suddiduniya.com

Narega Labourers :ಅಧಿಕಾರಿಗಳ ವಿರುದ್ಧ ಕೂಲಿಕಾರ್ಮಿಕರ ಆಕ್ರೋಶ

Narega Labourers

ಬೇಡಿಕೆ ಹತ್ತು ಈಡೇರಿದ್ದು ಒಂದೇ ಒಂದು..

ಲಿಂಗಸುಗೂರು : ಕೂಲಿಕಾರ್ಮಿಕರ ಹತ್ತಕ್ಕೂ ಅಧಿಕ ಸಮಸ್ಯೆಗಳ ಪರಿಹರಿಸುವಂತೆ ಮನವಿ ಸಲ್ಲಿಸಿದರೂ ಇದರಲ್ಲಿ ಒಂದೇ ಒಂದು ಬೇಡಿಕೆ ಈಡೇರಿಕೆಗೆ ಒಪ್ಪಿದ ಅಧಿಕಾರಿಗಳ ವಿರುದ್ಧ ಪಟ್ಟಣದ ತಾ.ಪಂ ಕಚೇರಿ ಎದುರು ಧರಣಿ ನಡೆಸುತ್ತಿರುವ ನರೇಗಾ ಕೂಲಿಕಾರ್ಮಿಕರು( Narega Labourers) ಆಕ್ರೋಶ ವ್ಯಕ್ತಪಡಿಸಿದರು.

Narega Labourers

(Narega Labourers )ಗ್ರಾಮೀಣ ಕೂಲಿ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡದಿರುವುದರಿಂದ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. (Narega Labourers ) ಕಾರ್ಮಿಕರು ಮಾಡಿದ ಕೆಲಸಕ್ಕೆ ಅಳತೆ ಅಷ್ಟು ಇದೆ ಇಷ್ಟು ಇದೆ ಎಂದು ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆ. ಗ್ರಾ.ಪಂ ಸದಸ್ಯರ ಮಾಡಿದ ಕೆಲಸಕ್ಕೆ ಯಾವುದೇ ಅಳತೆ ಮಾಡದೇ ಪೂರ್ಣ ವೇತನ ಪಾವತಿ ಮಾಡುತ್ತಿದ್ದಾರೆ 10ಕ್ಕೂ ಅಧಿಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತ್ರತ್ವದಲ್ಲಿ ಕೂಲಿಕಾರರು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ, ಜೆಸ್ಕಾಂ ಎಇಇ ಬನ್ನೆಪ್ಪ ಕರಿಬಂಟನಾಳ, ನರೇಗಾ ಸಹಾಯಕ ನಿರ್ದೇಶಕ ವೆಂಕಟೇಶ ದೇಸಾಯಿ, ತೋಟಗಾರಿಕೆ ಇಲಾಖೆ ಅಧಿಕಾರಿ ಥಾವರೆಪ್ಪ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.

ಕೂಲಿಕಾರ್ಮಿಕರ

ಕಾರ್ಮಿಕರ ಬೇಡಿಕೆಗೆ ಒಪ್ಪದ ಅಧಿಕಾರಿಗಳು :

