ಬಂಜಾರ ಹಾಗೂ ಭೋವಿ ಸಮುದಾಯದಿಂದ ಸಿಎಂಗೆ ಮನವಿ
ಲಿಂಗಸುಗೂರು : ಪರಿಶಿಷ್ಟ ಜಾತಿಯಲ್ಲಿನ ಒಂದೆರಡು ಜಾತಿಗಳನ್ನು ಎತ್ತಿ ಹಿಡಿಯುವ ಸಲುವಾಗಿ 101 ಜಾತಿಗಳಿಗೆ ಅನ್ಯಾಯವಾಗಲಿರುವ ಒಳ ಮೀಸಲಾತಿ (Internal reservation) ಜಾರಿಗೆ ತರಬಾರದು, ಒಂದು ವೇಳೆ ಜಾರಿಗೆ ತಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹೋರಾಟ ರೂಪಿಸಬೇಕಾಗುತ್ತಿದೆ ಎಂದು ಭೋವಿ, ಲಂಬಾಣಿ ಸಮುದಾಯದ ಮುಖಂಡರು ಎಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಅಕ್ಟೋಬರ್ 19ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮುಖಂಡರ ಸಭೆಯಲ್ಲಿ ಒಳ ಮೀಸಲು( Internal reservation) ಜಾರಿಗೆ ಬದ್ಧ ಅಕ್ಟೋಬರ್ 24ರಂದು ನಡೆಯುವ ಸಚಿವ ಸಂಪುಟದಲ್ಲಿ ಚರ್ಚಿಸಿ ತಿರ್ಮಾನ ತೆಗೆದುಕೊಳ್ಳುವೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಸುಮಾರು 20 ವರ್ಷಗಳ ಹಿಂದೆ ನ್ಯಾ.ಸದಾಶಿವ ಆಯೋಗದ ವರದಿ ಕುರಿತು ಪರ ಹಾಗೂ ವಿರೋಧ ಇರುವುದು ಮುಖ್ಯಮಂತ್ರಿಗಳಿಗೆ ತಿಳಿದಿರುವ ವಿಷಯವಾಗಿದೆ.
ಇದು ರಾಜಕೀಯ ಷಡ್ಯಂತ್ರ :
ಸುಪ್ರೀಂ ಕೋರ್ಟ್ ತೀರ್ಪಿನಂತಯೆ ಪರಿಶಿಷ್ಟ ಜಾತಿಯಲ್ಲಿ (Internal reservation) ಒಳ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂಬುದು ಕರ್ನಾಟಕವಲ್ಲದೆ ದೇಶದ ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಒಳಗಿನ ಮೀಸಲಾತಿಗೆ ಹೊಸ ವ್ಯವಸ್ಥೆ ಕಲ್ಪಿಸುತ್ತಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಟ್ಟಿರುವಂತಹ ಸಂವಿಧಾನಕ್ಕೆ ದಕ್ಕೆ ತರುವಂತಾಗಿದೆ. ಮೀಸಲಾತಿ ಆದೇಶ ವಿರೋಧಿಸುವ ಹಾಗೂ ದಲಿತರನ್ನು ವಿಭಜಿಸುವ ಕಾರ್ಯ ತಂತ್ರವಾಗಿದೆ ಎಂದು ಮೀಸಲಾತಿ ವಿಷಯವಾಗಿ ದಲಿತರನ್ನು ತಮ್ಮೊಳಗೆ ಬಡಿದಾಡಿಕೊಳ್ಳುವಂತೆ ಮಾಡಿದ ರಾಜಕೀಯ ಷಡ್ಯಂತ್ರವಾಗಿದೆ. ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ಮೀಸಲಾತಿ ಸಮರ್ಪಕವಾಗಿ ಜಾರಿಯಾಗದಂತೆ ಮಾಡುವ ಮೂಲಕ ಅಂತಿಮವಾಗಿ ಅದನ್ನು ತೆಗೆದು ಹಾಕುವ ಗುಪ್ತ ಕಾರ್ಯಸೂಚಿಯಾಗಿದೆ.
