ಅಮರೇಶ್ವರ ಸುಕ್ಷೇತ್ರದಲ್ಲಿ ನಡೆದ ಗೋಲಮಾಲ್
ಲಿಂಗಸುಗೂರು : ತಾಲೂಕಿನ ಅಮರೇಶ್ವರ ಸುಕ್ಷೇತ್ರಕ್ಕೆ ಬರುವ ಭಕ್ತರಿಗೆ ದಾಸೋಹಕ್ಕಾಗಿ ದಾನಿಗಳು ನೀಡಿದ ಹಣವನ್ನು ಕೆಲವರು ತಮ್ಮ ವೈಯಕ್ತಿಕ ಖಾತೆಗಳಿಗೆ ಜಮಾ ಮಾಡಿಕೊಂಡಿದ್ದು, (Golamal )ಕೂಡಲೇ ಅಂತಹವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಸಂಚಾಲಕ ಮಾಣಿಕ್ ಇಂಗಳೆ ಒತ್ತಾಯಿಸಿದ್ದಾರೆ.
ಪಟ್ಟಣದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮರೇಶ್ವರ ಪುಣ್ಯ ಕ್ಷೇತ್ರ ಇಡೀ ಜಿಲ್ಲೆಯಲ್ಲಿ ದೊಡ್ಡ ಸುಕ್ಷೇತ್ರವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು ಹೋಗುತ್ತಾರೆ. ಅಮವಾಸ್ಯೆ , ವಿಶೇಷ ದಿನಗಳಲ್ಲಿ ಮತ್ತು ಜಾತ್ರಾ ಮಹೋತ್ಸವ ದಿನದಂದು ಭಕ್ತರ ಸಂಖ್ಯೆ ಮತ್ತುಷ್ಟು ಹೆಚ್ಚಾಗುತ್ತಿದೆ. 1997ರ ಕಾಯ್ದೆ ಮತ್ತು ಅಧಿನಿಯಮ 2022 ಕಲಂ 69 ಬಿ ಪ್ರಕಾರ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಖಾಸಗಿ ವ್ಯಕ್ತಿಗಳು ಭಕ್ತರಿಂದ ಹಣ ವಸೂಲಿ ಮಾಡುವಂತಿಲ್ಲ, ಆದರೆ ಈ ಕಾಯ್ದೆ ಉಲ್ಲಂಘಿಸಿ ತಾಲೂಕಿನಲ್ಲದವರಾದ ಬಸವರಾಜಪ್ಪ ರಾಮತ್ನಾಳ ನೇತ್ರತ್ವದಲ್ಲಿ 9 ಜನರ ತಂಡ ಸುಕ್ಷೇತ್ರದಲ್ಲಿ ಅನಧಿಕೃತವಾಗಿ ದಾಸೋಹ (Golamal )ನಡೆಸುತ್ತಿದ್ದಾರೆ. ಭಕ್ತರು ಹಾಗೂ ದಾನಿಗಳು ದಾಸೋಹಕ್ಕೆ ನೀಡುವ ದೇಣಿಗೆ ಹಣವನ್ನು ತಮ್ಮ ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡು ಭಕ್ತರ ಹಣ (Golamal )ಕೊಳ್ಳೆ ಹೊಡೆಯುತ್ತಿದ್ದಾರೆ. ಈ ರೀತಿಯಲ್ಲಿ ಅವ್ಯವಹಾರದಲ್ಲಿ (Golamal )ಭಾಗಿಯಾದವರ ಮೇಲೆ ಧಾರ್ಮಿಕ ದತ್ತಿ ಕಾಯ್ದೆಯಡಿಯಲ್ಲಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
17ವರ್ಷಗಳಿಂದ ಮಳಿಗೆಗಳ ಹರಾಜ ಇಲ್ಲ :
ದೇವಸ್ಥಾನದ ವ್ಯಾಪ್ತಿಗೆ ಸುಮಾರು 21 ವಾಣಿಜ್ಯ ಮಳಿಗೆಗಳಿದ್ದು, ಈ ಮಳಿಗೆಗಳು ಪ್ರತಿ ಮೂರು ವರ್ಷಕ್ಕೊಮ್ಮೆ ಹರಾಜು ಪ್ರಕ್ರೀಯೆ ಮಾಡಬೇಕು. ಆದರೆ 2007ರಲ್ಲಿ ಆದ ಹರಾಜು ಇಲ್ಲಿವರಿಗೂ ಅಂದರೆ 17 ವರ್ಷ ಕಳೆದರೂ ಹರಾಜು ಆಗಿಲ್ಲ, ಈಗಾಗಿ ಕೂಡಲೇ ಮುಜರಾಯಿ ಇಲಾಖೆ ಸಚಿವರು 21 ಮಳಿಗೆಗಳನ್ನು ಹರಾಜು ಪ್ರಕ್ರೀಯೆಗೆ ಸಂಬಂಧಿಸಿದಂತೆ ಸಂಬಂಧಿಸಿದವರಿಗೆ ನೋಟಿಸ್ ನೀಡಿ ಹರಾಜು ಮಾಡಬೇಕು ಎಂದು ಆಗ್ರಹಿಸಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚಿಸಿ :
ಅಮರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧಿಕಾರವಧಿ 2021ರಲ್ಲಿ ಮುಗಿದು ಮೂರು ವರ್ಷಗಳ ಕಳೆಯುತ್ತಿದ್ದರೂ ಇನ್ನೂ ಹೊಸದಾಗಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಇನ್ನೂ ರಚನೆಯಾಗಿಲ್ಲ, ಇದರಿಂದ ಸರಕಾರ ಉದ್ದೇಶ ಪೂರ್ವಕವಾಗಿ ದೇವಸ್ಥಾನವನ್ನು ಕಡೆಗಣಿಸಿದಂತೆ ಕಾಣಿಸುತ್ತಿದೆ. ಕೂಡಲೇ ದೇವಸ್ಥಾನ ವ್ಯವಸ್ಥಾಪನ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.
