suddiduniya.com

munnuru kapu :ಮುನ್ನೂರು ಕಾಪು ಸಮಾಜ ಶಿಕ್ಷಣ ಹೆಚ್ಚಿನ ಒತ್ತು ನೀಡಿ

ಲಿಂಗಸುಗೂರು : ಮುನ್ನೂರು ಕಾಪು ( munnuru kapu )ಸಮಾಜದ ಏಳಿಗ್ಗೆಗಾಗಿ ಹಾಗೂ ಸಮಾಜಕ್ಕೆ ಸರ್ಕಾರ ಸೌವಲತ್ತುಗಳನ್ನು ಪಡೆಯಲು ಸಮುದಾಯದವರು ಸಂಘಟಿತರಾಗಬೇಕು ಎಂದು ರಾಯಚೂರಿನ ಮಾಜಿ ಶಾಸಕ ಎ.ಪಾಪರೆಡ್ಡಿ ಮುನ್ನೂರು ಕರೆ ನೀಡಿದರು.

munnuru kapu

ಪಟ್ಟಣದ ಶಂಕರರೆಡ್ಡಿ ಕಲ್ಯಾಣ ಮಂಟಪದಲ್ಲಿ ಮುನ್ನೂರು ಕಾಪು( ಬಲಿಜ) ಸಮಾಜ ಹಮ್ಮಿಕೊಂಡಿದ್ದ ಸಮಾಜದ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೂಲತಃ ಕೃಷಿ ಅವಲಂಬಿತ ಸಮುದಾಯ, ವಿಶ್ವಾರ್ಹತೆ ಮತ್ತು ಸ್ವಾವಲಂಬಿ ತನದಿಂದ ಇಂದು ಎಲ್ಲ ರಂಗಗಳಲ್ಲೂ ಬೆಳೆದು ನಿಂತಿದೆ.  ರಾಜ್ಯದಲ್ಲಿ ಮುನ್ನೂರು ಕಾಪು ಸಮಾಜ ಅಲ್ಪಸಂಖ್ಯಾತ ಸಮುದಾಯವಾಗಿದೆ. ಸಂಘಟಿತರಾಗುವ ಮೂಲಕ ಸರ್ಕಾರದಿಂದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿದೆ. ಮುನ್ನೂರು ಕಾಪು ಸಮಾಜಕ್ಕೆ ಯಾವುದೇ ಮೀಸಲಾತಿ ಇಲ್ಲ, ಈಗಾಗಲೇ ಜನರಲ್ ಕೆಟಗೆರಿಯಲ್ಲಿ ನಾವು ಹೋರಾಟ ಮಾಡಬೇಕಾಗಿದೆ ಎಂದರು.

ಸಮಾಜದ ಜನಸಂಖ್ಯೆ ಕಡಿಮೆ ಆದರೆ ಸಮಾಜದವರು ಎಲ್ಲಾ ಸಮುದಾಯದವರೊಂದಿಗೆ ಉತ್ತಮ ಒಡನಾಟ, ಬಾಂಧವ್ಯ ಇಟ್ಟುಕೊಂಡು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದರಿಂದ ಲಿಂಗಸುಗೂರಿನಲ್ಲಿ ಶ್ಯಾಮಸುಂದರರೆಡ್ಡಿ, ಎಂ.ಶ್ರೀನಿವಾಸರೆಡ್ಡಿ ಪುರಸಭೆ ಅಧ್ಯಕ್ಷರಾಗಿದ್ದರು, ಈಗ ಬಾಬುರೆಡ್ಡಿ ಪುರಸಭೆ ಅಧ್ಯಕ್ಷರಾಗುವುದೇ ಸಾಕ್ಷಿಯಾಗಿದೆ. ನಾನು ರಾಯಚೂರಿನಲ್ಲಿ ನಗರಸಭೆ ಅಧ್ಯಕ್ಷರಾಗಿ, ಶಾಸಕರಾಗಿ ಆಯ್ಕೆಯಾಗಲು ಎಲ್ಲಾ ಸಮುದಾಯದವರೊಂದಿಗೆ ಇರುವ ಪ್ರೀತಿ ವಿಶ್ವಾಸವೇ ಕಾರಣವಾಗಿದೆ. (munnuru kapu )ಮುನ್ನೂರು ಕಾಪು ಸಮಾಜದವರ ಮೇಲೆ ವಿಶ್ವಾಸ ಇಟ್ಟು ಪುರಸಭೆ ಅಧ್ಯಕ್ಷ ಸ್ಥಾನ ನೀಡಲಾಗಿದೆ, ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುವಂತೆ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಅವರಿಗೆ ಸಲಹೆ ನೀಡಿದರು.

ಸನ್ಮಾನ ಸಮಾರಂಭ :

ಸಮಾರಂಭದಲ್ಲಿ ಸೌತ್ ಇಂಡಿಯನ್ ಐಕಾನ್ ಲೆಜೆಂಡ್ ಪ್ರಶಸ್ತಿ ಪುರಸ್ಕೃತ ಹಾಗೂ ಮಾಜಿ ಶಾಸಕ ಎ.ಪಾಪರೆಡ್ಡಿ ಹಾಗೂ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಅಂಕಲಿಮಠದ ಪಕೀರೇಶ್ವರ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು, (munnuru kapu )ಮುನ್ನೂರು ಕಾಪು (ಬಲಿಜ) ಸಮಾಜದ ತಾಲೂಕಾಧ್ಯಕ್ಷ ರಾಜಗೋಪಾಲ್ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಪುರಸಭೆ ಉಪಾಧ್ಯಕ್ಷ ಶರಣಮ್ಮ ಕೊಡ್ಲಿ, ನಿವೃತ್ತ ಪ್ರಾಚಾರ್ಯ ಸಿ.ಶರಣಪ್ಪ, ಮುಖಂಡರಾದ ಮನೋಹರೆಡ್ಡಿ, ಭೀಮರೆಡ್ಡಿ, ನರೇಶ್ ರೆಡ್ಡಿ, ಸಂಜೀವ್ ರೆಡ್ಡಿ, ಆನಂದ ರೆಡ್ಡಿ, ಹನುಮಯ್ಯ ರೆಡ್ಡಿ, ತಿಮ್ಮಾರೆಡ್ಡಿ ಮುನ್ನೂರ ಹಾಗೂ ಇನ್ನಿತರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!