ಛಾವಣಿ ದಸರಾ ಸಂಭ್ರಮಕ್ಕೆ ಚಾಲನೆ
ಲಿಂಗಸುಗೂರು : ಪ್ರಪಂಚದ ಎಲ್ಲಾ ಸಂಸ್ಕೃತಿಗಳಲ್ಲಿ, ಭಾರತೀಯ ಸಂಸ್ಕೃತಿಯು (Indian culture )ಬಹುಶಃ ಅತ್ಯಂತ ಪುರಾತನದ್ದಾಗಿದೆ.ಜಗತ್ತಿನ ಸಂಸ್ಕೃತಿಗಳಿಗೆ ಭಾರತೀಯ ಸಂಸ್ಕೃತಿ ತಾಯಿ (Indian culture ) ಇದ್ದಂತೆ, ಸಂಸ್ಕೃತಿ ಇಷ್ಟು ಹಳೆಯದಾಗಿದ್ದರೂ, ಭಾರತೀಯ ಸಂಸ್ಕೃತಿಯು ಇನ್ನೂ ಹುರುಪಿನಿಂದ ಜೀವಂತವಾಗಿದೆ ಎಂದು ದೇವದುರ್ಗದ ವಾಗ್ದೇವಿ ವಿದ್ಯಾಮಂದಿರದ ಆಡಳಿತಾಧಿಕಾರಿ ಡಾ.ಸಚಿನ್ ದೋಟಿಹಾಳ ಹೇಳಿದರು.
ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದ ಬಳಿ ಛಾವಣಿ ದಸರಾ ಉತ್ಸವ ಸಮಿತಿ ಏರ್ಪಡಿಸಿದ್ದ ದಸರಾ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಭಾರತ ಜಗತ್ತಿನಲ್ಲಿ ಅಂತರಮುಖ, ಆಧ್ಯಾತ್ಮಿಕತೆಯಿಂದ ಪ್ರಸಿದ್ಧವಾಗಿದೆ. ಈಗಾಗಿ ಸ್ವಾಮಿ ವಿವೇಕಾನಂದರು ಅಂತರಮುಖ,ಆದ್ಯಾತ್ಮಿಕತೆಯ ತವರೂರು ಭಾರತ ಎಂದು ಹೇಳಿದ್ದರು. ವಿವಿಧತೆಯಲ್ಲಿ ಏಕತೆ ಮತ್ತು ವಿವಿಧ ರೂಪಗಳಲ್ಲಿ ಏಕತೆಯ ಅಭಿವ್ಯಕ್ತಿ ಭಾರತೀಯ ಸಂಸ್ಕೃತಿಯ ಕೇಂದ್ರ ಚಿಂತನೆಯಾಗಿ ಉಳಿದಿದೆ. ಭಾರತೀಯ ಸಂಸ್ಕೃತಿಯು ಕೆಲವು ಭೌಗೋಳಿಕ ಮಿತಿಗಳ ಅಡಿಯಲ್ಲಿ ಇರಿಸಲಾಗಿರುವ ಒಂದು ನಿರ್ದಿಷ್ಟ ಜನರ ಗುಂಪಿಗೆ ಸೇರಿದ್ದಲ್ಲ. ಭಾರತೀಯ ಸಂಸ್ಕೃತಿಯು ಮಾನವ ಸಂಸ್ಕೃತಿಯಾಗಿದ್ದು ವೈವಿಧ್ಯತೆಯಲ್ಲಿ ಏಕತೆಯನ್ನು ಬಯಸುವ ಸದಾಚಾರ ಅಥವಾ ಧರ್ಮದ ತತ್ವವನ್ನು ಆಧರಿಸಿದೆ. ಈಗಾಗಿ ಜಗತ್ತಿನ ಸಂಸ್ಕೃತಿಗಳಿಗೆ ಭಾರತೀಯ ಸಂಸ್ಕೃತಿ ತಾಯಿ ಇದ್ದಂತೆ ಎಂದರು.
