ಪ್ರತಿಯೊಬ್ಬರಿಗೂ ಶುದ್ಧ ಕುಡಿವ ನೀರು ಒದಗಿಸುವುದೇ ನನ್ನ ಗುರಿ : ವಜ್ಜಲ್
ಲಿಂಗಸುಗೂರು : ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವುದೇ ನನ್ನ ಗುರಿಯಾಗಿದೆ( My goal is to provide clean drinking water to everyone) ಈಗಾಗಿ ಕೇಂದ್ರ ಸರ್ಕಾರದ ಅಮೃತ-2.0 ಯೋಜನೆಯಡಿಯಲ್ಲಿ ಕುಡಿವ ನೀರಿನ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
93.76 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ :
ಪಟ್ಟಣದ ಈಶ್ವರ ದೇವಸ್ಥಾನದ ಹತ್ತಿರ ಕೇಂದ್ರ ಸರ್ಕಾರದ ಅಮೃತ ಕುಡಿವ ನೀರಿನ ಯೋಜನೆ ನೀರಿನ ವಿತರಣಾ ಕೊಳವೆ ಅಳವಡಿಸಿ ಗೃಹ ಸಂಪರ್ಕ ಕಲ್ಪಿಸುವ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚಾಲನೆ ನೀಡಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ನೇತ್ರತ್ವದ ಕೇಂದ್ರ ಸರ್ಕಾರ ಅಮೃತ ಯೋಜನೆ ಮೂಲಕ ಪಟ್ಟಣಕ್ಕೆ ಕುಡಿವ ನೀರಿಗಾಗಿ 93.76 ಕೋಟಿ ರೂಪಾಯಿ ಬಿಡುಗಡೆಗೊಳಿಸಿದೆ. ಇಂದು ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಾಗಿದೆ. ಪಟ್ಟಣದಲ್ಲಿ ಮುಂದಿನ 30 ವರ್ಷಗಳ ಕಾಲ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳುವುದು ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿದಿನ 135 ಲೀಟರ್ ನೀರು ಒದಗಿಸುವ ಮಹತ್ವದ ಯೋಜನೆಯಾಗಿದೆ. ಪಟ್ಟಣದಲ್ಲಿ ಸದ್ಯ ಐದು ಟ್ಯಾಂಕ್‌ಗಳು ಇದ್ದು ಈ ಯೋಜನೆ ಮೂಲಕ ಹೊಸದಾಗಿ 6 ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಿ ಕಾಮಗಾರಿ ಗುಣಮಟ್ಟದಿಂದ ನಡೆಯವಂತೆ ಮಾಡುವಂತೆ ಮನವಿ ಮಾಡಿದರು. My goal is to provide clean drinking water to everyone.
ಜೆಜೆಎಮ್‌ನಂತೆ ಈ ಯೋಜನೆ ವಿಫಲತೆ ಬೇಡ :
ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಮಾತನಾಡಿ, ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಗುತ್ತಿಗೆದಾರರ ನಿರ್ಲಕ್ಷö್ಯ ಹಾಗೂ ಸಾರ್ವಜನಿಕರ ಅಸಹಕಾರ ಕಾರಣದಿಂದಾಗಿ ಜಲ ಜೀವನ್ ಯೋಜನೆಯ ಕಾಮಗಾರಿಗಳು ಯಶಸ್ವಿಯಾಗುತ್ತಿಲ್ಲ, ಈ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಮಂಜೂರಾಗಿರುವ ಅಮೃತ ಯೋಜನೆಗೆ ಪಟ್ಟಣದ ಜನತೆ ಸಹಕಾರ ನೀಡುವ ಮೂಲಕ ಯೋಜನೆಯನ್ನು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಪಟ್ಟಣದಲ್ಲಿ 1996-97ರಲ್ಲಿ ಕುಡಿವ ನೀರಿನ ಯೋಜನೆ ಜಾರಿಗೆ ತರಲಾಗಿದೆ ಅಂದು ಮುಂದಿನ 25 ವರ್ಷದ ಜನಸಂಖ್ಯೆ ಗುರಿ ಇಟ್ಟುಕೊಂಡು ಯೋಜನೆ ಜಾರಿ ಮಾಡಲಾಗಿತ್ತು, ಜನಸಂಖ್ಯೆ ಹೆಚ್ಚುತ್ತಿದ್ದರಿಂದ ಎರಡ್ಮೂರು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ. ಕುಡಿವ ನೀರಿನ ಸಮಸ್ಯೆಗಳಿಗೆ ಅಮೃತ ಯೋಜನೆ ಮುಕ್ತಿ ನೀಡಲಿದೆ ಎಂದರು. My goal is to provide clean drinking water to everyone
ಯೋಜನೆ ವಿವರ :
ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಪಟ್ಟಣದಲ್ಲಿ ಕುಡಿಯುವ ನೀರಿನ ವಿತರಣಾ ಕೊಳವೆ ಮಾರ್ಗ ಅಳವಡಿಸಿ ಗೃಹ ಸಂಪರ್ಕ ಕಲ್ಪಿಸುವ ಯೋಜನೆಯ 93.76 ಕೋಟಿ ವೆಚ್ಚದ್ದಾಗಿದೆ. 2011 ರ ಜನಗಣತಿ ಪ್ರಕಾರ 35,411 ಇದ್ದು, ಪ್ರಸ್ತುತ 46,699 ಜನಸಂಖ್ಯೆ ಇದೆ. 2040ರಲ್ಲಿ ಅಂದಾಜು ಜನಸಂಖ್ಯೆ 62258 ಹಾಗೂ 2055ರಲ್ಲಿ 92669 ಜನಸಂಖ್ಯೆ ಆಗಬಹುದು ಎಂದು ಪರಿಗಣಿಸಿ ಪ್ರತಿಯೊಬ್ಬರಿಗೆ ತಲಾ 135 ಲೀಟರ್ ಒದಗಿಸುವ ಉದ್ದೇಶ ಈ ಯೋಜನೆಯದಾಗಿದೆ.
