suddiduniya.com

ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು

ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು

( LINGASUGUR NEWS ) ಲಿಂಗಸುಗೂರು : ಪತ್ರಕರ್ತರು, ಪತ್ರಿಕೆಗಳು ಸತ್ಯಶೋಧನೆ ಮಾರ್ಗದಲ್ಲಿ( The Fact Finding Path) ನಡೆದರೆ ಮಾತ್ರ ಸಮಾಜದಲ್ಲಿ (Society) ನಡೆಯುವ ಅಸತ್ಯತೆ ಹೊರಬರಲು ಸಾಧ್ಯವಾಗುತ್ತಿದೆ ಈಗಾಗಿ ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.

ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು

ಪಟ್ಟಣದ ಗುರುಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಜಾ ದುನಿಯಾ ಪಾಕ್ಷಿಕ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಮಾಜದ ಅಂಕು ಡೊಂಕು ತಿದ್ದುವಂತಹ ಕೆಲಸ ಮಾಡುವಂತಹ ಪತ್ರಕರ್ತರು ಹಾಗೂ ಪತ್ರಿಕೆಗಳು ಮಾಡುತ್ತಾ ಬಂದಿವೆ. ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು ಈಗಾಗಿ ಸಮಾಜ ತಿದ್ದುವ ಕೆಲಸ ಮಾಡುವಂತಹವರು ಹೆಚ್ಚು ಜವಾಬ್ದಾರಿಯಿಂದ ವೃತ್ತಿಯನ್ನು ನಿರ್ವಹಿಸಿದರೆ ಸಮಾಜ ಸದಾ ಸ್ಮರಿಸುತ್ತದೆ. ಸಮಾಜಕ್ಕೆ ಒಳಿತು ಮಾಡುವ ಶ್ರೇಷ್ಠ ಚಿಂತನೆ ಅತೀ ಮುಖ್ಯವೆಂದರು.

ಪತ್ರಕರ್ತರ ಲೇಖನಿ ಹರಿತ :

ಪತ್ರಕರ್ತರ ಲೇಖನಿ ಹರಿತ ಲೇಖನಿಯಿಂದ ಸಮಾಜದಲ್ಲಿ ನಡೆಯುವ ಆಕ್ರಮ,ಅನ್ಯಾಯ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ತಂತ್ರಜ್ಞಾನ ಬದಲಾದಂತೆ ಪತ್ರಿಕಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಸಾಮಾಜಿಕ ಜಾಲತಾಣಗಳು ಜಾಗೃತರಾಗಿವೆ. ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ನಡುವೆಯೂ ಮುದ್ರಣ ಮಾಧ್ಯಮ ತನ್ನದೇ ಆದ ಚಾಕು ಚಾಕ್ಯತೆ ಉಳಿಸಿಕೊಂಡಿದೆ ಎಂದರು. ಸತ್ಯ ಹೇಳಲು ಧೈರ್ಯಬೇಕು ಅಂತಹ ಶಕ್ತಿ ಪತ್ರಿಕೆಗಳಿಗೆ ಇದೆ. ಸತ್ಯವನ್ನು ಬಿಂಬಿಸಿ ಸಾಮಾಜದ ಸ್ವಾಸ್ಥ ಕಾಪಾಡಬೇಕಾಗಿದೆ. ಸಮಾಜ ಸುಧಾರಣೆ ಸಂತ ಶರಣರು ಎಷ್ಟು ಮುಖ್ಯವೋ ಪತ್ರಕರ್ತರು ಅಷ್ಟೇ ಮುಖ್ಯ ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು ಎಂದರು

ಪತ್ರಿಕೆಗಳಲ್ಲಿ ಚಿಕ್ಕದು ದೊಡ್ಡದು ಎಂಬ ತಾರತಮ್ಯ ಮಾಡದೇ ಸತ್ಯ ಸುದ್ದಿ ಹೊರಬರುವುದು ಮುಖ್ಯವಾಗಿದೆ ಎಂದರು. ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಉದ್ಯಮವಾಗಿ ಬದಲಾಗಿದೆ. ಈಚೆಗೆ ನಾಗರಿಕ ಮಾಧ್ಯಮದ ನಂತರ ಬದಲಾವಣೆ ಜೊತೆ ಸವಾಲುಗಳು ಸಹ ಇವೆ. ದೃಶ್ಯ ಮಾಧ್ಯಮ ಟಿಆರ್‌ಪಿ, ಮುದ್ರಣ ಮಾಧ್ಯಮದವರು ಪ್ರಸರಣದತ್ತ ಗಮನ ನೀಡಬೇಕಾಗಿದೆ. ಅಂತಹ ಸ್ಪರ್ಧಾತ್ಮಕತೆಯ ನಡುವೆಯೂ ಮಾಧ್ಯಮ ಕ್ಷೇತ್ರ ಸಮಾಜಕ್ಕೆ ಸತ್ಯವನ್ನೇ ತಿಳಿಸಬೇಕು. ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು. ಕೆಲವೊಂದು ಮಾಧ್ಯಮಗಳು ಇದ್ದ ವಿಚಾರವನ್ನು ತಿರುಚಿ ಹೇಳುವುದು, ಅಪಪ್ರಚಾರ ಮಾಡುವುದು ಸಮಾಜಕ್ಕೆ ಆಘಾತಕಾರಿ. ಹಾಗಾಗಿ ಮಾಧ್ಯಮ ಕ್ಷೇತ್ರದಲ್ಲಿ ಇರುವರು ಇರುವಂತ ವಿಚಾರವನ್ನು ಪ್ರಚಾರ ಮಾಡಬೇಕು. ಈಗಾಗಿ ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು ಪ್ರಜಾ ದುನಿಯಾ ಪಾಕ್ಷಿಕ ಪತ್ರಿಕೆ ಬಿಡುಗಡೆ
ಖಾದಿ ಗ್ರಾಮೋಧ್ಯೋಗ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಪ್ರಜಾ ದುನಿಯಾ ಪತ್ರಿಕೆ ಬಿಡುಗಡೆಗೊಳಿಸಿದರು

