suddiduniya.com

Flow irrigation :ನಂದವಾಡಗಿ ಹನಿ ಬದಲು ಹರಿ ನೀರಾವರಿ ಜಾರಿಗೆ ತನ್ನಿ

Flow irrigation

ಲಿಂಗಸುಗೂರು : ಕೃಷ್ಣಾ ಮೇಲ್ದಂಡೆ ಯೋಜನಾ ವ್ಯಾಪ್ತಿಯ ನಂದವಾಡಗಿ ಹನಿ ನೀರಾವರಿ ಯೋಜನೆ ಬದಲಾಗಿ ಪೈಪ್‍ ಮೂಲಕ (Flow irrigation) ಹರಿ ನೀರಾವರಿ ಯೋಜನೆ ಜಾರಿಗೆ ತರಬೇಕೆಂದು ಆಗ್ರಹಿಸಿ ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳು ಶಾಸಕ ಮಾನಪ್ಪ ವಜ್ಜಲ್‍ ಅವರಿಗೆ ಮನವಿ ಸಲ್ಲಿಸಿದರು.

Flow irrigation
Flow irrigation

2017 ಜೂನ್ 14ರಂದು ಸಿಎಂ ಸಿದ್ಧರಾಮಯ್ಯನವರು ನಂದವಾಡಗಿ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದರು. 2100 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆದು ಕೆಲಸ ಆರಂಭಿಸಿ 2020-21 ವೇಳೆಗೆ ರೈತರಿಗೆ ನೀರು ತಲುಪಿಸುವ ಸಂಕಲ್ಪ ಮಾಡಿದ್ದರು, ಆದರೆ ಇಲ್ಲಿವರಿಗೂ ರೈತರ ಜಮೀನುಗಳಿಗೆ ನೀರು ಕೊಡದೇ ಇರುವುದು ದುರದುಷ್ಟಕರ ಸಂಗತಿಯಾಗಿದೆ. ನಂದವಾಡಗಿ ಯೋಜನೆಯ ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದರೂ ಕೂಡಾ ರೈತರಿಗೆ ನೀರು ಒದಗಿಸುವ ಹಂತಕ್ಕೆ ತಲುಪದೇ ಇರುವುದು ರೈತರ ಬಹುವರ್ಷಗಳ ಕನಸಿಗೆ ತಣ್ಣೀರು ಎರಚಿದಂತಾಗಿದೆ.

ರಾಜ್ಯದ ಇತರೆ ಪ್ರದೇಶಗಳಲ್ಲಿ ಜಾರಿಗೆ ತಂದಿರುವ ಮರೋಳ, ಶಿಗ್ಗಾವಿ ಮತ್ತು ಮುಳವಾಡ ಹನಿ ನೀರಾವರಿ ಯೋಜನೆಗಳು ಸಂಪೂರ್ಣವಾಗಿ ವಿಫಲವಾಗಿವೆ. ಹರಿ ನೀರಾವರಿಗಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡಿದರೂ ಸರ್ಕಾರ ಹನಿ ನೀರಾವರಿ ಜಾರಿಗೆ ತರುವ ಮೂಲಕ ರೈತರ ನೀರಾವರಿ ಕನಸು ಛಿದ್ರವಾಗಿರುವುದು ಕಟುಸತ್ಯವಾಗಿದೆ. ಈ ಭಾಗದ ರೈತರು ಹನಿ ನೀರಾವರಿ ಯೋಜನೆಯನ್ನು ಒಪ್ಪುವುದಿಲ್ಲ, ಬದಲಾಗಿ ಪೈಪ್ ಗಳ ಮೂಲಕ ಹರಿ ನೀರಾವರಿಯನ್ನಾಗಿ ಪರಿವರ್ತಿಸಬೇಕು. ವಿತನೂತನ ಮಾದರಿಯಲ್ಲಿ ರೈತರಿಗೆ ಒಂದು ಹೇಕ್ಟರ್‍ಗೆ ಒಂದು ತೂಬ ಮೂಲಕ ಕೊಟ್ಟು, ಕೃಷಿ ಹೊಂಡ ನಿರ್ಮಿಸಿ, ಸೋಲಾರ್ ಪಂಪಸೆಟ್‍ ಒದಗಿಸಿ ರೈತರಿಗೆ ನೀರಾವರಿ ಸೌಕರ್ಯ ಒದಗಿಸಲು ಮುಂದಾಗಬೇಕು.

