ಸಾಹಿತ್ಯ ಸಂಭ್ರಮ, ಕಲ್ಯಾಣ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ
ಲಿಂಗಸುಗೂರು : ಕನ್ನಡ ಸಾಹಿತ್ಯಕ್ಕೆ ( Kannaḍa Sahitya )ತನ್ನದೇ ಆದ ಇತಿಹಾಸ ಹೊಂದಿದೆ, ಕನ್ನಡ ಸಾಹಿತ್ಯದಲ್ಲಿ ಕಲೆ, ಬದುಕು ಒಟ್ಟಾರೆ ನಾಡಿನ ಸಾಂಸ್ಕೃತಿಕ ಜಗತ್ತೇ ಅಡಗಿದೆ ಎಂದು ಸಾಹಿತಿ, ಶಿಕ್ಷಕ ಡಾ.ಪಂಚಯ್ಯ ಹಿರೇಮಠ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆ ರವಿವಾರ ಹಮ್ಮಿಕೊಂಡಿದ್ದ ಸಾಹಿತ್ಯ ಸಂಭ್ರಮ ಹಾಗೂ ಕಲ್ಯಾಣ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ಕೆಲಸವನ್ನು ನಾಡಿನ ಅನೇಕ ಕವಿಗಳು, ಸಾಹಿತಿಗಳ ಮಾಡಿದ್ದಾರೆ.( Kannaḍa Sahitya )ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಸಾಹಿತ್ಯಾಸಕ್ತರ, ಕವಿಗಳ, ಲೇಖಕರ, ಕಲಾವಿದರ ಮತ್ತು ಸಾಂಸ್ಕೃತಿಕ ಉತ್ಸಾಹಿಗಳ ಅತಿದೊಡ್ಡ ಸಮಾಗಮವಾಗಿದೆ.
ಕನ್ನಡ ಸಾಹಿತ್ಯ ಸಾಹಿತ್ಯ ಎಂದರೆ ಮನುಷ್ಯನ ಬದುಕಿನ ಅನುಭವ ಲೋಕದ ಸಂಕಥನ. ಸಾಹಿತ್ಯ ಪರಂಪರೆಗೆ ಅಸಾಧಾರಣ ಶಕ್ತಿಯಿದೆ. ಕನ್ನಡ ಸಾಹಿತ್ಯ ಕನ್ನಡ ಭಾಷೆಯಷ್ಟೇ ಪ್ರಾಚೀನ. ಅಷ್ಟೇ ವೈಭವಯುತ. ಇಡೀ ಕನ್ನಡ ಸಾಹಿತ್ಯದಲ್ಲಿ ಕನ್ನಡ ನಾಡಿನ ಕಲೆ, ಸಂಸ್ಕೃತಿ, ಬದುಕು ಹೀಗೆ ಒಟ್ಟಾರೆ ಕನ್ನಡ ಸಾಂಸ್ಕೃತಿಕ ಜಗತ್ತೇ ಅಡಕಗೊಂಡಿದೆ. ಸುಮಾರು 2000 ವರ್ಷಗಳ ಇತಿಹಾಸವಿರುವ (Kannaḍa Sahitya )ಕನ್ನಡ ಸಾಹಿತ್ಯ ಆದಿಕವಿ ಪಂಪನಿಂದ ಆರಂಭವಾಗಿ ಕುವೆಂಪು, ಬೇಂದ್ರೆ ಮೊದಲಾದವರು ಕೊಂಡಿಯಾಗಿ ಇಂದಿನ ಯುವ ತಲೆಮಾರಿನ ಆಕರ್ಷಕ ಬರಹಗಾರರವರೆಗೂ ವಿಶಿಷ್ಟ ಪರಂಪರೆಯನ್ನೇ ನಿರ್ಮಿಸಿದೆ. ಅಂದಿನಿಂದ ಅನೇಕ ಮಜಲುಗಳನ್ನು ದಾಟಿಕೊಂಡು ಬಂದ ಕನ್ನಡ ಸಾಹಿತ್ಯ ಭಾಷೆ, ಸಂಸ್ಕೃತಿ, ಬದಕುಕನ್ನು ಶ್ರೀಮಂತವಾಗಿಸುವ ಜೊತೆಗೆ ವರ್ತಮಾನದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗುತ್ತಿದೆ ಎಂದರು.
