ಎಲ್‌ಪಿಎಲ್ ಕ್ರಿಕೆಟ್ ಪಂದ್ಯಾವಳಿ
ಲಿಂಗಸುಗೂರು : ಯುವ ಕ್ರಿಕೆಟ್ ಆಟಗಾರರಿಗೆ ಪ್ರೋತ್ಸಾಹ ನೀಡುವ ಹಿನ್ನಲೆಯಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಾಳೆಯಿಂದ ಎಲ್‌ಪಿಎಲ್ ಸೀಜನ್-7ಗೆ ಚಾಲನೆ ನೀಡಿ ಪಂದ್ಯಾವಳಿ ನಡೆಯಲಿದೆ.
ಸ್ಥಳೀಯ ಪುರಸಭೆ ವ್ಯಾಪ್ತಿಯ ಯುವ ಕ್ರಿಕೆಟ್ ಆಟಗಾರರಿಗೆ ಪ್ರೋತ್ಸಾಹ ನೀಡುವ ಹಿನ್ನಲೆಯಲ್ಲಿ ಲಿಂಗಸುಗೂರು ಪ್ರೀಮಿಯರ್ ಲೀಗ್ ಮೂಲಕ ಕ್ರಿಕೆಟ್ ಪಂದ್ಯಾವಳಿ ಏರ್ಪಾಡಲಾಗುತ್ತಿದೆ. ಈಗಾಗಲೇ 6 ಸೀಜನ್ ಯಶಸ್ವಿಯಾಗಿ ಪೂರ್ಣಗೊಂಡು ಸೀಜನ್-7 ನಾಳೆಯಿಂದ ಅಧಿಕೃತವಾಗಿ ಪ್ರಾರಂಭವಾಗುತ್ತಿದೆ.
ತಂಡಗಳು ಎಷ್ಟು :
ಎಲ್‌ಪಿಎಲ್-7ರಲ್ಲಿ ಒಟ್ಟು ಆರು ತಂಡಗಳಿದ್ದು, ಎಸ್‌ಕೆ.ಲಯನ್ಸ್, ಅಲ್ಫಾ ಸಿಸಿ, ಅಭಿನಂದನ್ ಸಿಸಿ, ಆರ್‌ಸಿಎಲ್ ಸಿಸಿ, ಬಸವ ಸಿಸಿ, ಗುರುಕುಲ ಸಿಸಿ ಪ್ರಾಂಚೈಸಿಗಳು ತಮ್ಮ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿಕೊಂಡು ತಂಡ ಬಲಪಡಿಸಿಕೊಳ್ಳುವ ಮೂಲಕ ಪಂದ್ಯಾವಳಿಗೆ ಸಿದ್ಧಗೊಂಡಿವೆ.
ಅ.9ರಿ0ದ17ವರಿಗೆ ಎಲ್‌ಪಿಎಲ್ :
ಅಕ್ಟೋಬರ್ 9ರಿಂದ ಆರಂಭವಾಗುವ ಎಲ್‌ಪಿಎಲ್-7 ಅಕ್ಟೋಬರ್ 17ರವರಿಗೆ ನಡೆಯಲಿದೆ. ಪ್ರತಿದಿನ ಎರಡು ಮ್ಯಾಚ್‌ಗಳು ನಡೆಯಲಿದೆ. ಅ.9ರಂದು ಬೆಳಿಗ್ಗೆ 10ಕ್ಕೆ ಗುರುಕುಲ ಸಿಸಿ-ಬಸವ ಸಿಸಿ, ಮಧ್ಯಾಹ್ನ 2ಗಂಟೆಗೆ ಅಲ್ಫಾ ಸಿಸಿ-ಆರ್‌ಸಿಎಲ್ ಸಿಸಿ, ಅ.11ರಂದು