ಛಾವಣಿ ದಸರಾ ಉತ್ಸವ
ಲಿಂಗಸುಗೂರು : ಒಂದೂವರೆ ತಾಸು ಕಾಲ ನಾನಾ ಸ್ಕಿಟ್ ಮೂಲಕ ನೆರದಿದ್ದ ಪ್ರೇಕ್ಷಕರನ್ನು ನಗೆಯ ಅಲೆಯಲ್ಲಿ ತೇಲಿಸಿದ Gicchi Gili Gili ಗಿಚ್ಚಿ ಗಿಲಿ ಗಿಲಿ ಕಲಾವಿಧರು ಯಶಸ್ವಿಯಾಗಿದ್ದಾರೆ.
ಪಟ್ಟಣದ ಛಾವಣಿ ದಸರಾ ಉತ್ಸವ ಸಮಿತಿ ಹಮ್ಮಿಕೊಂಡಿದ್ದ ೧೫ನೇ ದಸರಾ ಸಂಭ್ರಮದ ಅಂಗವಾಗಿ ನಡೆದ ಕಲರ್ಸ್ ಕನ್ನಡ ವಾಹಿನಿಯ(Colors Kannada) ಮಜಾ ಭಾರತ, ಗಿಚ್ಚಿ ಗಿಲಿ ಗಿಲಿ(Gitchi Gili Gili) ಕಾಮಿಡಿ ಶೂ ಮೂಲಕ ಕರ್ನಾಟಕದಲ್ಲಿ ಮನೆ ಮಾತಾಗಿರುವ ರಾಗಿಣಿ (ರಾಘವೇಂದ್ರ), ಚಿಲ್ಲರ್ ಮಂಜ, ಶಿವು ಹಾಸ್ಯ ಸಂಜೆ ಕಾರ್ಯಕ್ರಮ ನಗೆ ಅಲೆಯತ್ತ ಕರದೊಯ್ಯಲು ಕಾರಣವಾಯಿತು.
ಹೊಸ ಹೊಸ ಪ್ರತಿಭೆಗಳಿಗೆ ಮಜಾ ಭಾರತ, Gicchi Gili Gili ಗಿಚ್ಚಿ ಗಿಲಿ ಗಿಲಿ ಅಂತಹ ದೊಡ್ಡ ದೊಡ್ಡ ವೇದಿಕೆಯ ಮೂಲಕ ಅನೇಕ ಕಾಮಿಡಿ ಸ್ಟಾರ್‌ಗಳನ್ನು ಕನ್ನಡ ಚಿತ್ರರಂಗಕ್ಕೆ ಕರ‍್ಸ್ ಕನ್ನಡ ನೀಡಿದೆ. ಮಜಾ ಭಾರತ ಹಾಗೂ Gicchi Gili Gili ಗಿಚ್ಚಿ ಗಿಲಿ ಗಿಲಿ ಎಂಬ ರಿಯಾಲಿಟಿ ಶೋ ಮೂಲಕ ತಮ್ಮ ನಟನ ಸಾಮರ್ಥ್ಯವನ್ನು ಕರುನಾಡಿಗೆ ಪರಿಚಯಸಿದ ತಮ್ಮ ಸ್ತ್ರೀ ಪಾತ್ರಕ್ಕೆ ಸಖತ್ ಫೇಮಸ್ ಆದ ನಟ ರಾಘವೇಂದ್ರ (ರಾಗಿಣಿ), ಚಿಲ್ಲರ್ ಮಂಜ ಹಾಗೂ ಶಿವು ಪಟ್ಟಣದಲ್ಲಿ ನಡೆಸಿಕೊಟ್ಟ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಹಾಸ್ಯ ತುಣುಕುಗಳ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರನ್ನು ನಗೆಯ ಅಲೆಯಲ್ಲಿ ತೇಲುವಂತೆ ಮಾಡುವಲ್ಲಿ ಗಿಚ್ಚಿ ಗಿಲಿ ಗಿಲಿ ಕಲಾವಿಧರು ಯಶಸ್ವಿಯಾಗಿದ್ದಾರೆ.
