suddiduniya.com

KSPL-2024 ಗ್ರಾಮೀಣ ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ಕೆಎಸ್‌ಪಿಎಲ್ ಆಯೋಜನೆ

KSPL-2024

ಲಿಂಗಸುಗೂರು : ಕ್ರಿಕೆಟ್ ಎಂಬುದು ಶ್ರೀಮಂತರ ಆಟವಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಅನೇಕ ಯುವಕರು ಉತ್ತಮ ಕ್ರಿಕೆಟ್ ಆಟಗಾರರಿದ್ದಾರೆ ಆದರೆ ಸೂಕ್ತ ವೇದಿಕೆ ಸಿಗದೇ ಪ್ರತಿಭೆ ಕಮರಿ ಹೋಗುತ್ತಿದ್ದು, ಈಗಾಗಿ ಗ್ರಾಮೀಣ ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ KSPL-2024 ಆಯೋಜಿಸಲಾಗಿದೆ ಎಂದು ರಾಯಚೂರು ತಂಡ ಮಾಲಿಕ ಯೋಗಶ್ರೀ ಮಲ್ಲಣ್ಣ ಹೇಳಿದರು.

KSPL- 2024

ಪಟ್ಟಣ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಈಗಾಗಲೇ ಯೋಗ ತರಬೇತುದಾರಾಗಿ ಒಂದು ಲಕ್ಷ ಯುವಕರಿಗೆ ಉಚಿತ ಯೋಗ ತರಭೇತಿ ನೀಡಿದ್ದೇನೆ. ನನ್ನ ಸೇವೆ ಗಿನ್ನಿಸ್ ದಾಖಲೆ ಪುಟದಲ್ಲಿ ಸೇರಿಕೊಂಡಿದೆ. ಕ್ರೀಡೆ ಯೋಗದ ಒಂದು ಭಾಗವಾಗಿದೆ. ಹಿಂದುಳಿದ ಜಿಲ್ಲೆವೆಂಬ ಹಣೆಪಟ್ಟೆ ಕಟ್ಟಿಕೊಂಡಿರುವ ರಾಯಚೂರಿನ ತಂಡಕ್ಕೆ ಯಾರೂ ಮಾಲಿಕರಾಗಲು ಮುಂದೆ ಬರುತ್ತಿರಲಿಲ್ಲ, ರಾಯಚೂರು ಜಿಲ್ಲೆಯಲ್ಲೂ ಅಂತರರಾಷ್ಟ್ರೀಯ ಮಟ್ಟಕ್ಕೂ ಆಯ್ಕೆಯಾಗುವಂತಹ ಪ್ರತಿಭಾವಂತ ಕ್ರೀಡಾಪಟುಗಳು ಇದ್ದಾರೆ. ಇಲ್ಲಿನ ಪ್ರತಿಭೆಗಳನ್ನು ಗುರುತಿಸಲು ಹಾಗೂ ಮೇಲಾಗಿ ನಾನೂ ಕೂಡಾ ಸಿಂಧನೂರು ತಾಲೂಕಿನಲ್ಲಿ ಹುಟ್ಟಿದವನಾಗಿದ್ದರಿಂದ ಈಗಾಗಿ ನನ್ನ ಜಿಲ್ಲೆ ನನ್ನ ಹೆಮ್ಮಯಿಂದ ನಮ್ಮ ಭಾಗದ ಯುವ ಕ್ರಿಕೆಟ್ ಆಟಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ತಂಡದ ಮಾಲಿಕತ್ವ ವಹಿಸಿಕೊಂಡು ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕಿನ ಪ್ರತಿಭಾವಂತ ಯುವ ಕ್ರಿಕೆಟ್ ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಶಯನ್‌ನವರು ನವೆಂಬರ್ 1 ರಿಂದ ಡಿಸೆಂಬರ್ 1ವರಿಗೆ ಬೆಂಗಳೂರಿನಲ್ಲಿ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ 2024( KSPL-2024 )ಹಮ್ಮಿಕೊಂಡಿದೆ. ರಾಜ್ಯದ 31 ಜಿಲ್ಲೆಗಳಿಂದ 32 ತಂಡಗಳ ಲೀಗ್‌ನಲ್ಲಿ ಆಡಲಿವೆ. 699 ಆಟಗಾರರನ್ನು ತಮ್ಮ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ. ಕ್ರಿಕೆಟ್ ಪಂದ್ಯಾವಳಿ ಚಂದನ್ ಟಿವಿಯಲ್ಲಿ ಲೈವ್ ಪ್ರದರ್ಶನ ನಡೆಯಲಿದೆ ಎಂದರು.

