suddiduniya.com

internal reservation :ಒಳ ಮೀಸಲಾತಿ ಜಾರಿಗಾಗಿ ನಾಳೆ ಮಸ್ಕಿಗೆ ಬೈಕ್ ರ‍್ಯಾಲಿ

internal reservation

ಮಸ್ಕಿಯಲ್ಲಿ ಹೋರಾಟ :

ಲಿಂಗಸುಗೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ (internal reservation) ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ದಲಿತ ಸಂರಕ್ಷಾ ಸಮಿತಿಯಿಂದ ನಾಳೆ(ಸೆ.20)ರಂದು ಲಿಂಗಸುಗೂರಿನಿಂದ ಮಸ್ಕಿ ಪಟ್ಟಣದವರಿಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ತಾಲೂಕಾಧ್ಯಕ್ಷ ಮೋಹನ್ ಗೋಸ್ಲೆ ತಿಳಿಸಿದ್ದಾರೆ.

internal reservation
internal reservation

ಒಳ ಮೀಸಲಾತಿ ಜಾರಿಗೊಳಿಸಿ :


ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ದಶಕಗಳಿಂದಲೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತೀವೃವಾಗಿ ಹೋರಾಟಗಳು ನಡೆಯುತ್ತಿವೆ. ಹೋರಾಟಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್ ಆ.01 ರಂದು ಒಳ ಮೀಸಲಾತಿ ಹಂಚಿಕೆಯ ಬಗ್ಗೆ ನೀಡಿದ ತೀರ್ಪು ಶೋಷಿತ ಸಮುದಾಯಗಳ ಕೂಗಿಗೆ ಬಲ ನೀಡಿದಂತಾಗಿದೆ. ಸುಪ್ರೀಂಕೋರ್ಟ್ ತೀರ್ಪುನ್ನು ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಸೆ.20ರಂದು ಮಸ್ಕಿ ಪಟ್ಟಣದಲ್ಲಿ ಬೃಹತ್ ರ‍್ಯಾಲಿ ಹಾಗೂ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ.

internal reservation
internal reservation

ಬೈಕ್ ರ‍್ಯಾಲಿ

ಈ ರ‍್ಯಾಲಿಗೆ ಲಿಂಗಸುಗೂರು ಪಟ್ಟಣದಿಂದ ಬೈಕ್ ರ‍್ಯಾಲಿ ಮೂಲಕ ತೆರಳಲಾಗುತ್ತಿದೆ. ಈ ಬಹಿರಂಗ ಸಭೆಗೆ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು, ಚಿಂತಕರು, ಸಾಹಿತಿಗಳು ಮತ್ತು ಮಾದಿಗ ಸಮಾಜದ ಹಿರಿಯ ನಾಯಕರು-ಯುವಕರು ಲಿಂಗಸುಗೂರು ತಾಲ್ಲೂಕಿನ ಪ್ರತಿ ಒಂದು ಗ್ರಾಮಗಳಿಂದ ಬೈಕ್ ರ‍್ಯಾಲಿಯಲ್ಲಿ ಮುಖಾಂತರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!