ರಾಮರಾಜ್ಯದ ಪರಿಕಲ್ಪನೆ ಸಾರಿದ ಮಹರ್ಷಿ :
ಲಿಂಗಸುಗೂರು : Maharshi Valmiki ಮಹರ್ಷಿ ವಾಲ್ಮೀಕಿಅವರು ಸಮಸ್ತ ಮನುಕುಲಕ್ಕೆ ಆದರ್ಶಪ್ರಾಯವಾದ ರಾಮಾಯಣ ಮಹಾಕಾವ್ಯವನ್ನು ನೀಡಿದ್ದಾರೆ. ರಾಮಯಣ ಕೇವಲ ಧಾರ್ಮಿಕ ಗ್ರಂಥ ಮಾತ್ರವಷ್ಟೇ ಅಲ್ಲದೇ, ಕಾವ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಸಕಲ ಜೀವರಾಶಿಗಳಿಗೆ ಲೇಸಬಯಸುವ ಸೂತ್ರವನ್ನು ರಾಮರಾಜ್ಯದ ಪರಿಕಲ್ಪನೆಯ ಮೂಲಕ ಸಾರಿದ್ದಾರೆ ಎಂದು ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ (Maharshi Valmiki )ಜಯಂತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ ಅವರು, ಸಂಸ್ಕೃತದಲ್ಲಿ ಮೊಟ್ಟ ಮೊದಲಿಗೆ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿರುವ ಆದಿಕವಿ ಮಹರ್ಷಿ ವಾಲ್ಮೀಕಿಯವರನ್ನು ಸ್ಮರಿಸಿಕೊಂಡು ಗೌರವ ಸಲ್ಲಿಸುವ ಮತ್ತು ಕಾವ್ಯದ ಮೂಲಕ ನೀಡಿರುವ ಆದರ್ಶ ಮೌಲ್ಯಗಳನ್ನು ಯುವ ಪೀಳಿಗೆಗೆ ತಿಳಿಸುವ ಹಿನ್ನಲೆಯಲ್ಲಿ ಪ್ರತಿ ವರ್ಷವು ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಮಹರ್ಷಿ ವಾಲ್ಮೀಕಿಯವರು ನೂರಾರು ಪಾತ್ರಗಳನ್ನು ಒಂದೇ ಕಾವ್ಯದಲ್ಲಿ ಸೃಷ್ಟಿಸಿ, ಆ ಪಾತ್ರಗಳ ಮೂಲಕ ಮಾನವೀಯತೆ, ಸಮತೆ, ಮಮತೆ, ಭ್ರಾತೃತ್ವ, ಕರುಣೆ, ತ್ಯಾಗ, ಧರ್ಮರಕ್ಷಣೆ, ರಾಜನೀತಿ ಮುಂತಾದ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಮನುಕುಲದ ಉದ್ಧಾರಕ್ಕಾಗಿ ಮಾರ್ಗದರ್ಶನವನ್ನು ನೀಡಿದ್ದಾರೆ.
ರಾಮಾಯಣ ಶ್ರೇಷ್ಠ ಕೃತಿ :
ಅತ್ಯದ್ಬುತ ಕಾವ್ಯವನ್ನು ರಚಿಸಿದ ಆದಿ ಕವಿ ವಾಲ್ಮೀಕಿ ಮಹರ್ಷಿಗಳು.Maharshi Valmiki ಮಹರ್ಷಿ ವಾಲ್ಮೀಕಿ. ಅವರ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುವುದು. ವರ್ತನೆಯ ಪರಿವರ್ತನೆಯೇ ಶಿಕ್ಷಣ’ ಎನ್ನುವ ಸಿದ್ಧಾಂತದ ಪ್ರತ್ಯಕ್ಷ ಉದಾಹರಣೆ ವಾಲ್ಮೀಕಿ, ಸಮಾಜದ ನೀತಿ ನಿರೀಕ್ಷೆಯಂತೆ ಬದಲಿಸಿಕೊಳ್ಳುವುದೇ ಶ್ರೇಷ್ಠ ಶಿಕ್ಷಣವೆಂದು ಬದುಕಿ ತೋರಿಸಿದವರು ವಾಲ್ಮೀಕಿ. ಬದಲಾವಣೆಯು ಮನುಷ್ಯ ಬದುಕಿನಲ್ಲಿ ಜ್ಞಾನದ ಬೆಳಕನ್ನು ತರುತ್ತದೆ ಎಂಬುದನ್ನು ವಾಲ್ಮೀಕಿಯ ಜೀವನದಿಂದ ತಿಳಿಯಬಹುದು. ರತ್ನಾಕರನೆಂಬ ವ್ಯಾಧನೊಬ್ಬ ವಾಲ್ಮೀಕಿ ಮಹರ್ಷಿಯಾಗಿ ರಾಮಾಯಣದಂಥ ಶ್ರೇಷ್ಠ ಕೃತಿ ರಚಿಸಿದ್ದೇ ಅದ್ಭುತವಾದ ಸಂಗತಿ ಎಂದರು.