ನಾವು ವೈವಿಧ್ಯತೆಯಲ್ಲಿ ಏಕತೆಯನ್ನು ಕರೆಯುತ್ತೇವೆ ವರ್ತನೆಯ ವೈವಿಧ್ಯತೆಯಲ್ಲಿ ಆಧ್ಯಾತ್ಮಿಕ ಏಕತೆ.ಮೇಲಾಗಿ, ಈ ಸಂಸ್ಕೃತಿಯು ವೈದಿಕ ಕಾಲದಿಂದ ಇಂದಿನವರೆಗೂ ಅಖಂಡ ನಿರಂತರತೆಯನ್ನು ಕಾಯ್ದುಕೊಂಡಿದೆ. ಭಾರತೀಯ ಸಂಸ್ಕೃತಿಯ ಈ ಅವಿನಾಶವಾದ ಏಕತೆ ಮತ್ತು ಮುರಿಯದ ನಿರಂತರತೆಯನ್ನು ಅದರ ಆಳವಾದ ಆಧ್ಯಾತ್ಮಿಕ ಅಡಿಪಾಯದಿಂದ ಪಡೆಯಲಾಗಿದೆ. ಆಧ್ಯಾತ್ಮವು (Indian culture )ಭಾರತೀಯ ಮನಸ್ಸಿನ ಮುಖ್ಯ ಕೀಲಿಯಾಗಿದೆ; ಸಾಮರಸ್ಯದ ಭಾವನೆ, ವೈವಿಧ್ಯತೆಯಲ್ಲಿ ಏಕತೆಯನ್ನು ನೋಡುವುದು, ಏಕತೆಯ ಭಾವನೆ ಭಾರತೀಯ ಚಿಂತನೆ ಮತ್ತು ಜೀವನ ವಿಧಾನಕ್ಕೆ ಸ್ಥಳೀಯವಾಗಿದೆ. ಭಾರತೀಯ ಸಂಸ್ಕೃತಿಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಾಗಲೆಲ್ಲ ಸಂಸ್ಕೃತಿ ಮತ್ತಷ್ಟು ಬಲಗೊಂಡಿದೆ. ಸಾಮಾಜಿಕ ಸಾಮರಸ್ಯವೇ ವಿಶ್ವದ ಎಲ್ಲ ಧರ್ಮಗಳ ಮೂಲ ಉದ್ದೇಶ. ಭಗವಾನ್‌ಮಹಾವೀರರ ಅಹಿಂಸಾ ಸಂದೇಶ ಇಂದು ವಿಶ್ವಕ್ಕೆ ಹೆಚ್ಚು ಅಗತ್ಯವಾಗಿದೆ. ಧರ್ಮ ಸಮಾಜವನ್ನು ಒಗ್ಗೂಡಿಸುತ್ತದೆ ಎಂದರು.
ಅನಾಧಿಕಾಲದಿಂದಲೂ ದಸರಾ ಆಚರಣೆ :
ಅನಾಧಿಕಾಲದಿಂದಲೂ ದಸರಾ ಆಚರಣೆ ಮಾಡುತ್ತಿದ್ದೇವೆ ದಸರಾ ಮೊದಲ ಮೂರು ದಿನಗಳು ಪಾರ್ವತಿ ದೇವಿ, ನಂತರದ ಮೂರು ದಿನ ಲಕ್ಷ್ಮೀದೇವಿ ಮತ್ತು ಅದರ ಮುಂದಿನ ಮೂರು ದಿನ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಪುಸ್ತಕಗಳನ್ನು ಪೂಜೆಯಲ್ಲಿ ಇಡುತ್ತಾರೆ. ಹೀಗೆ ಮಾಡಿದರೆ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಸಾಮಾನ್ಯ ಜನರನ್ನು ಹೊರತುಪಡಿಸಿ, ಯೋಗಿಗಳು ನವರಾತ್ರಿಯಲ್ಲಿ ದೇವಿಯನ್ನು ಪೂಜಿಸುತ್ತಾರೆ ಎಂದರು. ಮೈಸೂರಿನಲ್ಲಿ ಆಚರಿಸುವ ದಸರಾ ಹಬ್ಬ ನಾಡ ಹಬ್ಬವಾಗಿದೆ ಎಂದರು. ಮಕ್ಕಳಿಗೆ ಸಂಸ್ಕೃತಿ, ಸವಂತ್ಸರ, ಮಾಸಗಳ ಬಗ್ಗೆ ಅರಿವು ಇಲ್ಲದಾಗಿದೆ. ಇಂದಿನ ಮಕ್ಕಳಿಗೆ ಜನೆವರಿ,ಫ್ರೆಬುವರಿ ಬಿಟ್ಟರೆ ಬೇರೆ ಗೊತ್ತಿಲ್ಲ, ದಸರಾ ಸಂಭ್ರಮದಲ್ಲಿ ಸಂಗೀತ,ಮನೋರಂಜನೆ ಜೊತೆಗೆ ಮಕ್ಕಳಿಗೆ ಸಂಸ್ಕೃತಿ ಕುರಿತು ಶಿಬಿರ ನಡೆಸುವ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದರು. ಈಗಾಗಿ ಜಗತ್ತಿನ ಸಂಸ್ಕೃತಿಗಳಿಗೆ ಭಾರತೀಯ ಸಂಸ್ಕೃತಿ (Indian culture )ತಾಯಿ ಇದ್ದಂತೆ ಎಂದರು.
