suddiduniya.com

Micro finance :ಬಡ ಮಹಿಳೆಯರ ಜೀವ ಹಿಂಡುವ ಮೈಕ್ರೋಫೈನಾನ್ಸ್ ಪರವಾನಿಗೆ ರದ್ದುಗೊಳಿಸಿ

Micro finance

ಲಿಂಗಸುಗೂರು : ಮೈಕ್ರೋಫೈನಾನ್ಸ್ ಗಳಿಂದ ನಿರಂತರ ಕಿರುಕುಳದಿಂದಾಗಿ ಮಹಿಳೆಯರಿಗೆ ಮಾನಸಿಕ ಹಿಂಸೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಕೂಡಲೇ ಮೈಕ್ರೋಫೈನಾನ್ಸ್ ಗಳ( Micro finance )ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕ ಸಮಿತಿ ನೇತ್ರತ್ವದಲ್ಲಿ ಮಹಿಳೆಯರು ಪಟ್ಟಣದ ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಲಿಂಗಸುಗೂರು ತಾಲೂಕಿನಲ್ಲಿ ಖಾಸಗಿ (Micro finance )ಮೈಕ್ರೋಫೈನಾನ್ಸ್ ಗಳು ಬಡ ಹೆಣ್ಣು ಮಹಿಳೆಯರಿಗೆ ಗುಂಪು ರಚನೆ ಮಾಡಿ 1000 ರೂಪಾಯಿಗೆ 1 ರೂಪಾಯಿ 75 ಪೈಸೆ ಬಡ್ಡಿ ದರದಲ್ಲಿ ಹಾಗೂ ಬೇರೆ ಬೇರೆ ಬಡ್ಡಿ ದರದಲ್ಲಿ ಸಾಲ ನೀಡುತ್ತಾರೆ ಸಾಲ ನೀಡಿದ ಬ್ಯಾಂಕುಗಳಿಗೆ ಗುಂಪಿನ ಹೆಣ್ಣು ಮಹಿಳೆಯರು ಸರಿಯಾಗಿ ಕಂತುಗಳನ್ನು ಕಟ್ಟುತ್ತಾರೆ. ಆದರೆ ಕೆಲ ಸಂಧರ್ಭದಲ್ಲಿ ಒಂದು ಕಂತು ಕಟ್ಟದಿದ್ದರೆ ಅವ್ಯಾಚ್ಯ ಶಬ್ದಗಳಿಂದ ಬೈಯ್ದು ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದಾರೆ.  ಹೆಣ್ಣು ಮಕ್ಕಳು ಕೆಲಸ ಮಾಡುವ ಸ್ಥಳಕ್ಕೆ ಬಂದು ಬ್ಯಾಂಕ್‍ನ ಏಜೆಂಟ್ ರಿಗೆ ಕಿರುಕುಳ ನೀಡುತ್ತಾರೆ, ಬಡ ಹೆಣ್ಣುಮಕ್ಕಳು ಕಿರುಕುಳ ತಾಳಲಾರದೆ ಸಾಲ ತೀರಿಸದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಇದಕ್ಕೆ ತಾಜಾ ಉದಾಹರಣೆ ಎಂಬುವಂತೆ ಗ್ರಾಮೀಣ ಕುಟ ಫೈನಾಸಿಯಲ್ ಸರ್ವಿಸ್ ನ ಕಿರುಕುಳ ತಾಳಲಾರದೆ ಕಳೆದ ತಿಂಗಳು ಅಕ್ಟೋಬರ್ 2ರಂದು ತಾಲೂಕಿನ ಹಟ್ಟಿ ಪಟ್ಟಣದ ಈರಮ್ಮ ಗಂ/ ಪರಪ್ಪ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆದಕಾರಣ ಗುಂಪುಗಳಿಗೆ ಹಣ ನೀಡಿ ಬಡ ಹೆಣ್ಣು ಮಕ್ಕಳ ಜೀವ ತೆಗೆಯುವ ಬ್ಯಾಂಕ್‌ಗಳು ಹಾಗೂ ( Micro finance )ಫೈನಾನಸ್‌ಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.

ಸಿಬ್ಬಂದಿಗಳ ಕಿರುಕುಳ ತಾಳತಾರದೇ ವಿಷ ಸೇವಿಸಿ  ಆತ್ಮಹತ್ಯೆ ಮಾಡಿಕೊಂಡ ಬಡ ಮಹಿಳೆ ಈರಮ್ಮ ಕುಟಂಬಕ್ಕೆ ಪರಿಹಾರ ನೀಡಬೇಕು, ಆತ್ಮಹತ್ಯೆ ಕಾರಣರಾದವರ ಗ್ರಾಮೀಣ ಕೂಟ ಫೈನಾನ್ಸ್‍ ಸರ್ವಿಸ್ ಪರವಾನಿಗೆ ರದ್ದುಗೊಳಿಸಬೇಕು. ಬ್ಯಾಂಕ್ ಸಿಬ್ಬಂದಿಗಳು ಸಮಯ ಪಾಲನೆ ಮಾಡದೇ ಬೆಳಗ್ಗೆ 7 ರಿಂದ ರಾತ್ರಿ 10, ಗಂಟೆಯ ವರೆಗೆ ಕಿರುಕುಳ ನೀಡಿ ಪ್ರತ್ಯೇಕ ಮನೆಗೆ ದಾಳಿ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಕೂಡಲೇ ನಿಲ್ಲಿಸಬೇಕು.