ಶಿಕ್ಷಣಕ್ಕೆ ಆಧ್ಯತೆ ನೀಡಿ :
ಸಮಾರಂಭದಲ್ಲಿ ಉಪನ್ಯಾಸ ನೀಡಿದ ದುರಗಣ್ಣ ನಾಯಕ, ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಇಡೀ ಮನುಕುಲಕ್ಕೆ ಪ್ರೀತಿ, ನಂಬಿಕೆ, ವಿಶ್ವಾಸ, ಸೌಂದರ್ಯ ಪ್ರಜ್ಞೆ, ಬದ್ಧತೆಯಂತಹ ಆದರ್ಶ ಮೌಲ್ಯಗಳನ್ನು ನೀಡಿದ್ದಾರೆ. ಯುವಜನತೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಹಿಂದುಳಿದ ಹಾಗೂ ಶೋಷಿತ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಮೂಲಕ ಅವರನ್ನು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ ಮಹರ್ಷಿ ವಾಲ್ಮೀಕಿ ಅವರ ಚಿಂತನೆಗಳು ಸಹಕಾರಿಯಾಗಿವೆ ಎಂದರು. ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಕೊಡುಗೆ ಅಪಾರ ಇದೆ. ಇಂದು ಸಮಾಜದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಯುದ್ಧ, ಖಡ್ಗ ಬಿಡಬೇಕು, ಬದಲಾವಣೆ ಆಗಬೇಕು, ಸಾಮಾಜಿಕ ನ್ಯಾಯ, ಹಾಸ್ಟೆಲ್, ಶಾಲೆ ಕಾಲೇಜು ಸೇರಿ ಒಳ್ಳೆಯ ಶಿಕ್ಷಣ ಸಿಗಬೇಕು. ರಾಜಕೀಯ, ಉನ್ನತ ಸ್ಥಾನ ಸಿಗಬೇಕು. ಗುಡ್ಡಗಾಡು ಪ್ರದೇಶಗಳಿಗೆ ರಸ್ತೆ, ಸಾರಿಗೆ, ವಿದ್ಯುತ್, ಶಾಲೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಎಂದು ನೆರೆದಿದ್ದ ಅಧಿಕಾರಿಗಳಿಗೆ ಮನವಿ ಮಾಡಿದರು.
ಭಾವಚಿತ್ರ ಮೆರವಣಿಗೆ :
ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ Maharshi Valmiki ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಲಾಯಿತು. ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸಾಂಸ್ಕೃತಿಕ ಭವನಕ್ಕೆ ತಲುಪಿತು.
ಈ ವೇಳೆ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಬಸಣ್ಣ ಮೇಟಿ, ತಹಶೀಲ್ದಾರ ಶಂಶಾಲ0, ತಾ.ಪಂ ಇಒ ಉಮೇಶ, ಸಿಪಿಐ ಪುಂಡಲಿಕ ಪಟದಾರ್, ಸಿಡಿಪಿಓ ಗೋಕಲ ಸಾಬ, ಜೆಸ್ಕಾಂ ಎಇಇ ಬನ್ನೆಪ್ಪ ಕರಿಬಂಟನಾಳ, ಅಬಕಾರಿ ಉಪ ನಿರೀಕ್ಷಕ ಮಹ್ಮದ್ ಹುಸೇನ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಚಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಮಾಕಾಪುರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ ಅಸುಂಡಿ, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ದ್ಯಾಮಣ್ಣ ನಾಯಕ, ಬಿಆರ್‌ಸಿ ಹನುಮಂತಪ್ಪ ಕುಳಗೇರಿ, ಸಿಆರ್‌ಸಿ ಬಸವರಾಜ ಕರಡಿ ಸೇರಿದಂತೆ ಅನೇಕರಿದ್ದರು.
