆಯಿಂದ ಸದರಿ ಗಾಯರಾಣಿ ಭೂಮಿಯಲ್ಲಿ 25ಕ್ಕೂ ಹೆಚ್ಚು ಸರಕಾರಿ ಚಕ್ ಡ್ಯಾಮ್ ಗಳು ನೀರಿನ ದಾರಿಗಳು ಅಸಂಖ್ಯಾತ ಗಿಡಮರಗಳು ನಾಶಗೊಂಡಿವೆ. ಸದರಿ RB Sugar ಕಂಪನಿಯ ಈ ಸಾರ್ವಜನಿಕ ಆಸ್ತಿಯ ಹಾನಿಯ ವಿರುದ್ಧ ಕಂಪನಿಯ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.
ಹಕ್ಕೊತ್ತಾಯಗಳು :
ಸರಕಾರಿ ಭೂಮಿ ಸಾಗುವಳಿ ಮಾಡಿದ ಎಲ್ಲಾ ಭೂ ರಹಿತರಿಗೆ ಪಟ್ಟಾ ಕೊಡಬೇಕು. RB Sugar ಆರ್ ಬಿ ಶುಗರ್ಸ್ ಲಿಮಿಟೆಡ್ ಕಂಪನಿಯು ಕಬಳಿಕೆ ಮಾಡಿದ ಚಿಕ್ಕ ಉಪ್ಪೇರಿ ಸ.ನ ನಂಬರ್ 62 ರಲ್ಲಿ 90 ಎಕರೆ ಒತ್ತುವರಿ 25 ಎಕರೆ ಕಬಳಿಕೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸ ಬೇಕು. ಸುಣಕಲ್ಲ ಸರಕಾರಿ ಭೂಮಿ ಕಬಳಿಕೆ ಮಾಡಿದ RB Sugar ಆರ್.ಬಿ.ಶುಗರ್ಸ್ ಮೇಲೆ ಪ್ರಕರಣ ದಾಖಲಿಸಬೇಕು. ಸರಕಾರಿ ಕಂದಾಯ ಪರಂಪೋಕ, ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿದ ರೈತರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು.ತಾಲೂಕಿನ ಎಲ್ಲಾ ಹೆಚ್ಚುವರಿ ಭೂಮಿಗಳನ್ನು ಭೂರಹಿತ ಬಡವರಿಗೆ ಹಂಚಬೇಕು. ಹೊಸೂರು ಗ್ರಾಮದ ಹಂಚಲಾದ ಹೆಚ್ಚುವರಿ ಭೂಮಿಯ ಕಬ್ರಾ ಕೊಡಿಸಿ. ಭೂರಹಿತ ಸಾಗುವಳಿದಾರರ ಮೇಲೆ ಹಾಕಿದ ಕೇಸುಗಳನ್ನು ಹಿಂಪಡೆಯಬೇಕು.ತಾಲೂಕಿನ ಗೊರಬಾಳ ಗ್ರಾಮದ ಸರಕಾರಿ ಸ.ನಂ. 14 ರಲ್ಲಿ ಸಾಗುವಳಿ ಭೂಮಿಗೆ ಪಟ್ನಾ ನೀಡಬೇಕು, ತಾಲೂಕಿನ ದೇವರ ಭೂಪುರ ಸ.ನಂ. 32 ಹಾಗೂ 155 ರಲ್ಲಿ ಸಾಗುವಳಿ ರೈತರಿಗೆ ಪಟ್ಟಾ ವಿತರಿಸಬೇಕು. ತಾಲೂಕಿನ ಚಿಕ್ಕನಗನೂರ ಸ.ನಂ.44 ಸರಕಾರಿ ಗಾಯರಾಣ ಭೂಮಿ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು ಬೇಡಿಕೆಗಳ ಮನವಿಯನ್ನು ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಈ ವೇಳೆ ಹಿರಿಯ ಹೋರಾಟಗಾರ ಆರ್.ಮಾನಸಯ್ಯ, ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಹಡಪದ, ತಿಪ್ಪಣ್ಣ ಚಿಕ್ಕಹೆಸರೂರು, ಬಸವರಾಜ ಬಡಿಗೇರ್, ಗಂಗಾಧರ ನಾಯಕ, ಆದೇಶ ನಗನೂರು, ಬಸವರಾಜ ಚಿಕ್ಕಹೆಸರೂರು, ರಮೇಶ, ಎಂ.ನಿಸರ್ಗ ಸೇರಿದಂತೆ ಅನೇಕ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.