KSPL-2024
oplus_0

ರಾಯಚೂರು ಜಿಲ್ಲೆಯ ತಂಡದ ಆಟಗಾರರ ಆಯ್ಕೆ ಪ್ರಕ್ರೀಯೆ ನಡೆಯಿತು. ಮುಂಬಯಿನ ಹಿರಿಯ ಹಾಗೂ ಪರಿಣಿತ ಆಟಗಾರರ ತಂಡ ನಾನಾ ರೀತಿಯ ಪ್ರಾಯೋಗಿಕ ಪರೀಕ್ಷೆ ನಡೆಸಿ 20 ಯುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಸ್ಟೇಟ್ ಐಕಾನ್ ಹಾಗೂ ಡಿಸ್ಟಿಟ್ ಐಕಾನ್ ಇಬ್ಬರನ್ನು ಒಳಗೊಂಡ ರಾಯಚೂರು ತಂಡ ಸಿದ್ಧಗೊಳಿಸಲಾಗಿದೆ ಎಂದರು.

KSPL-2024 ರಾಯಚೂರು ತಂಡಕ್ಕೆ ಲಿಂಗಸುಗೂರು ಭರವಸೆ ಆಟಗಾರ ಅಬ್ಬುಲ್ ಜಬ್ಬರ್ ಛಾವೂಸ್ ನಾಯಕನಾಗಿದ್ದಾನೆ. ಅದಲ್ಲದೆ ಡಿಸ್ಟಿಟ್ ಐಕಾನ್ ನಾಗಿದ್ದಾನೆ. ಲಿಂಗಸುಗೂರಿನ 7, ಗುರುಗುಂಟಾ-2, ಜಾಲಹಳ್ಳಿ-2, ದೇವದುರ್ಗ-1, ರಾಯಚೂರಿನ ಇಬ್ಬರು ಯುವ ಆಟಗಾರರನ್ನು ರಾಯಚೂರು ಜಿಲ್ಲಾ ತಂಡಕ್ಕೆ ಆಯ್ಕೆ ಮಾಡಲಾಗಿದೆ. ರಾಯಚೂರು ತಂಡದಲ್ಲಿ ಅತಿ ಹೆಚ್ಚು ಅಂದರೆ 99 ಸಾವಿರಕ್ಕೆ ಲಿಂಗಸುಗೂರಿನ ಇಮ್ರಾನ್ ಆಯ್ಕೆಯಾಗಿದ್ದಾರೆ.

ಕ್ರಿಕೆಟ್ ಅಂದರೆ ಲೆದರ್, ಟೆನ್ನಿಸ್ ಬಾಲ್ ಗಳಿಂದ ಕ್ರಿಕೆಟ್ ಆಡುವುದುನ್ನು ಕೇಳಿದ್ದೇವೆ ಆದರೆ (KSPL-2024) ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ -2024ರಲ್ಲಿ ಕೇವಲ 8ಗ್ರಾಂ ಸಾಫ್ಟ್ ಬಾಲ್‌ನಿಂದ ಆಟವಾಡಿಸಲಾಗುತ್ತಿದೆ ಎಂದರು.

