suddiduniya.com

Govt School: ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸಿ ಶಿಕ್ಷಣವನ್ನು ಖಾಸಗಿಕರಣಗೊಳಿಸುವ ಹುನ್ನಾರ

Govt School

ಎಸ್ಎಫ್ಐ 8ನೇ  ತಾಲೂಕು ಸಮ್ಮೇಳನ

ಲಿಂಗಸುಗೂರು : ಸರ್ಕಾರಿ ಶಾಲೆಗಳನ್ನು (Govt School )ದುರ್ಬಲಗೊಳಿಸುವ ಮೂಲಕ ರಾಜಕಾರಣಿಗಳು ತಮ್ಮ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಂಡು ಬೆಳೆಸುತ್ತಿದ್ದಾರೆ, ಇವರಿಂದ ನಾವು (Govt School )ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಯಸಿದರೆ ಅದು ಸಾಧ್ಯವೇ ಎಂದು ಎಸ್ಎಫ್‍ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ ಹೇಳಿದರು.

Govt School
ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸಿ ಶಿಕ್ಷಣವನ್ನು ಖಾಸಗಿಕರಣಗೊಳಿಸುವ ಹುನ್ನಾರ

ಪಟ್ಟಣದ ಗುರುಭವನದಲ್ಲಿ ಶನಿವಾರ ನಡೆದ ಎಸ್ಎಫ್ಐ 8ನೇ  ತಾಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ  ಶಾಲಾ ಕಾಲೇಜುಗಳಿಗೆ ಶಿಕ್ಷಕ ಉಪನ್ಯಾಸಕರನ್ನು ನೇಮಿಸದೇ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಇತರೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಸರ್ಕಾರಿ ಶಾಲಾ ಕಾಲೇಜು ಮುಚ್ಚಲು ಕುತಂತ್ರ ರೂಪಿಸುತ್ತಿವೆ. ಈಗಾಗಲೇ ಅನೇಕ ಶಾಲಾ ಕಾಲೇಜು ಗಳನ್ನು ಮುಚ್ಚಲಾಗಿದೆ ಎಂದರು. ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ರಾಜ್ಯ ಬಜೆಟ್ ನಲ್ಲಿ ಶೇ. 30ರಷ್ಟು, ಕೇಂದ್ರ ಬಜೆಟ್ ನಲ್ಲಿ ಶೇ. 10%ರಷ್ಟು ಅನುದಾನ ಮೀಸಲಿರಿಸಬೇಕು. ಖಾಸಗಿ ಶಾಲೆಗೆ, ಶಿಕ್ಷಣದ ವೆಚ್ಚ, ಆರೋಗ್ಯದ ವೆಚ್ಚ, ಭರಿಸುವುದಕ್ಕೆ ಆಗುತ್ತಿಲ್ಲ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸದೇ ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣ ದೊರೆಯುವುದು ಅಸಾಧ್ಯ ಎಂದರು.

ಮುಖ್ಯ ಅಥಿಗಳಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕ, ಮಾಜಿ ಎಸ್ಎಫ್ಐ ಮುಖಂಡ ನರಸಿಂಹ ಬಾನ್ ಠಾಕೂರ್ ಮಾತನಾಡಿ, ಎಸ್ಎಫ್ಐ  ವೈಜ್ಞಾನಿಕ, ವೈಚಾರಿಕ ಶಿಕ್ಷಣಕ್ಕಾಗಿ ವ್ಯವಸ್ಥೆಯೊಂದಿಗೆ ರಾಜಿರಹಿತ ಹೋರಾಟ ಮಾಡುತ್ತಾ ಬಂದಿದೆ. ಎಸ್ಎಫ್ಐ ಚಳುವಳಿ ಬಲಿಷ್ಟವಾದರೆ ಮಾತ್ರ ವಿದ್ಯಾರ್ಥಿಗಳ ಮತ್ತು ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದರು.

ಸರ್ಕಾರಿ ಶಾಲೆ
ಸರ್ಕಾರಿ ಶಾಲೆಗಳನ್ನು(Govt School) ದುರ್ಬಲಗೊಳಿಸಿ ಶಿಕ್ಷಣವನ್ನು ಖಾಸಗಿಕರಣಗೊಳಿಸುವ ಹುನ್ನಾರ

ತಾಲೂಕು ಪದಾಧಿಕಾರಿಗಳ ಆಯ್ಕೆ :

ಎಸ್‍ಎಫ್‍್ಐ ತಾಲೂಕು ಅಧ್ಯಕ್ಷರಾಗಿ ಗೋವಿಂದ ಹಟ್ಟಿ, ಕಾರ್ಯದರ್ಶಿ ಯಾಗಿ, ಚೆನ್ನಬಸವ ನಿಲೋಗಲ್, ಉಪಾಧ್ಯಕ್ಷೆಯಾಗಿ ಚಂದನಾ, ಸಹ ಕಾರ್ಯದರ್ಶಿಯಾಗಿ ಯಲ್ಲಾಲಿಂಗ ಯಲಗಟ್ಟಾ, ಸದಸ್ಯರಾಗಿ ಸೈದಮ್ಮ, ಯಲ್ಲಮ್ಮ, ವೆಂಕಟೇಶ್, ಸತ್ಯಮ್ಮ, ಹನುಮಾಕ್ಷಿ, ನಂದಿನಿ, ಐಶ್ವರ್ಯ, ಅಂಬಿಕಾ, ಭವಾನಿ, ಲಿಂಗರಾಜ,  ಹೈಮದ್, ತಿಮ್ಮೇಗೌಡ, ಶರಣಬಸವ, ಶ್ರೀದೇವಿ, ಚೆನ್ನಬಸವ ಆಯ್ಕೆಯಾದರು.

ಸರ್ಕಾರಿ ಶಾಲೆ
ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸಿ ಶಿಕ್ಷಣವನ್ನು ಖಾಸಗಿಕರಣಗೊಳಿಸುವ ಹುನ್ನಾರ

ಈ ಸಮಾರಂಭದಲ್ಲಿ ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ ವಿಶ್ವ ಅಂಗಡಿ, ಜಿಲ್ಲಾ ಮುಖಂಡ ಪವನ್ ಕಮದಾಳ, ಮಾಜಿ ಎಸ್ಎಫ್ಐ ಮುಖಂಡ ಹನೀಫ್ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!