suddiduniya.com

Internal Reservation : ವೈಜ್ಞಾನಿಕ ಅಧ್ಯಯನದ ಮೂಲಕ ಒಳಮೀಸಲಾತಿ ಜಾರಿ ಮಾಡಲಿ

Internal Reservation

ಲಿಂಗಸುಗೂರು : ಅವೈಜ್ಞಾನಿಕವಾದ ಸದಾಶಿವ ಆಯೋಗದ ವರದಿಯನ್ನು ತಿರಸ್ಕಾರ ಮಾಡಿ, ಮತ್ತೊಮ್ಮೆ ಪಾರದರ್ಶಕವಾಗಿ ವೈಜ್ಞಾನಿಕ ವರದಿ ಸಿದ್ಧಪಡಿಸಿ ಪರಿಶಿಷ್ಟ ಜಾತಿಗಳ ಯಾವುದೇ ಜಾತಿಗಳಿಗೂ ಅನ್ಯಾಯವಾಗದಂತೆ ( Internal Reservation )ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಗೋರ್ ಸೇನಾ ಸಂಘಟನೆಯ ಪದಾಧಿಕಾರಿಗಳು ಸಹಾಯಕ ಆಯುಕ್ತರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Internal Reservation
Internal Reservation

ರಾಜ್ಯದಲ್ಲಿ 3500 ತಾಂಡಗಳು ಇದ್ದು, ಅವುಗಳ ಆರ್ಥಿಕ, ಸಮಾಜಿಕ, ಶೈಕ್ಷಣಿಕವಾಗಿ ಮತ್ತು ವಾಸ್ತವಾಗಿ ತಾಂಡಗಳಿಗೆ ತೆರಳಿ ಅಧ್ಯಯನ ಮಾಡದೇ ತಮ್ಮ ಮನಬಂದತೆ ವರದಿ ಸಿದ್ಧಪಡಿಸಿದ ಸದಾಶಿವ ಆಯೋಗದ (Internal Reservation )ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು ಎಲ್ಲರನ್ನು ಸಮಾನವಾಗಿ ಕಾಣುವ ದೃಷ್ಠಿಯಿಂದ ಹೆಜ್ಜೆ ಇಡಬೇಕು.

ಅಕ್ಟೋಬರ್ 19ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮುಖಂಡರ ಸಭೆಯಲ್ಲಿ Internal Reservation ಒಳ ಮೀಸಲು ಜಾರಿಗೆ ಬದ್ಧ ಅಕ್ಟೋಬರ್ 24ರಂದು ನಡೆಯುವ ಸಚಿವ ಸಂಪುಟದಲ್ಲಿ ಚರ್ಚಿಸಿ ತಿರ್ಮಾನ ತೆಗೆದುಕೊಳ್ಳುವೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಸುಮಾರು 20 ವರ್ಷಗಳ ಹಿಂದೆ ನ್ಯಾ.ಸದಾಶಿವ ಆಯೋಗದ ವರದಿ ಕುರಿತು ಪರ ಹಾಗೂ ವಿರೋಧ ಇರುವುದು ಮುಖ್ಯಮಂತ್ರಿಗಳಿಗೆ ತಿಳಿದಿರುವ ವಿಷಯವಾಗಿದೆ.

ಸುಪ್ರೀಂ ಕೋರ್ಟ್ ತೀರ್ಪಿನಂತಯೆ ಪರಿಶಿಷ್ಟ ಜಾತಿಯಲ್ಲಿ ( Internal Reservation) ಒಳ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂಬುದು ಕರ್ನಾಟಕವಲ್ಲದೆ ದೇಶದ ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಒಳಗಿನ ಮೀಸಲಾತಿಗೆ ಹೊಸ ವ್ಯವಸ್ಥೆ ಕಲ್ಪಿಸುತ್ತಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಟ್ಟಿರುವಂತಹ ಸಂವಿಧಾನಕ್ಕೆ ದಕ್ಕೆ ತರುವಂತಾಗಿದೆ. ಮೀಸಲಾತಿ ಆದೇಶ ವಿರೋಧಿಸುವ ಹಾಗೂ ದಲಿತರನ್ನು ವಿಭಜಿಸುವ ಕಾರ್ಯ ತಂತ್ರವಾಗಿದೆ ಎಂದು ಮೀಸಲಾತಿ ವಿಷಯವಾಗಿ ದಲಿತರನ್ನು ತಮ್ಮೊಳಗೆ ಬಡಿದಾಡಿಕೊಳ್ಳುವಂತೆ ಮಾಡಿದ ರಾಜಕೀಯ ಷಡ್ಯಂತ್ರವಾಗಿದೆ. ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ಮೀಸಲಾತಿ ಸಮರ್ಪಕವಾಗಿ ಜಾರಿಯಾಗದಂತೆ ಮಾಡುವ ಮೂಲಕ ಅಂತಿಮವಾಗಿ ಅದನ್ನು ತೆಗೆದು ಹಾಕುವ ಗುಪ್ತ ಕಾರ್ಯಸೂಚಿಯಾಗಿದೆ.

