ಲಿಂಗಸುಗೂರು ಪುರಸಭೆ :
ಲಿಂಗಸುಗೂರು : ರಾಜಕೀಯ ಪ್ರತಿಷ್ಠೆ ಕಣವಾಗಿರುವ ಸ್ಥಳೀಯ ಪುರಸಭೆ(Municipal) ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ(President-Vice President ) ಚುನಾವಣೆ (election) ನಡೆಸಲು ಎರಡನೇ ಭಾರಿ ದಿನಾಂಕ ನಿಗದಿ ಮಾಡಿ ತಹಶೀಲ್ದಾರ ಶಂಶಾಲ0 ಎಲ್ಲಾ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
23 ಸದಸ್ಯರ ಬಲದ ಸ್ಥಳೀಯ ಪುರಸಭೆಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲು ಈಗಾಗಲೇ ಗೊತ್ತುಪಡಿಸಲಾಗಿದೆ. ಅದರಂತೆ ತಹಶೀಲ್ದಾರ ಶಂಶಾಲ0 ಸೆ.18ರಂದು (Municipal election )ಚುನಾವಣೆ ನಿಗದಿ ಮಾಡಲಾಗಿತ್ತು. ಆದರೆ ಪಕ್ಷಾಂತರ ಕಾಯ್ದೆ ಉಲ್ಲಂಘನೆ ಮಾಡಿದ್ದರಿಂದ ಜಿಲ್ಲಾಧಿಕಾರಿಗಳು ನಾಲ್ಕು ಜನ ಸದಸ್ಯರನ್ನು ಅನರ್ಹಗೊಳಿಸಿದ್ದರು, ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ನಾಲ್ವರು ಸದಸ್ಯರು ಕಲುಬುರಗಿ ಹೈಕೋರ್ಟ್ ಮೊರೆ ಹೋಗಿದ್ದರಿಂದ ಹೈಕೋರ್ಟ (Municipal election )ಚುನಾವಣೆಗೆ ತಡೆಯಾಜ್ಞೆ ನೀಡಿ ಸೆ.19ರಂದು ವಿಚಾರಣೆ ಮುಂದೂಡಲಾಗಿತ್ತು, ನಂತರ ಸೆ.24ರಂದು ವಿಚಾರಣೆ ಮುಂದೂಡಲಾಗಿದೆ.
ಎರಡನೇ ಭಾರಿಗೆ ದಿನ ನಿಗದಿ :
ಸೆ.18ರಂದು (Municipal election )ಚುನಾವಣೆ ನಿಗದಿ ಮಾಡಲಾಗಿತ್ತು, ಕೋರ್ಟ್ ತಡೆಯಾಜ್ಞೆಯಿಂದ ಚುನಾವಣೆ ಮುಂದೂಡಿ ನಂತರ ಈಗ ಮತ್ತೆ ಎರಡನೇ ಭಾರಿಗೆ ಅಕ್ಟೋಬರ್ 1ರಂದು ಚುನಾವಣೆಗೆ ದಿನಾಂಕ ನಿಗದಿ ಮಾಡಿ ಎಲ್ಲಾ ಸದಸ್ಯರಿಗೆ ಹಾಗೂ ಸಂಸದ, ಶಾಸಕ, ವಿಧಾನಪರಿಷತ್ ಸದಸ್ಯರಿಗೆ ನೋಟಿಸ್ ನೀಡಲಾಗಿದೆ.
