ಗುರುಶಿಷ್ಯರ ಸಮ್ಮಿಲನ, ನೆನಪುಗಳ ಸಂಭ್ರಮ :
ಲಿಂಗಸುಗೂರು : ತಮಗೆ ವಿದ್ಯೆ ಕಲಿಸಿದ ಗುರುಗಳನ್ನು, ತಾವು ಆಡಿ ಬೆಳೆದ ಶಾಲೆಯ ಸುಂದರ ಕ್ಷಣಗಳನ್ನು, ಸಹಪಾಠಿಗಳೊಂದಿಗೆ ನೋವು–ನಲಿವುಗಳನ್ನು ಪರಸ್ಪರ ಹಂಚಿಕೊಂಡು ಖುಷಿ ಕ್ಷಣ, 22 ವರ್ಷಗಳ ಬಳಿಕ ಒಂದೆಡೆ ಸೇರಿ ಚದುರಿ ಹೋಗಿದ್ದ ನೆನಪುಗಳನ್ನು ಒಂದುಗೂಡಿಸಲು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರು ಶಿಷ್ಯರ (Guruvandana )ಮಹಾಸಂಗಮ ಸಾಕ್ಷಿಯಾಯಿತು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು( ಪ್ರೌಢಶಾಲಾ ವಿಭಾಗ)ನಲ್ಲಿ 2001-02ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಬಳಗದಿಂದ ಗುರುವಂದನಾ (Guruvandana )ಹಾಗೂ ಗುರು ಶಿಷ್ಯರ ಮಹಾಸಂಗಮ ಸಮಾರಂಭವನ್ನು ವೀರಶೈವ ವಿದ್ಯಾವರ್ದಕ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಉದ್ಘಾಟಿಸಿ ಮಾತನಾಡಿದ ಅವರು, ಶಿಷ್ಯನಲ್ಲಿರುವ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಬೆಳಕಿನೆಡೆಗೆ ಕರೆದೊಯ್ಯುವವರೇ ಗುರು. ಉತ್ತಮ ಶಿಕ್ಷಕರು ಸಿಕ್ಕರೆ ಮಾತ್ರ ಮನುಷ್ಯ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ ಎಂದರು.
ಇತ್ತೀಚಿನ ವರ್ಷಗಳಲ್ಲಿ ಗುರು–ಶಿಷ್ಯರ ಬಾಂಧವ್ಯದ ಗಟ್ಟಿತನ ಸಡಿಲಗೊಳ್ಳುತ್ತಿರುವ ಕಾಲಘಟ್ಟದಲ್ಲಿ ಇದೇ ಪ್ರೌಢಶಾಲೆಯಲ್ಲಿ 22 ವರ್ಷಗಳ ಹಿಂದಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ತಮಗೆ ಅಕ್ಷರ ಕಲಿಸಿದ ಗುರುಗಳಿಗೆ (Guruvandana )ಗುರುವಂದನಾ ಸಮಾರಂಭ ಹಮ್ಮಿಕೊಂಡಿರುವುದು ನೋಡಿದರೆ ಸತ್ಯ, ಒಳ್ಳೆಯತನ, ಪ್ರೀತಿ ಪ್ರಮಾಣಿಕತನ ಇನ್ನೂ ಉಳಿದಿದೆ ಎನ್ನುವುದದಕ್ಕೆ ಸಾಕ್ಷಿಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಯಬೇಕಾಗಿದೆ. ಗುರುವನ್ನು ನೆನೆಯುವುದು ಭಾರತೀಯ ಸಂಸ್ಕೃತಿ ಆಗಿದೆ, ಗುರುಗಳನ್ನು ಮರೆತರೆ ಸಂಸ್ಕೃತಿಯನ್ನೇ ಮರೆತಂತೆ ಎಂದರು. ಈ ಹಿಂದೆ ಶಿಕ್ಷಕರು ಕಠಿಣ ಶಿಕ್ಷೆ ನೀಡುತ್ತಲೇ ಶಿಕ್ಷಣ ನೀಡಿ ಅಷ್ಟೇ ಪ್ರೀತಿಯಿಂದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು, ನಮ್ಮನ್ನು ಸಮಾಜದಲ್ಲಿ ತಲೆ ಎತ್ತಿ ಭಾಳುವಂತೆ ಮಾಡುತ್ತಿದ್ದರು, ಶಿಕ್ಷಕರು ಅಂದು ಶಿಕ್ಷಣದ ಜೊತೆ ಸಂಸ್ಕಾರ ಕಲಿಸುತ್ತಿದ್ದರು ಆದರೆ, ಇಂದು ಮೃದವಾಗಿ ಶಿಕ್ಷಣ ನೀಡಬೇಕಾಗಿದೆ. ಶಿಕ್ಷಣ ಕೇವಲ ಅಂಕಕ್ಕಾಗಿ ಎನ್ನುವಂತಾಗಿದೆ ಎಂದರು.
