suddiduniya.com

ಸರ್ಕಾರದ ಅನುದಾನ ದುರ್ಬಳಕೆಯಾದರೆ ಕಠಿಣ ಕ್ರಮ

ಸರ್ಕಾರದ ಅನುದಾನ ದುರ್ಬಳಕೆಯಾದರೆ ಕಠಿಣ ಕ್ರಮ

ಲಿಂಗಸುಗೂರು : ಸರ್ಕಾರ ಶಾಲಾ (govt school)ಮಕ್ಕಳ ವಿವಿಧ ಸಾಮಾಗ್ರಿಗಳಿಗಾಗಿ ಬಿಡುಗಡೆಗೊಳಿಸುವ ಅನುದಾನ ದುರುಪಯೋಗವಾಗದಂತೆ (Misuse) ಮುಖ್ಯ ಶಿಕ್ಷಕರು (Head teachers) ಕಾಳಜಿ ವಹಿಸಬೇಕು, ದುರಪಯೋಗವಾದರೆ ತಪ್ಪಿಸ್ಥತರ ವಿರುದ್ಧ ಕಠಿಣ ಜರಗಿಸಲಾಗುವುದು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಪಟ್ಟಣದ ಈಶ್ವರ ದೇವಸ್ಥಾನದ ಬಳಿ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಜೀಂ ಪ್ರೇಮಜೀ ಫೌಂಡೇಶನ್ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳ ಪೌಷ್ಟಿಕತೆ ವೃದ್ಧಿಸಲು 2024-25ನೇ ಸಾಲಿನ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 6 ದಿನ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಶಾಲಾ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸುವ ಉದ್ದೇಶದಿಂದ ಅಜೀಂ ಪ್ರೇಮಜಿ ಅವರು ತಮ್ಮ ಫೌಂಡೇಶನ್ ಮೂಲಕ ನಾಲ್ಕು ಪೌಷ್ಟಿಕ ಆಹಾರ ನೀಡುತ್ತಿರುವುದು ಸ್ವಾಗರ್ತಾಹವಾಗಿದೆ. ರಾಜ್ಯದಲ್ಲಿ ವಿಪ್ರೋ ಸಂಸ್ಥೆ ದೊಡ್ಡ ಸಂಸ್ಥೆಯಾಗಿದೆ ಶಿಕ್ಷಣಕ್ಕಾಗಿ ಅಜೀಂ ಪ್ರೇಮಜಿ ಅವರು ಸಾಕಷ್ಟು ಹಣ ನೀಡಿದ್ದಾರೆ. ಕೆಲವರಲ್ಲಿ ಹಣ ಸಾಕಷ್ಟು ಇದ್ದರೂ ಅವರಿಗೆ ದಾನ ಮಾಡಲು ಮನಸ್ಸು ಇರೊಲ್ಲ, ಸರ್ಕಾರಿ ಶಾಲೆಗಳ ಬೆಳವಣಿಗೆ ದಾನಿಗಳು ಮುಂದೆ ಬರಬೇಕು ಎಂದರು.

ಸರ್ಕಾರದ ಅನುದಾನ ದುರ್ಬಳಕೆಯಾದರೆ ಕಠಿಣ ಕ್ರಮ

ಹಿಂದುಳಿದ ಹಣೆಪಟ್ಟಿ ಬೇಡ :

ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದ ಭಾಗ ಎಂಬ ಹಣೆಪಟ್ಟಿ ಇತ್ತು ಆದರೆ ಈಗ ಅದು ಹಣೆಪಟ್ಟಿ ಅಳಿಸಲಾಗಿದೆ ಶಿಕ್ಷಣ ಕ್ಷೇತ್ರ ಸಾಕಷ್ಟು ಪ್ರಗತಿ ಹೊಂದಿದೆ. ವಿವಿಧ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು.

ಶಿಕ್ಷಣಕ್ಕೆ ಆದ್ಯತೆ :