ಬೆಳಿಗ್ಗೆ 10ಕ್ಕೆ ಎಸ್‌ಕೆ ಲೈಯನ್ಸ್- ಅಭಿನಂದನ್ ಸಿಸಿ, ಮಧ್ಯಾಹ್ನ 2ಗಂಟೆಗೆ ಗುರುಕುಲ ಸಿಸಿ – ಆರ್‌ಸಿಎಲ್ ಸಿಸಿ, ಅ.12ಕ್ಕೆ ಬಸವ ಸಿಸಿ- ಅಭಿನಂದನ್ ಸಿಸಿ, ಮಧ್ಯಾಹ್ನ 2ಗಂಟೆಗೆ ಎಸ್‌ಕೆ ಲೈಯನ್ಸ್-ಅಲ್ಫಾ ಸಿಸಿ, ಅ.13ರಂದು ಬೆಳಿಗ್ಗೆ 10ಕ್ಕೆ ಗುರುಕುಲ ಸಿಸಿ-ಅಲ್ಫಾ ಸಿಸಿ, ಮಧ್ಯಾಹ್ನ 2ಗಂಟೆಗೆ ಬಸವ ಸಿಸಿ- ಎಸ್‌ಕೆ ಲೈಯನ್ಸ್, ಅ.14ರಂದು ಬೆಳಿಗ್ಗೆ 10ಕ್ಕೆ ಅಭಿನಂದನ್ ಸಿಸಿ- ಗುರುಕುಲ ಸಿಸಿ, ಮಧ್ಯಾಹ್ನ 2ಗಂಟೆಗೆ ಆರ್‌ಸಿಎಲ್ ಸಿಸಿ-ಬಸವ ಸಿಸಿ., ಅ.15ರಂದು ಬೆಳಿಗ್ಗೆ 10ಕ್ಕೆ ಎಸ್‌ಕೆ ಲೈಯನ್ಸ್- ಆರ್‌ಸಿಎಲ್ ಸಿಸಿ., ಮಧ್ಯಾಹ್ನ 2ಗಂಟೆಗೆ ಅಲ್ಫಾ ಸಿಸಿ-ಬಸವ ಸಿಸಿ.,ಅ.16ರಂದು ಅಲ್ಫಾ ಸಿಸಿ- ಅಭಿನಂದನ್ ಸಿಸಿ., ಮಧ್ಯಾಹ್ನ 2ಗಂಟೆಗೆ ಎಸ್‌ಕೆ ಲೈಯನ್ಸ್- ಗುರುಕುಲ ಸಿಸಿ ಹಾಗೂ ಅ.17ರಂದು ಬೆಳಿಗ್ಗೆ 10ಕ್ಕೆ ಆರ್‌ಸಿಎಲ್ ಸಿಸಿ-ಅಭಿನಂದನ್ ಸಿಸಿ ಪಂದ್ಯಾವಳಿ ನಡೆಯಲಿದೆ. ಅ.20ರಂದು ಪೈನಲ್ ಪಂದ್ಯಾವಳಿ ನಡೆಯಲಿದೆ.
ಐಪಿಎಲ್ ನಿಯಮಗಳೇ ಇಲ್ಲೂ ಅನ್ವಯ :
ಲಿಂಗಸುಗೂರು ಪ್ರೀಮಿಯರ್ ಲೀಗ್‌ನ ಪ್ರತಿವರ್ಷ ಪಂದ್ಯಾವಳಿಯಲ್ಲಿ ಐಪಿಎಲ್ ಅಂತರರಾಷ್ಟಿçÃಯ ಕ್ರಿಕೆಟ್ ಪಂದ್ಯಾವಳಿಯ ನಿಯಮಗಳೇ ಇಲ್ಲೂ ಪಾಲನೆ ಮಾಡಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಮನೆಯಲ್ಲಿ ಕುಳಿತುಕೊಂಡು ನೋಡಲು ಆನ್‌ಲೈನ್ ಸ್ಕೋರ್ ವ್ಯವಸ್ಥೆ ಮಾಡಲಾಗಿದೆ.