ಅನರ್ಹಗೊಂಡಿದ್ದ ಸದಸ್ಯರಿಗೂ ನೋಟಿಸ್ :
ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಜಿಲ್ಲಾಧಿಕಾರಿಗಳು ಅನರ್ಹಗೊಳಿಸಿದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿ ವಿಚಾರಣೆ ಕಾಯ್ದಿರಿಸಿದ್ದರಿಂದ ಅನರ್ಹಗೊಂಡಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರಾದ ಫಾತೀಮಾ ಮೌಲಾಸಾಬ, ಪ್ರಮೋಧ ಕುಮಾರ್, ಮೌಲಾಸಾಬಾ ಛೋಟುಸಾಬ್, ಶರಣಪ್ಪ ಬಸಪ್ಪ ಈ ನಾಲ್ಕು ಜನ ಸದಸ್ಯರಿಗೆ ಚುನಾವಣೆ ದಿನದ ಸಭೆಯಲ್ಲಿ ಭಾಗವಹಿಸಲು ಹಾಗೂ ಸ್ಪರ್ದಿಸಲು ಅವಕಾಶ ನೀಡಿ ನೋಟಿಸ್ ನೀಡಲಾಗಿದೆ. ಇದರಿಂದ ಅನರ್ಹಗೊಂಡಿದ್ದ ಸದಸ್ಯರಿಗೆ ಖುಷಿ ಇಮ್ಮಡಿಯಾಗಿದೆ.
ಮತ್ತೆ ತಡೆಯಾಜ್ಞೆ..?:
ಅನರ್ಹ ಸದಸ್ಯರಿಗೆ ಸಭೆ ನೋಟಿಸ್ ನೀಡಿದ್ದು ಸದ್ಯಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಹಿನ್ನಡೆ ಉಂಟಾಗಿದೆ. ಇದನ್ನೆ ಸವಾಲಾಗಿ ತೆಗೆದುಕೊಂಡಿರುವ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಬಣದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಕ್ಟೋಬರ್ 1ರಂದು ನಡೆಯುವ ಅಧ್ಯಕ್ಷ-ಉಪಾಧ್ಯಕ್ಷ ಚನಾವಣೆಗೆ ತಡೆಯಾಜ್ಞೆ ತರುವ ಇನ್ನಿಲ್ಲದ ಕಸರತ್ತು ನಡೆಸಿದೆ. ಇದರಿಂದ ಚುನಾವಣೆ ಮತ್ತೆ ಮುಂದೂಡುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ. ಈಗಾಗಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪರ ವಾದ ಮಾಡುತ್ತಿದ್ದ ವಕೀಲರನ್ನು ಬದಲಾವಣೆ ಮಾಡಲಾಗಿದೆ. ಅನರ್ಹ ಸದಸ್ಯತ್ವದ ಕುರಿತು ಸೆ.24ರಂದು ನಡೆಯುವ ವಿಚಾರಣೆ ಒಂದಡೆಯಾದರೆ, ಮತ್ತೊಂದಡೆ ವಿಚಾರಣೆ ಮುಗಿಯುವದರೊಳಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಮುಗಿದರೆ ಭಾರಿ ಮುಖಭಂಗವಾಗುವುದನ್ನು ತಪ್ಪಿಸಲು ಹೂಲಗೇರಿ ಬಣದ ಶತಾಯಗತಾಯ ಎಂಬುವ0ತೆ ಚುನಾವಣೆಗೆ ತಡೆಯಾಜ್ಞೆ ತರುವ ಸಾಧ್ಯತೆ ಇದೆ.
ಪ್ರತಿಷ್ಠೆಯಾಗಿರುವ ಚುನಾವಣೆ :
ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಬಣಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಯಾರೇ ಅಧ್ಯಕ್ಷರಾದರೂ ಕಾಂಗ್ರೆಸ್‌ನವರೇ ಆಗಬೇಕು, ಆದರೆ ನಮ್ಮ ಬಣದವರೇ ಆಗಬೇಕೆಂದು ಎರಡು ಬಣಗಳ ನಾಯಕರು ಪಣತೊಟ್ಟಿದ್ದಾರೆ. ಇದರಿಂದ ಯಾವುದೇ ಮೂಲದಿಂದಾದರೂ ಸರಿ ಪುರಸಭೆ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂದು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ರಾಜಕೀಯ ಜಿದ್ದಾಜಿದ್ದಿ ನಡುವೆ ಚುನಾವಣೆ ಯಾವಾಗ ನಡೆಯುತ್ತೋ..?ಅಧ್ಯಕ್ಷರು ಯಾರಾಗುತ್ತಾರೋ ಎಂಬುದು ಜನತೆ ಕಾದು ನೋಡುತ್ತಿದ್ದಾರೆ.