ಪತ್ರಿಕೆ ನಡೆಸುವುದು ಕಷ್ಟದ ಕೆಲಸ :

ಖಾದಿ ಗ್ರಾಮೋಧ್ಯಮ ಮಂಡಳಿ ಅಧ್ಯಕ್ಷ ಹಾಗೂ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಯುವಕ ಅಮರೇಶ ಕಲ್ಲೂರು ಪತ್ರಿಕೆ ನಡೆಸುವ ಸಾಹಸಕ್ಕೆ ಕೈಹಾಕಿರುವುದು ಶಾಘ್ಲನೀಯವಾಗಿದೆ. ಪತ್ರಿಕೆಗಳು ನಡೆಸುವುದು ಕಷ್ಟದ ಕೆಲಸವಾಗಿದೆ. ಇಂದು ಮಾಧ್ಯಮ ಸೂಕ್ಷ್ಮವಾಗಿದೆ ಒಂದಡೆ ರಾಜಕಾರಣ ಹಾಗೂ ಮತ್ತೊಂದಡೆ ಸಮಾಜ ಈ ಎರಡನ್ನು ಸರಿದೂಗಿಸಿಕೊಂಡು ಹೋಗುವ ಜವಬ್ದಾರಿ ಪತ್ರಕರ್ತರ ಮೇಲೆ ಇದೆ. ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಮುದ್ರಣ ಮಾಧ್ಯಮದ ಓದುಗರ ಸಂಖ್ಯೆ ಕುಠಿತವಾಗುತ್ತಿರುವುದು ಕಳವಳಕಾರಿಯಾಗಿದೆ. ಎಲ್ಲೋ ನಡೆದ ಸುದ್ದಿ ತಕ್ಷಣವೇ ನಮ್ಮ ಮೊಬೈಲ್‌ಗೆ ಬಂದು ಬಿಡುತ್ತೆ ಇಷ್ಟು ವೇಗವಾಗಿ ಸಾಮಾಜಿಕ ಜಾಲಾತಾಣ ವೇಗವಾಗಿ ಬೆಳೆಯುತ್ತಿದೆ. ಪತ್ರಿಕೆಗಳು ಆಧುನಿಕತೆಗೆ ತಕ್ಕಂತೆ ಬದಲಾವಣೆಯಾಗುತ್ತಿರುವುದು ಪ್ರಮಾಣಿಕತೆ ಸುದ್ದಿಗಳನ್ನು ನೀಡುವ ಮೂಲಕ ಓದುಗರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಬೇಕಾಗಿದೆ. ರಾಜ್ಯದಲ್ಲಿ ಪತ್ರಕರ್ತರಿಗೆ ಗೌರವ ಇದೆ. ಪತ್ರಕರ್ತರು ಹಾಗೂ ಪತ್ರಿಕೆಗಳು ಜಿಲ್ಲೆಯ ಹಾಗೂ ತಾಲೂಕಿನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಪತ್ರಿಕೆಗಳು ಒಂದೇ ಭಾರಿ ಬೆಳೆವಣಿಗೆ ಯಾಗುವುದಿಲ್ಲ, ಹಂತ ಹಂತವಾಗಿ ಬೆಳೆಯುತ್ತಿವೆ, ಸಾಮಾಜಿಕ ಜಾಲತಾಣ ಹಾಗೂ ಟಿವಿ ಮಾಧ್ಯಮ ಪ್ರಭಾವ ಬೆಳದಂತೆ ಪತ್ರಿಕೆಯ ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಕನಿಷ್ಠ ೮ ಸಾವಿರಕ್ಕೂ ಅಧಿಕ ಮನೆಗಳಿವೆ ಇಲ್ಲಿ ಕನಿಷ್ಠವೆಂದರೂ ಮೂರು ಸಾವಿರ ಪತ್ರಿಕೆಗಳು ಮಾರಾಟವಾಗಬೇಕು, ಆದರೆ ಇಂದಿನ ಯುವ ಪೀಳಿಗೆಗೆ ಪತ್ರಿಕೆಗಳ ಮಹತ್ವ ತಿಳಿಯದಾಗಿದೆ. ಯುವಕರು ಪತ್ರಿಕೆಗಳನ್ನು ಹೆಚ್ಚು ಓದಬೇಕು. ಪತ್ರಿಕೆಗಳನ್ನು ಉಳಿಸಿ ಬೆಳಸಲು ಪತ್ರಿಕೆಗಳನ್ನು ಕೊಂಡು ಓದಬೇಕು. ಪತ್ರಿಕೆಗಳನ್ನು ಉಳಿಸಲು ಪತ್ರಕರ್ತರು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಸಂವಿಧಾನದ ನಾಲ್ಕನೇ ಅಂಗ ಎಂದೇ ಗುರುತಿಸಲ್ಪಡುವ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಪ್ರಬುದ್ಧ ಮತ್ತು ಉತ್ತಮ ಅವಕಾಶ ಹೊಂದಿದವರು ಸಮಾಜವನ್ನು ಸದಾ ಎಚ್ಚರಿಸುವ ಜೊತೆಗೆ ಸೆಳೆಯುವ ಕೆಲಸ ಮಾಡಬೇಕು. ಸಮಾಜ ಚಿಂತನೆ ಮಾಡುವಂತೆ ಮಾಡಬೇಕು. ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು ಜಾತಿ, ಮತ, ಪಂಥ ಎನ್ನದೆ ಎಲ್ಲರೂ ಒಂದೇ ಎಂಬ ಆಶಯದೊಂದಿಗೆ ಮುನ್ನಡೆಯಬೇಕು ಎಂದು ಆಶಿಸಿದರು.

ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರಧಾನ :

ಹೊಸಪೇಟೆಯ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಕ ತಿಮ್ಮಾರೆಡ್ಡಿ ಹೀರಾ, ಕೆಎಂಎಫ್ ಬಿಎಂಸಿ ವ್ಯವಸ್ಥಾಪಕ ಮಂಜುನಾಥ ಅಗಟಗಿ, ನಿವೃತ್ತ ಶಿಕ್ಷಕ ಪೀರಣ್ಣ ತೇಗನೂರು ಅವರಿಗೆ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಸ್ಕಿ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಲವಂತರಾಯಗೌಡ ವಟಗಲ್ ಅವರಿಗೆ ಸೇವಾ ರತ್ನ ಪ್ರಶಸ್ತಿ, ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ದಿಗಂಬರ ಹೇರೂರು, ಡಾ.ಬಸವರಾಜ ಸಾಹುಕಾರ, ಸಿಟಿ ಸ್ಕಾö್ಯನ್ ತಂತ್ರಜ್ಞ ಚಾರ್ಲ್ಸ್ ಕುಮಾರ ಅವರಿಗೆ ವೈದ್ಯಕೀಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಧಕರಿಗೆ ಸನ್ಮಾನ :

ರಾಜ್ಯ ಉತ್ತಮ ವೈದ್ಯ ಪ್ರಶಸ್ತಿ ಪುರಸ್ಕೃತ ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್, ಪ್ರಶಸ್ತಿ ಪುರಸ್ಕೃತ ಶಿವರಾಜ ಕೆಂಭಾವಿ, ಶರಣಯ್ಯ ಪಡೆಯರ್, ಉಪನ್ಯಾಸಕ ಚಂದ್ರಶೇಖರಪ್ಪ ವ್ಯಾಕರನಾಳ, ಚಿತ್ರಕಲಾ ಶಿಕ್ಷಕ ಪರಶುರಾಮ ನಗನೂರು, ಉಪನ್ಯಾಸಕ ಡಾ.ಇಸ್ಮಾಯಿಲ್ ಖಾದ್ರಿ, ಇವರಿಗೆ ಸನ್ಮಾನಿಸಲಾಯಿತು.

ಈ ಸಮಾರಂಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ತಾಲೂಕು ಅಧ್ಯಕ್ಷ ಗುರುರಾಜ ನಾಯಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ರಾಜಗುರು, ಬಿಜೆಪಿ ತಾಲೂಕು ಅಧ್ಯಕ್ಷ ಅಯ್ಯಪ್ಪ ವಕೀಲರು, ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಬಿ.ಮುರಾರಿ, ವೆಂಕಟೇಶ ಗುತ್ತೆದಾರ, ಜಿ.ಪಂ ಮಾಜಿ ಸದಸ್ಯ ಕರಿಯಪ್ಪ, ಪತ್ರಿಕೆ ಸಂಪಾದಕ ಅಮರೇಶ ಕಲ್ಲೂರು ಸೇರಿದಂತೆ ಅನೇಕರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!