ಲಿಂಗಸುಗೂರಿನಲ್ಲಿ ಪ್ರತಿಭಟನೆ :
ಲಿಂಗಸುಗೂರು : ನರೇಗಾ (Narega) Labourers ಕೂಲಿಕಾರ್ಮಿಕರು ರಿಗೆ (wage labor) ಸರಿಯಾಗಿ ವೇತನ ಪಾವತಿ(payment) ಮಾಡದೇ, ವಿನಾಕಾರಣ ತೊಂದರೆ ನೀಡುತ್ತಿರುವ ಅಧಿಕಾರಿಗಳ(officers) ವಿರುದ್ಧ ಕಾನೂನು ಕ್ರಮ(Legal action) ಜರುಗಿಸಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತ್ರತ್ವದಲ್ಲಿ ಕೂಲಿಕಾರ್ಮಿಕರು (Labourers) ತಾ.ಪಂ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.
ಗ್ರಾಮೀಣ ಕೂಲಿ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡದಿರುವುದರಿಂದ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಮಿಕರು ಮಾಡಿದ ಕೆಲಸಕ್ಕೆ ಅಳತೆ ಅಷ್ಟು ಇದೆ ಇಷ್ಟು ಇದೆ ಎಂದು ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆ. ಗ್ರಾ.ಪಂ ಸದಸ್ಯರ ಮಾಡಿದ ಕೆಲಸಕ್ಕೆ ಯಾವುದೇ ಅಳತೆ ಮಾಡದೇ ಪೂರ್ಣ ವೇತನ ಪಾವತಿ ಮಾಡುತ್ತಿದ್ದಾರೆ. ಎನ್‌ಎಮ್‌ಎಮ್‌ಎಸ್ ಆ್ಯಪ್ ಮೂಲಕ ಬೇಕಾಬಿಟ್ಟಿಯಾಗಿ ಹಾಜರಾತಿ ತೆಗೆದುಕೊಳ್ಳುತ್ತಿದ್ದಾರೆ. ಕೂಲಿ ಕಾರ್ಮಿಕರು ಸರಿಯಾದ ಸಮಯಕ್ಕೆ ಹಾಜರಾತಿ ತೆಗೆದುಕೊಳ್ಳದೇ ಇರುವುದು ಕಾರ್ಮಿಕರಿಗೆ ತೊಂದರೆ ಎದುರಿಸುವಂತಾಗಿದೆ. . ಮೇಸ್ತ್ರೀಗಳಿಗೆ ಹಾಜರಾತಿ ತೆಗೆದುಕೊಳ್ಳಲು ಅವಕಾಶ ನೀಡಬೇಕು.
ಸೌಲಭ್ಯಗಳೇ ಇಲ್ಲ :
ನರೇಗಾ Labourers ಕೂಲಿಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಕಾರ್ಮಿಕರಿಗೆ (Labourers )ಸೌಲಭ್ಯಗಳಾದ ವಿಶೇಷವಾದ ಕುಡಿವ ನೀರು, ನೆರಳು, ಹಾಗೂ ಪ್ರಥಮ ಚಿಕಿತ್ಸೆಯಂತಹ ಸೌಲಭ್ಯಗಳ ನೀಡುವಲ್ಲಿ ಗ್ರಾ.