ಶೀಘ್ರವೇ ಉದ್ಘಾಟನೆ..?
ಲಿಂಗಸುಗೂರು : ಪಟ್ಟಣದಲ್ಲಿ ನೂತನವಾಗಿ (new)ನಿರ್ಮಿಸುತ್ತಿರುವ ಸಿವಿಲ್ ನ್ಯಾಯಾಲಯದ ( New Court ) ಕಟ್ಟಡ ಕಾಮಗಾರಿ ಇನ್ನೇನು ಅಂತಿಮ ಹಂತದಲ್ಲಿ ಇರುವುದರಿಂದ ಅತಿ ಶೀಘ್ರವೇ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
ಪಟ್ಟಣದಲ್ಲಿರುವ ಈಗಿನ ನ್ಯಾಯಲಯದಲ್ಲಿ ಪ್ರಸ್ತುತ ಹಿರಿಯ ಶ್ರೇಣಿ, ಪ್ರಧಾನ, ಹೆಚ್ಚುವರಿ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದೆ. ಅದರಂತೆ ವಾರದಲ್ಲಿ ಎರಡು ದಿನ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಕೂಡಾ ಕಾರ್ಯನಿರ್ವಹಣೆ ಮಾಡುತ್ತಿದ್ದರಿಂದ ಈ ನ್ಯಾಯಲಯದ ಕಟ್ಟಡ ಚಿಕ್ಕದಾಗಿರುವುದರಿಂದ, ಪ್ರಕರಣಗಳ ಸಂಖ್ಯೆ, ವಕೀಲರ ಸಂಖ್ಯೆಯೂ ಹೆಚ್ಚಾಗಿರುವುದುರಿಂದ ಇಲ್ಲಿ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತಿದ್ದರಿ0ದ ಹೊಸ ನ್ಯಾಯಲಯ ನಿರ್ಮಾಣಕ್ಕೆ ಈ ಹಿಂದೆ ಬೈಪಾಸ್ ರಸ್ತೆಯ ಮಿನಿ ವಿಧಾನಸೌಧದ ಬಳಿ ಎಂಟು ಎಕರೆ ಮೀಸಲಿಡಲಾಗಿತ್ತು, ಪಟ್ಟಣದಿಂದ ಮೂರು ಕಿ.ಮೀ ದೂರವಾಗುತ್ತಿದ್ದರಿಂದ ಕಕ್ಷಿದಾರರಿಗೆ ದೂರವಾಗುತ್ತೆ ಎಂಬ ಉದ್ದೇಶದಿಂದ ಪಟ್ಟಣದ ಬಸ್ ಡಿಪೋ ಎದುರಿನ ಹಳೆಯ ವಿಸಿಬಿ ಕಾಲೇಜಿನ ಜಾಗವನ್ನೇ ಅಂತಿಮಗೊಳಿಸಿ ಹೊಸ ಕೋರ್ಟ್ ಕಾಮಗಾರಿ ಆರಂಭಗೊಳಿಸಲಾಗಿದೆ.
ಎಷ್ಟು ಅನುದಾನ :
ಹೊಸ ಕೋರ್ಟ್ 2017-18ನೇ ಸಾಲಿನ ಲೆಕ್ಕ ಶಿರ್ಷಿಕೆ 4059ರ 1582 ಲಕ್ಷ ರೂಪಾಯಿ ಅನುದಾನದಲ್ಲಿ ನ್ಯಾಯಲಯದ ಕಟ್ಟಡಗಳ ಸಂಕೀರ್ಣ, ಕಾಂಪೌ0ಡ್ ನಿರ್ಮಾಣ ಮಾಡಲಾಗುತ್ತಿದೆ. 3 ಕೋಟಿ ರೂ ಅನುದಾನದಲ್ಲಿ ವಕೀಲರ ಭವನ ಹಾಗೂ 2 ಎರಡು ಕೋಟಿ ರೂಪಾಯಿ ಅನುದಾನದಲ್ಲಿ ನ್ಯಾಯದೀಶರ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪಟ್ಟಣಕ್ಕೆ ಜಿಲ್ಲಾ ಹೆಚ್ಚುವರಿ ಖಾಯಂ ಪೀಠ ಮಂಜೂರಾದರೆ ಆ ನ್ಯಾಯಾಧೀಶರ ವಸತಿ ಗೃಹಕ್ಕಾಗಿ ಹೊಸ ನ್ಯಾಯಲಯದ ಹಿಂಭಾಗದಲ್ಲಿ ಜಾಗ ಕಾಯ್ದಿಸರಲಾಗಿದೆ.
