suddiduniya.com

ಹಣ್ಣು ಮಾರುತ್ತಿದ್ದ ವಿದ್ಯಾರ್ಥಿ ಸಮಸ್ಯೆಗೆ ಸ್ಪಂದಿಸಿದ ಜಡ್ಜ್

ಹಣ್ಣು ಮಾರುತ್ತಿದ್ದ ವಿದ್ಯಾರ್ಥಿ ಸಮಸ್ಯೆಗೆ ಸ್ಪಂದಿಸಿದ ಜಡ್ಜ್

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಲಿಂಗಸುಗೂರು : ಶಾಲಾ ವಿದ್ಯಾರ್ಥಿಯೊಬ್ಬ(student) ಶಾಲಾ ಸಮವಸ್ತçದಲ್ಲಿ(School uniform) ಶಾಲಾ ಅವಧಿ ಮುಗಿದ ನಂತರ ಬಸ್ ನಿಲ್ದಾಣದಲ್ಲಿ ಹಣ್ಣು ಮಾರುತ್ತಿರುವ ವಿಡಿಯೋ ವೈರಲ್ ಆಗಿದ್ದನ್ನು ಗಮನಿಸಿದ ಪಟ್ಟಣದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ತಕ್ಷಣವೇ ಸ್ಪಂದಿಸಿದ್ದಾರೆ.

ಪಟ್ಟಣದ ಸರ್ಕಾರಿ ಶಾಲೆಯಲ್ಲಿ ೪ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಕುಟಂಬ ನಿರ್ವಹಣೆಗಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ವಿವಿಧ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಕೆಲವರು ವಿಡಿಯೋ ಮಾಡುವ ಜೊತೆಗೆ ಮಗವಿನೊಂದಿಗೆ ಹಲವು ವಿಷಯಗಳು ಕುರಿತು ಚರ್ಚಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಾಕಷ್ಟು ವೈರಲ್ ಆಗಿದ್ದರಿಂದ, ಈ ವಿಡಿಯೋ ನೋಡಿದ ಸ್ಥಳೀಯ ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಉಂಡಿ ಮಂಜುಳಾ ಕೂಡಲೇ ಸ್ಪಂದಿಸಿ ತಕ್ಷಣವೇ ಬಿಇಒ ಹುಂಬಣ್ಣ ರಾಠೋಡ್, ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಕರೆಯಿಸಿಕೊಂಡು ಹಣ್ಣು ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿ ಹಾಗೂ ಆತನ ಪಾಲಕರನ್ನು ಕರೆತರುವಂತೆ ಸೂಚನೆ ನೀಡಿದರು.

ವಿದ್ಯಾರ್ಥಿಗೆ ತಿಳಿ ಹೇಳಿದ ಜಡ್ಜ್ :

ನಂತರ ಬಂದ ವಿದ್ಯಾರ್ಥಿಗೆ ತಿಳಿ ಹೇಳಿ, ೧೪ ವರ್ಷದೊಳಗಿನ ಮಕ್ಕಳನ್ನು ದುಡಿತಕ್ಕೆ ಹಚ್ಚುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ನಿನಗೆ ವಿದ್ಯಾಬ್ಯಾಸಕ್ಕಾಗಿ ಏನೂ ತೊಂದರೆಯಾಗದAತೆ ನಿನ್ನನ್ನು ಹಾಸ್ಟೇಲ್ ಸೇರಿಸಲಾಗುವುದು ಯಾವುದೇ ಕಾರಣಕ್ಕೂ ಮತ್ತೊಮ್ಮೆ ಬಸ್ ನಿಲ್ದಾಣದಲ್ಲಿ ಹಣ್ಣುಗಳನ್ನು ಮಾರಾಟ ಮಾಡಬಾರದು, ಚೆನ್ನಾಗಿ ಓದಿ ಉನ್ನತ ಸ್ಥಾನಕ್ಕೇರಬೇಕು ಎಂದು ವಿದ್ಯಾರ್ಥಿಗೆ ತಿಳಿ ಹೇಳುವ ಜೊತೆ ಹೊಸ ಬಟ್ಟೆ ಕೊಡಿಸಿದರು. ೧೪ ವರ್ಷದೊಳಗಿನ ಮಕ್ಕಳನ್ನು ದುಡಿಯಲು ಹಚ್ಚದೇ ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು, ಇನ್ನೂ ಮುಂದೆ ಮಕ್ಕಳನ್ನು ದುಡಿಸಿಕೊಳ್ಳುವದು, ಕಳಿಸುವುದು ಕಂಡರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ವಿದ್ಯಾರ್ಥಿ ಪಾಲಕರಿಗೆ ಎಚ್ಚರಿಕೆ ನೀಡಿದರು.

ಹಣ್ಣು ಮಾರುತ್ತಿದ್ದ ವಿದ್ಯಾರ್ಥಿ ಸಮಸ್ಯೆಗೆ ಸ್ಪಂದಿಸಿದ ಜಡ್ಜ್

ವಸತಿ ನಿಲಯಕ್ಕೆ ಪ್ರವೇಶ ನೀಡಿ :

ಬಸ್ ನಿಲ್ದಾಣದಲ್ಲಿ ಹಣ್ಣು ಮಾರುತ್ತಿದ್ದ ವಿದ್ಯಾರ್ಥಿಯ ವಸತಿ ನಿಲಯದಲ್ಲಿದ್ದುಕೊಂಡು ವಿದ್ಯಾಬ್ಯಾಸ ಮಾಡುವ ಇಚ್ಛೆಹೊಂದಿದ್ದಾನೆ. ಈಗಾಗಿ ಆತನ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಬಾಲಕರ ವಸತಿ ನಿಲಯಕ್ಕೆ ಪ್ರವೇಶ ನೀಡಬೇಕು ಎಂದು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗೆ ಪತ್ರದ ಮೂಲಕ ಆದೇಶ ನೀಡಿದ್ದಾರೆ. ಹಣ್ಣು ಮಾರುತ್ತಿದ್ದ ವಿದ್ಯಾರ್ಥಿ ಸಮಸ್ಯೆಗೆ ಸ್ಪಂದಿಸಿದ ಜಡ್ಜ್ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!