ಬದು ನಿರ್ಮಾಣದಲ್ಲಿ ಕೋಟ್ಯಾಂತರ ರೂ ಅವ್ಯವಹಾರ
ಲಿಂಗಸುಗೂರು : ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ (Narega is a scam )ಬದು ನಿರ್ಮಾಣ ಕಾಮಗಾರಿಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಅವ್ಯವಹಾರ ಮಾಡಿದ್ದು, ಈ ಬಗ್ಗೆ ತನಿಖೆಗೆ ವಿಶೇಷ ಪರಿಣಿತರ ತಂಡ ರಚಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಗೌರವಾಧ್ಯಕ್ಷ ಕುಪ್ಪಣ್ಣ ಮಾಣಿಕ್ ಒತ್ತಾಯಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಇಲಾಖೆಯಲ್ಲಿ ತಾಲೂಕಿನ ರೈತರ ಭೂಮಿಯಲ್ಲಿ (Narega is a scam ) ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬದು ನಿರ್ಮಾಣ ಕಾಮಗಾರಿಗಳಲ್ಲಿ 2 ಕೋಟಿ 30 ಲಕ್ಷ ರೂಪಾಯಿಗಳನ್ನು ಅಧಿಕಾರಿಗಳು ಅವ್ಯಹಾರ ಮಾಡಿದ್ದಾರೆ. ಕೆಲಸ ಮಾಡದ ಕೂಲಿಕಾರರ ಬ್ಯಾಂಕ್‍್ ಖಾತೆಗೆ ಹಣ ಜಮಾ ಮಾಡಲಾಗಿದೆ. ಇದು ಲಿಂಗಸುಗೂರು ತಾಲೂಕಿನಲ್ಲಿ ಮಾತ್ರವಲ್ಲ ಇಡೀ ರಾಯಚೂರು ಜಿಲ್ಲೆಯಲ್ಲಿ ಅವ್ಯವಹಾರ ಮಾಡಲಾಗಿದೆ. ಬರೀ ಕೃಷಿ ಇಲಾಖೆ ಒಂದೇ ಅಲ್ಲ ಅನೇಕ ಇಲಾಖೆಗಳಲ್ಲಿ ನರೇಗಾ ಅನುದಾನ ದುರಪಯೋಗ ಮಾಡಲಾಗಿದೆ ಎಂದರು.
ಕಳ್ಳರನ್ನು ಹಿಡಿಯಲು ಕಳ್ಳರನ್ನೇ ನೇಮಕ :
ಬದು ನಿರ್ಮಾಣದಲ್ಲಿ ಆಗಿರುವ( Narega is a scam )ಅವ್ಯವಹಾರದ ತನಿಖೆಗಾಗಿ ತಾಲೂಕು ಪಂಚಾಯತಿ ಕಾರ್ಯಾನಿರ್ವಾಹಕ ಅಧಿಕಾರಿಗಳು ಹತ್ತು ತಂಡಗಳನ್ನು ನೇಮಕ ಮಾಡಿದೆ ಆದರೆ ಗ್ರಾಮ ಪಂಚಾಯತಿಯಲ್ಲಿ ಆಗಿರುವ ಅವ್ಯವಹಾರ ತನಿಖೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನೇ ನೇಮಕ ಮಾಡುವುದೆಂದರೆ ಕಳ್ಳರನ್ನು ಹಿಡಿಯಲು ಕಳ್ಳರನ್ನು ನೇಮಕ ಮಾಡಲಾಗಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳ ತಂಡದಿಂದ ಪಾರದರ್ಶಕ ತನಿಖೆ ಹೇಗೆ ನಿರೀಕ್ಷಿಸಲು ಸಾಧ್ಯ, ಇದೊಂದು ಅವ್ಯವಹಾರ ಮಾಡಿರುವ ಕೃಷಿ ಅಧಿಕಾರಿಗಳನ್ನು ರಕ್ಷಣೆಗೆ ಮಾಡಿರುವ ತಂಡವೆಂದು ಆರೋಪಿಸಿದರು.
