suddiduniya.com

Fill Vacancies :ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಿ

Fill Vacancies

ಕರವೇ ಆಗ್ರಹ





ಲಿಂಗಸುಗೂರು : ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಹತ್ತು ವರ್ಷಗಳ ನಂತರ ಸಚಿವ ಸಂಪುಟ ನಡೆಯುತ್ತಿರುವುದು ಸ್ವಾಗತಾರ್ಹ ಆದರೆ ಈ ಭಾಗದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ( Fill Vacancies ) ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಮಾದೇಶ ಸರ್ಜಾಪುರ ಒತ್ತಾಯಿಸಿದ್ದಾರೆ.

Fill Vacancies
Fill Vacancies


ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆಪ್ಟೆಂಬರ್ ೧೭ ರಂದು ಕಲ್ಯಾಣ ಕರ್ನಾಟಕ ಉತ್ಸವದ ಜೊತೆಗೆ ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಉದ್ದೇಶಿಸಿದ್ದು ಸ್ವಾಗತಾರ್ಹ.

ಸಂಪುಟ ಸಭೆ ಆಡಂಬರಕ್ಕೆ ಬೇಡ :

ಇದು ಕೇವಲ ಆಡಂಬರ ಕ್ಕೆ ಸೀಮಿತವಾಗಬಾರದು. ಈ ಭಾಗಕ್ಕೆ ಕಲಂ ೩೭೧ ಜೆ ಅನುಷ್ಠಾನಗೊಂಡ ನಂತರ ಇಂಜಿನೀಯರ್ ಹಾಗೂ ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿ ಹೊರತು ಪಡಿಸಿದರೆ, ಈ ಭಾಗದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಇನ್ನೂ ಸಾಧ್ಯವಾಗಿಲ್ಲ. ಜೊತೆಗೆ ಗ್ರಾಮೀಣ ಭಾಗದ ಜನರು ಇನ್ನೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ.

Fill Vacancies
Fill Vacancies

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ ಅಂತ ಹೇಳಲಾಗುತ್ತಿದ್ದರೂ ಸಕಾಲಕ್ಕೆ ಕೂಲಿ ಹಣ ಸಿಗದೇ ಜನ ಗುಳೆ ಹೋಗುತ್ತಿದ್ದಾರೆ. ಗ್ರಾಮೀಣ ಭಾಗಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಸಮಗ್ರ ಅಭಿವೃದ್ದಿಗಾಗಿ ಈ ಹಿಂದಿನ ಸರಕಾರಗಳು ಗ್ರಾಮ ಪಂಚಾಯತ ಕೇಂದ್ರ ಸ್ಥಾನದಲ್ಲಿಯೇ ಪಿಡಿಓ, ಕಾರ್ಯದರ್ಶಿ, ಇಂಜಿನಿಯರ್, ಗ್ರಾಮ ಲೆಕ್ಕಾಧಿಕಾರಿ, ಲೈನಮೆನ್, ವೈಧ್ಯಾಧಿಕಾರಿ ಸೇರಿದಂತೆ ಹಲವು ಗ್ರಾಮ ಮಟ್ಟದ ಅಧಿಕಾರಿಗಳು ವಾಸವಿರುವಂತೆ ಆದೇಶಗಳನ್ನು ಹೊರಡಿಸಿವೆ.

ಆದರೆ ಈ ಆದೇಶಗಳು ಕೇವಲ ಕಾಗದದ ಮೇಲಿನ ಬರಹಕ್ಕೆ ಸೀಮಿತವಾಗಿದೆ ಹೊರತು ಕಾರ್ಯ ರೂಪಕ್ಕೆ ಬಂದು ಗ್ರಾಮೀಣ ಜನರ ಬದಕು ಅಸನವಾಗುತ್ತಿಲ್ಲ, ಈ ಬಗ್ಗೆ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ನಿದ್ರಾವಸ್ಥೆ ಯಿಂದ ಎದ್ದು ಬಡ ಹಾಗೂ ಗ್ರಾಮೀಣ ಜನರ ಅಭಿವೃದ್ದಿಗಾಗಿ ಹೊರಡಿಸುವ ಸುತ್ತೋಲೆಗಳು ಎಷ್ಟರ ಮಟ್ಟಿಗೆ ತಳ ಮಟ್ಟದ ಅಧಿಕಾರಿಗಳು ಪಾಲನೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುವ ಮೂಲಕ ಪ್ರಾಮಾಣಿಕವಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಿಜವಾದ ಬದ್ದತೆ ತೋರಿಸಲಿ ಎಂದರು.


ಈ ವೇಳೆ ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ಸಂಘಟನಾ ಕಾರ್ಯದರ್ಶಿ ಮುತ್ತಣ್ಣ ಗುಡಿಹಾಳ, ಖಜಾಂಚಿ ಮಹಾಂತೇಶ ಹೂಗಾರ, ನಗರ ಘಟಕ ಅಧ್ಯಕ್ಷ ರಾಜು ರೆಡ್ಡಿ,ನಗರ ಘಟಕ ಉಪಾಧ್ಯಕ್ಷ ಜಗನ್ನಾಥ ಜಾದವ್ ಇದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!