ಒಳ ಮೀಸಲಾತಿ (Internal Reservation )ಜಾರಿಗೆ ತಂದರೆ ಇನ್ನುಳಿದ 99 ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಜಾರಿಯಾದರೆ 99 ಸಮುದಾಯಗಳ ಮುಖಂಡರು ಹಾಗೂ ಸಂಘಟನೆಗಳು ಒಗ್ಗೂಡಿ ಮುಂದಿನ ದಿನಮಾನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹೋರಾಡಬೇಕಾಗುತ್ತಿದೆ.

101 ಸಮುದಾಯಗಳ ಭಾವನೆಗಳಿಗೆ ದಕ್ಕೆ :

ಪರಿಶಿಷ್ಟ ಜಾತಿಯಲ್ಲಿ 101 ಸಮುದಾಯಗಳ ಭಾವನೆಗಳಿಗೆ ದಕ್ಕೆಯಾಗುತ್ತಿರುವ ಸಂದರ್ಭದಲ್ಲಿ ಈ ಸಮುದಾಯಗಳ ಪರ ಕೆಲಸ ಮಾಡಲು ಮುಖ್ಯಮಂತ್ರಿಗಳು ಮುಂದಾಗಬೇಕೆಂದರು.

ಪರಿಶಿಷ್ಟ ಜಾತಿಯಲ್ಲಿರುವ ಎಲ್ಲಾ ಸಮುದಾಯಗಳ ಜನಸಂಖ್ಯವಾರು ಸಮರ್ಪಕವಾಗಿ ಜನಗಣತಿಯಾಗಬೇಕು. ಪರಿಶಿಷ್ಟ ಜಾತಿಯಲ್ಲಿರುವ ಎಲ್ಲಾ ಸಮುದಾಯಗಳ ಶೈಕ್ಷಣಿಕ, ಆರ್ಥಿಕ, ಸಮಾಜಿಕ, ಹಾಗೂ ಔದ್ಯೋಗಿಕ ಇವುಗಳ ಆಧಾರದ ಮೇಲೆ ನಿರ್ಣಯ ತೆಗೆದುಕೊಳ್ಳಬೇಕು.( Internal Reservation )ಒಳ ಮೀಸಲಾತಿಯನ್ನು ಯಾವುದೇ ಜಾತಿ, ಪಕ್ಷಬೇದ ಭಾವ ಮಾಡದೇ ಎಲ್ಲಾ ಸಮುದಾಯದವರಿಗೂ ಸಮಪರ್ಕವಾಗಿ ನ್ಯಾಯ ಸಿಗುವಂತೆ ರಚನೆ ಮಾಡಬೇಕು ಯಾವುದೇ ಒಂದೆರಡು ಸಮುದಾಯಗಳ ಎತ್ತಿ ಹಿಡಿಯುವ ಕೆಲಸ ಮಾಡದೇ ಎಲ್ಲಾ ಸಮುದಾಯಗಳನ್ನು ಸಮಾನಾಗಿ ಕಾಣಬೇಕು ಎಂದು ಆಗ್ರಹಿಸಿದರು.

ರಾಜ್ಯದ 3500 ತಾಂಡಗಳಲ್ಲಿ ಗೋರ್ ಬಂಜಾರ್ ಸಮುದಾಯದ ಆರಾಧ್ಯ ದೈವಗಳಾದ ಮಾತಾ ಮರಿಯಮ್ಮ, ಸಂತ ಸೇವಾಲಾಲ ಮಹಾರಾಜರ ದೇವಸ್ಥಾನಗಳಲ್ಲಿ  ವಂಶಪಾರಂಪರ್ಯವಾಗಿ ಪೂಜಾ ದೈವ ಕಾರ್ಯಗಳನ್ನು ಮಾಡುತ್ತಿರುವ ಪೂಜಾರಿಗಳಿಗೆ ವೇತನ ಇಲ್ಲದೇ ಕಷ್ಟಕರ ಜೀವನ ನಡೆಸುತ್ತಿದ್ದಾರೆ ಈಗಾಗಿ ಪೂಜಾರಿಗಳಿಗೆ ಮುಜರಾಯಿ ಇಲಾಖೆಗಳಿಗೆ ಮಾಸಿಕ ವೇತನ ನೀಡಬೇಕು.