ರೈತರ ಬದುಕು ಹಸನಾಗಿದ್ದರೆ ಹಬ್ಬಕ್ಕೆ ಕಳೆ :
ವಿಧಾನಪರಿಷತ್‍ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ದಸರಾ ಸಂಭ್ರಮವನ್ನು ಎಲ್ಲಾ ಧರ್ಮ,ಸಮಾಜಗಳೊಂದಿಗೆ ಬೆರತು ಒಗ್ಗಟ್ಟಿನಿಂದ ಹಬ್ಬ ಆಚರಣೆ ಮಾಡಬೇಕಾಗಿದೆ. ಸಮಾಜದಲ್ಲಿ ಶಾಂತಿ,ಸಾಮರಸ್ಯ ಮೂಡಿಸಬೇಕಾಗಿದೆ. ರೈತನ ಬದುಕು ಹಸನನಾಗಿದ್ದರೆ ಹಬ್ಬ ಆಚರಣೆಗೆ ಮೆರಗು ಬರುತ್ತದೆ ಅದರಂತೆ ಈ ವರ್ಷ ಮಳೆರಾಯನ ಕೃಪೆಯಿಂದ ಬೆಳೆಗಳು ಚೆನ್ನಾಗಿದೆ.ಇದೇ ರೀತಿ ಪ್ರತಿ ವರ್ಷವೂ ರೈತನ ಮೊಗದಲ್ಲಿ ಮಂದಹಾಸ ಕಾಣಲು ಚಾಮುಂಡಿಶ್ವೇರಿ ದೇವಿ ಆಶೀರ್ವಾದ ಮಾಡಬೇಕೆಂದು ಪ್ರಾರ್ಥಿಸಿದರು.
