suddiduniya.com

ಮನೆ ಖಾಲಿ ಮಾಡು ಎಂದಿದ್ದಕ್ಕೆ ಓನರನ್ನೇ ಕೊಲೆ ಮಾಡಿದ ಪಾಪಿ..!

ರಾಯಚೂರಿನಲ್ಲಿ ನಡೆದ ಘೋರ ಕೃತ್ಯ

ರಾಯಚೂರು (Raichur): ಮನೆ ಖಾಲಿ ಮಾಡು ಎಂದಿದ್ದಕ್ಕೆ ಬಾಡಿಗೆದಾರನೊಬ್ಬ (Tenant) ಮನೆಯ ಓನರ್‌ನ್ನೇ(The owner of the house) ಉಸಿರುಗಟ್ಟಿಸಿ ಕೊಲೆ (murder)ಮಾಡಿ ತಾನೇ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ಮಾಡಿದ ಘೋರ ಕೃತ್ಯ ರಾಯಚೂರು ನಗರದಲ್ಲಿ ನಡೆದಿದೆ.

ಮನೆ ಖಾಲಿ ಮಾಡು ಎಂದಿದ್ದಕ್ಕೆ ಓನರನ್ನೇ ಕೊಲೆ ಮಾಡಿದ ಪಾಪಿ..! ಉದಯನಗರದ ನಿವಾಸಿ ಶೋಭಾ ಪಾಟೀಲ್ ಕೊಲೆಯಾದ ಮನೆ ಮಾಲಿಕರಾಗಿದ್ದಾರೆ. ಶಿವು ಬಂಡೆಸ್ವಾಮಿ(25) ಕೊಲೆ ಮಾಡಿದ ಕಿರಾತಕನಾಗಿದ್ದಾನೆ. ಶೋಭಾ ಪಾಟೀಲ್ ಅವರು ತಮ್ಮ ಇಬ್ಬರು ಪುತ್ರರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ. ಆಗಾಗ ರಾಯಚೂರಿನ ಉದಯನಗರದಲ್ಲಿರುವ ಸ್ವಂತ ಮನೆಗೆ ಬರುತ್ತಿದ್ದರು. ಪರಿಚಯಸ್ಥರೊಬ್ಬರ ನೀವು ಹೇಗಿದ್ದರೂ ಬೆಂಗಳೂರಿನಲ್ಲಿರುತ್ತೀರಿ ಮನೆಯ ಮೇಲಿರುವ ಸಿಂಗಲ್ ರೂಮ್‌ನನ್ನು ರಾಯಚೂರಿನ ಮಠವೊಂದರಲ್ಲಿ ಪೂಜೆ ಕೈಂಕರ್ಯಗಳನ್ನು ಮಾಡುತ್ತಿದ್ದ ಶಿವು ಬಂಡೆಸ್ವಾಮಿಗೆ ನೀಡುವಂತೆ ಶೋಭಾ ಪಾಟೀಲ್‌ರಿಗೆ ಹೇಳಿದ್ದರಿಂದ ಮಾನವೀತಯೆ ದೃಷ್ಠಿಯಿಂದ ಕಡಿಮೆ ಹಣಕ್ಕೆ ಬಾಡಿಗೆ ನೀಡಿದ್ದರು. ಕಳೆದ ಎರಡ್ಮೂರು ದಿನಗಳ ಹಿಂದೆ ಬೆಂಗಳೂರಿನಿAದ ರಾಯಚೂರಿಗೆ ಬಂದಿದ್ದ ಶೋಭಾ ಪಾಟೀಲ್ ಮನೆ ಖಾಲಿ ಮಾಡುವಂತೆ ಶಿವು ಬಂಡೆಸ್ವಾಮಿಗೆ ಹೇಳಿದ್ದರಿಂದ ಎರಡು ವರ್ಷಗಳ ಕಾಲ ಮನೆಯಲ್ಲಿ ವಾಸವಾಗಿದ್ದ ಮನೆಯನ್ನು ಏಕಾಏಕಿಯಾಗಿ ಖಾಲಿ ಮಾಡುವಂತೆ ಹೇಳಿದನ್ನೇ ನೆಪವಾಗಿಸಿಕೊಂಡಿದ್ದ ಶಿವು ಬಂಡೆಸ್ವಾಮಿ ರಾತ್ರಿ ಮನೆಗೆ ನುಗ್ಗಿ ಶೋಭಾ ಪಾಟೀಲ್‌ರನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.