ತಾಲೂಕಿನ ಕೋಠಾ ಗ್ರಾಮದಲ್ಲಿ ಅಲಿಸಾಬ ಇವರ ಹೊಲದಲ್ಲಿ 2023 ಡಿಸೆಂಬರ್ 8ರಂದು ತೋಟಗಾರಿಕೆ ಇಲಾಖೆಯಿಂದ ಬದುವಿನ ಸುತ್ತ ತೆಂಗಿನ ಸಸಿಗಳನ್ನು ನಡೆಲಾಗಿತ್ತು, ಆದರೆ ಇಲ್ಲಿವರಿಗೂ ವೇತನ ಪಾವತಿಯಾಗಿಲ್ಲ, ವೇತನ ಪಾವತಿ ವಿಳಂಭ ಭತ್ಯೆ ಪರಿಹಾರ ನೀಡಬೇಕು. ವಿಳಂಭ ನೀತಿ ಅನುಸರಿಸಿದ ಲಿಂಗಸುಗೂರಿನ ತೋಟಗಾರಿಕೆ ಸಹಾಯಕ ನಿರ್ದೇಶಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಸರ್ಜಾಪುರ ಗ್ರಾಮ ಪಂಚಾಯತಿ ಪಿಡಿಓ ಶೋಭಾರಾಣಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಪತಿಯ ಹೊಲದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದಾರೆ.ಈ ಬಗ್ಗೆ ಮಾಧ್ಯಮದಲ್ಲಿ ವರದಿಯಿಂದ ಎಚ್ಚತ್ತಗೊಂಡ ಪಿಡಿಓ ಸರ್ಕಾರಕ್ಕೆ ಹಣ ಮರುಪಾವತಿ ಮಾಡಿದ್ದಾರೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆಗೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರ್, ಅಧಿಕಾರಿಗಳ ಅಮಾನತ್ ಹಾಗೂ ಅವರ ವಿರುದ್ಧ ಕ್ರಮ ಜರಗಿಸುವ ಬಗ್ಗೆ ನಮ್ಮ ವ್ಯಾಪ್ತಿಗೆ ಬರೋಲ್ಲ ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡ ಕೂಲಿಕಾರ್ಮಿಕ ಸಂಘಟನೆ ಮುಖಂಡ ಗುಂಡಪ್ಪ ಯರಡೋಣಾ, ಅಧಿಕಾರಿಗಳು ಇಲ್ಲಿ ಏನೇ ಅವ್ಯವಹಾರ ಮಾಡಿ ಕೂಲಿಕಾರ್ಮಿಕರಿಗೆ ತೊಂದರೆ ನೀಡಿದರೂ ಅವರನ್ನು ರಕ್ಷಣೆ ಮಾಡುವ ಕೆಲಸ ನೀವು ಮಾಡುತ್ತಿದ್ದೀರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

2ಬೇಡಿಕೆಗಳಿಗೆ 3ದಿನ ಟೈಮ್ :

ಜೆಸ್ಕಾಂ ಇಲಾಖೆ ಸೌಭಾಗ್ಯ ಯೋಜನೆಯಡಿಯಲ್ಲಿ ಕೋಮನೂರು ಗ್ರಾಮದ ಮುಖ್ಯ ರಸ್ತೆಯಿಂದ ರುದ್ರಪ್ಪನ ಮನೆಯವರಿಗೆ ಕಂಬ ಮತ್ತು ಮ್ಭಿಟರ್‌ಗಳ ಅಳವಡಿಕೆ ಮಾಡಬೇಕಾಗಿತ್ತು. ಆದರೆ ಕಂಬಗಳನ್ನು ಹಾಕದೇ ಕೇವಲ ಮನೆಗಳಿಗೆ ಮೀಟರ್‌ಗಳನ್ನು ಅಳವಡಿಸಿ ಬಿಲ್ ಪಾವತಿ ಮಾಡಿಕೊಳ್ಳಲಾಗಿದೆ. ಅದೇ ಹೊನ್ನಹಳ್ಳಿ ಗ್ರಾ.ಪಂಯ ರಾಮನಾಯಕ ದೊಡ್ಡಿಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಮನೆಗಳಿಗೆ ವಿದ್ಯುತ್ ಮೀಟರ್ ಅಳವಡಿಸಿದ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂಬ ಬೇಡಿಕೆಗಳಿಗೆ ಮೂರು ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಕೂಲಿಕಾರ್ಮಿಕರ ರಿಗೆ ಯೋಜನಾ ನಿರ್ದೇಶಕರು ಭರವಸೆ ನೀಡಿದರು.

ಒಂದೇ ಬೇಡಿಕೆಗೆ ಅಸ್ತು :

ಕಾಚಾಪುರ ಗ್ರಾಮದ ಸಂಜೀವಿನಿ ಯೋಜನೆಯಡಿಯಲ್ಲಿ ಸ್ವಚ್ಛ ವಾಹಿನಿ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೆಲಸ ನಿರ್ವಹಿಸಲು ಸ್ವ-ಸಹಾಯ ಗುಂಪಿನ ಸದಸ್ಯರ ಆಯ್ಕೆಯನ್ನು ರದ್ದುಪಡಿಸಲು ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು. ಬೇಡಿಕೆಗಳ ಈಡೇರಿಕೆಗೆ ಸಕಾರತ್ಮಾಕವಾಗಿ ಸಂದ್ಪನೆ ಇಲ್ಲದಿರುವುದರಿಂದ ಧರಣಿ ಮುಂದುವರಿಸಲಾಗಿದೆ ಎಂದು ಸಂಘಟನೆ ಮುಖಂಡ ಗುಂಡಪ್ಪ ಯರಡೋಣಾ ತಿಳಿಸಿದ್ದಾರೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!