ರಾಕ್ಷಸ ಗುಣಗಳ ತೊಡೆದು ಹಾಕುವುದು ವಿಜಯದಶಮಿ :
ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿದ್ದ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಆಶೀರ್ವಾಚನ ನೀಡಿದ ಅವರು, ಒಂಬತ್ತು ದಿನಗಳು ದೇವಿ ನವರಾತ್ರಿ, ಹತ್ತನೆಯ ದಿನವನ್ನು ವಿಜಯದಶಮಿಯೊಂದಿಗೆ ದಸರಾ ಎಂದು ಆಚರಿಸಲಾಗುತ್ತದೆ. ದಸರಾ ಎಂಬುದು ದಶರಾತ್ರಿಯ ಆಡುಮಾತಿನ ರೂಪವಾಗಿದೆ. ಇದರ ಇನ್ನೊಂದು ಹೆಸರು ದಶಹರ. ಆ ಕಾರಣಕ್ಕೆ ದಸರಾ ಎಂದು ಹೇಳಲಾಗುತ್ತದೆ. ಅಂದರೆ ಅದು ದಶದೋಷಗಳನ್ನು ನಿವಾರಿಸುತ್ತದೆ. ಕಾಮ,ಕೋಪ,ಕ್ರೌರ್ಯ, ದ್ವೇಷ, ದುರಾಸೆ, ಅಸೂಯೆ, ಉದ್ವೇಗ, ಹೆಮ್ಮೆ, ವ್ಯಾಮೂಹ, ಸ್ವಾರ್ಥ ಅಹಂಕಾರವೇ ಈ ಹತ್ತು ಪಾಪ ಹಾಗೂ ದುರ್ಗುಣಗಳ ಮೂಲ. ಅಹಂಕಾರ ಮತ್ತು ಅಜ್ಞಾನದ ಮೇಲೆ ಆಂತರಿಕ ಶತ್ರುಗಳು ಮತ್ತು ರಾಕ್ಷಸ ಗುಣಗಳನ್ನು ತೊಡೆದು ಹಾಕುವ ಮೂಲಕ ಸಾಧಿಸಿದ ವಿಜಯದ ಸಂಕೇತವಾಗಿ ದೇವಿಯ ನವರಾತ್ರಿ ಉತ್ಸವಗಳನ್ನು ನಡೆಸಲಾಗುತ್ತದೆ. ಇದು ಮುಖ್ಯವಾಗಿ ಶಕ್ತಿಯ ಆರಾಧನೆಯ ಮೇಲೆ ಕೇಂದ್ರೀಕೃತವಾದ ಹಬ್ಬವಾಗಿದೆ. ಈ ಹಬ್ಬವನ್ನು ನವರಾತ್ರಿ ಮತ್ತು ಶರನ್ನವರಾತ್ರಿ ಎಂದೂ ಕರೆಯುತ್ತಿದ್ದೇವೆ.ದೇಶದ ಸಂಸ್ಕೃತಿ ಹಾಗೂ ಧರ್ಮ ಉಳಿಸಿ ಬೆಳಸುವ ಉದ್ದೇಶದಿಂದ ಹಬ್ಬಗಳ ಆಚರಣೆ ಮಾಡಲಾಗುತ್ತಿದೆ ಎಂದರು.
ದಸರಾ ಉತ್ಸವ ಸಮಿತಿ ಸಂಚಾಲಕ ಮಂಜುನಾಥ ಕಾಮಿನ್ ಮಾತನಾಡಿ, ಅನೇಕ ವರ್ಷಗಳಿಂದ ಆಚರಿಸುತ್ತಿರುವ ದಸರಾ ಸಂಭ್ರಮವನ್ನು ಮುಂದಿನ ಪೀಳಿಗೆವರಿಗೂ ಮುಂದುವರಿಸಿಕೊಂಡು ಹೋಗುವ, ಧರ್ಮ, ಸಂಸ್ಕೃತಿ ಆಚರಣೆಗಳು ಉಳಿಯಲಿ, ದೇಶದ ಸಂಸ್ಕೃತಿಯ ಅರಿವು ಹೆಚ್ಚಾಗಿಸುವ ಉದ್ದೇಶದಿಂದ ಪಟ್ಟಣದ ಎಲ್ಲಾ ಸಮಾಜದ ಮುಖಂಡರ ಸಹಕಾರದಂದಿಗೆ ಛಾವಣಿ ದಸರಾ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ವರ್ಷ 15ನೇ ದಸರಾ ಉತ್ಸವ ಸಂಭ್ರಮವಾಗಿದೆ.ದಸರಾ ಉತ್ಸವದಲ್ಲಿ ಪ್ರತಿದಿನವೂ ವಿವಿಧ ಕಾರ್ಯಕ್ರಮಗಳು ನಡೆಸಲಾಗುತ್ತಿದೆ. ಹತ್ತನೇ ದಿನದಂದು ಲಿಂಗಸುಗೂರಿನ ಗೊಂಧಳಿ ಸಮುದಾಯ ಭವನದಿಂದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ತಾಯಿ ಭುವನೇಶ್ವರಿ ಮೂರ್ತಿ ಮೆರವಣಿಗೆ ನಡೆಸಿ ಬನ್ನಿ ಮುಡಿಯಲಾಗುತ್ತಿದೆ ಎಂದರು.
