ಯುವಕನಿಗೆ ಲಿಂಗಸುಗೂರಿನಲ್ಲಿ ಸನ್ಮಾನ
ಲಿಂಗಸುಗೂರು : ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದ ಯುವಕನೊಬ್ಬ ಜಗತ್ತಿನ ಅತಿ ಎತ್ತರದ ಶಿಖರವಾದ (Mount Everest )ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್ ಏರುವ ಮೂಲಕ ರಾಯಚೂರು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
ಪಟ್ಟಣದ ಎಸ್.ಆರ್.ಡೆವಲಪರ್ಸ್ ಮುಖ್ಯಸ್ಥ ಸೂರ್ಯಬಾಬು ಅವರ ಸುಪುತ್ರ ಸೋಹನ್ ಕುಮಾರ್ ( Mount Everest )ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ ಯುವಕನಾಗಿದ್ದಾನೆ. ಜೀವನದಲ್ಲಿ ಟ್ರಕ್ಕಿಂಗ್ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದ ಸೋಹನ್ ಕುಮಾರ್ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಬೇಕೆಂದು ಪಣತೊಟ್ಟು, 2024 ಅಕ್ಪೋಬರ್ 20ರಂದು 5,364 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಅನ್ನು ಏರಿ ಸಾಧನೆಯನ್ನು ಮೆರೆದಿದ್ದಾರೆ. ಒಟ್ಟು 8 ದಿನಗಳ ಸಾಹಸ ನಡಿಗೆ ರಣರೋಚಕವಾಗಿದ್ದು, ಮೈನಸ್ 18 ರಿಂದ ಮೈನಸ್ 20 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಎದುರಿಸಿ ಎವರೆಸ್ಟ್ ಬೇಸ್ ಕ್ಯಾಂಪನ್ನು ಏರಿದ್ದೇವೆ ಎಂದು ಸೋಹನ್ ಕುಮಾರ್ ತಿಳಿಸಿದ್ದಾರೆ.
ಲಿಂಗಸುಗೂರಿನಲ್ಲಿ ಸನ್ಮಾನ :
ರಾಯಚೂರು ಜಿಲ್ಲೆಯಲ್ಲಿಯೇ ಮೊದಲ ಭಾರಿಗೆ (Mount Everest) ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಹತ್ತಿದ ಕೀರ್ತಿಗೆ ಪಾತ್ರರಾದ ಸೋಹನ್ ಕುಮಾರ್ ಅವರಿಗೆ ಪಟ್ಟಣದ ಅಮರೇಶ್ವರ ಬಾಲಕಿಯರ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಗಂಗಮ್ಮ ಕಟ್ಟಿಮನಿ ಹಾಗೂ ಶಿಕ್ಷಕರಾದ ಮಹ್ಮದ್ ಮುಸ್ತಫಾ ಹಾಗೂ ಗೆಳೆಯರ ಬಳಗದಿಂದ ಪಟ್ಟಣದ ಎಸ್ ಆರ್ ಲೇಔಟ್ ನಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಏನೇ ಕಷ್ಟವಾದರೂ ಮೌಂಟ್ ಎವರೆಸ್ಟ್ ಏರುವುದೇ ನಮ್ಮ ಗುರಿ
ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಹನಕುಮಾರ,( Mount Everest ) ಮೌಂಟ್ ಎವರೆಸ್ಟ್ ಏರಲು ನನ್ನ ತಂದೆ ಹಾಗೂ ನನ್ನ ಗುರುಗಳೇ ಪ್ರೇರಣೆಯಾಗಿದ್ದಾರೆ. ಮೌಂಟ್ ಎವರೆಸ್ಟ್ ಏರಲು 1000 ಜನ ಅರ್ಜಿ ಹಾಕಿದ್ದರು, ಅದರಲ್ಲಿ 400 ಜನ ಆಯ್ಕೆಯಾದರು, ನಾಲ್ಕುವರೆ ತಿಂಗಳು ಕಾಲ ತರಭೇತಿ ನಡೆಸಲಾಯಿತು ಅದರಲ್ಲಿ ಕೇವಲ 18 ಜನರು ಅಂತಿಮವಾಗಿ ಆಯ್ಕೆಯಾದರು ಅದರಲ್ಲಿ ನಾನೂ ಒಬ್ಬನಾಗಿದ್ದೆ, ಅಂತಿಮವಾಗಿ ಆಯ್ಕೆಯಾದ 18 ಜನರಲ್ಲಿ 13 ವಿದ್ಯಾರ್ಥಿಗಳು ಹಾಗೂ 5 ಜನ ಶಿಕ್ಷಕರಿದ್ದರು. ನಂತರ ಪರೀಕ್ಷೆ ನಡೆಸಿ ಅದರಲ್ಲಿ ಪಾಸಾಗಿದ್ದೆ, ಇದಲ್ಲದೆ ನಮ್ಮ ಸುತ್ತಮುತ್ತಲಿನ ಬೆಟ್ಟ ಗುಡ್ಡ ಹತ್ತುವ ಮೂಲಕ ಸ್ವಯಂ ತರಬೇತಿ ಪಡೆದುಕೊಂಡೆವು,
ನಂತರ ನಮಗೆ ಎರಡು ತಿಂಗಳು ಕಾಲ ತಿಂಗಳು ಆನಲೈನ್ ತರಭೇತಿ ನೀಡಲಾಯಿತು. ಪ್ರತಿದಿನ ಒಂದು ಗಂಟೆಯಲ್ಲಿ 10 ಕಿ.ಮೀ ಓಡುವ ನಮ್ಮ ಸಾಮಾರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು, ಮೌಂಟ್ ಎವರೆಸ್ಟ್ ಏರಲು ನಮಗೆ ಅಂತಿಮವಾಗಿ ಕರೆ ಬಂದ ಅಕ್ಟೋಬರ್ 12ರಂದು ವಿಜಯವಾಡದಿಂದ ದೆಹಲಿ ಮೂಲಕ ಕಠ್ಮಂಡು ಗೆ ತಲುಪಿದ ಮೌಂಟ್ ಎವರೆಸ್ಟ್ ಏರಲು ಅಂತಿಮವಾಗಿ ಸಿದ್ಧತೆ ಮಾಡಿಕೊಳ್ಳಲಾಯಿತು. ನಂತರ ಅಲ್ಲಿ ಮೂರು ಗುರಿ ತಲುಪಲು ಸಾಧ್ಯವಾಯಿತು. 4600 ಮೀಟರ್ ಎತ್ತರ ಬೇಸ್ ಕ್ಯಾಂಪ್ ಹತ್ತಲು ಸಾಕಷ್ಟು ತೊಂದರೆಯಾದರೂ ಮೈನಸ್ 18 ಡಿಗ್ರಿ ವಾತಾವರಣ ಇದ್ದರೂ ನಾವು ಸಾಧನೆ ಮಾಡಬೇಕೆಂಬ ಛಲ ನಮ್ಮನ್ನು ಮೌಂಟ್ ಎವರೆಸ್ಟ್ ಏರಲು ಸಾಧ್ಯವಾಯಿತು. ಅಕ್ಟೋಬರ್ 20ರಂದು ಮೌಂಟ್ ಎವರೆಸ್ಟ ಏರುವ ಮೂಲಕ ನನ್ನ ಗುರಿ ಮುಟ್ಟಿದ ಹೆಮ್ಮೆಯಾಗಿದೆ ಎಂದರು.
ಈ ಸಮಾರಂಭದಲ್ಲಿ ಬಿಇಒ ಶರಣಪ್ಪ ವಟಗಲ್,ನೂರ್ ಅಹ್ಮದ್, ಶಿಕ್ಷಕರಾದ ಗಂಗಮ್ಮ ಕಟ್ಟಿಮನಿ, ಮಹ್ಮದ್ ಮುಸ್ತಫಾ, ಎಸ್.ಆರ್.ಡೆವಲಪರ್ಸ್ ಮುಖ್ಯಸ್ಥ ಸೂರ್ಯಬಾಬು, ಸಮ್ ಪದವಿ ಕಾಲೇಜಿನ ಪ್ರಾಚಾರ್ಯ ಸುರೇಶ, ಶಿಕ್ಷಕ ಗವಿಸಿದ್ದಪ್ಪ ಸೇರಿದಂತೆ ಅನೇಕರಿದ್ದರು.