ರಾಯಚೂರಿನಲ್ಲಿ ವಾಲ್ಮೀಕಿ ಜಯಂತಿ :
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ರಾಯಚೂರು ವತಿಯಿಂದ ಹಮ್ಮಿಕೊಂಡಿದ್ದ ರಾಯಚೂರು ನಗರದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಸಂಸದ ಜಿ.ಕುಮಾರ್ ನಾಯಕ ಹಾಗೂ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ವಾಲ್ಮೀಕಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ವಾಲ್ಮೀಕಿ ಭಾವಚಿತ್ರವಿರುವ ರಥಕ್ಕೆ ಚಾಲನೆ ನೀಡಲಾಯಿತು. ನಂತರ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಈ ವೇಳೆಯಲ್ಲಿ ಜಿಲ್ಲಾಧಿಕಾರಿ ಕೆ ನಿತೀಶ್, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಂ ಪಾಂಡ್ವೆ, ಸಹಾಯಕ ಆಯುಕ್ತ ಗಜಾನನ ಬಾಳೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ನಾನಾ ಕಡೆಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ :
ಲಿಂಗಸುಗೂರು ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ Maharshi Valmiki ಆಚರಿಸಲಾಯಿತು. ಈ ವೇಳೆ ತಹಶೀಲ್ದಾರ ಶಂಶಾಲಂ ಹಾಗೂ ಸಿಬ್ಬಂದಿಗಳಿದ್ದರು. ಕಂದಾಯ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು. ಕಂದಾಯ ನಿರೀಕ್ಷಕ ರಾಮಕೃಷ್ಣ ನಾಯಕ, ಗ್ರಾಮ ಆಡಳಿತ ಅಧಿಕಾರಿಗಳಾದ ವಿನಯ ಕುಮಾರ್, ಬಸವರಾಜ ಲಿಂಗಸುಗೂರು ,ಅಮರೇಶ ರಾಠೋಡ ಇದ್ದರು. ಪುರಸಭೆ ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು. ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರ, ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ವ್ಯವಸ್ಥಾಪಕ ಹನುಮಂತ ನಾಯಕ,ಶಿವಲಿಂಗ ಮೆಗಳಮನಿ, ಸುಜಾತಾ, ಶಾನವಾಜ ಕರಡಿ,ಮಲ್ಲೇಶ ಮಾಟೂರ, ವೆಂಕಟೇಶ್, ಮಾನಪ್ಪ ನಾಯಕ ಇದ್ದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ Maharshi Valmiki ಆಚರಿಸಲಾಯಿತು ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಹುಂಬಣ್ಣ ರಾಥೋಡ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚನ್ನಬಸವರಾಜ ಮೇಟಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಯವರು ಹಾಜರಿದ್ದರು. ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರನಗೌಡ ಲೆಕ್ಕಿಹಾಳ, ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ದ್ಯಾಮಣ್ಣ ನಾಯಕ, ಯುವ ಮುಖಂಡ ಈಶ್ವರ ಎಮ್ ವಜ್ಜಲ್ ಹಾಗೂ ಇನ್ನಿತರಿದ್ದರು.
ಈಚನಾಳದಲ್ಲೂ ಆಚರಣೆ :
ತಾಲೂಕಿನ ಈಚನಾಳ ಗ್ರಾಮದಲ್ಲಿ ಆದಿಕವಿ Maharshi Valmiki ಮಹರ್ಷಿ ವಾಲ್ಮೀಕಿ ಭಾವಚಿತ್ರ ಕ್ಕೆ ಸಾರ್ವಜನಿಕವಾಗಿ ಪೂಜೆ ಸಲ್ಲಿಸುವ ಮೂಲಕ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ಗ್ರಾಮದ ಕೇಂದ್ರ ಸ್ಥಾನದಲ್ಲಿರುವ ಮಹರ್ಷಿ ವಾಲ್ಮೀಕಿ ಭಾವಚಿತ್ರವಿರುವ ಫಲಕ ಕ್ಕೆ ಸಂಗಯ್ಯ ಸ್ವಾಮಿ ಹಿರೇಮಠ ಅವರ ಮಾರ್ಗದರ್ಶನದಂತೆ ವಾಲ್ಮೀಕಿ ಸಮಾಜ ಸೇವಾ ಸಂಘದ ಗ್ರಾಮ ಘಟಕದ ಅಧ್ಯಕ್ಷ ಬಸವಲಿಂಗಪ್ಪ ಗುಜ್ಜಲ್ ಪೂಜೆ ನೆರವೇರಿಸಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಗಂಗಮ್ಮ ಉಮೇಶ ಚವ್ಹಾಣ,ಪಿಡಿಒ ಖಾಜಾ ಬೇಗಂ,ಕಾರ್ಯದರ್ಶಿ ಶಿವಪ್ಪ,ಮಾಜಿ ಗ್ರಾಪಂ ಅಧ್ಯಕ್ಷ ಆದಪ್ಪ ಮೇಟಿ, ಪ್ರಾಧ್ಯಾಪಕರಾದ ಖಾಜಾವಲಿ ,ಯಮನಪ್ಪ ಕಟ್ಟಿಮನಿ,ತಿಮ್ಮಣ್ಣ ಗುಜ್ಜಲ್,ಶಂಭಯ್ಯ ಸ್ವಾಮಿ ,ರಮೇಶ ಚಿಗರಿ,ಮುತ್ತು ನಾಯಕ,ಅಮರೇಶ ಸೇರಿದಂತೆ ಇತರರಿದ್ದರು.
ಸುದ್ದಿಯ ವಿವರಣೆ ತುಂಬಾ ಚೆನ್ನಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ಹಗರಣಗಳ ಬಗ್ಗೆ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಕೊಟ್ಟು ನಿಮ್ಮ ಪತ್ರಿಕೆಯಿಂದ ಹೊರಬರಲಿ ಹಾಗೂ ಅದಕ್ಕೆ ಸರ್ಕಾರದಿಂದ ಪರಿಹಾರ ಸಿಗಲಿ ಎಂದು ಆಶಿಸುವೆ
ಧನ್ಯವಾದಗಳು ಸರ್