suddiduniya.com

Ganesha festival: ರಾಯಚೂರು ಜಿಲ್ಲೆಯಲ್ಲಿ ಸಂಭ್ರಮ-ಸಡಗರದ ಗಣೇಶ ಹಬ್ಬ

1954 ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ರಾಯಚೂರು :ಗಣೇಶ ಹಬ್ಬ ಹಿಂದೂ ಧರ್ಮೀಯರ ಪವಿತ್ರ ದೊಡ್ಡ ಹಬ್ಬ, (Ganesha festival )ಗಣೇಶ ಹಬ್ಬ ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ.

ಗಣೇಶ ಚತುರ್ಥಿಯನ್ನು ಸಾರ್ವಜನಿಕ ಆಚರಣೆ ಮೊದಲು ಯಾವಾಗ ಆಚರಿಸಲಾಯಿತು ಎಂಬುದು ತಿಳಿದಿಲ್ಲವಾದರೂ ಆದರೆ ಶಿವಾಜಿ ಮಹಾರಾಜರು ತಮ್ಮ ಆಡಳಿತದ ಅವಧಿಯಲ್ಲಿ ಮಹಾರಾಷ್ಟದ ಪುಣೆಯಲ್ಲಿ ಸಾರ್ವಜನಿಕವಾಗಿ ಗಣೇಶ ಹಬ್ಬವನ್ನು ಆಚರಿಸಿದ್ದರು ಎನ್ನಲಾಗಿದೆ. ಅಂದಿನಿದ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದರೂ ಬ್ರಿಟಿಷ್ ಆಡಳಿತದಲ್ಲಿ ಗಣೇಶ ಹಬ್ಬಕ್ಕೆ ಹೆಚ್ಚು ಮಾನ್ಯತೆ ಸಿಗದೇ ಹಬ್ಬದ ಸಂಭ್ರಮ ಇಲ್ಲದಂತಾಗಿದೆ. ಸ್ವತಂತ್ರ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಬ್ರಿಟಿಷರ ವಿರುದ್ಧ ಹೋರಾಟಭಾಗವಾಗಿ ಹಾಗೂ ದೇಶದ ಜನರನ್ನು ಹಬ್ಬ ಆಚರಣೆ ಹಿನ್ನಲೆಯಲ್ಲಿ ಸಂಘಟಿಸುವ ಉದ್ದೇಶದಿಂದ 1893 ರಲ್ಲಿ ಮಹಾರಾಷ್ಟçದ ಪುಣೆಯಲ್ಲಿ ಸಾರ್ವಜನಿಕವಾಗಿ ಗಣೇಶ ಹಬ್ಬವನ್ನು ವಿಜ್ರಂಬಣೆಯಿಂದ ಆಚರಿಸಿದರು. ಅಂದಿನಿ0ದ ಇಂದಿನಿ0ದವರಿಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಗಣೇಶ ಹಬ್ಬವನ್ನು ವಿಜ್ರಂಬಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.

1954 ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ :

ಜಿಲ್ಲಾಡಳಿತ ವಿಧಿಸಿರುವ 30 ನಿಬಂಧನೆಗಳಿಗೆ ಒಪ್ಪಿ ಜಿಲ್ಲಾದ್ಯಂತ 1954 ಕಡೆಗಳಲ್ಲಿ ಉತ್ಸವ ಸಮಿತಿಯವರು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆದುಕೊಂಡಿವೆ. ಈಗಾಗಲೇ ಗಣೇಶ ಉತ್ಸವ ಸಮಿತಿಗಳು ಚಿಕ್ಕ ಗಾತ್ರದಿಂದ 20 ಅಡಿಗಿಂತ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿವೆ. ಬೃಹತ್ ಪೆಂಡಾಲ್ ಹಾಕಿ, ವಿದ್ಯುತ್ ದೀಪಗಳಿಂದ ವಿಶೇಷ ಹಾಗೂ ವಿಬಿನ್ನವಾಗಿ ಅಲಂಕಾರ ಮಾಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ತಯಾರಿಸಲಾಗುತ್ತಿದೆ. ಆದರೆ ಕೆಲವರು ಉತ್ಸಮ ಸಮಿತಿಯವರು ಹೈದರಬಾದ್, ಮಹಾರಾಷ್ಟçಗಳಲ್ಲಿ ಗಣೇಶ ಮೂರ್ತಿ ಖರೀದಿಸಿ ಪ್ರತಿಷ್ಠಾಪಿಸಲಾಗಿದೆ. 100 ರೂ ದಿಂದ 3 ಲಕ್ಷ ರೂ ಅಧಿಕ ಬೆಲೆ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗಿವೆ.