ಏನೇಲ್ಲಾ ಸೌಲಭ್ಯಗಳು ಇವೆ :
ಹೊಸ ಕೋರ್ಟ್ ನಲ್ಲಿ ಸಂಕೀರ್ಣದಲ್ಲಿ ಜಿಲ್ಲಾ ಹೆಚ್ಚುವರಿ ನ್ಯಾಯಲಯ, ಹಿರಿಯ ಶ್ರೇಣಿ ನ್ಯಾಯಲಯ, ಪ್ರಧಾನ ಹಾಗೂ ಹೆಚ್ಚುವರಿ ನ್ಯಾಯಲಯಗಳ ಹಾಲ್ ನಿರ್ಮಾಣ ಮಾಡಲಾಗಿದೆ. ಪ್ರತ್ಯೇಕ ವಿಡಿಯೋ ಕಾನ್ಫರೆನ್ಸ್ ಹಾಲ್, ಇಬ್ಬರು ನ್ಯಾಯದೀಶರಿಗೆ ಜಿ+1 ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ವಕೀಲರ ಭವನದಲ್ಲಿ ನೋಟರಿಗಳಿಗೆ ಪ್ರತ್ಯೇಕ ಕೊಠಡಿ, ವಕೀಲರ ಸಂಘದ ಅಧ್ಯಕ್ಷರಿಗೆ ಕೊಠಡಿ, ಕ್ಯಾಂಟಿನ್, ಬ್ಯಾಂಕ್, ಎಟಿಎಂ, ಅಂಚೆ ಕಚೇರಿ, ಕಕ್ಷಿದಾರರ ಕೊಠಡಿ, ತಾಯಿ ಮಕ್ಕಳಿಗೆ ಪ್ರತ್ಯೇಕ ಕೊಠಡಿ, ಹೈಟೆಕ್ ಗ್ರಂಥಾಲಯ, ಪ್ರತ್ಯೇಕ ಶೌಚಾಲಯಗಳು ಸೇರಿ ಅತ್ಯಾಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ನ್ಯಾಯಲಯ ಹಾಗೂ ವಕೀಲರ ಭವನದಲ್ಲಿ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ.
ಫೈನಲ್ ಟಚ್ :
ಹೊಸ ಕೋರ್ಟ್ ಸಂಕಿರ್ಣ, ನ್ಯಾಯಾಧೀಶರ ವಸತಿ ಗೃಹಗಳು ಹಾಗೂ ವಕೀಲರ ಭವನದ ಕಟ್ಟಡಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿವೆ. ಎಲ್ಲಾ ಕಟ್ಟಡಗಳಿಗೆ ಒಂದು ಹಂತ ಕಲರಿಂಗ್ ಮಾಡಲಾಗಿದೆ, ಕಾಂಪೌAಡ್ ನಿರ್ಮಾಣ ಮಾಡಲಾಗಿದೆ, ಆವರಣದೊಳಗೆ ಸಿಸಿ ಕಾಮಗಾರಿ ಮಾಡಲಾಗುತ್ತಿದೆ. ಪೀಠೋಪಕರಣ ನಿರ್ಮಾಣದ ಕೆಲಸಗಳು ಹಾಗೂ ಇತರೆ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಅವು ಕೂಡಾ ಭರದಿಂದ ಸಾಗಿದೆ. ನ್ಯಾಯಲಯದ ಹೊರಗೋಡೆಗಳಿಗೆ ಹೈಕೋರ್ಟ್ನ ಕೆಂಪು ಬಣ್ಣ ಬಳಿಯಲಾಗಿದೆ.
ಶೀಘ್ರವೇ ಉದ್ಘಾಟನೆ :
ಅಂದುಕೊ0ಡ0ತೆ ಅಕ್ಟೋಬರ್ ತಿಂಗಳಲ್ಲಿ ನ್ಯಾಯಲಯದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡರೆ ನವೆಂಬರ್‌ನಲ್ಲಿ ಉದ್ಘಾಟನೆಯಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.
Table of Contents
“ ಹೊಸ ನ್ಯಾಯಲಯದ ಸಂಕಿರ್ಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಕಲರಿಂಗ್ ಹಾಗೂ ವುಡ್ ವರ್ಕ್ಸ್ ನಡೆದಿದೆ”- ಎಲ್.ಡಿ ಗುಂಟಿ, ಜೆಇ ಪಿಡಬ್ಲೂಡಿ ಲಿಂಗಸುಗೂರು.
“ ಕೋರ್ಟ್ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಅತಿ ಶೀಘ್ರವೇ ಉದ್ಘಾಟನೆ ಮಾಡಬೇಕೆಂಬ ಚಿಂತನೆ ಇದೆ. ಉದ್ಘಾಟನೆಗೆ ಹೈಕೋರ್ಟ್ ನ್ಯಾಯಾಧೀಶರ ಡೇಟ್ ಕೇಳಲಾಗುತ್ತಿದೆ”-ಭೂಪನಗೌಡ ಪಾಟೀಲ್, ಅಧ್ಯಕ್ಷರು ವಕೀಲರ ಸಂಘ ಲಿಂಗಸುಗೂರು.