99 ಸಮುದಾಯಕ್ಕೆ ಅನ್ಯಾಯ :
ಒಳ ಮೀಸಲಾತಿ ಜಾರಿಗೆ ತಂದರೆ ಇನ್ನುಳಿದ 99 ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಜಾರಿಯಾದರೆ 99 ಸಮುದಾಯಗಳ ಮುಖಂಡರು ಹಾಗೂ ಸಂಘಟನೆಗಳು ಒಗ್ಗೂಡಿ ಮುಂದಿನ ದಿನಮಾನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹೋರಾಡಬೇಕಾಗುತ್ತಿದೆ.
ಪರಿಶಿಷ್ಟ ಜಾತಿಯಲ್ಲಿರುವ ಎಲ್ಲಾ ಸಮುದಾಯಗಳ ಜನಸಂಖ್ಯವಾರು ಸಮರ್ಪಕವಾಗಿ ಜನಗಣತಿಯಾಗಬೇಕು. ಪರಿಶಿಷ್ಟ ಜಾತಿಯಲ್ಲಿರುವ ಎಲ್ಲಾ ಸಮುದಾಯಗಳ ಶೈಕ್ಷಣಿಕ, ಆರ್ಥಿಕ, ಸಮಾಜಿಕ, ಹಾಗೂ ಔದ್ಯೋಗಿಕ ಇವುಗಳ ಆಧಾರದ ಮೇಲೆ ನಿರ್ಣಯ ತೆಗೆದುಕೊಳ್ಳಬೇಕು. ಒಳ ಮೀಸಲಾತಿಯನ್ನು ಯಾವುದೇ ಜಾತಿ, ಪಕ್ಷಬೇದ ಭಾವ ಮಾಡದೇ ಎಲ್ಲಾ ಸಮುದಾಯದವರಿಗೂ ಸಮಪರ್ಕವಾಗಿ ನ್ಯಾಯ ಸಿಗುವಂತೆ ರಚನೆ ಮಾಡಬೇಕು ಯಾವುದೇ ಒಂದೆರಡು ಸಮುದಾಯಗಳ ಎತ್ತಿ ಹಿಡಿಯುವ ಕೆಲಸ ಮಾಡದೇ ಎಲ್ಲಾ ಸಮುದಾಯಗಳನ್ನು ಸಮಾನಾಗಿ ಕಾಣಬೇಕು ಎಂದು ಆಗ್ರಹಿಸಿದರು.
ಈ ವೇಳೆ ಆಲ್ ಇಂಡಿಯಾ ಬಂಜಾರ್ ಸೇವಾ ಸಂಘದ ರಾಜ್ಯ ಕೋಶಾಧ್ಯಕ್ಷ ಜೀವಲೆಪ್ಪ ನಾಯ್ಕ, ಜಿಲ್ಲಾಧ್ಯಕ್ಷ ನಾರಾಯಣಪ್ಪ ನಾಯ್ಕ, ತಾಲೂಕಾಧ್ಯಕ್ಷ ಲಾಲಪ್ಪ ರಾಠೋಡ್, ಭೋವಿ ಸಮಾಜದ ಅಧ್ಯಕ್ಷ ಭೀಮಣ್ಣ ಹಿರೇಮನಿ, ದೇವರೆಡ್ಡಿ, ಡಾ.ನೀಲಪ್ಪ ಪವಾರ್, ನಾಗರೆಡ್ಡಿ ಈಚನಾಳ, ಶಂಕರ್ ಪವಾರ್, ನೀಲೇಶ ಪವಾರ್, ವಿರೇಶ ಭೋವಿ ಸೇರಿದಂತೆ ಇನ್ನಿತರಿದ್ದರು.