suddiduniya.com

Kanakadasa’s Jayanti :ಸಮಾನತೆಗೆ ತರುವಲ್ಲಿ ಕನಕದಾಸರ ಕೊಡುಗೆ ಅಪಾರ

Kanakadasa's Jayanti

ಲಿಂಗಸುಗೂರು : ದಾಸಶ್ರೇಷ್ಠ ಕನಕದಾಸರು ತಮ್ಮ ಕೀರ್ತನ ಮೂಲಕ ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಿ ಸಮಾನತೆ ತರುವಲ್ಲಿ ಅವಿರತ ಶ್ರಮ ಪಟ್ಟಿದ್ದರು ಎಂದು ಸಹಾಯಕ ಆಯುಕ್ತ ಬಸಣ್ಣೆಪ್ಪ ಕಲಶೆಟ್ಟಿ ಅಭಿಪ್ರಾಯ ಪಟ್ಟರು.

Kanakadasa’s Jayanti

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ (Kanakadasa’s Jayanti )ಸಮಾರಂಭದಲ್ಲಿ ಮಾತನಾಡಿದ ಅವರು, ಕನಕದಾಸರು ಕರ್ನಾಟಕದ ಶ್ರೇಷ್ಠ ಸಂತರು, ಕನಕದಾಸರು 5 ಸಾಹಿತ್ಯ ರಚನೆ ಮಾಡಿ, 316 ಕೀರ್ತನಗಳನ್ನು ರಚಿಸಿದ್ದರು.ರಾಮಧ್ಯಾನ ಚರಿತೆಯಲ್ಲಿ ಸಮಾಜದಲ್ಲಿ ಸಮಾನತೆ ತರುವ ಕುರಿತು ಸಾಕಷ್ಟು ಅಂಶಗಳನ್ನು ಹೇಳಿದ್ದಾರೆ. ಕನಕದಾಸರು  ಸಾಮಾಜಿಕ, ಸಾಹಿತ್ಯ, ಸಂಗೀತ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಉಡುಪಿಯಲ್ಲಿ ಕನಕದಾಸರಿಗೆ ಶ್ರೀಕೃಷ್ಣನೇ ಪ್ರತ್ಯಕ್ಷವಾಗಿ ದರ್ಶನ ನೀಡಿದ್ದರಿಂದ ಇಂದಿಗೂ ಅವರನ್ನು ಭಕ್ತ ಕನಕದಾಸ ಎನ್ನುತ್ತಿದ್ದಾರೆ. ಕನಕದಾಸರ ಕೀರ್ತನೆಗಳಲ್ಲಿ ಅಂಶಗಳನ್ನು ನಾವೆಲ್ಲರೂ ನಮ್ಮ ಜೀವನ ಅಳವಡಿಸಿಕೊಂಡು ಸನ್ಮಾರ್ಗದತ್ತ ಸಾಗೋಣವೆಂದರು.

ಇದಕ್ಕೂ ಮುನ್ನ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಕನಕದಾಸ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು

ತಾಲೂಕಿನಾದ್ಯಂತ ಸರಕಾರಿ ಕಚೇರಿ, ಗ್ರಾ.ಪಂ ಕಚೇರಿಗಳಲ್ಲಿ ಸೇರಿದಂತೆ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿ, ಬ್ಲಾಕ್ ಕಾಂಗ್ರೆಸ್‍ ಕಚೇರಿಗಳಲ್ಲಿ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು.

ಈ ವೇಳೆ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಉಪಾಧ್ಯಕ್ಷೆ ಶರಣಮ್ಮ ಕೊಡ್ಲಿ, ತಹಶೀಲ್ದಾರ್ ಶಂಶಾಲಂ, ಸಿಪಿಐ ಪುಂಡಲಿಕ್ ಪಟೇದಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಬಿಜೆಪಿ ಅಧ್ಯಕ್ಷ ಅಯ್ಯಪ್ಪ ಮಾಳೂರು, ಮುಖಂಡರಾದ ಮುದಕಪ್ಪ ವಕೀಲರು, ಹುಲ್ಲೇಶ ಸಾಹುಕಾರ, ಶಿವಶಂಕರಗೌಡ,ಹನುಮಂತಪ್ಪ ಕಂದಗಲ್‍, ಮಂಜುನಾಥ ಆನಾಹೊಸೂರು, ಬಾಬಾಖಾಜಿ, ಲಿಂಗಪ್ಪ ಪರಂಗಿ, ಸಂಜೀವಪ್ಪ ಚಲುವಾದಿ, ಸೇರಿದಂತೆ ಅನೇಕರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!