ಎಸಿ ಕಚೇರಿ ಎದುರು ಕೆಪಿಆರ್‍ಎಸ್ ಪ್ರತಿಭಟನೆ:
ಲಿಂಗಸುಗೂರು : ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್ ಯೋಜನೆ(JJM WORKS) ಕಾಮಗಾರಿ ಅರೆಬರೆಯಾಗಿದ್ದು, ಕಾಮಗಾರಿಗಳಿಗಾಗಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಕೂಡಲೇ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಸಂಚಾಲಕ ಸಮಿತಿ ಹಾಗೂ ಜಂಟಿ ಸಂಘಟನೆಗಳಿ0ದ ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮೂಲಸೌಕರ್ಯ ಒದಗಿಸಿ :
ಸ್ವಾತಂತ್ರ ಬಂದು 78 ವರ್ಷಗಳು ಕಳೆದರೂ ಕುಡಿಯುವ ನೀರು, ರಸ್ತೆ, ಶೌಚಾಲಯ, ವಿದ್ಯುತ್ ಸೇರಿದಂತೆ ಕನಿಷ್ಟ ಮೂಲ ಸೌಕರ್ಯಗಳು ಇಲ್ಲದಂತಾಗಿದೆ ಇನ್ನೂಳಿದ ಗ್ರಾಮ ಪಂಚಾಯತಿಯ ಗೆಜ್ಜಲಗಟ್ಟಾ ಗ್ರಾಮ ಪಂಚಾಯತ ವ್ಯಾಪ್ತಿಯ ವೀರಾಪೂರ ಗ್ರಾಮಕ್ಕೆ ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳಿಗೆ ರುದ್ರಭೂಮಿ ಕೂಡಾ ಇರುವುದಿಲ್ಲ. ಜನಪ್ರತಿನಿಧಿಗಳಾದವರು ವರ್ಷಕ್ಕೊಮ್ಮೆ ಮತ ಪಡೆದು ಹೋದವರು ಮತ್ತೊಂದು ಚುನಾವಣೆಗೆ ಮಾತ್ರ ಬರುತ್ತಾರೆ. ಜನತೆಯ ಗೋಳು ಕೇಳುವುವರಿಲ್ಲದಂತಾಗಿದೆ. (JJM WORKS)
ಜನಪ್ರತಿನಿಧಿಗಳು ನಿರ್ಲಕ್ಷ್ಯ :
ತಾಲೂಕಿನ ಕೃಷಿ ಉಪನಿರ್ದೇಶಕರ ಕಚೇರಿ, ಕೆಪಿಟಿಸಿಎಲ್ ಸೇರಿದಂತೆ ಇತರೆ ಕಚೇರಿಗಳು ಸಿಂಧನೂರು ತಾಲೂಕಿಗೆ ವರ್ಗಾವಣೆ ಯಾದರೂ ಪ್ರಶ್ನೆ ಮಾಡದೇ ಮೌನವಾಗಿದ್ದಾರೆ. ರೈತ ಕೂಲಿ ಕಾರ್ಮಿಕರಿಗೆ ಸರಿಯಾಗಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಕೊಡುವಲ್ಲಿ ಗ್ರಾಮ ಪಂಚಾಯತ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ.
ತಾಲೂಕಿನ ಗುರುಗುಂಟಾ ಹೋಬಳಿ ಹೆಚ್ಚು ಗ್ರಾಮಗಳು ಇರುವುದರಿಂದ ಬಹುತೇಕ ಗ್ರಾಮಗಳ ರೈತರಿಗೆ ಸರಿಯಾಗಿ ಕೃಷಿ ಉತ್ಪನ್ನಗಳು ರೈತರಿಗೆ ಕೈಗೆ ಸಿಗಲಾರತಂದಾಗಿದೆ. ಕಾರಣ ಉಪ ಕೃಷಿ ಇಲಾಖೆ ಹೋಬಳಿಯನ್ನು ಹಟ್ಟಿ ಅಥವಾ ಆನ್ವರಿ ಗ್ರಾಮ ಪಂಚಾಯತ್ ಗಳಿಗೆ ವರ್ಗಾವಣೆ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ರುದ್ರಭೂಮಿ ಮಂಜೂರು ಮಾಡಿ :
ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಾಪೂರು ಗ್ರಾಮದಲ್ಲಿ ಎಸ್ಸಿ ಮತ್ತು ಎಸ್ಟಿ ಜನರಿಗೆ ರುದ್ರಭೂಮಿ ಒದಗಿಸಿಕೊಡಬೇಕು. ಪಟ್ಟಣ ಪಂಚಾಯತ ಕಾರ್ಯಾಲಯ ಹಟ್ಟಿ ಮುಖ್ಯಾಧಿಕಾರಿಗಳಿಗೆ ಸುಮಾರು 2 ವರ್ಷಗಳ ಹಿಂದೆ ಧರಣಿ ಮಾಡಿ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೇ ಸರಿಯಾದ ಕೆಲಸಗಳು ಮಾಡಿರುವುದಿಲ್ಲ. ಪಟ್ಟಣ ಪಂಚಾಯಿತಿ ಆಡಳಿತದ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಕಡೊಣಿ ತವಗ ರೋಡಲಬಂಡ ಈ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಹಿಂದೆ ಹಲವು ವರ್ಷಗಳ ಹೋರಾಟಕ್ಕೆ ಯಾವುದೇ ಸ್ಪಂದನೆ ನೀಡಿರುವುದಿಲ್ಲ. ಸರಿಯಾದ ರಸ್ತೆ ನೀರು ವಿದ್ಯುತ್ತು ಸಂಚಾರ ಇನ್ನಿತರ ಬೇಡಿಕೆಗಳ ಈಡೇರಿಕೆ ಆಗಿರುವುದಿಲ್ಲ. ಆ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ವೀರಾಪೂರು ಗ್ರಾಮದ ಅಂಗನವಾಡಿ ಕೇಂದ್ರ 1 ರ ಕಟ್ಟಡ ಡೆಮಾಲಿಶ್ ಮಾಡಿದ್ದು, ಹೊಸ ಕಟ್ಟಡ ಮಂಜೂರು ಮಾಡಬೇಕು.
ನಾಗಲಾಪುರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಶೀಘ್ರದಲ್ಲಿ ಪ್ರಾರಂಭಿಸಬೇಕು. ಅತಿವೃಷ್ಠಿಯಿಂದ ಮನೆ ಹಾನಿಯಾಗಿ ಎಲ್ಲಾ ವರದಿ ಕೊಟ್ಟರು 4,000 ರೂಪಾಯಿ ಮಾತ್ರ ಮಂಜೂರಾಗಿದ್ದು, ಇದರ ಬಗ್ಗೆ ಪರೀಶೀಲನೆ ಮಾಡಿ ಹಾನಿಯಾದ ಮನೆಗೆ ಸೂಕ್ತ ಪರಿಹಾರ ನೀಡಬೇಕು. ನಾಗಲಾಪೂರ ಗ್ರಾಮದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಕ್ರಮ ಜರುಗಿಸಬೇಕು. ನಾಗಲಾಪೂರ ಗ್ರಾಮದಲ್ಲಿ ರುದ್ರಭೂಮಿಯು ನಾಲ್ಕು ಐದು ಕಿಲೋ ಮೀಟರ್ ದೂರವಿದ್ದು ಗ್ರಾಮದ ಹತ್ತಿರ ಇರುವ ಯಾವುದಾದರೂ ಭೂಮಿ ಖರೀದಿ ಮಾಡಿ ರುದ್ರಭೂಮಿಯನ್ನು ಮಂಜೂರು ಮಾಡಿಕೊಡಬೇಕು.
ಮುದಗಲ್ ಪಟ್ಟಣದ ಜನತಾ ಮನೆ ನಿವೇಶನ ನೆನೆಗುದಿಗೆ ಬಿದ್ದಿದ್ದು ಇದನ್ನು ಶೀವುದಲ್ಲಿ ಕೈಗೊಳ್ಳಬೇಕು. ಮುದಗಲ್ಲ ಪಟ್ಟಣದ ಚರಂಡಿ ನೀರು ನೇರವಾಗಿ ಕೆರೆಗೆ ಸಂಗ್ರಹವಾಗುತ್ತಿದ್ದು, ಅದನ್ನು ತಡೆಹಿಡಿದು ಸ್ವಚ್ಛಗೊಳಿಸಬೇಕು. ಸರ್ವೆ ನಂಬರ್ 23ರ ಸರ್ಕಾರಿ ಜಮೀನು ಶೀಲಹಳ್ಳಿ ಗ್ರಾಮಕ್ಕೆ 200 ಎಕರೆ ನಕಾಶ ಮಾಡಿಕೊಟ್ಟಿದ್ದು, ಅದರಲ್ಲಿ ಹಕ್ಕೊತ್ತಾಯ ಫಲಾನುಭವಿಗಳಿಗೆ ನಕಾಶೆ ಮಾಡಿಕೊಡಬೇಕು.
ಯರಡೋಣ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಬಗರ ಹುಕುಂ ಸಾಗುವಳಿ ಮಾಡಿ ಅರ್ಜಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೇ ಸಾಗುವಳಿ ಚೀಟಿ ಕೊಟ್ಟಿರುವುದಿಲ್ಲ, ಕೂಡಲೇ ನೀಡಬೇಕು.ತಾಲೂಕಿನ ವಿಕಲಚೇತನರ ಶೇ.5 ರಷ್ಟು ಅನುದಾನವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಹಟ್ಟಿಯಲ್ಲಿ ರೈತ ಸಂಪರ್ಕ ಕೇಂದ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ತಾಲೂಕಿನ ಕೃಷಿ ಉಪ ನಿರ್ದೇಶಕರ ಕಛೇರಿ 2 ವರ್ಗಾವಣೆಯನ್ನು ರದ್ದುಪಡಿಸಬೇಕು. ತಾಲೂಕಿನ ಆಶ್ರಯ ಯೋಜನೆಡಿ ಮನೆ ಇಲ್ಲದವರಿಗೆ ನಿವೇಶನ ರಹಿತ ಮನೆಗಳನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಈ ವೇಳೆ ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಬಸವಂತ್ರಾಯಗೌಡ ರಮೇಶ ವೀರಾಪೂರು, ಕೆಪಿಆರ್‌ಎಸ್ ತಾಲೂಕಾಧ್ಯಕ್ಷ ಹನುಮಂತ ಪಲಕನಮರಡಿ, ನಿಂಗಪ್ಪ ವೀರಾಪೂರ, ಆಂಜನೇಯ ನಾಗಲಾಪೂರ,ಹನುಮಂತಗೌಡ, ಹನುಮಂತ ಛಲವಾದಿ, ಶಿವಪ್ಪ ವ್ಯಾಕರನಾಳ ಹಾಗೂ ಇನ್ನಿತರಿದ್ದರು.