ನಮ್ಮ ಕರವೇಯಿಂದ ಕನ್ನಡ ರಾಜ್ಯೋತ್ಸವ :
ಲಿಂಗಸುಗೂರು : ಅನ್ಯ ಭಾಷೆ ಮೇಲಿನ ಅಭಿಮಾನಕ್ಕೆ ಕನ್ನಡ ಭಾಷೆಗೆ ಮೋಸ ಮಾಡದೇ ಕನ್ನಡ ಭಾಷೆಯಲ್ಲಿಯೇ (Kannada Namaphalaka )ನಾಮಫಲಕ ಹಾಕಲು ವರ್ತಕರು ಮುಂದಾಗಬೇಕೆಂದು ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ಪರ ಸಂಘಟನೆಗಳ ಕಾರ್ಯ ಶ್ಲಾಘನೀಯವಾಗಿದೆ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ ಹೊಂದಿದೆ. ಕನ್ನಡ ಭಾಷೆ ಉಳಿವಿಗಾಗಿ ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಎಲ್ಲಾ ತರಹದ ವರ್ತಕರು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ-ವಹಿವಾಟು ಸ್ಥಳಗಳಲ್ಲಿ ಕನ್ನಡ ಭಾಷೆಯಲ್ಲಿ ( Kannada Namaphalaka )ನಾಮಫಲಕ ಹಾಕಬೇಕು ಎಂದರು.
ವಿವಿಧ ಇಲಾಖೆ ಅಧಿಕಾರಿಗಳಿಗೆ ಸನ್ಮಾನ :
ಆರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದ ವೈದ್ಯರು, ತಾಂತ್ರಿಕ ಸಿಬ್ಬಂದಿಗಳು, ನರ್ಸ್, ಪೊಲೀಸ್ ಹಾಗೂ ಪೌರ ಕಾರ್ಮಿಕರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸಿಪಿಐ ಪುಂಡಲಿಕ ಪಟೇದಾರ್, ಸಾರ್ವಜನಿಕ ಆಸ್ಪತ್ರೆ ವೈದ್ಯರಾದ ಡಾ.ದಿಗಂಬರ್, ಡಾ.ಬಸವರಾಜ, ಡಾ.ಇಫ್ರಾನ್, ರಿಯಲ್ ಎಸ್ಟೇಟ್ ಉದ್ದಿಮೆದಾರಾದ ವಿರೇಶ ಜಗವತಿಮಠ, ವೀರಭದ್ರಯ್ಯ ಯಲಗಲದಿನ್ನಿ, ರಮೇಶ ಸಾಲಗುಂದ, ಚಾರ್ಲಸ್, ಹನುಮಯ್ಯರೆಡ್ಡಿ ಮುನ್ನೂರು, ನಮ್ಮ ಕರವೇ ತಾಲೂಕಾಧ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು, ಪ್ರಧಾನ ಕಾರ್ಯದರ್ಶಿ ರಮೇಶ ಗುತ್ತೆದಾರ, ಮೌನೇಶರೆಡ್ಡಿ ಮುನ್ನೂರು ಸೇರಿದಂತೆ ಅನೇಕರಿದ್ದರು.