ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ :
ಲಿಂಗಸುಗೂರು : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ(Kannada Sahitya Sammelan) ಅಂಗವಾಗಿ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಕ್ಕೆ (Kannada Ratha) ತಾಲೂಕು ಆಡಳಿತದಿಂದ(Taluk Administration) ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಇದಕ್ಕೂ ಮುನ್ನ ಮಂಗಳವಾರ ಸಂಜೆ ತಾಲೂಕಿನ ಹಿರೇಜಾವೂರು ಗ್ರಾಮದಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಕ್ಕೆ ತಹಶೀಲ್ದಾರ ಶಂಶಾಲಂ ಸಾಂಕೇತಿಕವಾಗಿ ಪುಷ್ಟಾರ್ಪಣೆ ಮಾಡಿ ತಾಲೂಕಿಗೆ ಬರಮಾಡಿಕೊಳ್ಳಲಾಗಿತ್ತು.
ಮಂಡ್ಯದಲ್ಲಿ ಸಮ್ಮೇಳನ :
ಡಿಸೆಂಬರ್20,21 ಹಾಗೂ 22ರಂದು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಸಮ್ಮೇಳನವನ್ನು ವಿಶೇಷವಾಗಿ ಆಚರಣೆ ಮಾಡುವ ಉದ್ದೇಶದಿಂದ (Kannada Jyothi )ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ನಾಡಿನಾದ್ಯಂತ ಸಂಚಾರ ಮಾಡಲಾಗುತ್ತಿದೆ. ನಾಡದೇವತೆ ಭುವನೇಶ್ವರಿ ದೇವಾಲಯ ಇರುವ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭುವನಗಿರಿಯಿಂದ ಕನ್ನಡ ರಥ ಯಾತ್ರೆ ಆರಂಭಗೊಂಡು ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ ಸಮ್ಮೇಳನ ಉದ್ಧಾಟನೆಗೆ ವೇಳೆಗೆ ಮಂಡ್ಯಕ್ಕೆ ತಲುಪುತ್ತದೆ.
ಲಿಂಗಸುಗೂರಿನಲ್ಲಿ ರಥ ಸಂಚಾರ :
ಬುಧವಾರ ಬೆಳಿಗ್ಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ( Kannada Jyothi) ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಕ್ಕೆ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು ಹಾಗೂ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ ಪೂಜೆ ಸಲ್ಲಿಸಿದರು. ಕಾಲೇಜು ಆವರಣದಿಂದ ಪೂರ್ಣಕುಂಬ ಕಳಸದೊಂದಿಗೆ ಪಟ್ಟಣದ ಗಡಿಯಾರ ವೃತ್ತದ ಮೂಲಕ ಬಸ್‍ನಿಲ್ದಾಣ ವೃತ್ತ, ಬಸವಸಾಗರ ವೃತ್ತದ ವರಿಗೆ ರಥ ಸಂಚರಿಸಿ ಪಟ್ಟಣದಿಂದ ನಂತರ ಬಿಳ್ಕೊಡಲಾಯಿತು.
ಹಳ್ಳಿಗಳಲ್ಲಿ ರಥ ಸಂಚಾರ :
ಪಟ್ಟಣದಿಂದ ಸಾಗಿದ( Kannada Jyothi )ಕನ್ನಡ ರಥ ತಾಲೂಕಿನ ಹೊನ್ನಹಳ್ಳಿ, ಯರಡೋಣಾ, ಗುರುಗುಂಟಾದಿಂದ ತಿಂಥಣಿ ಬ್ರಿಜ್‍ವರಿಗೆ ಸಂಚರಿಸಿ ನಂತರ ತಾಲೂಕಿನಿಂದ ಬಿಳ್ಕೊಡಲಾಯಿತು. ಆಯಾ ಗ್ರಾಮಗಳಿಗೆ ಆಗಮಿಸಿದ ರಥಕ್ಕೆ ಆಯಾ ಗ್ರಾಮ ಪಂಚಾಯತಿ ಆಡಳಿತ ವತಿಯಿಂದ ಸ್ವಾಗತಿಸಿ ಬಿಳ್ಕೊಡಲಾಯಿತು.
ಮಂಡ್ಯದಲ್ಲಿ ಡಿಸೆಂಬರ್‍ನಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ನಾಡಿನ ಜನರಿಗೆ ಅರಿವು ಹಾಗೂ ಜಾಗೃತಿ ಮೂಡಿಸಲು ಮತ್ತು ಸಮ್ಮೇಳನಕ್ಕೆ ಆಹ್ವಾನ ನೀಡುವ ಉದ್ದೇಶದಿಂದ ರಥ ನಾಡಿನಾದ್ಯಂತ ಸಂಚಾರ ಮಾಡುತ್ತಿದೆ.
ಈ ವೇಳೆ ತಹಶೀಲ್ದಾರ ಶಂಶಾಲಂ, ಗ್ರೇಡ್ -2ತಹಶೀಲ್ದಾರ ಬಸವರಾಜ ಝಳಕಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ್, ಸಿಪಿಐ ಪುಂಡಲಿಕ ಪಟದಾರ್, ಸಿಡಿಪಿಓ ಎಂ.ಡಿ.ಗೋಕಲ, ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಕುಳಗೇರಿ, ಅಬಕಾರಿ ಉಪ ನಿರೀಕ್ಷಕ ಮಹ್ಮದ್ ಹುಸೇನ್, ಪುರಸಭೆ ಮುಖ್ಯಾಧಿಕಾರಿ ರಡ್ಡಿ ರಾಯನಗೌಡ,ಜೆಸ್ಕಾಂ ಎಇಇ ಬನ್ನೆಪ್ಪ ಕರಿಬಂಟನಾಳ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಮಂಜುನಾಥ್ ಕಾಮಿನ್, ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಗೌಡರ್ ಹಾಗೂ ಕಸಾಪ ಪದಾಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಮುಖಂಡರಾದ ಜಿಲಾನಿ ಪಾಶಾ, ಮಾದೇಶ ಸರ್ಜಾಪುರ, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಅನೇಕರಿದ್ದರು.