ಶಿಷ್ಯ ಉನ್ನತ ಸ್ಥಾನದಲ್ಲಿದ್ದರೆ ಶಿಕ್ಷಕರೇ ದೊಡ್ಡ ಪ್ರಶಸ್ತಿ :
ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಶಶಿರೇಖಾ ಮಾತನಾಡಿ, ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿದ ನಂತರ ಕಾಲೇಜು ಹೀಗೇ ಶಿಕ್ಷಣದ ಯಾತ್ರೆ ಸಾಗುತ್ತಲೇ ಇರುತ್ತೆ, ಆದರೆ ಪ್ರೌಢಶಾಲೆಯಲ್ಲಿ ಶಿಕ್ಷಣ ಕಲಿಸಿದ ಶಿಕ್ಷಕರಿಗೆ (Guruvandana )ಗುರುವಂದನೆ ಸಲ್ಲಿಸುವ ನೆಪದಲ್ಲಿ ಶಿಕ್ಷಕರನ್ನು ಹಾಗೂ ಹಳೆಯ ವಿದ್ಯಾರ್ಥಿಗಳನ್ನು ಮತ್ತೆ ನೋಡುವ ಅವಕಾಶ ಸಿಕ್ಕಿರುವುದು ನಮಗೆ ತುಂಬಾ ಸಂತಸ ತಂದಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದರೆ ಗುರುವಿಗೆ ದೊಡ್ಡ ಪ್ರಶಸ್ತಿ ಇದ್ದಂತೆ, ಶಿಷ್ಯರ ಸಾಧನೆಯನ್ನು ತನ್ನ ಸಾಧನೆ ಎಂದು ಹೆಮ್ಮಪಡುವವರು ಶಿಕ್ಷಕರು ಮಾತ್ರ ಎಂದರು. ಲಿಂಗಸುಗೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ 2001-02ರಲ್ಲಿ 35 ಜನ ಶಿಕ್ಷಕರು ಇರುತ್ತಿದ್ದೀವಿ ಎಲ್ಲರೂ ಒಂದೇ ಕುಟಂಬದಂತೆ ಜೀವನ ನಡೆಸುತ್ತಿದ್ದೀವಿ ಕಷ್ಟ-ಸುಖದಲ್ಲಿ ಒಬ್ಬರಿಗೂ ಸಹಕಾರ ನೀಡುತ್ತಿದ್ದೀವಿ ಎಂದು ನೆನಪುಗಳನ್ನು ಮೆಲಕು ಹಾಕಿದರು.
ಗುರುವಂದನೆ ರಿಚಾರ್ಜ ಇದ್ದಂತೆ:
ಗುರುವಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕ ಈಶ್ವರ ಮೇಟಿ ಮಾತನಾಡಿ, ಈ ಗುರುವಂದನೆ ನಮಗೆ ರೀಚಾರ್ಜ ಇದ್ದಂತೆ, ಈ ರೀಚಾರ್ಜ ನಮ್ಮ ನಿವೃತ್ತಿ ಜೀವನದಲ್ಲಿ ಆರೋಗ್ಯಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತಿದೆ, ಇಂತಹ ಕಾರ್ಯಕ್ರಮಗಳು ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿರುಬೇಕು, ಅಂದಾಗ ಗುರು ಶಿಷ್ಯ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲು ಸಾಧ್ಯವಾಗುತ್ತಿದೆ. ಅದೇ ರೀತಿ ನಿಮ್ಮ ತಂದೆ-ತಾಯಿ ನಿಮಗೆ ಎಲ್ಲವೂ ಕೊಟ್ಟಿರುತ್ತಾರೆ ಅಂತಹವರಿಗೆ ಪ್ರೀತಿಯಿಂದ ಗೌರವದಿಂದ ಕಾಣಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಅಗಲಿದ ಶಿಕ್ಷಕರಿಗೆ ಒಂದು ನಿಮಿಷ ಮೌನಾಚರಣೆ ಮಾಡುವ ಆತ್ಮಕ್ಕೆ ಶಾಂತಿ ಕೋರಲಾಯಿತು.
ಭಾವಕ ಕ್ಷಣ :
ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸಿದ ನಿವೃತ್ತಿ ಶಿಕ್ಷಕರು, ಹಾಗೂ ಹಾಲಿ ವೃತ್ತಿ ನಿರತ ಶಿಕ್ಷಕರಿಗೆ ಶಾಲೆಯ ಮುಖ್ಯಧ್ವಾರದಿಂದ ಹಳೆಯ ವಿದ್ಯಾರ್ಥಿಗಳು ಪುಷ್ಟವೃಷ್ಠಿ ಮಾಡುವ ಮೂಲಕ ಸಮಾರಂಭದ ವೇದಿಕೆಗೆ ಸ್ವಾಗತಿಸಿದ ಕ್ಷಣ ಶಿಕ್ಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಭಾವಕ ಕ್ಷಣಗಳು ಎದುರಾದವು.
ಸಮಾರಂಭದಲ್ಲಿ ಶಿಕ್ಷಕರಾಗಿದ್ದ ಎಂ.ಎಸ್.ಮಾಲಗಿತ್ತಿ, ಷಣ್ಮುಖಪ್ಪ ಮಡ್ಡಿ, ಶರಣಪ್ಪ ಮರದ್, ಮಹೇಶ ನಂದಿಕೋಲಮಠ,ಶಂಕರಗೌಡ ಗೌಡರ್, ಶ್ಯಾಮಲಾ, ಮುರುಳಿಧರ ರಾವ್,ಶಂಕರ್ ರಾಠೋಡ್, ಉಮಕಾಂತ, ಮಹೇಶ ಈರಣ್ಣ, ಸಂಗಮೇಶ, ಶಂಕುಂತಲಾ, ಚಂದ್ರಕಲಾ, ಅಕ್ಕಮಹಾದೇವಿ, ಪ್ರೇಮಕುಮಾರಿ, ಮಲ್ಲಿಕಾರ್ಜುನ ಕರಡಕಲ್, ವೆಂಕಟೇಶ ಜೋಶಿ ಸೇರಿದಂತೆ ಇನ್ನಿತರ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.