ಸಾಥ್ ಕೊಟ್ಟ ಲೋಕಲ್ ಸಿಂಗರ್ಸ್:
ಗಿಚ್ಚಿ ಗಿಲಿ ಗಿಲಿ ಕಲಾವಿಧರ ಹಾಸ್ಯ ಸಂಜೆ ಕಾರ್ಯಕ್ರಮದ ಮಧ್ಯೆ ಗಂಗಾವತಿ ಬಜರಂಗಿ ಮೆಲೋಡಿಸ್ ಗಾಯಕರಾದ ನರೇಶ ಹೂಗಾರ ತಮ್ಮ ಗಾಯನದ ಜೊತೆ ಹಾಸ್ಯ ಚಟಾಕಿಗಳು ಹಾಗೂ ದೇವರಭೂಪುರದ ಲತಾ ಹೂಗಾರ ಗಾಯನಗಳಿಂದ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕಲಾವಿಧ ಚಿಲ್ಲರ ಮಂಜು, ಉತ್ತರ ಕರ್ನಾಟಕ ಕಲೆ ಹಾಗೂ ಕಲಾವಿಧರನ್ನು ಪೋಷಣೆ ಮಾಡುತ್ತಾ ಬಂದಿದೆ. ನಮ್ಮಂತಹ ಪುಟ್ಟ ಕಲಾವಿಧರಿಗೆ ಲಿಂಗಸುಗೂರಿನ ಜನತೆಗೆ ಪ್ರೀತಿಯಿಂದ ಆತಿಥ್ಯ ನೀಡಿ ಗೌರವಿಸಿದೆ ಎಂದರು.
ಉತ್ಸವಗಳು ನಡೆಯುತ್ತಲೇ ಇರಲಿ :
ಸಮಾರಂಭದಲ್ಲಿ ಹಿರಿಯ ವೈದ್ಯರಾದ ಡಾ.ಶಿವಬಸಪ್ಪ ಹೆಸರೂರು ಮಾತನಾಡಿ, ದಸರಾ, ಗಣೇಶ ಉತ್ಸವ ಸೇರಿದಂತೆ ಅನೇಕ ಧಾರ್ಮಿಕ ಉತ್ಸವಗಳು ನಡೆಸುವ ಮೂಲಕ ಯುವ ಪೀಳಿಗೆಗೆ ನಾಡಿನ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ ಈಗಾಗಿ ಉತ್ಸವಗಳು ನಡೆಯುತ್ತಲೇ ಇರಬೇಕು ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಹಾಸ್ಯ ಸಂಜೆ ಕಾರ್ಯಕ್ರಮದ ಪ್ರಾಯೋಜಕರಾದ ಪತ್ರಕರ್ತ ಶಿವರಾಜ ಕೆಂಭಾವಿ, ನಾಗರಾಜ ಮುಂಡೇವಾಡಿ, ಮೇಘನಾ ಕುಂದಾಪುರ ಹಾಗೂ ತಂಡದಿಂದ ಜಾನಪದ ಸಂಗೀತ ಹಾಗೂ ರಂಗಗೀತೆಗಳ ಕಾರ್ಯಕ್ರಮದ ಪ್ರಾಯೋಜಕರಾದ ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಶ್ರೀಶೈಲಪ್ಪ ಪೇರಿ, ಬಿಜೆಪಿ ತಾಲೂಕು ಅಧ್ಯಕ್ಷ ಅಯ್ಯಪ್ಪ ವಕೀಲರು, ಮುಖಂಡರಾದ ಮಲ್ಲಣ್ಣ ವಾರದ್, ಛಾವಣಿ ದಸರಾ ಉತ್ಸವ ಸಮಿತಿ ಸಂಚಾಲಕ ಮಂಜುನಾಥ ಕಾಮಿನ್,ಅಶೋಕ ದಿಗ್ಗಾವಿ, ಶರಣಬಸವ ವಾರದ್, ಸುದೀರ್ ಶ್ರೀವಾಸ್ತವ್, ಬಸವರಾಜ ಯಲಗಲದಿನ್ನಿ ಸೇರಿದಂತೆ ಅನೇಕರಿದ್ದರು.