ತಾನೇ ಅಂತ್ಯಸ0ಸ್ಕಾರ ಮಾಡಿದ ಪಾಪಿ :

ಶೋಭಾ ಪಾಟೀಲ್‌ರನ್ನು ಕೊಲೆ ಮಾಡಿದ ಶಿವು ಬಂಡೆಸ್ವಾಮಿ ಶೋಭಾ ಅವರ ಸಾವಿನ ಕುರಿತು ಇಲ್ಲಸಲ್ಲದ ಕಥೆ ಕಟ್ಟಿ ಅವರ ಮಕ್ಕಳಿಗೆ ತಿಳಿಸಿದ್ದಾನೆ. ಸ್ವಗ್ರಾಮದಲ್ಲಿ ತಾನೇ ಮುಂದೆ ನಿಂತು ವೀರಶೈವ ಲಿಂಗಾಯತ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಕುಟಂಬಸ್ಥರ ಸಮ್ಮುಖದಲ್ಲಿ ಅಂತ್ಯಸ0ಸ್ಕಾರ ನೆರವೇರಿಸಿದ್ದಾನೆ. ಕೊಲೆ ಮಾಡಿರುವ ಬಗ್ಗೆ ಯಾರಿಗೂ ಅನುಮಾನ ಬರದಂತೆ ನಡೆದುಕೊಂಡಿದ್ದಾನೆ.

ಮಗನಿಗೆ ಬಂತು ಅನುಮಾನ :

ಕೊಲೆಯಾದ ಶೋಭಾ ಪಾಟೀಲ್‌ರ ಕಿವಿಯೂಲೆ,ಚಿನ್ನದ ಸರ ಹಾಗೂ ಮೊಬೈಲ್ ನಾಪತ್ತೆಯಾಗಿರುವುದರಿಂದ ಶೋಭಾ ಪಾಟೀಲ್‌ರ ಮಗನಿಗೆ ತಮ್ಮ ತಾಯಿ ಸಾವಿನ ಕುರಿತು ಅನುಮಾನ ಮೂಡಿದ್ದರಿಂದ ಕೂಡಲೇ ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಿಸಿ ಟಿವಿಯಲ್ಲಿ ಪತ್ತೆ :

ದೂರನ್ನು ದಾಖಲಿಸಿಕೊಂಡ ಪೊಲೀಸ್‌ರು ಮನೆಯ ಸಿಸಿ ಟಿವಿ ಪರಿಶೀಲನೆ ಮಾಡಿದ ವೇಳೆಯಲ್ಲಿ ರಾತ್ರಿ 9ಗಂಟೆಗೆ ಶಿವು ಬಂಡೆಸ್ವಾಮಿ ಮನೆಯೊಳಗೆ ಹೋಗುತ್ತಿರುವುದು ಪತ್ತೆಯಾಗಿರುವುದರಿಂದ ಪೊಲೀಸ್‌ರು ಕೂಡಲೇ ಶಿವು ಬಂಡೆಸ್ವಾಮಿ ವಶಕ್ಕೆ ತೆಗೆದುಕೊಂಡು ತೀವೃ ವಿಚಾರಣೆ ನಡೆಸಿದ್ದರಿಂದ ತಾನೇ ಕೊಲೆ ಮಾಡಿರುವುದಾಗಿ, ಶೋಭಾ ಪಾಟೀಲ್‌ರ ಚಿನ್ನದ ಒಡೆವೆ, ಮೊಬೈಲ್ ಸೇರಿ ಇತರೆ ವಸ್ತುಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸ್‌ರು ಈ ಪ್ರಕರಣದ ಬಗ್ಗೆ ಮತ್ತಷ್ಟು ತನಿಖೆ ನಡೆಸಿದ್ದಾರೆ. ಮನೆ ಖಾಲಿ ಮಾಡು ಅಂದಿದ್ದಕ್ಕೆ ಮನೆಯ ಮಾಲಿಕರನ್ನೇ ಕೊಲೆ ಮಾಡಿದ ಘಟನೆ ರಾಯಚೂರು ನಗರವನ್ನೇ ಬೆಚ್ಚಿಬೀಳುವಂತಾಗಿದೆ. (ಮನೆ ಖಾಲಿ ಮಾಡು ಎಂದಿದ್ದಕ್ಕೆ ಓನರನ್ನೇ ಕೊಲೆ ಮಾಡಿದ ಪಾಪಿ..!)

(ಮನೆ ಖಾಲಿ ಮಾಡು ಎಂದಿದ್ದಕ್ಕೆ ಓನರನ್ನೇ ಕೊಲೆ ಮಾಡಿದ ಪಾಪಿ..!)

Suddiduniya.com

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!
Exit mobile version