ವಿಶೇಷ ತಂಡ ರಚಿಸಿ :
ಕೃಷಿ ಇಲಾಖೆಯಲ್ಲಿ ಬದು ನಿರ್ಮಾಣ ಕಾಮಗಾರಿಯಲ್ಲಿ ಆಗಿರುವ 2.30 ಕೋಟಿ ರೂಪಾಯಿ ಅವ್ಯವಹಾರ ತನಿಖೆಗೆ ನೇಮಿಸಿರುವ ಗ್ರಾಮ ಪಂಚಾಯತ ಮಟ್ಟದ ಅಧಿಕಾರಿಗಳ ತಂಡವನ್ನು ಕೂಡಲೇ ಕೈಬಿಡಬೇಕು, ರೈತ ಸಂಘದ ಪದಾಧಿಕಾರಿಗಳನ್ನೊಗೊಂಡ ಹಿರಿಯ ಅಧಿಕಾರಿಗಳ ವಿಶೇಷ ತಂಡ ರಚಿಸಬೇಕು. ಜಿಲ್ಲಾ ಹಂತದಲ್ಲಿಯೂ ನರೇಗಾ ಕಾಮಗಾರಿಗಳ ತನಿಖೆಗೆ ವಿಶೇಷ ತಂಡ ರಚಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ ಮಾತನಾಡಿ, ಬದು ನಿರ್ಮಾಣದಲ್ಲಿ ಆಗಿರುವ ಅವವ್ಯಹಾರ ತನಿಖೆಗೆ ನೇಮಕ ಮಾಡಿರುವ ತಂಡ ಕೇವಲ ಕಾಟಚಾರಕ್ಕಾಗಿ ಮಾಡಲಾಗಿದೆ. ಈ ಹಿಂದೆ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯ ಆವರಣದಲ್ಲಿ ಆಕ್ರಮವಾಗಿ ಕ್ರಿಮಿನಾಶಕ, ಗೊಬ್ಬರ ಚೀಲಗಳನ್ನು ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಹುನ್ನಾರ ನಡೆಸಿದನ್ನು ಅದನ್ನು ರೈತ ಸಂಘ ಪತ್ತೆ ಹಚ್ಚಿದರೂ ಪ್ರತಿಭಟನೆ ಮಾಡಿದರೂ, ಕೃಷಿ ಜಂಟಿ ನಿರ್ದೇಶಕರು ಕಾಟಚಾರಕ್ಕಾಗಿ ಕೃಷಿ ಅಧಿಕಾರಿಗಳನ್ನೇ ತನಿಖಾಧಿಕಾರಿಗಳನ್ನಾಗಿ ನೇಮಕ ಮಾಡಿ ಈ ಪ್ರಕರಣ ಮುಚ್ಚಿ ಹಾಕಲಾಗಿದೆ. ಈಗ ನರೇಗಾ ಅವ್ಯವಹಾರ ಕೂಡಾ ಅಷ್ಟೇ ಆಗಿದೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ನೇಮಕ ಮಾಡಿರುವ ತಂಡದ ಮೇಲೆ ನಂಬಿಕೆ ಇಲ್ಲ, ಕೂಡಲೇ ಹಿರಿಯ ಅಧಿಕಾರಿಗಳ ವಿಶೇಷ ತಂಡ ರಚಿಸಬೇಕೆಂದು, ಇಲ್ಲವಾದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಈ ವೇಳೆ ರೈತ ಸಂಘದ ತಾಲೂಕಾಧ್ಯಕ್ಷ ದುರ್ಗಾಪ್ರಸಾದ ರೆಡ್ಡಿ, ಆದಪ್ಪ ದೇವರಭೂಪುರ, ಆನಂದ ಕುಂಬಾರ ಹಾಗೂ ಇನ್ನಿತರಿದ್ದರು.