suddiduniya.com

Higher education : ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲಡೆ

ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲಡೆ

ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ

ಲಿಂಗಸುಗೂರು : ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮುಕ್ತ(State Open University) ಮತ್ತು ದೂರ ಶಿಕ್ಷಣ(distance education) ಪದ್ಧತಿಯಲ್ಲಿ ಶಿಕ್ಷಣವನ್ನು ನೀಡುವ ರಾಜ್ಯದ ಏಕೈಕ ವಿಶ್ವವಿದ್ಯಾನಿಲಯವಾಗಿದೆ. ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲಡೆಎಂಬ ಧ್ಯೇಯವಾಕ್ಯದಂತೆ ಉನ್ನತ ಶಿಕ್ಷಣ ಪ್ರತಿಯೊಬ್ಬರ ಮನೆ-ಮನೆಯ ಬಾಗಿಲಿಗೆ ತಲುಪಿಸಲು ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಟಣದ ರಾಷ್ಟ್ರೀಯ ಮಹಿಳಾ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ನಾಗರಾಜ ಹೆಚ್.ಎನ್ ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲಡೆ

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮನೆ-ಮನೆಯ ಬಾಗಿಲಿಗೆ ತಲುಪಿಸಲು ಶೈಕ್ಷಣಿಕ ಕಾರ್ಯಕ್ರಮಗಳು ಯು.ಜಿ.ಸಿ, ಡಿ.ಇ.ಬಿ, ಎ.ಐ.ಸಿ.ಟಿ.ಇ, ಹಾಗೂ ಎ+ ನ್ಯಾಕ್‌ಗ್ರೇಡ್ ಮಾನ್ಯತೆ ಪಡೆದಿವೆ. 2024-25ನೇ ಸಾಲಿಗೆ (ಜೂಲೈ ಆವೃತ್ತಿ) ಆನ್‌ಲೈನ್ ಪ್ರವೇಶಾತಿ ಪ್ರಾರಂಭವಾಗಿದ್ದು ಯು.ಜಿ.ಸಿ ಯ ಹೊಸ ನಿಯಮದಂತೆ ಕಲಿಕಾರ್ಥಿಗಳು ಏಕಕಾಲದಲ್ಲಿ ಎರಡು (ಒಂದು ಭೌತಿಕ,ಒಂದು ದೂರ ಶಿಕ್ಷಣ ಹಾಗೂ ಎರಡು ದೂರ ಶಿಕ್ಷಣ) ಕೋರ್ಸಗಳಿಗೆ ಪ್ರವೇಶಾತಿ ಪಡೆಯಲು ಸುವರ್ಣಾವಕಾಶವಿದೆ.

ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ-ತಾಲೂಕುಗಳ ಕಲಿಕಾರ್ಥಿಗಳಿಗೆ ಆಧ್ಯತೆ ನೀಡುವ ದೂರದೃಷ್ಠಿಯಿಂದ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯಲು ಕಲಿಕಾರ್ಥಿಗಳಿಗೆ ರೆಗ್ಯುಲರ್ ಶಿಕ್ಷಣಕ್ಕೆ ಸರಿಸಮನಾದ ಉನ್ನತ ಶಿಕ್ಷಣವನ್ನು ಅತ್ಯಂತಕ ಡಿಮೆಖರ್ಚಿನಲ್ಲಿ ಸುಲಭವಾಗಿ ಪಡೆಯಲು ಅನುಕೂಲಕ್ಕಾಗಿ ಪಟ್ಟಣದಲ್ಲಿ ರಾಷ್ಟ್ರೀಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಕಳೆದ 18 ವರ್ಷಗಳಿಂದ ದೂರ ಶಿಕ್ಷಣ ನೀಡುತ್ತಿರುವ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಲಿಕಾರ್ಥಿ (ಅಧ್ಯಯನ) ಸಹಾಯ ಕೇಂದ್ರ ಹಾಗೂ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ.

ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲಡೆ

ಸುಮಾರು 50 ಕ್ಕೂ ಹೆಚ್ಚು ವಿವಿಧಕೋರ್ಸಗಳ ಪ್ರವೇಶಾತಿಗೆ ಅವಕಾಶವಿದೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಿ ಉದ್ಯೋಗಕ್ಕೆ ಅವಕಾಶ ಕಲ್ಪಿಸಲು ಉದ್ಯೋಗಮೇಳ ಆಯೋಜಿಸಲಾಗುತ್ತಿದೆ. ಅದರಂತೆ ಪದವಿ ಹಂತವಾದ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಎಸ್.ಡಬ್ಲೂ, ಬಿಸಿಎ, ಬಿಬಿಎ, ಬಿ.ಎಲ್‌ಐಎಸ್ಸಿ, ಸ್ನಾತಕೋತ್ತರ ಹಂತದಲ್ಲಿ ಎಂ.ಎ (ಸೆಮಿಸ್ಟರ್ ಹಂತದ ಕಲಿಕೆ) ಎಂಎ, ಎಂ.ಕಾA, ಎಂ.ಎಸ್.ಡ್ಲೂ, ಎಂಸಿಎ, ಎಂ.ಎಲ್.ಐ.ಎಸ್ಸಿ, ಎಂ.ಬಿ.ಎ, ಎಂ.ಎಸ್ಸಿ ಮತ್ತು ಪಿಜಿ ಡಿಪ್ಲೋಮಾ, ಸರ್ಟಿಫಿಕೆಟ್ ಕೋರ್ಸಗಳು ಮತ್ತು ವಿಶೇಷವಾಗಿ ಪದವಿ, ಸ್ನಾತಕ ಪದವಿಯ 10 ಆನ್ ಲೈನ್‌ಲೈನ್ ಮುಂತಾದ ಕೋರ್ಸಗಳಿಗೆ ಪ್ರವೇಶಾತಿ ಪಡೆಯಲುಅಗತ್ಯ ದಾಖಲಾತಿಗಳಾದ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಎಲ್ಲಾ ಅಂಕಪಟ್ಟಿಗಳು, ಆಧಾರ್‌ಕಾರ್ಡ್, 8 ಪೋಟೋ 3 ಸೇಟ್‌ಝರಾಕ್ಸ್ ಪ್ರತಿಗಳು ಮತ್ತು ಮೂಲ ಅಂಕಪಟ್ಟಿಗಳೊ0ದಿಗೆ ಪ್ರವೇಶ ಪಡೆಯಲು ಅವಕಾಶವಿದೆ.

ಶಿಷ್ಯವೇತನಕ್ಕೂ ಅರ್ಹ :

ಪ.ಜಾ,ಪ.ಪಂ,ಹಿ0ದುಳಿದ ವರ್ಗ, ಅಲ್ಪಸಂಖ್ಯಾತ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೌಲಭ್ಯವನ್ನು ಆಯಾ ಸಂಬ0ಧಪಟ್ಟ ಇಲಾಖೆಗಳಿಂದ ಪಡೆಯಬಹುದಾಗಿದೆ. ಸಮಾಜಕಲ್ಯಾಣ ಇಲಾಖೆಯಿಂದ ಪಡೆಯಲು ಅವಕಾಶವಿದೆ.

ಶುಲ್ಕದಲ್ಲಿ ರಿಯಾಯತಿ :

ವಿಶೇಷವಾಗಿ ಬೋಧನಾ ಶುಲ್ಕದಲ್ಲಿ ರಿಯಾಯಿತಿ ಪಡೆಯಲು ಅರ್ಹರಾದ ಅಟೋ ಮತ್ತು ಕ್ಯಾಬ್‌ಚಾಲಕರು ಹಾಗೂ ಪತ್ನಿ, ಮಕ್ಕಳು ಶೇ. 30, ಬಿ.ಪಿ.ಎಲ್‌ಕಾರ್ಡ (ಮಹಿಳೆ) ಶೇ.15, ಮಾಜಿ ಸೈನಿಕರಿಗೆ ಶೇ.15, ತೃತಿಯ ಲಿಂಗಿಗಳು ಶೇ.100, ಕೋವಿಡ್-19 ಗೆ ಮೃತರಾದ ತಂದೆ-ತಾಯಿಯ ಮಕ್ಕಳಿಗೆ ಶೇ.100 ದೃಷ್ಠಿದೋಷ ಶೇ.100 ಶುಲ್ಕ ವಿನಾಯಿತಿ ನೀಡಲಾಗುತ್ತಿದೆ.

ನವೆಂಬರ್ 15 ಕೊನೆ ದಿನ :


ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆಯಲು 2024 ನವೆಂಬರ್ 15ರಂದು ಕೊನೆ ದಿನವಾಗಿದೆ. ಆಸಕ್ತರು ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ರಾಷ್ಟ್ರೀಯ ಮಹಿಳಾ ಪದವಿ ಮಹಾವಿದ್ಯಾಲಯದ ಕಾರ್ಯಾಲಯಕ್ಕೆ ನೇರವಾಗಿ ಬೇಟಿ ನೀಡಿ ಮಾಹಿತಿ ಪಡೆಯಬಹುದು, 9480062375, 8453368811 ಕ್ಕೆ ಕರೆ ಮಾಡಿ ಹೆಚ್ಚಿನ ವಿವರ ಪಡೆಯಬಹುದು ಎಂದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!