ಮೂರನೇ ಭಾರಿಗೆ ಶಾಸಕನಾದ ಮೇಲೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ, ಒಂದೂವರೆ ವರ್ಷದಲ್ಲಿ ಅಕ್ಷರ ಅವಿಷ್ಕಾರ ಯೋಜನೆಯಲ್ಲಿ ಶಾಲೆಗಳಿಗೆ ಕಂಪ್ಯೂಟರ್, ಪೀಠೋಪಕರಣ ಸೇರಿ ಇತರೆ ಸೌಲಭ್ಯಗಳಿಗಾಗಿ 10-12 ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ ಈಗಾಗಲೇ ಕೆಲಸಗಳ ಪ್ರಾರಂಭವಾಗಿದೆ. ಶಾಲೆಯಲ್ಲಿ ವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಭವಿಷ್ಯದ ಬಗ್ಗೆ ಶಿಕ್ಷಕರು ಕಾಳಜಿವಹಿಸಬೇಕು.
ಶಾಲಾ ಮಕ್ಕಳಿಗಾಗಿ ಶೂ ಸಾಕ್ಸ್ ಸೇರಿ ಇತರೆ ಸೌಲಭ್ಯಕ್ಕಾಗಿ ಅನುದಾನ ಬಿಡುಗಡೆಗೊಳಿಸುತ್ತಿದೆ ಆದರೆ ಅದನ್ನು ದುರಪಯೋಗವಾಗದಂತೆ ನೋಡಿಕೊಳ್ಳುವ ಕೆಲಸ ಮುಖ್ಯಶಿಕ್ಷಕರಾಗಿದೆ. ಸರ್ಕಾರ ನೀಡುವ ಪ್ರತಿಯೊಂದು ಯೋಜನೆಗಳು ಸದ್ಭಳಕೆಯಾಗುವಂತೆ ನೋಡಿಕೊಳ್ಳಬೇಕು ಒಂದು ವೇಳೆ ಸರ್ಕಾರದ ಅನುದಾನ ದುರ್ಬಳಕೆಯಾದರೆ ಕಠಿಣ ಕ್ರಮ ಜರಗಿಸಲಾಗುವುದು ಎಂದರು.

ಸರ್ಕಾರದ ಅನುದಾನ ದುರ್ಬಳಕೆಯಾದರೆ ಕಠಿಣ ಕ್ರಮ

ಡಿಡಿಪಿಐ ಕೆ.ಡಿ.ಬಡಿಗೇರ್ ಮಾತನಾಡಿ, ರಾಜ್ಯ ಸರ್ಕಾರ ಎರಡು ದಿನ ಪೌಷ್ಟಿಕ ಆಹಾರವಾದ ಬಾಳೆ ಹಣ್ಣು, ಶೇಂಗಾ ಚೆಕ್ಕಿ, ಮೊಟ್ಟೆ ನೀಡಲಾಗುತ್ತಿತ್ತು, ಅಜೀಂ ಪ್ರೇಮಜೀ ಫೌಂಡೇಶನ್‌ನವರು ಇನ್ನೂಳಿದ ನಾಲ್ಕು ದಿನವೂ ಸರ್ಕಾರಿ, ಅನುದಾನಿತ ಪ್ರಾಥಮಿಕ ಪ್ರೌಢಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಮುಂದೆ ಬಂದಿದೆ. ರಾಯಚೂರು ಜಿಲ್ಲೆಯಲ್ಲಿ 2.71 ಲಕ್ಷ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮಕ್ಕಳು ಸದೃಢವಾಗಲೆಂದು ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಮೇಲಾಗಿ ಯಾವುದೇ ಮಕ್ಕಳು ಶಾಲೆ ಬಿಡದಂತೆ ಉತ್ತಮ ಶಿಕ್ಷಣ ಪಡೆಯಬೇಕು ಎಂಬ ದೃಷ್ಠಿಯಿಂದ ಅಜೀಂ ಪ್ರೇಮಜೀ ಫೌಂಡೇಶನ್ ಕೆಲಸ ಮಾಡುತ್ತಿದೆ ಎಂದರು.


ಮಕ್ಕಳ ಜೊತೆ ಶಾಸಕ ವಜ್ಜಲ್ ಊಟ:
6 ದಿನ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಮಾನಪ್ಪ ವಜ್ಜಲ್ ಮೊಟ್ಟೆ ವಿತರಿಸಿದರು ನಂತರ ಮಕ್ಕಳೊಂದಿಗೆ ಕುಳಿತು ತಾವು ಊಟ ಮಾಡಿದರು.


ಈ ವೇಳೆ ಬಿಇಒ ಹುಂಬಣ್ಣ ರಾಠೋಡ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಾರ್ಟಿನ್, ದೈಹಿಕ ಶಿಕ್ಷಣ ಪರಿವೀಕ್ಷಕ ಚೆನ್ನಬಸರಾಜ ಮೇಟಿ, ಶಿಕ್ಷಣ ಸಂಯೋಜಕ ಬಸವರಾಜ ಕರಡಿ, ಮುಖ್ಯ ಶಿಕ್ಷಕ ಚಂದ್ರಶೇಖರ್, ಅಜೀಂ ಪ್ರೇಮಜೀ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಗಳಾದ ಮೇಘಾ ಕುಲಕರ್ಣಿ, ಖಾಜಾ ಅಜೀಮ್ ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!