suddiduniya.com

Hemareddy Mallamma :ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ದೇಣಿಗೆ

Hemareddy Mallamma

ಧರ್ಮಸ್ಥಳ ಗ್ರಾಮಾಭಿವೃದ್ಧಿ :

ಲಿಂಗಸುಗೂರು : ತಾಲೂಕಿನ ಕಾಚಾಪುರ ಗ್ರಾಮದಲ್ಲಿ ಶಿವಶರಣೆ (Hemareddy Mallamma) ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಜೀರ್ಣೋದ್ಧಾರದ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಲಾಯಿತು.

Hemareddy Mallamma
ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಧರ್ಮಸ್ಥಳ ಸಂಸ್ಥೆಯಿAದ ಒಂದು ಲಕ್ಷ ರೂ ದೇಣಿಗೆ

ಒಂದು ಲಕ್ಷ ರೂಪಾಯಿ ದೇಣಿಗೆ :


ತಾಲೂಕಿನ ಕಾಚಾಪುರ ಗ್ರಾಮದ ಶಿವಶರಣೆ( Hemareddy Mallamma)ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಜೀರ್ಣೋದ್ಧಾರದ ಕಾಮಗಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ ಒಂದು ಲಕ್ಷ ರೂಪಾಯಿ ಮೊತ್ತದ ಡಿ,ಡಿ,ಯನ್ನು ಯೋಜನೆಯ ರಾಯಚೂರು ಜಿಲ್ಲಾ ನಿರ್ದೇಶಕ ಮೋಹನ್ ನಾಯಕ್, ತಾಲೂಕು ಯೋಜನಾಧಿಕಾರಿ ಅಡಿವೆಯ್ಯ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಮತ್ತು ಸದಸ್ಯರಿಗೆ ವಿತರಿಸಿದರು.

Hemareddy Mallamma
Hemareddy Mallamma

ಜನಮಂಗಳ ಕಾರ್ಯಕ್ರಮ :


ಜನಮಂಗಳ ಕಾರ್ಯಕ್ರಮದ ಅಂಗವಿಕಲರಿಗೆ ತೀಚಕ್ರ ವಾಹನ, ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಕೃಷಿ ಅನುದಾನದಡಿಯಲ್ಲಿ ಕೆರೆ ನಿರ್ಮಾಣ, ಪ್ರಗತಿ ನಿಧಿಯಡಿಯಲ್ಲಿ ದೇವಸ್ಥಾನಗಳ ಸ್ವಚ್ಚತೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಂಸ್ಥೆವತಿಯಿAದ ಮಾಡಲಾಗುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಮೋಹನ್ ನಾಯಕ್ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಶಿವಬಸನಗೌಡ,ಹಿರೇಗೌಡ ಪೊಲೀಸ್‌ಪಾಟೀಲ್,ಅಚ್ಚನಗೌಡ, ಕೃಷಿ ಮೇಲ್ವಿಚಾರಕ ಮಹಮ್ಮದ್ ಅಲಿ ನಾಗಡದಿನ್ನಿ, ವಲಯ ಮೇಲ್ವಿಚಾರಕಿ ಜ್ಯೋತಿ, ಸೇವಾ ಪ್ರತಿನಿಧಿ ದೇವಮ್ಮ ಹಾಗೂ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!