ವಿಶ್ವ ಹೃದಯ ದಿನದ ಅಂಗವಾಗಿ ಪೌರ ಕಾರ್ಮಿಕರಿಗೆ ಸನ್ಮಾನ
ಲಿಂಗಸುಗೂರು : ಪೌರ ಕಾರ್ಮಿಕರು ಇಲ್ಲದ ಸಮಾಜ ನಾವೆಂದೂ ಉಹಿಸಿಕೊಳ್ಳಲು ಅಸಾಧ್ಯವಾಗಿದೆ. ಪೌರ ಕಾರ್ಮಿಕರ (Municipal Labor )ಸೇವೆ ಅಮೋಘವಾಗಿದೆ ಎಂದು ಅನ್ನದಾನಗೌಡ ಬಯ್ಯಾಪುರ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗನಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ಪೌರ ಕಾರ್ಮಿಕರಿಗೆ ಸನ್ಮಾನ :
ಪಟ್ಟಣದ ಅನ್ನದಾನಗೌಡ ಬಯ್ಯಾಪುರ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನ ಕಾರ್ಯಕ್ರಮ ಅಂಗವಾಗಿ ಸ್ಥಳೀಯ ಪುರಸಭೆಯ (Municipal Labor )ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ನೆರವೇರಿಸಿ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಇಡೀ ಪಟ್ಟಣದ ಜನತೆಯ ಆರೋಗ್ಯ ಪೌರ ಕಾರ್ಮಿಕರ ಸೇವೆ ಮೇಲೆ ನಿಂತಿದೆ. ಪೌರ ಕಾರ್ಮಿಕರು ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಪಟ್ಟಣದ ಜನತೆಯ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತಿದೆ ಎಂದರು.
ಪಟ್ಟಣ ಸ್ವಚ್ಛತೆಯಿಂದ ಇರಲು ಇದಕ್ಕೆ ಪೌರ ಕಾರ್ಮಿಕರೇ ಕಾರಣರು. ಈಗಾಗಿ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೇ ಲೆಕ್ಕಿಸದೇ ಪಟ್ಟಣ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರಿಂದ ಇಡೀ ನಗರವೇ ಆರೋಗ್ಯವಾಗಿದೆ. ಪೌರ ಕಾರ್ಮಿಕರು ದುಶ್ಚಟಗಳಿಗೆ ಅಂಟಿಕೊಳ್ಳದೇ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು ಪೌರ ಕಾರ್ಮಿಕರಿಗಾಗಿ ನಾನು ಈಗಾಗಲೇ ಮೂರು ಭಾರಿ ಆರೋಗ್ಯ ತಪಾಸಣೆ ಶಿಬಿರ ನಡೆಸಿದ್ದೇನೆ. ಇಂದು ವಿಶ್ವ ಹೃದಯ ದಿನದ ಅಂಗವಾಗಿ ಪೌರ ಕಾರ್ಮಿಕರನ್ನು ಸನ್ಮಾನಿಸುತ್ತಿರುವುದು ನನಗೆ ಹೆಮ್ಮ ಎನಿಸುತ್ತಿದೆ ಎಂದರು.