ಈ ವೇಳೆ ರಾಯಚೂರು ತಂಡದ ನಾಯಕ ಅಬ್ದುಲ್ ಜಬ್ಬರ್ ಮಾತನಾಡಿ, ಮುಂಬಯಿನ ಪರಿಣಿತ ಆಟಗಾರರ ತಂಡ ಅಳಿದು ತೂಗಿ 20 ಯುವ ಆಟಗಾರರನ್ನು ರಾಯಚೂರಿನ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಯುವಕರು ಅವರಲ್ಲಿ ಇರುವ ಪ್ರತಿಭೆ ಹಾಗೂ ಕ್ರಿಕೆಟ್ ಅರ್ಹತೆ ಮೇರಿಗೆ ಆಯ್ಕೆ ಮಾಡಲಾಗಿದೆ. ತಂಡಕ್ಕೆ ನನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿರುವುದು ಜವಬ್ದಾರಿ ಹೆಚ್ಚಿಸಿದೆ. ಇಡೀ ತಂಡವನ್ನು ಮುನ್ನೆಡೆಸುವ ಹೊಣೆ ನನ್ನ ಮೇಲಿದೆ. ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ -2024ನಲ್ಲಿ ರಾಯಚೂರು ತಂಡ ಅತ್ಯತ್ತಮ ಪ್ರದರ್ಶನ ನೀಡುವ ಪ್ರಯತ್ನ ಮಾಡಲಾಗುವುದು,  ಪಂದ್ಯಾವಳಿಯನ್ನು ಚಂದನ್ ಟಿವಿಯಲ್ಲಿ ನೇರಪ್ರಸಾರ ಇರುತ್ತೆ ಪಂದ್ಯಾವಳಿ ವೀಕ್ಷಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

KSPL-2024 ಗೆ ರಾಯಚೂರು ತಂಡದಲ್ಲಿ ಅಬ್ದುಲ್ ಜಬ್ಬರ್ ಲಿಂಗಸುಗೂರು,( ನಾಯಕ ಹಾಗೂ ರಾಯಚೂರು ಜಿಲ್ಲಾ ಐಕಾನ್) ಇಮ್ರಾನ್ ಅಹ್ಮದ್ ಲಿಂಗಸುಗೂರು, ಕಾರ್ತೀಕ ನಾಯಕ ಲಿಂಗಸುಗೂರು, ಅಮನ್‌ಸಿಂಗ್ ಲಿಂಗಸುಗೂರು, ರವಿಕುಮಾರ ಜಾಂಟಿ ಲಿಂಗಸುಗೂರು, ರಾಘವೇಂದ್ರ ನಾಯಕ ಲಿಂಗಸುಗೂರು, ಅಮರೇಶ ನಾಯಕ ಗುರುಗುಂಟಾ, ಶಾಲಂ ಬಿನ್ ಅಹ್ಮದ್ ಲಿಂಗಸುಗೂರು, ರಜಾಕ್ ಗುರುಗುಂಟಾ, ಪರಮನಗೌಡ ದೇವದುರ್ಗ, ಶ್ರೀಕಾಂತ ಜಾಲಹಳ್ಳಿ, ಸಂಜಯ್ ಪವಾರ್ ಜಾಲಹಳ್ಳಿ, ಸೈಯದ್ ಗಯಾಸುದ್ದೀನ್ ರಾಯಚೂರು, ಲೀಲಾಕೃಷ್ಣಾ ರಾಯಚೂರು, ಮಹ್ಮದ್ ಇಝಾರ್ ಸಿಂಧನೂರು, ವಾಲಿ ಸಿಂಧನೂರು, ವಿಜಯಕುಮಾರ ತುರ್ವಿಹಾಳ, ಶ್ರೇಣಿಕ್ ಸಿಂಧನೂರು, ಸುಂದೀಪ್ ಬೆಂಗಳೂರು(ರಾಜ್ಯ ಐಕಾನ್)

ಈ ವೇಳೆ ತಂಡದ ಸಹ ಮಾಲಕಿ ವಾಣಿಶ್ರೀ, ಮುದಕಪ್ಪ ವಕೀಲರು, ಶರಣಬಸವ ಗುಡದಿನ್ನಿ, ಚಂದ್ರು ಹಿರೇಮಠ, ಇಮ್ರಾನ್, ಸೇರಿದಂತೆ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!