ಗೋರ್ ಸೇನಾ ಸಂಘಟನೆಯ ತಾಲೂಕಾಧ್ಯಕ್ಷ ಥಾವರೆಪ್ಪ ಜಾದವ್‍, ಸಮಾಜದ ಮುಖಂಡರಾದ ವೆಂಕಟೇಶ ರಾಠೋಡ್, ಕೃಷ್ಣ ಜಾಧವ್‍, ನೀಲಪ್ಪ  ಪವಾರ್, ಕೃಷ್ಣ ಪವಾರ್, ಸೀತಾರಾಮ್, ಹನುಮಂತ ರಾಠೋಡ್‍, ವಿಠಲ್ ಪವಾರ್, ಲಕ್ಷ್ಮೀಣ ರಾಠೋಡ್‍, ಲೋಕೇಶ ವಕೀಲರು, ಉಪೇಂದ್ರ ವಕೀಲರು, ಹೂಬಣ್ಣ ಜಾಧವ್, ನೀಲೇಶ ಪವಾರ್ ಸೇರಿದಂತೆ ಅನೇಕರಿದ್ದರು.

ಹಟ್ಟಿ ಸಮೀಪದ ಕಡ್ಡೋಣ ತವಗ ಗ್ರಾಮಗಳಿಗೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಬಸ್ ವ್ಯವಸ್ಥೆ ಕಲ್ಪಿಸದೇ ತಾಲೂಕು ಆಡಳಿತ ಮತ್ತು ಸಾರಿಗೆ ಇಲಾಖೆ ದ್ರೋಹ ಬಗೆದಿದ್ದವು. ಆದರೆ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ನಿಂದ ನಡೆಸಿದ ಸುಧೀರ್ಘ ಹೋರಾಟಕ್ಕೆ ಮಣಿದು ಸಾರಿಗೆ ಇಲಾಖೆ ಬಸ್ ಬಿಡಲು ಆರಂಭಿಸಿತ್ತು. 

ಆದರೆ ಬಸ್ ಗಳು ಶಾಲಾ ಕಾಲೇಜುಗಳ ಸಮಯಕ್ಕೆ ಬಿಡದೇ ಕಾಟಚಾರಕ್ಕೆ ಮಾತ್ರ ಬಸ್ ಗಳು ಬಿಡಲಾಗಿತ್ತು. ವಿದ್ಯಾಭ್ಯಾಸಕ್ಕಾಗಿ ಹಟ್ಟಿ ಹಾಗೂ ಲಿಂಗಸ್ಗೂರು ಪಟ್ಟಣಗಳಿಗೆ  ವಿದ್ಯಾರ್ಥಿಗಳು ಪ್ರತಿನಿತ್ಯ ಬರುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ಹಾಜರಾಗಲು ಬಸ್ ಗಳ ವ್ಯವಸ್ಥೆ ಇಲ್ಲದೇ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.  ಈ ಬಗ್ಗೆ ಹಲವು ಬಾರಿ ಎಸ್ಎಫ್ಐ ಸಂಘಟನೆಯಿಂದ  ತಮಗೆ ತಿಳಿಸಿದರೂ ಸಮಸ್ಯೆ ಪರಿಹರಿಸುವಲ್ಲಿ ತಾವುಗಳು ಸಂಪೂರ್ಣವಾಗಿ ವಿಫಲರಾಗಿದ್ದೀರಿ.  

 ಈಗಲಾದರೂ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಜರಾಗಲು ಅನುಕೂಲವಾಗುವಂತೆ ಶಾಲಾ-ಕಾಲೇಜುಗಳ ಸಮಯಕ್ಕೆ  ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸಬೇಕು. ಅದಾಗಿಯೂ ತಾವು ನಿರ್ಲಕ್ಷ ವಹಿಸಿ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾದಲ್ಲಿ  ಬಸ್ ಡಿಪೋ ಮುಂದೆ ಧರಣಿ ನಡೆಸಲಾಗುವುದು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ಎಚ್ಚರಿಸುತ್ತದೆ.