ಕೋಟಿ ಕೋಟಿ ಆದಾಯ ಇದ್ದರೂ ಅಭಿವೃದ್ಧಿ ಇಲ್ಲ :
ದೇವಸ್ಥಾನಕ್ಕೆ ಪ್ರತಿ ವರ್ಷ ಸುಮಾರು ಕೋಟಿಗೂ ಅಧಿಕ ಹಣ ಕಾಣಿಕೆ ರೂಪದಲ್ಲಿ ಸಂಗ್ರಹವಾಗುತ್ತಿದ್ದರೂ ದೇವಸ್ಥಾನದ ಅಭಿವೃದ್ಧಿ ಮಾತ್ರ ಕುಂಠಿತವಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ಸರಕಾರ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂದು ಆಗ್ರಹಿಸಿದರು.
ಬಸ್ಗಳು ನಿಲುಗಡೆಯಾಗಬೇಕು :
ಅಮರೇಶ್ವರ ಸುಕ್ಷೇತ್ರಕ್ಕೆ ಗುರುಗುಂಟಾ ಗ್ರಾಮದಿಂದ ಬಸ್ಸಗಳ ಸೌಕರ್ಯ ಇಲ್ಲದಾಗಿದೆ. ಈಗಾಗಿ ಭಕ್ತರು ಖಾಸಗಿ ವಾಹನಗಳ ಮೊರೆಹೋಗುವುದು ಅನಿವಾರ್ಯತೆ ನಿರ್ಮಾಣವಾಗಿದೆ. ಈಗಾಗಿ ಕಲಬುರಗಿ, ಯಾದಗಿರ,ಬೀದರ ಭಾಗಗಳಿಂದ ಬರುವ ಹಾಗೂ ಸಿಂಧನೂರು, ದೇವದುರ್ಗ, ಹಾಗೂ ಲಿಂಗಸುಗೂರು ಘಟಕಗಳಿಂದ ಕಲುಬುರಗಿ ಮಾರ್ಗದ ಕಡೆಗಳಿಗೆ ತೆರೆಳುವ ಬಸ್್ಗಳನ್ನು ಅಮರೇಶ್ವರ ಸುಕ್ಷೇತ್ರಕ್ಕೆ ನಿಲುಗಡೆಯಾಗಬೇಕು ಇದರಿಂದ ಭಕ್ತರಿಗೆ ಅನುಕೂಲವಾಗುತ್ತಿದೆ ಈ ಸಾರಿಗೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ :
ಅಮರೇಶ್ವರ ಕ್ರಾಸ್ ನಿಂದ ಅಮರೇಶ್ವ ಸುಕ್ಷೇತ್ರದವರಿಗೆ ಮಾಡಲಾದ ರಸ್ತೆ ಕಾಮಗಾರಿ ಕಳಪೆಮಟ್ಟದ್ದಾಗಿದೆ ಕಾಮಗಾರಿ ಕಳಪೆ ಮಾಡಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ನಮ್ಮ ಕರ್ನಾಟಕ ಸೇನೆ ತಾಲೂಕಾಧ್ಯಕ್ಷ ಶಿವರಾಜ ನಾಯ್ಕ, ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಶಿವರಾಜ ಅಲಬನೂರು, ಚಂದ್ರು ಭೋವಿ, ಸೇರಿದಂತೆ ಇನ್ನಿತರಿದ್ದರು.