ಜನಮನ ಸೂರೆಗೊಂಡ ಸಂಗೀತ ಕಾರ್ಯಕ್ರಮ :
ದಸರಾ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಕಲರ್ಸ ಕನ್ನಡ ಕೋಗಿಲೆ ಖ್ಯಾತಿ ಕಲಬುರಗಿಯ ಅನಂತರಾಜ್ ಮಿಸ್ತ್ರಿ ಹಾಗೂ ತಂಡದಿಂದ ನಡೆಸಿದ ಭಕ್ತಿ ಸಂಗೀತಕ್ಕೆ ನೆರದಿದ್ದ ಜನಮನಸೂರೆಗೊಳ್ಳುವಂತೆ ಮಾಡಿತು.
ವಿವಿಧ ಕಾರ್ಯಕ್ರಮಗಳು :
ಅಕ್ಟೋಬರ್ 6ರಂದು ಮೇಘನಾ ಕುಂದಾಪುರ ಅವರಿಂದ ಜಾನಪದ ಸಂಗೀತ ಹಾಗೂ ರಂಗಗೀತೆಗಳು, ಅ.7ರಂದು ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಗಿಚ್ಚಿಗಿಲಿ ಗಿಲಿ ಕಾರ್ಯಕ್ರಮ ಖ್ಯಾತಿಯ ಮಂಜು ಚಿಲ್ಲರ್, ರಾಘವೇಂದ್ರ ಹಾಗೂ ಶಿವು ತಂಡದಿಂದ ಹಾಸ್ಯ ಸಂಜೆ ಕಾರ್ಯಕ್ರಮ, ಅ.8ರಂದು ಕನ್ನಡ ಕೋಗಿಲೆ ಖ್ಯಾತಿಯ ರಾಯಚೂರಿನ ಕರಿಬಸವ ತಡಕಲ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ. ಅ.9ರಂದು ರಾಯಚೂರಿನ ಶ್ರೇಯಸ್ಸು ಜೋಷಿ ತಂಡದಿಂದ ಭರತ್ ನಾಟ್ಯ ಕಾರ್ಯಕ್ರಮ,ಅ10ರಂದು ಡಾ.ಲೀಲಾ ಎನ್ ಬೆಂಗಳೂರು ಅವರಿಂದ ಆದಿಶಕ್ತಿ ಏಕ ವ್ಯಕ್ತಿ ನಾಟಕ ಪ್ರದರ್ಶನ ಹಾಗೂ ಅ.11ರಂದು ಹಾವೇರಿಯ ಅಲ್ಲಿಕೇರಿ ಬಸವೇಶ್ವರ ಕಲಾತಂಡದಿಂದ ಜಾನಪದ ಜಾತ್ರೆ ಕಾರ್ಯಕ್ರಮ ನಡೆಯಲಿದ್ದು,
ಈ ವೇಳೆ ಮುಖಂಡರಾದ ಭೂಪನಗೌಡ ಕರಡಕಲ್, ಮಲ್ಲಣ್ಣ ವಾರದ್, ಪಾಮಯ್ಯ ಮುರಾರಿ, ಶರಣಬಸವ ವಾರದ್, ಮನೋಹರ ರೆಡ್ಡಿ, ಅರುಣ್ ಖಂಡೇಲಾಲ್,ಸುದೀರ ಶ್ರೀವಾಸ್ತವ, ಅಶೋಕ ದಿಗ್ಗಾವಿ, ಪ್ರಮೋದ ಕುಲಕರ್ಣಿ, ಚೆನ್ನಬಸವ ಹಿರೇಮಠ, ರಾಜು ತಂಬಾಕೆ, ಪರಶುರಾಮ ಕೆಂಭಾವಿ,ಸಿದ್ದು ಬಡಿಗೇರ್,ಬಸವರಾಜ ಖೈರವಾಡಗಿ, ಗಂಗಾಧರ ಪತ್ತಾರ, ಸತೀಶ ಪತ್ತಾರ ಸೇರಿದಂತೆ ಅನೇಕರಿದ್ದರು.