ಮಾರ್ಗಮಧ್ಯೆ ಖೈರವಾಡಗಿಯಲ್ಲಿ ವಿಶ್ರಾಂತಿ ಪಡೆದ ಮಾಸ್ಟರ್ ಆನಂದ್
ಲಿಂಗಸುಗೂರು: ಕಾಮಿಡಿ ಕಿಲಾಡಿಯ ಸೀಸನ್-3 ರನ್ನರ್ ಅಪ್ ಬಹುಮಾನ ವಿಜೇತ ದಾನಪ್ಪ ಅವರ ಆಹ್ವಾನದ ಮೇರಿಗೆ ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ನಿರೂಪಕ ಹಾಗೂ ಖ್ಯಾತ ನಟ ಮಾಸ್ಟರ್ ಆನಂದ್ (Masater Andnd )ಅವರು ಮಹಾಲಿಂಗಪುರದಿಂದ ಮಂತ್ರಾಲಯಕ್ಕೆ ಪಾದಯಾತ್ರೆ ಬೆಳಿಸಿದ್ದಾರೆ.
ಮಹಾಲಿಂಗಪುರದ ಮಂತ್ರಾಲಯ ಪಾದಯಾತ್ರೆ ಸಂಘ ಕಳೆದ 40 ವರ್ಷಗಳಿಂದ ಮಂತ್ರಾಲಯಕ್ಕೆ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಈ ವರ್ಷ ಕಾಮಿಡಿ ಕಿಲಾಡಿ ಖ್ಯಾತಿ ದಾನಪ್ಪ ಆಹ್ವಾನದ ಮೇರಿಗೆ ನಟ ಮಾಸ್ಟರ್ ಆನಂದ್ (Masater Andnd )ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಮಹಾಲಿಂಗಪುರದಿಂದ ಮಂತ್ರಾಲಯಕ್ಕೆ ಪಾದಯಾತ್ರೆ ನಡೆಸುತ್ತಿರುವ ಹಿನ್ನಲೆಯಲ್ಲಿ ಮಾರ್ಗಮಧ್ಯೆ ಲಿಂಗಸುಗೂರು ತಾಲೂಕಿನ ಖೈರವಾಡಗಿ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿರುವ ಸರಕಾರಿ ಹಾಸ್ಟೇಲ್ ನಲ್ಲಿ ವಿಶ್ರಾಂತಿ ಪಡೆದು ಊಟ ಸೇವಿಸಿ ವಿದ್ಯಾರ್ಥಿಗಳೊಂದಿಗೆ ಕಾಲ ಕಳೆದರು.
2025ರಲ್ಲಿ ಕೂಡಿ ಬಂತು ಪಾದಯಾತ್ರೆ ಯೋಗ :
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮಾಸ್ಟರ್ ಆನಂದ್, ಕಾಮಿಡಿ ಕಿಲಾಡಿಯ ದಾನಪ್ಪ ಕಳೆದ ನಾಲ್ಕೈದು ವರ್ಷಗಳಿಂದ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕರೆಯುತ್ತಿದ್ದರು. ಆದರೆ ನನಗೆ ಸಮಯದ ಅಭಾವ, ಕೋವಿಡ್ ಹಾಗೂ ನಾನಾ ಕಾರಣಗಳಿಂದ ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಿರಲಿಲ್ಲ, ಆದರೆ 2025ರಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸುವ ಯೋಗ ಕೂಡಿಬಂದಿದೆ. ಇದು ನನ್ನ ಜೀವನದಲ್ಲಿ ನೆನಪುಳಿಯುವಂತೆ ಮಾಡಿದೆ. ಪಾದಯಾತ್ರೆ ಸಂದರ್ಭದಲ್ಲಿ ಖೈರವಾಡಗಿ ಹಾಸ್ಟೇಲ್ ನಲ್ಲಿ ಕೆಲಹೊತ್ತು ಕಾಲ ಕಳೆದ, ಸ್ನಾನ ಮಾಡಿ ಊಟ ಸೇವಿಸಿದ ಕ್ಷಣವೂ ನೆನಪು ಇರುವಂತೆ ಮಾಡಿದೆ ಎಂದರು.
ಶಾಲೆ ಯಾವುದಾರೂ ಇರಲಿ ಕಲಿಕೆ ಮುಖ್ಯ :
ಸರಕಾರಿ ಅಥವಾ ಖಾಸಗಿ ಶಾಲೆ ಯಾವುದಾರೂ ಸರಿ ಮನುಷ್ಯನಿಗೆ ಓದು ಮುಖ್ಯ.ಶಾಲೆ ಲೆಕ್ಕಬರಲ್ಲ, ನೀವು ಓದುವುದು ಮುಖ್ಯವಾಗಿರುತ್ತದೆ. ದೇಶದಲ್ಲಿ ಹೆಸರು ಮಾಡಿರುವವರು ಸರಕಾರಿ ಶಾಲೆಯಲ್ಲಿ ಓದಿರುವುದು. ಬೆಂಗಳೂರಿನಲ್ಲಿ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ಕೇರ್ ಮಾಡುತ್ತಿಲ್ಲ, ಆದರೆ ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆ, ಆಸ್ಪತ್ರೆಯಲ್ಲಿ ಕೇರ್ ತೆಗೆದುಕೊಳ್ಳುತ್ತಿದ್ದಾರೆ. ತಂದೆ,ತಾಯಿ ನಿಮ್ಮ ಬಗ್ಗೆ ಸಾಕಷ್ಟು ಕನಸು ಇಟ್ಟುಕೊಂಡಿದ್ದಾರೆ ಅವುಗಳನ್ನು ಈಡೇರಿಸುವುದು ನಿಮ್ಮ ಕರ್ತವ್ಯವಾಗಿದೆ. ಈಗಾಗಿ ಚೆನ್ನಾಗಿ ಓದಿ ನಿಮ್ಮ ಗುರಿ ಮುಟ್ಟಬೇಕು. ಓದಿನ ಜೊತೆಗೆ ನಿಮ್ಮಲ್ಲಿರುವ ಕಲೆಯನ್ನು ಹೊರಹಾಕಬೇಕು. ಟಿವಿಯಲ್ಲಿ ಬಂದ ಕೂಡಲೇ ದೊಡ್ಡ ಕಲಾವಿಧ ಎಂಬ ಭಾವನೆ ಬೇಡ, ಕಲೆಯಲ್ಲಿ ಚಿಕ್ಕದು ದೊಡ್ಡದು ಎಂಬ ಮನೋಭಾವನೆ ಬೇಡ, ಯಾರಿಗೂ ಮೋಸ ಮಾಡದೇ ದುಡಿಯಬೇಕು ಎಂದರು.