ಶಿಕ್ಷಣ ಜೊತೆ ಸಂಸ್ಕಾರ ಅಗತ್ಯ :
ಸಮಾರಂಭದಲ್ಲಿ ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮದ ಆಡಳಿತಾಧಿಕಾರಿ ಡಾ.ಚೆನ್ನಬಸಯ್ಯ ಹಿರೇಮಠ ಮಾತನಾಡಿ, ಜಗತ್ತಿನಲ್ಲಿಯೇ ಭಾರತೀಯ ಸಂಸ್ಕೃತಿ ಶ್ರೀಮಂತವಾಗಿದೆ, ಆದರೆ ಭಾರತದಲ್ಲಿಯೇ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಆಧುನಿಕ ಕಾಲಘಟದಲ್ಲಿರುವ ನಾವೆಲ್ಲರೂ ಸಂಬಂಧಗಳ ಅರ್ಥವೇ ಮರೆಯುತ್ತಿದ್ದೇವೆ, ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣ ಎನ್ನುವಂತಾಗಿದೆ ಸಂಸ್ಕಾರವೇ ಇಲ್ಲದಂತಾಗಿದೆ ಇದರಿಂದಾಗಿ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಬುದ್ಧಿ ಮಾಂಧ್ಯರನ್ನು ಪ್ರೀತಿಯಿಂದ ಕಾಣದೇ ರಸ್ತೆಗೆ ಬಿಟ್ಟರೆ ಅವರನ್ನು ಸಮಾಜ ನೋಡುವ ದೃಷ್ಠಿಯೇ ಬೇರೆಯಾಗುತ್ತದೆ, ವಯಸ್ಸಾದ ತಂದೆ ತಾಯಿಗಳನ್ನು ಪ್ರೀತಿ, ಗೌರವದಿಂದ ನೋಡಿಕೊಳ್ಳಲಾಗದೇ ಅನಾಥರಾಗಿ ತಿರುಗಾಡುವುದನ್ನು ನೋಡಿ ನಾನು ಏಳು ವರ್ಷದ ಹಿಂದೆ ಸಿಂಧನೂರಿನಲ್ಲಿ ಕಾರುಣ್ಯ ನೆಲೆ ಆಶ್ರಮ ಸ್ಥಾಪಿಸಿದ್ದೇನೆ, ಸುಮಾರು 70ಕ್ಕೂ ಅಧಿಕ ವಯೋವೃದ್ಧರು, ಹಾಗೂ ಬುದ್ಧಿಮಾಂದ್ಯರನ್ನು ಹಾರೈಕೆ ಮಾಡುತ್ತಿದ್ದೇನೆ, ನನ್ನ ಇಡೀ ಕುಟಂಬವೇ ವೃದ್ಧ ತಂದೆ-ತಾಯಿಗಳ ಸೇವೆ ಮಾಡಿ ಪ್ರೀತಿ ಹಂಚುವ ಕೆಲಸ ಮಾಡುತ್ತಿದ್ದೇವೆ, ತಂದೆ-ತಾಯಿಯನ್ನು ಪ್ರೀತಿ-ಗೌರವದಿಂದ ಮಕ್ಕಳ ಆಧ್ಯ ಕರ್ತವ್ಯವಾಗಿದೆ. ಈಗಾಗಿ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಜೊತೆ ಸಂಸ್ಕಾರ ನೀಡುವ ಮೂಲಕ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದರು.
600 ಸಾಧಕರ ಗುರುತಿಸುವ ಕೆಲಸ :
ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆ ಸಂಸ್ಥಾಪಕ ರಮೇಶ ನಾಯ್ಕ್ ಮಾತನಾಡಿ, ಎಲೆಮರೆಕಾಯಿಯಂತೆ ಇರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ನಮ್ಮ ವೇದಿಕೆ ಮಾಡುತ್ತಿದೆ, ಈಗಾಗಲೇ 600 ಸಾಧಕರಿಗೆ ಗುರುತಿಸುವ ಕೆಲಸ ಮಾಡಿದ್ದೇವೆ ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 17 ಸಾಧಕರಿಗೆ ಕಲ್ಯಾಣ ಸಿರಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ವೆಂಕಟೇಶ ರಾಠೋಡ್, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಹಾಜಿಬಾಬು ಕಲ್ಯಾಣಿ, ಪತ್ರಕರ್ತ ಶಿವರಾಜ ಕೆಂಭಾವಿ, ಇಲಕಲ್ ಪಿಎಸ್ಐ ಎಸ್.ಆರ್.ನಾಯಕ್, ಎಎಸ್‍ಐ ಚೆನ್ನಪ್ಪ ರಾಠೋಡ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ವಿರೇಶ ಶಿರಸಂಗಿ, ಸೋಮನಾಥ್ ಪವಾರ್,ಶೇರ ಷಾ, ಸೇರಿದಂತೆ ಇನ್ನಿತರಿದ್ದರು.