Ganesha festival
Ganesha festival

ಮನೆಗಳಲ್ಲೂ ಸಂಭ್ರಮ :

ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಗಣೇಶ ಸಂಭ್ರಮವಲ್ಲದೆ ಮನೆ ಮನೆಯಲ್ಲೂ ಹಬ್ಬದ ಸಡಗರ ಎದ್ದು ಕಾಣುತ್ತಿದೆ. ಮುಂಜಾನೆಯೇ ಮನೆಯಲ್ಲಿ ಹೆಂಗಳೆಯರು ಮಕ್ಕಳು ಎದ್ದು ಮನೆ ಮುಂದೆ ಸಾರಿಸಿ ರಂಗೋಲಿ ಬಳಿದು ತೋರಣ ಕಟ್ಟಿ ಹಬ್ಬವನ್ನು ಸ್ವಾಗತಿಸುತ್ತಿದ್ದಾರೆ. ಬೆಳಗ್ಗೆಯೇ ಸ್ನಾನ ಮಾಡಿ ದೇವರ ಮನೆಯಲ್ಲಿ ಗಣೇಶ ಮೂರ್ತಿ ಇಟ್ಟು ಅಲಂಕಾರ ಮಾಡಿ, ನೈವೇದ್ಯ ಮಾಡಿ ಗಣೇಶ ಸ್ತೋತ್ರ, ದೇವರ ನಾಮ, ಅಷ್ಟೋತ್ತರಗಳನ್ನು ಮನೆಯವರೆಲ್ಲಾ ಸೇರಿ ಹೇಳಿ ಭಕ್ತಿಯಿಂದ ಪೂಜೆ ಮಾಡುತ್ತಿದ್ದಾರೆ.ಮನೆಗಳಲ್ಲೂ ಸಂಭ್ರಮ :

ನಿಷೇದ ನಡುವೆಯೂ ಪಿಓಪಿ ಮೂರ್ತಿ :

ಪರಿಸರಕ್ಕೆ ದಕ್ಕೆ ಹಾಗುವ ಪಿಓಪಿ ಗಣೇಶ ಮೂರ್ತಿ ನಿಷೇದ ನಡುವೆಯೂ ಬೃಹತ್ ಗಾತ್ರದ ಪಿಓಪಿ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಮಾಡಲಾಗಿದೆ. ಕೆಲವಡೆ ಕಡೆಗಳಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಹಳ್ಳಿಯಿಂದ ದಿಲ್ಲಿವರೆಗೆ, ಗಲ್ಲಿ ಗಲ್ಲಿಯಲ್ಲೂ ಗಣಪತಿ ಬಪ್ಪಾ ಮೋರಿಯಾ ಎಂಬ ಕೂಗುವಿಕೆ ಕೇಳಿಬರುತ್ತಿದೆ.

ವಿವಿಧ ಕಾರ್ಯಕ್ರಮಗಳು ಆಯೋಜನೆ :

ಗಣೇಶ ಹಬ್ಬದ ಅಂಗವಾಗಿ ಆಯಾ ಸಮಿತಿಯವರು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ದೆಗಳು ಏರ್ಪಾಡು, ಸಂಗೀತ, ಹಾಸ್ಯ ಕಾರ್ಯಕ್ರಮ, ಲಿಂಗಸುಗೂರಿನ ಖೋಖೋ ಬಾಯ್ಸ್ ಸಮಿತಿಯಿಂದ ಖೋಖೋ ಪಂದ್ಯಾವಳಿ ಏರ್ಪಡಿಸಿದೆ. ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ದೆ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ಹಬ್ಬದ ಖರೀದಿ ಜೋರು :

ಗಣೇಶ ಹಬ್ಬದ ಅಂಗವಾಗಿ ಜಿಲ್ಲಾ ಕೇಂದ್ರ ಹಾಗೂ ತಾಲೂಕುಗಳ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಬೇಕಾದ ಹೂ-ಹಣ್ಣು, ಎಕ್ಕದ ಹೂ ಹಾರ, ಗರಿಕೆಗೆ ಭಾರೀ ಬೇಡಿಕೆಯಿದ್ದು, ಖರೀದಿಸಲು ಬಂದವರಿಗೆ ಹೂ-ಹಣ್ಣಿನ ಸ್ವಲ್ಪ ಮಟ್ಟಿನ ದರ ಹೆಚ್ಚಳದಿಂದ ಕೊಂಚ ಬೇಸರವಾದರೂ, ಹಬ್ಬಕ್ಕೆ ಭರ್ಜರಿಯಾಗೇ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ.

Ganesha festival
Ganesha festival
ರಾಯಚೂರು ಜಿಲ್ಲೆಯಲ್ಲಿ ಸಂಭ್ರಮ-ಸಡಗರದ ಗಣೇಶ ಹಬ್ಬ

ಪೋಲಿಸ್ ಕಣ್ಗಾವಲು :

ಜಿಲ್ಲಾದ್ಯಂತ 3,5,7,9,11 ದಿನದಂದು ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿದೆ. ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ನಿಯಮ ನಿಬಂಧನೆ ಮೀರಿದಲ್ಲಿ ಕಠಿಣ ಕ್ರಮ ಜರಗಿಸಲಾಗುತ್ತಿದೆ. ಇದಕ್ಕಾಗಿ ಆಯಾ ಪೊಲೀಸ್ ಠಾಣಾ ಸಿಬ್ಬಂದಿಗಳು, ನಾಲ್ಕು ಕೆಎಸ್‌ಆರ್‌ಪಿ ತುಕಡಿ ಹಾಗೂ 500 ಗ್ರಹ ರಕ್ಷಕ ದಳದ ಸಿಬ್ಬಂದಿಗಳನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ 75 ಅತಿಸೂಕ್ಷ್ಮ  ಹಾಗೂ 250 ಸೂಕ್ಷ್ಮ ಸ್ಥಳಗಳೆಂದು ಪೊಲೀಸ್ ಇಲಾಖೆ ಗುರುತಿಸಿದೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!