ಆರು ಪಂದ್ಯಾವಳಿಗಳ ವಿಜೇತ ತಂಡ ಯಾರು :
ಎಲ್‌ಪಿಎಲ್ ಕಳೆದ ಆರು ಸೀಜನ್ ಪೂರೈಸಿ ಏಳನೇ ಸೀಜನ್‌ಗೆ ಕಾಲಿಟ್ಟಿದೆ. ಮೊದಲು ಸೀಜನ್‌ನಲ್ಲಿ ಭಗೀರಥ ಸಿಸಿ, ಎರಡನೇಯದಾಗಿ ಬಸವಸಾಗರ ಬುಲ್ಸ್, ಮೂರನೇಯದಾಗಿ ಅಭಿನಂದನ್ ಸಿಸಿ, ನಾಲ್ಕನೇಯದಾಗಿ ಆರ್.ಬಿ.ಸರ್ಕಲ್ ಟೈರ‍್ಸ್, ಐದನೇ ಅಭಿನಂದನ್ ಸಿಸಿ ಹಾಗೂ ಆರನೇ ಸೀಜನ್‌ನಲ್ಲಿ ಎನ್‌ಜಿಎಲ್ ಸಿಸಿ ಫೈನಲ್‌ನಲ್ಲಿ ಗೆದ್ದು ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿವೆ. 7ನೇ ಸೀಜನ್ ಬಹುಮಾನ ಯಾರ ಪಾಲಾಗಲಿದೆ ಎಂಬುದು ಪಟ್ಟಣದ ಜನತೆಯಲ್ಲಿ ಕೂತಹಲ ಮೂಡಿಸಿದೆ.
50 ಸಾವಿರ ರೂ ಪ್ರಥಮ ಬಹುಮಾನ :
ಲಿಂಗಸುಗೂರು ಪ್ರೀಮಿಯರ್ ಲೀಗ್‌ನ 7ನೇ ಸೀಜನ್ನ ಪ್ರಥಮ ಬಹುಮಾನ 50 ಸಾವಿರ ರೂಪಾಯಿ ಹಾಗೂ ಟ್ರೋಫಿಯನ್ನು ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು ಹಾಗೂ ದ್ವಿತೀಯ ಬಹುಮಾನ 21 ಸಾವಿರ ರೂ ಹಾಗೂ ಟ್ರೋಫಿಯನ್ನು ಪ್ರಥಮ ದರ್ಜೆ ಗುತ್ತಿಗೆದಾರ ಗೋವಿಂದ ರಾಜ್ ಅಮ್ಮಾಪುರ ನೀಡಲಿದ್ದಾರೆ. ಇನ್ನಿತರ ಪ್ರಶಸ್ತಿಗಳನ್ನು ವಿವಿಧ ಪ್ರಾಯೋಜಕರು ನೀಡಲಿದ್ದಾರೆ.
ಲಿಂಗಸುಗೂರಿನಲ್ಲಿ ಕ್ರೀಡಾಕೂಟಗಳು ನಡೆಯತ್ತಲೇ ಇರಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಎಲ್‌ಪಿಎಲ್ ಪಂದ್ಯಾವಳಿ ಆಯೋಜನೆ ಮಾಡುತ್ತಿದ್ದೇವೆ. ಪಟ್ಟಣದ ಸಾರ್ವಜನಿಕರು ಸಹಕಾರ ನೀಡಬೇಕೆಂದು ಎಲ್‌ಪಿಎಲ್ ಸಮಿತಿ ಮುಖಂಡರಾದ ಹುಲಿಗೇಶ ನಾಯಕ, ಅಜೀಮ್ ಪಟೇಲ್, ಶರಣಬಸವ ಮ್ಯಾಡಿ, ಚಂದ್ರು ಹಿರೇಮಠ, ಬಿಎಸ್‌ಎಫ್ ಮಾಜಿ ಯೋಧ ಸಿದ್ದು ತಿಳಿಸಿದ್ದಾರೆ.
Table of Contents
- Jagdish Sharma sampa : ಮಹಾಭಾರತ ಪ್ರತಿಯೊಬ್ಬ ಭಾರತೀಯನ ಚರಿತ್ರೆ
- Amit shah :ಅಂಬೇಡ್ಕರರಿಗೆ ಅವಮಾನಿಸಿದ ಅಮಿತ್ ಶಾ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ
- Mahabharata :ಡಿ.21ರಿಂದ ಮಹಾಭಾರತ ಚಿಂತನ ಮಂಥನ ಕಾರ್ಯಕ್ರಮ
- Rambhapuri peetha :ಮನುಷ್ಯನಿಗೆ ಶಾಸ್ತ್ರ-ಶಸ್ತ್ರದ ಭಯವಿರಬೇಕು
- Drop Drip irrigation ಹನಿ ನೀರಾವರಿ ಬಿಟ್ಟು ಹರಿ ನೀರಾವರಿ ಜಾರಿಗೊಳಿಸಿ