Flow irrigation

ಪ್ರತಿ ರೈತರಿಗೆ ಪ್ರತ್ಯೇಕವಾಗಿ ನೀರಿನ ತೂಬು( ಔಟಲೆಟ್ ) ಕೊಟ್ಟು ಅವರ ಸಂಪೂರ್ಣ ಭೂಮಿಗೆ ಅಗತ್ಯ ನೀರನ್ನು ಒದಗಿಸಬೇಕು. ಕೃಷಿ ಭೂಮಿಗೆ ಅಗತ್ಯಕ್ಕೆ ತಕ್ಕಂತೆ ಕೃಷಿ ಹೊಂಡ ನಿರ್ಮಾಣ ಮಾಡಲು ಆಯಾ ರೈತರಿಗೆ ಹೊಣೆ ನೀಡಿ ವೆಚ್ಚವನ್ನು ನಿಗಮದಿಂದ ಭರಿಸಬೇಕು. ಕೃಷಿ ಹೊಂಡದಲ್ಲಿ ಸಂಗ್ರಹಗೊಂಡ ನೀರನ್ನು ರೈತರು ಬಳಸಿಕೊಳ್ಳಲು ಸೋಲಾರ ಪಂಪಸೆಟ್‍ಗಳನ್ನು ಕೆಬಿಜೆಎನ್‍ಎಲ್‍ ನಿಂದ ಒದಗಿಸಬೇಕು. ಪ್ರಸ್ತುತ ಯೋಜನೆಯಲ್ಲಿರುವ ಹನಿ ನೀರಾವರಿ ರದ್ದುಪಡಿಸಿದ್ದರಿಂದ ಉಳಿತಾಯವಾಗಬಹುದಾದ ಹಣದಲ್ಲಿಯೇ ರೈತರ ಬೇಡಿಕೆಗಳನ್ನು ಈಡೇರಿಸಲು ಅವಕಾಶಗಳನ್ನು ಬಳಿಸಿಕೊಂಡು ದೇಶದಲ್ಲಿಯೇ ಮಾದರಿ ನೀರಾವರಿ ಯೋಜನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಈಗಾಗಿ ಹನಿ ನೀರಾವರಿ ಬದಲು ಪೈಪ್‍ಗಳ ಮೂಲಕ ಹರಿ ನೀರಾವರಿ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಒತ್ತಡ ಹೇರುವಂತೆ ಶಾಸಕರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

Flow irrigation

ಈ ವೇಳೆ ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಪ್ರಚಾರ ಸಮಿತಿ ಅಧ್ಯಕ್ಷ ಬಸವಂತರಾಯ ಕುರಿ, ತಾಂತ್ರಿಕ ಸಮಿತಿ ಅಧ್ಯಕ್ಷ ಶರಣಗೌಡ ಬಸಾಪುರ, ತಾಂತ್ರಿಕ ಸಮಿತಿ ಕಾರ್ಯದರ್ಶಿ ರಮೇಶ ಶಾಸ್ತ್ರೀ, ಆದನಗೌಡ ಸಂತೆಕೆಲ್ಲೂರು, ಮಲ್ಲೇಶಗೌಡ ಮಟ್ಟೂರು, ಅಯ್ಯಪ್ಪ ಮಾಳೂರು, ಲಿಂಗಣ್ಣ ದೇವಿಕೇರಿ ಸೇರಿದಂತೆ ಅನೇಕರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!