ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ
ಲಿಂಗಸುಗೂರು : ಪಟ್ಟಣ ಸೇರಿ ವಿವಿಧ ಗ್ರಾಮದಲ್ಲಡೆ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ( Dissolution of Ganesha )ಸಡಗರ, ಸಂಭ್ರಮದೊದಂದಿಗೆ ಜರುಗಿತು. ಐದನೇ ದಿನವಾದ ಬುಧವಾರ ಸುಮಾರು ನೂರಾರು ಗಣೇಶ ವಿಗ್ರಹಗಳ ವಿಸರ್ಜನೆ ಮಾಡಲಾಯಿತು.
ಶಾಂತಿಯುತ ಮೆರವಣಿಗೆ
ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಸೇರಿ ವಿವಿಧ ಕೆರೆಗಳಲ್ಲಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿತ್ತು. ಪೂಜೆ ಇನ್ನಿತರ ಸಂಪ್ರದಾಯಿಕ ಕಾರ್ಯಗಳನ್ನು ನೆರವೇರಿಸಿದ ವಿಸರ್ಜನೆ ಕಾರ್ಯ ಮಾಡಲಾಯಿತು. ಗಣೇಶ ವಿಸರ್ಜನೆ ಮೆರವಣಿಗೆ ಎಲ್ಲಡೆ ಭರ್ಜರಿಯಾಗಿ ನಡೆದಿತ್ತು. ಲಿಂಗಸುಗೂರು ಕಾ ಮಹಾರಾಜ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಜನಸ್ತೋಮ ಕಂಡು ಬಂತು. ಮೆರವಣಿಗೆ ನಡೆಯುವ ರಸ್ತೆ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸರು ಮೆರವಣಿಗೆ ತೊಂದರೆ ಆಗದಂತೆ ನೋಡಿಕೊಂಡರು. ಯುವಕರು ಮೆರವಣಿಗೆಯಲ್ಲಿ ಡಿಜೆ ಹಾಕಿ, ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ವಿಜೃಂಭಣೆ ಮೆರವಣಿಗೆ ಮೂಲಕ ವಿದಾಯ ಹೇಳಲಾಯಿತು. ಸಂಜೆ ಶುರುವಾದ ವಿಸರ್ಜನಾ ಮೆರವಣಿಗೆ ಗುರುವಾರ ನಸುಕಿನವರೆಗೂ ನಡೆಯಿತು.
ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್, ಪಿಐ ಪುಂಡಲಿಕ ಪಟೇದಾರ್ ನೇತ್ರತ್ವದಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಗಣೇಶ ವಿಸರ್ಜನೆ ಶಾಂತಿಯುತವಾಗಿ ನಡೆಯಿತು.