 ಆರ್.ಬಿ.ಐ. ಬ್ಯಾಂಕ್ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ವಾರದ ಬಡ್ಡಿ ವಸೂಲಿ ಮಾಡುತ್ತಿರುವ  ಭಾರತ ಫೈನ್ಸಾಸ್,  ಗ್ರಾಮೀಣ ಕುಟಾ ಫೈನಾಸಿಯಲ್ ಸರ್ವಿಸ್, ಇವರ ಮೇಲೆ ಕಠಿಣವಾದ ಕಾನೂನು ಕ್ರಮ ಜರುಗಿಸಿ ಇವರ ಪರವಾಹನಿಗೆ ರದ್ದು ಮಾಡಬೇಕು. ಕೆಲ ಬ್ಯಾಂಕ್ ಸಿಬ್ಬಂದಿಗಳು ಗುಂಪುಗಳಿಗೆ ಸಾಲ ನೀಡಲು ಒಂದು ಗುಂಪು ಬರುತ್ತೆ. ಆದರೆ ವಸೂಲಿ ಮಾಡಲು ಇನ್ನೊಂದು ಗುಂಪು ಬರುತ್ತಾರೆ ಸಾಲ ವಸೂಲಿ ಮಾಡುವ ಸಿಬ್ಬಂದಿ ಗುಂಪಿನವರು ಗೂಂಡಾಗಳಂತೆ ವರ್ತನೆ ಮಾಡಿ ಸಾಲ ವಸೂಲಿ ಮಾಡುತ್ತಿದ್ದಾರೆ. (Micro finance )ಗುಂಪುಗಳಲ್ಲಿ ಸಾಲ ನೀಡುವ ಬ್ಯಾಂಕ್ ಗಳು ಕಡ್ಡಯವಾಗಿ ಗುಂಪಿನ ಮಹಿಳೆಯರಿಗೆ ಪೋನ್ ಕಡ್ಡಾಯ ಇರಬೇಕು ಅಂತಾರೆ. ಇಲ್ಲಾದಿದ್ದರೆ ಪಕ್ಕದಮನೆಯವರ ಪೋನ್ ನಂಬರ್ ಕೊಟ್ಟಿದವರು ಸಾಲ ತೀರಿಸಬೇಕು ಅಂದರೆ ಇದು ಯಾವ ನ್ಯಾಯ.ಒಂದು ಕಂತುಗಳ ಅಥವಾ 2 ಕಂತುಗಳು ಇವು ಹಣ ಕಟ್ಟಿಲ್ಲಾ ಅಂದರೆ ನಮ್ಮ ಆರ್ಧಾ ಕಾರ್ಡ ರದ್ದು ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿದ್ದಾರೆ.

ಭಾರತ್ ಫೈನಾನ್ಸ್, ಗ್ರಾಮೀಣ ಕೂಟಾ, ಧರ್ಮಸ್ಥಳ ಬ್ಯಾಂಕ್‍, ಮುತ್ತೂಟ್ ಫೈನಾನ್ಸ್,ಆರ್‍ ಬಿಎಲ್‍, ಟಾಟಾ ಕ್ಯಾಪ್ಟಲ್ ಬ್ಯಾಂಕ್, ಬೇಲ್ ಸ್ಟಾರ್‍ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇ-ಕೊಮರಸ್ ಬ್ಯಾಂಕ್, ಅವಂತಿ ಬ್ಯಾಂಕ್, ಸಮಸ್ತ (Micro finance )ಮೈಕ್ರೋ ಫೈನಾನ್ಸ್, ಮಣಪುರಂ ಬ್ಯಾಂಕ್, ಎಸ್‍ಎಸ್‍ಎಫ್‍್ಐ ಬ್ಯಾಂಕ್, ಗ್ರಾಮಶಕ್ತಿ, ಎಲ್‍ಎನ್‍ ಟಿ ಬ್ಯಾಂಕ್, ನಬಾಡ್ ಫೈನಾನ್ಸ್, ಸ್ಪಂದನಾ ಬ್ಯಾಂಕ್, ಬಿ.ಎಸ್‍ಎಸ್‍ ಬ್ಯಾಂಕ್ ಗಳಿಗೆ ನೋಟೀಸ್ ನೀಡಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ  ಸಚಿವೆ ಲಕ್ಷ್ಮೀ ಹೆಬ್ಳಾಕರ್ ಗೆ ಬರೆದ ಮನವಿಯನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಯಿತು.

ಈ ವೇಳೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಶಕುಂತಲಾ ಪಾಟೀಲ್, ತಾಲೂಕಾಧ್ಯಕ್ಷೆ ವನಜಾಕ್ಷಿ, ಪ್ರಧಾನ ಕಾರ್ಯದರ್ಶಿ ಸುಗಂದಿ, ಸಿಐಟಿಯು ಮಹ್ಮದ್ ಹನೀಫ್, ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ಅಲ್ಲಾಬಕ್ಷ ದೇವಪುರ, ದಾವೂದ್, ಹಾಜಿಮೌಲಾ, ಈರಮ್ಮ ಕಾಕಾನಗರ, ಸಾಹೆರೆಖಾನ್, ಶಾಂತಮ್ಮ, ಚೆನ್ನಬಸವ, ತಯ್ಯಬಾ, ತಸ್ಲಿಂ,ಜೈಬುನ್ ಸೇರಿದಂತೆ ಅನೇಕರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!