ಬೆಳಗ್ಗೆ ತವಗದಿಂದ ಹಟ್ಟಿಗೆ 6 ಗಂಟೆಗೆ ಬಿಡಬೇಕು, ಬೆಳಗ್ಗೆ ಕಾಲೇಜು ಮುಗಿದಮೇಲೆ ಅಂದರೆ 11: 30 ಕ್ಕೆ ಹಟ್ಟಿಯಿಂದ ತವಗ ಗ್ರಾಮಕ್ಕೆ ಬಸ್ ಹೊರಡಬೇಕು. ಪ್ರತಿನಿತ್ಯ ತಪ್ಪದೇ ಬಸ್ ಗ್ರಾಮಕ್ಕೆ ಬರುವಂತೆ ನಿಗಾ ವಹಿಸಬೇಕು. 

ಈ ಸಂದರ್ಭಗಳಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ತಿಮ್ಮಣ್ಣ ಯತಗಲ್, ಅಮರೇಶ, ಅಭಿಶೇಕ್, ಮಹಾದೇವ, ಸಂಗಮೇಶ,  ಬಸವರಾಜ್, ನಿಂಗಪ್ಪ ಎಂ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಲಿಂಗಸುಗೂರು ತಾಲೂಕಿನ ವಿಶೇಷಚೇತನರಿಗೆ ಮೀಸಲಿರುವ ಶೇ.10 ರಷ್ಟು ಅನುದಾನವನ್ನು ವಿಶೇಷಚೇತನರಿಗೆ ತ್ರಿಚಕ್ರ ವಾಹನ ಸೇರಿದಂತೆ ವಿವಿಧ ಪರಿಕರಗಳನ್ನು ವಿತರಣೆ ಮಾಡುವಂತೆ ಆಗ್ರಹಿಸಿ ಅಕ್ಸೆಸಬಿಲಿಟಿ ಟಾಸ್ಕ್ ಪೋಸ೯ ಹಾಗೂ ಆರ್ ಪಿ ಡಿ ಟಾಸ್ಕ್ ಪೋಸ೯ ಸಮಿತಿ ಪದಾಧಿಕಾರಿಗಳ ಶಾಸಕ ಮಾನಪ್ಪ ವಜ್ಜಲ್‍ ಪರವಾಗಿ ಅವರ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಿದರು.

ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿಕಲಚೇತನರಿಗೆ ಮೀಸಲಿರುವ ಶೇ 10 ರಷ್ಟರ ಅನುದಾನದಲ್ಲಿ ತ್ರಿಚಕ್ರ ವಾಹನವನ್ನು ಹೊರತು ಪಡಿಸಿ ಸಕಾ೯ರದ ಆದೇಶದನ್ವಯ 21 ಬಗೆಯ ವಿಕಲಚೇತನರಿಗೆ ಅವಶ್ಯಕತೆಯಿರುವ ವಿವಿಧ ಬಗೆಯ ಸಾಧನ ಸಲಕರಣೆಗಳನ್ನು ಒದಗಿಸಬೇಕು, ಶ್ರವಣದೋಷರು, ಬುದ್ಧಿ ಮಾಂಧ್ಯಮ, ಸೇರಿದಂತೆ 20 ಬಗೆಯ ವಿಶೇಷಚೇಥನರು ಶಾಸಕರ ಅನುದಾನದಿಂದ ವಂಚಿತವಾಗಿದ್ದಾರೆ. ಕೂಡಲೇ ತಮ್ಮ ಅನುದಾನದಲ್ಲಿ ವಿಶೇಷಚೇತನರಿಗೆ ಸಲಕರಣೆ ವಿತರಿಸಲು ಮುಂದಾಗಬೇಕು ಎಂದು ಆಗ್ರಹಸಿದರು.

ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಕಾರ್ಯದರ್ಶಿಗಳಾದ ಸುರೇಶ ಭಂಡಾರಿ ಮುದಗಲ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆಸ್ಕಿಹಾಳ ನಾಗರಾಜ್. ಸದಸ್ಯರಾದ ಹುಸೇನಬಾಷಾ. ಶಿವುಕುಮಾರ. ದುರುಗಮ್ಮ. ಸೇರಿದಂತೆ ವಿಕಲಚೇತನರು ಹಾಗೂ ಪೋಷಕರು ಉಪಸ್ಥಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!