ಪಂ ಪಿಡಿಓಗಳು ವಿಫಲರಾಗಿದ್ದಾರೆ. ಕಾರ್ಮಿಕ ಕಾನೂನುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ತಮ್ಮ ಮನಬಂದ0ತೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೂಲಿಕಾರ್ಮಿಕರಿಗೊಂದು ನ್ಯಾಯ ಅಧಿಕಾರಿಗಳಿಗೊಂದು ನ್ಯಾಯವೇ..?ಕೂಲಿ ಕಾರ್ಮಿಕರಿಗೆ ಸರ್ಕಾರ ನಿಯವ್ಮದಂತೆ ವೇತನ ಪಾವತಿ ಮಾಡುವುದಿಲ್ಲ, ಪ್ರತಿ ಕೆಲಸದಲ್ಲಿಯೂ ಕಡಿಮೆ ವೇತನ ಪಾವತಿ ಮಾಡುತ್ತಿದ್ದಾರೆ. ಕಳೆದ 16 ವರ್ಷಗಳಿಂದ ಕಾರ್ಮಿಕರಿಗೆ ಸಂಪೂರ್ಣ ವೇತನ ಪಾವತಿ ಮಾಡಿದ ಇತಿಹಾಸವೇ ಇಲ್ಲ ಎಂದು ಕೂಲಿಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಪಿಡಿಓ ಅಮಾನತ್ ಮಾಡಿ :
ತಾಲೂಕಿನ ಕೋಠಾ ಗ್ರಾಮದಲ್ಲಿ ಅಲಿಸಾಬ ಇವರ ಹೊಲದಲ್ಲಿ 2023 ಡಿಸೆಂಬರ್ 8ರಂದು ತೋಟಗಾರಿಕೆ ಇಲಾಖೆಯಿಂದ ಬದುವಿನ ಸುತ್ತ ತೆಂಗಿನ ಸಸಿಗಳನ್ನು ನಡೆಲಾಗಿತ್ತು, ಆದರೆ ಇಲ್ಲಿವರಿಗೂ ವೇತನ ಪಾವತಿಯಾಗಿಲ್ಲ, ವೇತನ ಪಾವತಿ ವಿಳಂಭ ಭತ್ಯೆ ಪರಿಹಾರ ನೀಡಬೇಕು. ವಿಳಂಭ ನೀತಿ ಅನುಸರಿಸಿದ ಲಿಂಗಸುಗೂರಿನ ತೋಟಗಾರಿಕೆ ಸಹಾಯಕ ನಿರ್ದೇಶಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಸರ್ಜಾಪುರ ಗ್ರಾಮ ಪಂಚಾಯತಿ ಪಿಡಿಓ ಶೋಭಾರಾಣಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಪತಿಯ ಹೊಲದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದಾರೆ.ಈ ಬಗ್ಗೆ ಮಾಧ್ಯಮದಲ್ಲಿ ವರದಿಯಿಂದ ಎಚ್ಚತ್ತಗೊಂಡ ಪಿಡಿಓ ಸರ್ಕಾರಕ್ಕೆ ಹಣ ಮರುಪಾವತಿ ಮಾಡಿದ್ದಾರೆ, ಮೇಲಾಗಿ ಮೇಲಾಧಿಕಾರಿಗಳು ಪಿಡಿಓ ವಿರುದ್ಧ ಕಾನೂನು ಕ್ರಮಕೈಗೊಳ್ಳದೇ ಮೂಕ ಪ್ರೇಕ್ಷಕರಾಗಿರುವುದು ಖಂಡನೀಯ. ಕೂಡಲೇ ಪಿಡಿಓ ಶೋಭಾರಾಣಿ ಅವರನ್ನು ಅಮಾನತ್ ಮಾಡಿ ಕಾನೂನು ಕ್ರಮ ಜರಗಿಸಬೇಕು ಎಂದು (Labourers )ಕೂಲಿಕಾರ್ಮಿಕರು ಆಗ್ರಹಿಸಿದರು.
ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ :
ಜೆಸ್ಕಾಂ ಇಲಾಖೆ ಸೌಭಾಗ್ಯ ಯೋಜನೆಯಡಿಯಲ್ಲಿ ಕೋಮನೂರು ಗ್ರಾಮದ ಮುಖ್ಯ ರಸ್ತೆಯಿಂದ ರುದ್ರಪ್ಪನ ಮನೆಯವರಿಗೆ ಕಂಬ ಮತ್ತು ಮ್ಭಿಟರ್‌ಗಳ ಅಳವಡಿಕೆ ಮಾಡಬೇಕಾಗಿತ್ತು. ಆದರೆ ಕಂಬಗಳನ್ನು ಹಾಕದೇ ಕೇವಲ ಮನೆಗಳಿಗೆ ಮೀಟರ್‌ಗಳನ್ನು ಅಳವಡಿಸಿ ಬಿಲ್ ಪಾವತಿ ಮಾಡಿಕೊಂಡ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು. ತಾಲೂಕಿನ ಹೊನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಾಯಕನ ದೊಡ್ಡಿಗೆ ಕುಡಿಯುವ ನೀರಿಗಾಗಿ ತಾಲೂಕು ಪಂಚಾಯಿತಿ ಅನುದಾನದಲ್ಲಿ ಕೊಳವೆಭಾವಿ ಹಾಕಲಾಗಿದ್ದು, ಆ ದೊಡ್ಡಿಗೆ 24 ಗಂಟೆ ವಿದ್ಯುತ್ ಸಂಪರ್ಕ ಇಲ್ಲದಾಗಿದೆ. ಮೇಲಾಗಿ ಈ ದೊಡ್ಡಿಗೆ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲವೇ ಇಲ್ಲ, ಆದರೂ ಸಹ ಮನೆಗಳಿಗೆ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಿದ್ದು ಯಾವ ಪುರುಷಾರ್ಥಕ್ಕೆ..?ಕೂಡಲೇ ದೊಡ್ಡಿಗೆ ಮೂಲಸೌಕರ್ಯ ಒದಗಿಸಬೇಕು. ವಿದ್ಯುತ್ ಸಂಪರ್ಕ ಇಲ್ಲದೇ ಮನೆಗಳಿಗೆ ಮೀಟರ್ ಅಳವಡಿಸಿದ ಗುತ್ತಿಗೆದಾರ ಹಾಗೂ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು.
ಹೊನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಡೋಣಾ ಗ್ರಾಮದ ಹರಿಜನ ಕೇರಿಯಿಂದ ಚಲುವಾದಿ ಕೇರಿವರಿಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ ಕೂಡಲೇ ರಸ್ತೆ ನಿರ್ಮಾಣ ಮಾಡಬೇಕು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸಬೇಕು. ಕಾಚಾಪೂರು ಗ್ರಾಮದ ಸಂಜೀವಿನಿ ಯೋಜನೆಯಡಿಯಲ್ಲಿ ಸ್ವಚ್ಛ ವಾಹಿನಿ ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೆಲಸ ನಿರ್ವಹಿಸಲು ಸ್ವ ಸಹಾಯ ಗುಂಪಿನ ಸದಸ್ಯರ ಆಯ್ಕೆಯನ್ನು ರದ್ದುಪಡಿಸಬೇಕು ನಿಯಮ ಅನುಸಾರವಾಗಿ ಕೆಲಸದವರನ್ನು ಮರು ಆಯ್ಕೆ ಮಾಡಬೇಕು ಹಾಗೂ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಆನಾಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಕೂಲಿಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ನೀಡಬೇಕು. ತಾಲೂಕಿನ ಹೂನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲೆಕಟ್ಟು ಗ್ರಾಮದಲ್ಲಿ 42 ಕೆಲಸ ಮಾಡಿ ಎರಡು ತಿಂಗಳು ಕಳೆಯುತ್ತಿದ್ದರೂ ಕೂಲಿ ಹಣ ಪಾವತಿ ಮಾಡಿಲ್ಲ, ಕೂಡಲೇ ಕೂಲಿ ಹಣ ಪಾವತಿ ಮಾಡಬೇಕು ಎಂದು ಕೂಲಿಕಾರ್ಮಿಕರು ಆಗ್ರಹಿಸಿದರು.
ಧರಣಿಯಲ್ಲಿ ಗ್ರಾಕೂಸ್‌ನ ಮುಖಂಡ ಗುಂಡಪ್ಪ ಯರಡೋಣಾ, ಹುಸೇನಭಾಷ ಯಲಗಟ್ಟ, ಆದಪ್ಪ, ಹುಲಗಪ್ಪ ಹೊನ್ನಳ್ಳಿ, ರಾಮಲಿಂಗಪ್ಪ ಹೊನ್ನಳ್ಳಿ, ಗದ್ದೆಪ್ಪ, ಬಸವರಾಜ, ಸುರೇಶ ಕಾಚಾಪುರ, ಛತ್ರಪ್ಪ ಮಾವಿನಭಾವಿ, ಹುಸೇನಸಾಬ, ಹಸನಸಾಬ, ಅಮರೇಗೌಡ, ಹುಲಗಪ್ಪ ಮಾವಿನಭಾವಿ, ಮಾಳಮ್ಮ ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಭಾಗವಹಿಸಿದ್ದರು.