ಕಾಳಾಪುರ ಹತ್ತಿರದ ಹಾಲಿ ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಇರುವ ಜಾಕ್‌ವೆಲ್‌ನಲ್ಲಿ ಹಾಲಿ ಇರುವ ಪಂಪಿAಗ್ ಮಷಿನರಿಗಳನ್ನು ಬದಲಿಸಿ 90 ಹೆಚ್.ಪಿಸಾಮರ್ಥ್ಯದ ಹೊಸ ಪಂಪಿAಗ್ ಮಷಿನರಿಗಳನ್ನು ಅಳವಡಿಸುವುದು. ಕಾಳಾಪುರ ಹತ್ತಿರದ ಹಾಲಿ ಕುಡಿಯುವ ನೀರಿನ ಕೆರೆಯ ಜಾಕ್ ವೆಲ್ ನಲ್ಲಿ ಇರುವ ಹಾಲಿ ಇರುವ ಪಂಪಿAಗ್ ಮಷಿನರಿಗಳನ್ನು ಬದಲಿಸಿ 130 ಹೆಚ್.ಪಿ ಸಾಮರ್ಥ್ಯದ ಹೊಸ ಪಂಪಿAಗ್ ಮಷಿನರಿಗಳನ್ನು ಅಳವಡಿಸುವುದು. ಕಾಳಾಪುರ ಹತ್ತಿರದ ಹಾಲಿ ಇರುವ 1204 ಎಮ್.ಎಲ್ ಸಾಮಥ್ಯದ ಕುಡಿಯುವ ನೀರಿನ ಕೆರೆಯಿಂದ ಜಲಶುದ್ದೀಕೃಣ ಘಟಕಕ್ಕೆ 457 ಮಿಮೀ ವ್ಯಾಸದ ಹಾಗೂ 2.80 ಕಿ.ಮೀ ಉದ್ದದ ಎಮ್.ಎಸ್ ಏರು ಕೊಳವೆ ಅಳವಡಿಸುವ ಉದ್ದೇಶ ಹೊಂದಲಾಗಿದೆ. ಹೊಸದಾಗಿ ನೀರಿನ ಟ್ಯಾಂಕ್‌ರಗಳನ್ನ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಪಟ್ಟಣದಲ್ಲಿ 8 ಜೋನ್ ಗಳಲ್ಲಿ ಹೆಚ್.ಡಿ.ಪಿ.ಇ/ಡಿ.ಐ 149.17 ಕಿಮೀ ಉದ್ದದ ವಿತರಣಾ ಕೊಳವೆ ಲೈನ್ ಅಳವಡಿಸಿ ಪಟ್ಟಣದಲ್ಲಿ 6485 ಸಂಖ್ಯೆ ಕುಡಿಯುವ ನೀರಿನ ಗೃಹ ಸಂಪರ್ಕ ಒದಗಿಸಲಾಗುತ್ತಿದೆ (.My goal is to provide clean drinking water to everyone)
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಉಪಾಧ್ಯಕ್ಷೆ ಶರಣಮ್ಮ ಕೊಡ್ಲಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಮಂಡಲ ಅಧ್ಯಕ್ಷರಾದ ಅಯ್ಯಪ್ಪ ಮಾಳೂರು, ಸೇರಿದಂತೆ ಪ್ರಮುಖ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
Table of Contents
My goal is to provide clean drinking water to everyone